Home District ಮೊಬೈಲ್ ಚಾರ್ಜ್ ಮಾಡಲು ಬರಬೇಕು ಹತ್ತಾರು ಕಿ.ಮೀ..!! ಇಲ್ಲಿ ಶಾಲೆಯಿಲ್ಲ, ರಸ್ತೆಯಿಲ್ಲ ಇವರು ಬದುಕು ನಿಜಕ್ಕೂ...

ಮೊಬೈಲ್ ಚಾರ್ಜ್ ಮಾಡಲು ಬರಬೇಕು ಹತ್ತಾರು ಕಿ.ಮೀ..!! ಇಲ್ಲಿ ಶಾಲೆಯಿಲ್ಲ, ರಸ್ತೆಯಿಲ್ಲ ಇವರು ಬದುಕು ನಿಜಕ್ಕೂ ಶೋಚನೀಯ..!

604
0
SHARE

ಮಳೆಗಾಲ ಆರಂಭವಾಯ್ತು ಎಂದ್ರೆ…ಈ ಗಡಿಭಾಗದ ಗ್ರಾಮಗಳು ನಾಗರೀಕ ಪ್ರಪಂಚದ ಸಂಪರ್ಕ ಕಡಿದುಕೊಳ್ಳುತ್ತದೆ.ಭಾರತ ಭೂಪಟದಲ್ಲಿದ್ದು ಇಲ್ಲದಂತಿರುವ ಶರಾವತಿ ಅಭಯಾರಣ್ಯದ ಈ ಗ್ರಾಮಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ,ಗ್ರಾಮದಿಂದ ಶಿವಮೊಗ್ಗ ನಗರಕ್ಕೆ ಬರಬೇಕೆಂದರೇ ಇವರು 180 ಕಿಲೋಮೀಟರ್ ಕ್ರಮಿಸಬೇಕು…

ಸುಂದರ ಪರಿಸರದಲ್ಲಿರುವ ಈ ಗ್ರಾಮಗಳು ನೋಡಲು ಎಷ್ಟು ಸುಂದರವೋ..ಅಷ್ಟೇ ಸಂಕಷ್ಟಗಳನ್ನು ಒಡಲಾಳದಲ್ಲಿಟ್ಟುಕೊಂಡು ನಲುಗುತ್ತಿದೆ.ಮಳೆಗಾಲದಲ್ಲಿ ಇಲ್ಲಿನ ಗ್ರಾಮಗಳಿಗೆ ಕರೆಂಟ್ ಇಲ್ಲ.ಇಡಿ ಮಳೆಗಾಲವನ್ನು ಕತ್ತಲಲ್ಲಿ ಕಳೆಯುವ ಈ ಹಳ್ಳಿಗಳಿಗೆ ಮರಣ ಶಾಸನ ಬರೆದಿದೆ.ಅರಣ್ಯ ಕಾನೂನು…

ಮಾದ್ಯಮ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪ್ರಜಾ ಟಿವಿ,ಜಿಲ್ಲಾ ಕೇಂದ್ರದಿಂದ 180 ಕಿಲೋಮೀಟರ್ ದೂರದ ಬಟ್ಕಳ-ಶಿವಮೊಗ್ಗ ಗಡಿ ಭಾಗಕ್ಕೆ ಭೇಟಿ ಗ್ರಾಮದ ಶೋಚನೀಯ ಪರಿಸ್ಥಿತಿ ಹೇಳ ತೀರದಾಗಿದೆ.ಮಳೆಗಾಲದಲ್ಲಿ ಕಾರ್ಮೊಡಗಳಿಂದ ಸೋಲಾರ್ ಕೆಲಸ ಮಾಡುವುದಿಲ್ಲ. ಮನೆಗಳಲ್ಲಿ ಟಿವಿಗಳಿಲ್ಲ..

ಮೊಬೈಲ್ ಚಾರ್ಚ್ ಮಾಡಲು ಸಿಟಿಗೆ ಬರಬೇಕು.ಇನ್ನು, ಗ್ರಾಮ ಪಂಚಾಯಿತಿಗೆ ಬರಬೇಕೆಂದರೆ 30 ಕಿಲೋಮೀಟರ್ ಸಾಗಬೇಕು.ಕೋಗಾರು-ಬಟ್ಕಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿಲ್ಲ.ಶಾಲೆಯಿಲ್ಲ..ರಸ್ತೆಯಿಲ್ಲ. ಜಾರುಬಂಡಿಗಳಿಂತಿರುವ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಬೈಕ್ ಓಡಿಸಬೇಕು…

LEAVE A REPLY

Please enter your comment!
Please enter your name here