Home Crime ಮೊಬೈಲ್ ಟವರ್ ನಿಂದ ಜನರ ಬದುಕು ನರಕ..! 2.0 ಚಿತ್ರ ಹೋಲಿಸೋ ಹುಬ್ಬಳ್ಳಿ ಇಂಗಳಹಳ್ಳಿ ಸ್ಥಿತಿ..!...

ಮೊಬೈಲ್ ಟವರ್ ನಿಂದ ಜನರ ಬದುಕು ನರಕ..! 2.0 ಚಿತ್ರ ಹೋಲಿಸೋ ಹುಬ್ಬಳ್ಳಿ ಇಂಗಳಹಳ್ಳಿ ಸ್ಥಿತಿ..! ವಿಕಿರಣಗಳಿಂದ ಮಕ್ಕಳು, ಗರ್ಭಿಣಿಯರ ಮೇಲೆ ದುಷ್ಪರಿಣಾಮ..!

705
0
SHARE

ನಗರಗಳನ್ನು ಹಾಳು ಮಾಡಿದ್ದು ಸಾಕಾಗ್ಲಿಲ್ಲ ಅನ್ಸುತ್ತೆ, ಹೇಗೋ ನೆಮ್ಮದಿಯಾಗಿ ಸ್ವಚ್ಛಂದವಾದ ಪರಿಸರದಲ್ಲಿ ಜೀವನ ನಡೆಸುತ್ತಿದ್ದ ಊರಿನ ಜನರ ಬದುಕಲ್ಲಿ ಮೊಬೈಲ್ ಟವರ್ ಬಿರುಗಾಳಿ ಎಬ್ಬಿಸಿದೆ, ಮೊಬೈಲ್ ಟವರ್ ಹಾಕಿ ಅಮಾಯಕರ ಪ್ರಾಣದ ಜೊತೆ ಆಟ ಆಡ್ತಿದಾರೆ. ಟವರ್‌ನಿಂದ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದ ಪುಟ್ಟ ಮಕ್ಕಳು ಪ್ರಾಣ ತೆತ್ತಿದ್ದಾರೆ.

ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಖಾಸಗಿ ಕಂಪನಿ ಯಡವಟ್ಟಿನಿಂದ ಊರಿನ ಗ್ರಾಮಸ್ಥರಿಗೆ ಆಪತ್ತು ಎದುರಾಗಿದೆ.ಈ ದೃಶ್ಯಗಳನ್ನ ನೋಡ್ತಿದ್ರೆ ಕರುಳು ಕಿತ್ತುಬರುತ್ತೆ ಇನ್ನೂ ಬದುಕಿ ಬಾಳಬೇಕಾದ ಮಗು ಕೈ-ಕಾಲು ಸ್ವಾಧೀನ ಇಲ್ಲದೆ ಒದ್ದಾಡುವಂತಾಗಿದೆ. ಹಾಸಿಗೆಯಿಂದ ಮೇಲೇಳಲು ಆಗದೆ ನರಳಾಡುತ್ತಿರುವ ಅಜ್ಜಿ, ಪ್ರಪಂಚವನ್ನು ಅರಿಯುವ ಮುನ್ನವೇ ಸಾವನ್ನಪ್ಪಿದ ಮಕ್ಕಳು, ಇಷ್ಟು ದುರಂತಕ್ಕೆ ಕಾರಣವಾದದ್ದು ಒಂದು ಮೊಬೈಲ್ ಟವರ್.

ನೆಮ್ಮದಿ ಜೀವನ ನಡೆಸುತ್ತಿದ್ದ ಗ್ರಾಮಕ್ಕೆ ಮೊಬೈಲ್ ಟವರ್ ಪೆಡಂಭೂತವಾಗಿ ಕಾಡ್ತಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಖಾಸಗಿ ಕಂಪನಿಯವರು ಊರಿನ ಮಧ್ಯ ಭಾಗದಲ್ಲಿ ಮೊಬೈಲ್ ಟವರ್ ಅಳವಡಿಸಿದ್ದಾರೆ. ಈ ಟವರ್‌ನಿಂದ ಹೊರಹೊಮ್ಮುವ ವಿಷಕಾರಿ ವಿಕಿರಣಗಳಿಂದ ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗತೊಡಗಿದೆ. ಹಿರಿಯರಲ್ಲಿ ಆಸ್ತಮಾ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ತಾಯಿಯ ಗರ್ಭದಿಂದ ಭೂಮಿಗೆ ಕಾಲಿಡುವ ಮುನ್ನವೇ ಮಕ್ಕಳು ಕೊನೆಯುಸಿರೆಲೆಯುತ್ತಿವೆ.

ಇದುವರೆಗೂ ಗ್ರಾಮದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ 18ಕ್ಕೂಹೆಚ್ಚು ಮಕ್ಕಳು‌‌ ಸಾವನ್ನಪ್ಪಿವೆ.2006ರಲ್ಲಿ ಗ್ರಾಮದ ಶರಣ್ಣಯ್ಯಾ ಹಿರೇಮಠ ಅವರ ಜಾಗದಲ್ಲಿ ಟವರ್ ಹಾಕಿದ್ದಾರೆ. ಟವರ್ ಹಾಕುವ ಮುನ್ನ ಸ್ಥಳೀಯರ ಅನುಮತಿ ಪಡೆದಿಲ್ಲ. ಗ್ರಾಮದ ಮಧ್ಯ ಭಾಗದಲ್ಲಿ ಟವರ್ ಇರೋದ್ರಿಂದ ಅಲಿಯ ಜನ್ರು ಭಯದಲ್ಲಿ ಕಾಲಕಳೆಯುತ್ತಿದ್ದಾರೆ.

ಹಾಗಾಗಿ ಗ್ರಾಮದ ಮಧ್ಯ ಭಾಗದಲ್ಲಿರುವ ಟವರ್​ನ್ನು ಗ್ರಾಮದಿಂದಾಚೆ 3 ಕಿಲೋಮೀಟರ್ ಅಂತರದಲ್ಲಿ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಮೊಬೈಲ್ ಟವರ್ ತೆರವಿಗೆ ಅಗ್ರಹಿಸಿ ಈಗಾಗಲೇ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ರೂ ಏನೂ ಪ್ರಯೋಜನವಾಗಿಲ್ಲ, ಇನ್ನೊಂದು ವಾರದಲ್ಲಿ ಟವರ್ ತೆರವುಗೊಳಿಸದಿದ್ದರೆ ನಾವೇ ಕಿತ್ತೆಸೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here