Home District ಮೊಮ್ಮಕ್ಕಳಿಗಾಗಿ ಶಾರದಾಂಬೆ ಮೊರೆ ಹೋದ ದೇವೇಗೌಡರು..! ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಚಂಡಿಕಾಯಾಗ…

ಮೊಮ್ಮಕ್ಕಳಿಗಾಗಿ ಶಾರದಾಂಬೆ ಮೊರೆ ಹೋದ ದೇವೇಗೌಡರು..! ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಚಂಡಿಕಾಯಾಗ…

686
0
SHARE

ಲೋಕಸಭಾ ಕಣದಲ್ಲಿ ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೇವರ ಮೊರೆ ಹೋಗಿದ್ದಾರೆ. ಗುರುವಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಕುಟುಂಬ ಸದಸ್ಯರೊಂದಿಗೆ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ತದ ನಂತರ ಮನಸ್ಸಿನ ಸಂಕಲ್ಪ ಸಿದ್ದಿಗಾಗಿ ವಿಶೇಷ ಚಂಡಿಕಾಯಾಗ ನಡೆಸಲಿದ್ದಾರೆ.ಲೋಕಸಭೆ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ದೇವೇಗೌಡರ ಕುಟುಂಬ ದೇವರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪತ್ನಿ ಚೆನ್ನಮ್ಮ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್, ಹಾಗೂ ಸಚಿವ ಹೆಚ್.ಡಿ.ರೇವಣ್ಣ, ಪ್ರಜ್ವಲ್ ಸೇರಿದಂತೆ ಹೆಚ್.ಡಿ.ಡಿ ಕುಟುಂಬ ಸಮೇತರಾಗಿ ಆಗಮಿಸಿ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಲೋಕಸಭಾ ಕಣದಲ್ಲಿ ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶೃಂಗೇರಿ ಶಾರದಾಂಬೆ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಗುರುವಾರ ಸಿಎಂ ಕುಟುಂಬ ಶೃಂಗೇರಿಯ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚಂಡಿಕಾಯಾಗದ ಪೂರ್ಣಾವತಿ ಭಾಗಿಯಾಗಲಿದ್ದಾರೆ. ಇನ್ನು ಚಂಡಿಕಾಯಾಗದ ಸಂಕಲ್ಪವನ್ನ ಕಳೆದ ವಾರ ಸಚಿವ ರೇವಣ್ಣ ಮಾಡಿದ್ರು. ಗುರುವಾರ ಯಾಗದ ಪೂರ್ಣಾವತಿ ನಡೆಯಲಿದ್ದು ಹೆಚ್.ಡಿ.ಡಿ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಇನ್ನು ಚಂಡಿಕಾಯಾಗವನ್ನ ಮನಸ್ಸಿನ ಸಂಕಲ್ಪ ಸಿದ್ದಿಗಾಗಿ ನಡೆಸಲಿದ್ದು ಮಠದ ಯಾಗ ಶಾಲೆಯಲ್ಲಿ ಚಂಡಿಕಾಯಾಗ ನಡೆಯಲಿದೆ.ಶಾರದಾಂಬೆಯ ದರ್ಶನದ ಬಳಿಕ ಹೆಚ್.ಡಿ.ಡಿ ಕುಟುಂಬ ಶೃಂಗೇರಿ ಜಗದ್ಗುರುಗಳನ್ನು ಭೇಟಿ ಮಾಡಿ ಮೊಮ್ಮಕಳ ಭವಿಷ್ಯದ ಬಗ್ಗೆ ಗುರುಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿಎಂ ಆಗಮನದ ಹಿನ್ನೆಲೆ ಶೃಂಗೇರಿಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಕುಮಾರಸ್ವಾಮಿಯ ಅದೃಷ್ಟವೋ, ದೈವದ ಬಲವೋ, ದೇವೇಗೌಡರ ಕಾರ್ಯತಂತ್ರವೋ, ರಾಜ್ಯದ ಜನತೆಯ ಆಶೀರ್ವಾದವೋ ಗೊತ್ತಿಲ್ಲ. ಆದ್ರೆ, ಹೆಚ್.ಡಿ ಕುಮಾರಸ್ವಾಮಿ ಕುಟುಂಬ ಮಾತ್ರ ಶೃಂಗೇರಿ ಶಾರದಾಂಬೆ ಆರ್ಶೀವಾದದಿಂದ ಸಿಎಂ ಆಗಿದ್ದಾರೆ ಎಂದು ನಂಬಿದ್ದಾರೆ. ಹಾಗಾಗಿ ಸದ್ಯ ಉಂಟಾಗಿರುವ ಲೋಕಸಭೆ ಟಿಕೆಟ್ ಹಂಚಿಕೆ ಗೊಂದಲ ಹಾಗೂ ಮಂಡ್ಯ, ಹಾಸನ ಲೋಕಸಭಾ ಕಣದಲ್ಲಿ ಯಾರನ್ನ ನಿಲ್ಲಿಸಬೆಕೆಂಬ ಗೊಂದಲವನ್ನ ದೂರವಾಗಿಸಲು ಸದ್ಯ ಶೃಂಗೇರಿ ಶಾರದಾಂಬೆ ಮೊರೆ ಹೋಗಿದ್ದಾರೆ….

LEAVE A REPLY

Please enter your comment!
Please enter your name here