Home District ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಶಿಕ್ಷಕಿಯೊಂದಿಗೆ ಲವ್ವಿಡವ್ವಿ..! ವಿಡಿಯೋ ಮಾಡಿಕೊಂಡು ಒಂದು ವರ್ಷ ಬ್ಲಾಕ್ ಮೇಲ್...

ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಶಿಕ್ಷಕಿಯೊಂದಿಗೆ ಲವ್ವಿಡವ್ವಿ..! ವಿಡಿಯೋ ಮಾಡಿಕೊಂಡು ಒಂದು ವರ್ಷ ಬ್ಲಾಕ್ ಮೇಲ್ ಮಾಡಿದ ಅಡುಗೆ ಭಟ್ಟ…

2377
0
SHARE

ಅದು ಬಡ ಮಕ್ಕಳ ಪಾಲಿಗೆ ಜ್ಞಾನದೇಗುಲ…., ಚೆನ್ನಾಗಿ ವಿದ್ಯೆ ಕಲಿಯೋದಕ್ಕಾಗಿಯೇ ವಿದ್ಯಾರ್ಥಿಗಳು ಅಲ್ಲಿಗೆ ಎಂಟ್ರೆನ್ಸ್ ಪರೀಕ್ಷೆ ಬರೆದು ಬರುತ್ತಾರೆ.. ಅಂತಹ ವಸತಿ ಶಾಲೆಯನ್ನು ಮುನ್ನಡೆಸಿಕೊಂಡು ವಿದ್ಯಾರ್ಥಿಗಳಿಗೆ ಬವಿಷ್ಯದ ಮಾರ್ಗ ತೋರಿಸಬೇಕಾದ ಪ್ರಿನ್ಸಿಪಾಲ್ ಒಬ್ಬ ಕಾಮದ ವಾಂಚೆಯಲ್ಲಿ ವಿವೇಕ ಬಲಿಕೊಟ್ಟಿದ್ದಾನೆ.

ಇವನ ವೀಕ್ ನೆಸ್ ನ್ನೆ ವಿಡಿಯೋ ಮಾಡಿಕೊಂಡು ಅಡುಗೆಬಟ್ಟ ಕಳೆದೊಂದು ವರ್ಷದಿಂದ ಪ್ರಿನ್ಸಿಪಾಲ್ ಬ್ಲಾಕ್ ಮೇಲ್ ಮಾಡ್ತಿದ್ದ.ಯಾವಾಗ ಪ್ರಿನ್ಸಿಪಾಲ್ ಅಡುಗೆ ಬಟ್ಟನಿಗೆ ಕೋಕ್ ನೀಡಿದನೋ.ಸರ್ಕಾರಿ ಮೊರಾರ್ಜಿ ವಸತಿ ಶಾಲೆಗಳು ಬಡಮಕ್ಕಳ ಪಾಲಿಗೆ ಜ್ಞಾನಾರ್ಜನೆಯ ದೇಗುಲಗಳು. ಚೆನ್ನಾಗಿ ಓದಿದ ವಿದ್ಯಾರ್ಥಿಗಳೇ ಈ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಾರೆ. ಸರ್ಕಾರ ಉಚಿತವಾಗಿ ಎಲ್ಲಾ ನೆರವನ್ನು ನೀಡುತ್ತದೆ.

ಇಂತಹ ವಸತಿ ಶಾಲೆಯಲ್ಲಿ ಕೀಚಕರಂತ ಶಿಕ್ಷಕರಿದ್ದರೆ. ವಿದ್ಯಾರ್ಥಿನಿಯರ ಭವಿಷ್ಯ ಅತಂತ್ರವೇ ಸರಿ. ಶಿರಾಳಕೊಪ್ಪ ಹೋಬಳಿಯ ಮಳೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಚಂದ್ರಪ್ಪ ಹಾಗು ವಸತಿ ಶಾಲೆಯ ಗುತ್ತಿಗೆ ನೌಕರ ಅಡುಗೆಬಟ್ಟ ಮಲ್ಲಿಕಾರ್ಜುನ್ ನಡುವಿನ ಹಗ್ಗಜಗ್ಗಾಟದಿಂದ ಈಗ ಪ್ರಿನ್ಸಿಪಾಲ್ ಮರ್ಯಾದೆ ಬೀದಿಗೆ ಬಂದಿದೆ.ಹೌದು ಕಳೆದ ಮೂರು ವರ್ಷದಿಂದ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ನೀರ್ವಹಿಸುತ್ತಿರುವ ಚಂದ್ರಪ್ಪ…

ತನ್ನ ಕಾಮವಾಂಛೆ ತೀರಿಸಿಕೊಳ್ಳಲು…ವಸತಿ ಶಾಲೆಯ ಶಿಕ್ಷಕಿಯೊಬ್ಬಳನ್ನು ಬಲೆಗೆ ಹಾಕಿಕೊಂಡಿದ್ದ.ಇವರಿಬ್ಬರ ಲವ್ವಿಡವ್ವಿ ಸ್ಟೋರ್ ರೂಂ ನಲ್ಲಿಯೇ ನಡೀತಿತ್ತು.ಇದನ್ನು ಕಣ್ಣಾರೆ ಕಂಡಿದ್ದ ಅಡುಗೆಬಟ್ಟ ಮಲ್ಲಿಕಾರ್ಜುನ್ ತನ್ನ ಮೊಬೈಲ್ ನಲ್ಲಿ ಇರಲಿ ಅಂತಾ ವಿಡಿಯೋ ಮಾಡಿದ್ದ.ಈ ವಿಡಿಯೋ ಮುಂದಿಟ್ಟುಕೊಂಡು ಮಲ್ಲಿಕಾರ್ಜುನ್ ತನ್ನ ಬೇಳೆ ಕಾಳು ಬೇಯಿಸಿಕೊಳ್ಳುತ್ತಿದ್ದ. ಚಂದ್ರಪ್ಪನ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಮಲ್ಲಿಕಾರ್ಜುನ್ ಆ ವಿಡಿಯೋವನ್ನು ವಸತಿ ಶಾಲೆಯ ವಿದ್ಯಾರ್ಥಿಗಳಿಗೆಲ್ಲಾ ತೋರಿಸಿದ.

ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯ ಲವ್ವಿಡವ್ವಿಯನ್ನು ವಿರೋಧಿಸಿ ಕಳೆದ ವಾರ ವಿದ್ಯಾರ್ಥಿಗಳು ವಸತಿ ಶಾಲೆ ಎದುರು ಪ್ರತಿಭಟನೆ ನಡೆಸಿದರು. ಆಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮದ್ಯ ಪ್ರವೇಶಿಸಿ,ಅಡುಗೆಬಟ್ಟ ಹಾಗು ಪ್ರಿನ್ಸಿಪಾಲ್ ರನ್ನು ರಾಜಿಸಂಧಾನ ಮಾಡಿದ್ದರು.ಆದರೆ ಚಂದ್ರಪ್ಪ..ಮಲ್ಲಿಕಾರ್ಜುನ್ ನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದಾಗ..ಆತ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಿದ್ದಾನೆ.

ಚಂದ್ರಪ್ಪ ಈಗ ಯಾರ ಕೈಗೂ ಸಿಗದೆ..ನಾಪತ್ತೆಯಾಗಿದ್ದಾನೆ. ಈ ಪ್ರಕರಣ ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುರುಗಳೇ ಈ ರೀತಿ ಶಾಲೆಯಲ್ಲಿ ಮತ್ತೊಬ್ಬ ಟೀಚರ್ ಜೊತೆ ನಡೆದುಕೊಂಡರೆ ಹೇಗೆ ಎಂದು ಮಾತಾಡಿಕೊಳ್ಥೋದಕ್ಕೆ ಶುರು ಮಾಡಿದ್ರು. ಮಾದ್ಯಮಗಳ ವರದಿ ನಂತರ ಚಂದ್ರಪ್ಪನ ಕರ್ಮಕಾಂಡ ಒಂದೊಂದೇ ಬಯಲಿಗೆ ಬರಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.

LEAVE A REPLY

Please enter your comment!
Please enter your name here