Home KARNATAKA ಮೊಹಾಲಿಯಲ್ಲಿ ಇಂಡೋ-ಆಸೀಸ್ ಸೂಪರ್ ಸಂಡೆ ಮ್ಯಾಚ್..! ರಾಹುಲ್, ರಿಷಭ್, ಭುವಿ ಇನ್ | ಧೋನಿ, ರೋಹಿತ್/ಧವನ್...

ಮೊಹಾಲಿಯಲ್ಲಿ ಇಂಡೋ-ಆಸೀಸ್ ಸೂಪರ್ ಸಂಡೆ ಮ್ಯಾಚ್..! ರಾಹುಲ್, ರಿಷಭ್, ಭುವಿ ಇನ್ | ಧೋನಿ, ರೋಹಿತ್/ಧವನ್ ಔಟ್..?!

472
0
SHARE

ಮೊಹಾಲಿಯಲ್ಲಿ ಸೂಪರ್ ಸಂಡೆ ಭಾರತ ಮತ್ತು ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿರುವ ಕೊಹ್ಲಿಸೈನ್ಯ, ನಾಳಿನ ಪಂದ್ಯ ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ಆದ್ರೆ ಅತ್ತ ಗೆಲುವಿನ ಟ್ರ್ಯಾಕ್ ಗೆ ಮರಳಿರುವ ಆಸೀಸ್ ಸರಣಿ ಜೀವಂತವಾಗಿಟ್ಟುಕೊಳ್ಳಲು ಹೋರಾಟ ನಡೆಯಸಲಿದೆ.ಐಸಿಸಿ ಏಕದಿನ ವಿಶ್ವಕಪ್ ಗೂ ಮುನ್ನ ನಡೆಯುತ್ತಿರೋ ಇಂಡೋ-ಆಸೀಸ್ ಏಕದಿನ ಸರಣಿ ಪಂದ್ಯದಿಂದ ಪಂದ್ಯಕ್ಕೆ ಭಾರೀ ಕುತೂಹಲ ಮೂಡಿಸ್ತಿದೆ. ಹೈದ್ರಾಬಾದ್ ಮತ್ತು ನಾಗ್ಪುರದಲ್ಲಿ ರೋಚಕ ಗೆಲುವು ದಾಖಲಿಸಿದ್ದ ಭಾರತ, ರಾಂಚಿಯಲ್ಲಿ 32 ರನ್ ಗಳಿಂದ ಸೋಲನ್ನ ಕಂಡಿತ್ತು.

ಆದ್ರೆ ಮೊಹಾಲಿಯಲ್ಲಿ ಭಾನುವಾರ ನಡೆಯಲಿರುವ 4ನೇ ಏಕದಿನ ಪಂದ್ಯ ನಿರ್ಣಾಯಕವಾಗಿದ್ದು, ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಸೈನ್ಯವಿದೆ.ಟಿ-20 ಸರಣಿಯಲ್ಲಿ ವೈಟ್ ವಾಶ್ ಆಗಿರುವ ಬ್ಲೂಬಾಯ್ಸ್ ವನ್ ಡೇ ಸಿರೀಸ್ ಗೆದ್ದು ಸೇಡು ತೀರಿಸಿಕೊಳ್ಳುವ ಸಜ್ಜಾಗಿದೆ. ಆದ್ರೆ ಆರಂಭಿಕರರಾದ ಶಿಖರ್ ಧವನ್, ರೋಹಿತ್ ಶರ್ಮಾ ಕಳಪೆ ಫಾರ್ಮ್, ಫೀಲ್ಡಿಂಗ್ ನಲ್ಲಿ ಚುರುಕುತನದ ಕೊರತೆ, ದುಬಾರಿ ಬೌಲಿಂಗ್ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯ ತಲೆಬಿಸಿ ಮಾಡ್ತಿದೆ.

ವಿಶ್ವಕಪ್ ಟೂರ್ನಿಯನ್ನೆ ಮುಖ್ಯವಾಗಿಟ್ಟು ಕೊಂಡಿರುವ ಟೀಂ ಇಂಡಿಯಾ, ಕೊನೆಯ ಎರಡು ಪಂದ್ಯದಲ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಇದ್ರಿಂದ ಅವಕಾಶಕ್ಕಾಗಿ ಚಾತಕಪಕ್ಷಿಗಳಂತೆ ಬೆಂಚ್ ಕಾಯ್ತಿರೋ ಆಟಗಾರರು ಮೊಹಾಲಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ರೋಹಿತ್ ಅಥವಾ ಧವನ್ ಬದಲು ಕೆ.ಎಲ್.ರಾಹುಲ್, ಧೋನಿ ಜಾಗಕ್ಕೆ ರಿಶಬ್ ಪಂತ್, ವೇಗಿ ಭುವಿ ಕೂಡ ಪ್ಲೇಯಿಂಗ್ ಇಲೆವನ್ ಸೇರಿಕೊಳ್ಳುವ ಸಾಧ್ಯತೆ ಇದೆ.ಇನ್ನು ಸತತ ಎರಡು ಪಂದ್ಯಗಳನ್ನ ಸೋತು ಕಂಗಲಾಗಿದ್ದ ಕಾಂಗರೂಪಡೆ, ಧೋನಿ ತವರು ರಾಂಚಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಜಯದ ನಗೆ ಬೀರಿತ್ತು.

ಆದ್ರೆ ಇನ್ನುಳಿದ 2 ಲಾಸ್ಟ್ ಮ್ಯಾಚ್ ಕೂಡ ಪ್ರವಾಸಿ ತಂಡಕ್ಕೆ ಡು ಆರ್ ಡೈ ಆಗಿದೆ.ಮೊಹಾಲಿ ಮೆನ್ ಇನ್ ಬ್ಲೂ ಪಾಲಿಗೆ ಅನ್ ಲಕ್ಕಿ ಗ್ರೌಂಡ್ ಆಗಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರೋ ಐಎಸ್ ಬಿಂದ್ರಾ ಮೈದಾನದಲ್ಲಿ ಭಾರತ 4 ಪಂದ್ಯಗಳನ್ನ ಆಡಿ 1ರಲ್ಲಿ ಗೆದ್ದು 3ರಲ್ಲಿ ಸೋಲನ್ನ ಕಂಡಿದೆ.

LEAVE A REPLY

Please enter your comment!
Please enter your name here