Home Crime ಮೋಡಿ ಮಾತಿಗೆ ತನ್ನ ತನು-ಮನ-ಧನ ಅರ್ಪಿಸಿದ್ದ ಹುಡುಗಿ..!? ಮದುವೆ ಆಗೋಣ ಅಂದಮೇಲೆ ಹುಡುಗ ಗಾಯಬ್..?! ಬೊಂಬೆಯಂತಾ...

ಮೋಡಿ ಮಾತಿಗೆ ತನ್ನ ತನು-ಮನ-ಧನ ಅರ್ಪಿಸಿದ್ದ ಹುಡುಗಿ..!? ಮದುವೆ ಆಗೋಣ ಅಂದಮೇಲೆ ಹುಡುಗ ಗಾಯಬ್..?! ಬೊಂಬೆಯಂತಾ ಹುಡುಗೀನಾ ಯೂಸ್ ಮಾಡಿ ಎಸ್ಕೇಪ್ ಆಗಿದ್ದು ಯಾಕೆ ಗೊತ್ತಾ..?!!

3551
0
SHARE

ನೋಡೋಕೆ ಸಕತ್ ಆಗಿದೆ ಅಲ್ವಾ ಈ ಜೋಡಿ. ತೆಳ್ಳಗೆ ಬೆಳ್ಳಗೆ ಗೊಂಬೆ ತರ ಕಾಣೋ ಈ ಹುಡುಗಿಯ ಹೆಸರು ಮಂಜುಳಾ. ಇನ್ನ ಈ ಹುಡುಗ ಹೆಸರು ರವಿಕಿರಣ್. ಇಬ್ಬರೂ ಕೂಡ ಮೂಲತಃ ರಾಮನಗರ ಜಿಲ್ಲೆಯ ಮಾಗಡಿ ಕಡೆಯವರು. ಬೆಂಗಳೂರಲ್ಲಿ ಬಂದು ನೆಲೆಸಿದ್ದವರು. ಪ್ರೀತಿ ಹುಟ್ಟೋಕೆ ಹೊತ್ತುಗೊತ್ತು ಕಾರಣಿ ಇಲ್ಲ ಅಂತಾರಲ್ವಾ ಅದೇತರ  ಜೋಡಿಯ ನಡುವೆ ಪ್ರೇಮಾಂಕುರವಾಗಿತ್ತು. ಎರಡು ವರ್ಷಗಳಿಂದ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡ್ತಾ ಇದ್ರು…

ಹ್ಯಾಂಡ್ ಸಮ್ ಹೀರೋ ಈ ರವಿಕಿರಣ್, ಗೊಂಬೆತರ ಇರೋ ಈ ಬೆಡಗಿಯ ಬ್ಯೂಟಿಗೆ ಬೋಲ್ಡ್ ಆಗಿ ಹಿಂದೆ ಹಿಂದೆ ತಿರುಗಾಡಿ, ಕಾಡಿಬೇಡಿ ಲವ್ವಲ್ಲಿ ಬೀಳಿಸಿದ್ದ. ನೀನೆ ನನ್ನ ಪ್ರಾಣ ನೀನೆ ನನ್ನ ಜೀವ ನೀನಿಲ್ಲದೆ ನನಗೆ ಜೀವನವೇ ಇಲ್ಲ ಅಂತ ಲವ್ ಮಾಡ್ತಿದ್ದ. ಈ ಮಂಜುಳಾ ಸಹ ರವಿಕಿರಣನೇ ಸರ್ವಸ್ವ ಅಂತ ಡೀಪಾಗಿ ಲವ್ ಮಾಡ್ತಾ ಇದ್ದಳು. ಇನ್ನ ಪ್ರೀತಿಯಲ್ಲಿ ಮುಳುಗಿರೋ ಪ್ರಣಯ ಪಕ್ಷಿಗಳು ಅಂದ್ರೆ ಹೇಳ್ಬೇಕಾ.. ಎಲ್ಲಾ ಲವರ್ಸ್ ತರ ಇವರೂ ಕೂಡ ಊರೂರು ಸುತ್ತಾಡ್ತಾ ಸಕತ್ ಎಂಜಾಯ್ ಮಾಡ್ತಾ ಇದ್ರು. ಹೀಗೆ ಇವರಿಬ್ಬರ ಲವ್ ಸ್ಟೋರಿ ನಡೀತಿರ್ಬೇಕಾದ್ರೆ ನಡೀಬಾರದ ಘಟನೆಯೊಂದು ನಡೆದೇ ಹೋಗಿತ್ತು…

ನಿನ್ನೆ ದಿನ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸರು ಮೂಡಲಪಾಳ್ಯದ ಭೈರವೇಶ್ವರ ನಗರಕ್ಕೆ ದೌಡಾಯಿಸಿದ್ದರು. ಇಡೀ ಏರಿಯಾದಲ್ಲಿ ಒಂತರಾ ನೀರವ ಮೌನ. ಬೀದಿಯಲ್ಲಿ ನಿಂತು ಆ ಏರಿಯಾದ ಜನ ತಮ್ಮ ತಮ್ಮಲ್ಲೇ ಮಾತಾಡ್ತಾ ಅಯ್ಯೋ ಪಾಪ ಅಂತಿದ್ರು. ಅದಾಗಲೇ ಅಲ್ಲಿಗೆ ಬಂದ ಆಂಬ್ಯುಲೆನ್ಸ್ ತನ್ನ ಕೆಲಸಕ್ಕಾಗಿ ಸಜ್ಜಾಗಿ ನಿಂತಿತ್ತು. ಯಾಕಂದ್ರೆ.. ಆ ಮನೆಯಲ್ಲಿ ನಡೆದಿತ್ತು ಮುದ್ದುಮುಖದ ಮಂಜುಳಾಳ ಆತ್ಮಹತ್ಯೆ.ಮಂಜುಳಾ ನೇಣಿನ ಕುಣಿಗೆ ಕೊರಳೊಡ್ಡಿ ಸಾವಿನ ಮನೆ ಸೇರಿಬಿಟ್ಟಿದ್ದಳು.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನಿಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡು ಇನ್ನು ಬಾರದ ಲೋಕಕ್ಕೆ ಪಯಣಿಸಿದ್ದಳು.ಮುದ್ದಿನ ಮನೆಮಗಳನ್ನ ಜೀವಂತ ಇಲ್ಲ, ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾಳೆ ಅನ್ನೋ ಕಟು ಸತ್ಯವನ್ನ ನಂಬೋದಕ್ಕೆ ಆಗದೆ ಅವಳ ಹೆತ್ತತಾಯಿ ದೊಡ್ಡಮ್ಮ ಹಾಗೂ ಸಂಬಂಧಿಕರು ಮಂಜೂ ಮಂಜೂ ಅಂತ ಗೋಳಾಡಿದ ದೃಶ್ಯ ನೋಡಿದ್ರೆ ಕರುಳು ಹಿಂಡಿದಂತಾಗುತ್ತಿತ್ತು. ಅಂದ ಹಾಗೆ ಈ ಜೀವಂತ ಬೊಂಬೆ ಇಂದು ಜೀವಲಿಲ್ಲದ ಬೊಂಬೆಯಾಗಿದ್ದಾಳಂದ್ರೆ ಅದಕ್ಕೆ ಕಾರಣ.. ಮತ್ತ್ಯಾರೂ ಅಲ್ಲಾ ಅವಳ ಬಾಯ್ ಫ್ರೆಂಡ್ ಈ ರವಿಕಿರಣಾನೇ.

ಪ್ರಾಣಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಪ್ರೀತಿ ಮಾಡ್ತಿದ್ದ ರವಿಕಿರಣ್ ಹಾಗೂ ಮಂಜುಳಾ ಪ್ರೀತಿಯಲ್ಲಿ ಏನಾಯ್ತು.., ಯಾಕಾಗಿ ಮಂಜುಳಾ ಸಾವಿನ ದಾರಿ ಹಿಡಿದಳು.ಮಂಜುಳಾ ತನ್ನ ಕ್ಲೋಸ್ ಫ್ರೆಂಡ್ಸ್ ಹಾಗೂ ದೊಡ್ಡಮನ ಮಗಳ ಜೊತೆ ತನ್ನ ಹಾಗೂ ರವಿಕಿರಣ್ ಲವ್ ಸ್ಟೋರಿ ಬಗ್ಗೆ ಎಲ್ಲವನ್ನೂ ಹೇಳ್ಕೊಂಡಿದ್ದಳು.ಪ್ರೀತಿಗೀತಿ ಅಂತ ಇಷ್ಟು ದಿನ ಓಡಾಡ್ಕೊಂಡು ಚೆನ್ನಾಗೇ ಇದ್ದ ಈ ಲವರ್ ಬಾಯ್ ಪ್ರೀತಿ ವಿಚಾರ ಮದುವೆವರೆಗೂ ಬಂದಾಗ ಶಾಕ್ ಆಗಿ ಹೋಗಿದ್ದ.ಲವ್ ಮಾಡಿ ಕೈಕೊಡೋ ಎಲ್ಲ ಪಾಕಡ ಹುಡುಗ್ರು ಹೇಳೋತರಾನೇ ಮಳ್ಳನ ತರ ಡೈಲಾಗ್ ಹೊಡೆದಿದ್ದ. ನಂಗೆ ಒಂದಷ್ಟು ಟೈಮ್ ಬೇಕು, ಮನೆಯಲ್ಲಿ ಅಪ್ಪ ಅಮ್ಮನನ್ನ ಒಪ್ಪಿಸಿ ಹಂಡ್ರೆಡ್ ಪರ್ಸೆಂಟ್ ಮದ್ವೆ ಆಗ್ತೀನಿ ಅಂತೇಳಿದ್ದ…

ಹೀಗೆ ಹೇಳಿ ಊರಿಗೆ ಹೋದವನೇ ನಂತರ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಗಾಯಬ್ ಆಗಿಬಿಟ್ಟಿದ್ದ. ಅಷ್ಟು ನಂಬಿಕೆ ಇಟ್ಟಿದ್ದವನು ಹೀಗೆ ಕಳ್ಳನ ತರ ತಲೆಮರೆಸಿಕೊಂಡಿದ್ದನ್ನ ಅರಗಿಸಿಕೊಳ್ಳೋಕೆ ಈ ಹುಡುಗಿಗೆ ಆಗಿರ್ಲೇ ಇಲ್ಲ. ಹೀಗಾಗಿ ಹೇಗೆ ರವಿಕಿರಣನ ತಂದೆಯ ನಂಬರ್ ಕಲೆಹಾಕಿ ಫೋನ್ ಮಾಡಿ ಎಲ್ಲ ವಿಚಾರವನ್ನ ಹೇಳಿದ್ದಾಗ.. ತಂದೆ ವಯಸ್ಸಿನ ಆತ ಮರ್ಮಾದೆ ಇಲ್ಲದೆ ಹಳ್ಳಿ ಲಾಂಗ್ಬೇಜಲ್ಲಿ ಬಾಯಿಗೆ ಬಂದಂಗೆ ಬೈದಿದ್ದನಂತೆ.ಇದ್ಯಾಕೋ ಸರಿ ಹೋಗ್ತಿಲ್ಲ ಅಂತ ನನ್ನ ಹುಡುಗನನ್ನ ನನಗೆ ಹುಡುಕಿಕೊಡಿ ಅಂತ ಮಂಜುಳಾ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಳು.

ಆದ್ರೆ.. ಒಂದ್ಸಾರಿ ರವಿಕಿರಣನನ್ನ ಹುಡುಕಾಡೋ ಪ್ರಯತ್ನಪಟ್ಟಿದ್ದ ಚಂದ್ರಾಲೇಔಟ್ ಪೊಲೀಸರು, ನಂತರ ಕಥೆ ಹೇಳಿ ಯಾಮಾರಿಸೋಕೆ ಶುರು ಮಾಡಿದ್ದರಂತೆ. ಮೇಲಧಿಕಾರಿಗಳಿಗೆ ಹೇಳಿದ್ರು.. ಯಾವ ಪ್ರಯೋಜನವೂ ಆಗಿರಲಿಲ್ಲವಂತೆ.ಹೀಗೆ ಅವನೇ ಸರ್ವಸ್ವ ಅಂತ ನಂಬಿಕೆಟ್ಟ ಮಂಜುಳಾ, ಪೊಲೀಸ್ ಸ್ಟೇಷನ್ ಅಲೆದೂ ಅಲೆದೂ ಬೇಸತ್ತಿದ್ದಳು. ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ಹುಡುಗನ ಕಳ್ಳಾಟವನ್ನ ಕಂಡು ಸೋತೋಗಿದ್ದಳು. ಯಾಕಂದ್ರೆ.. ಈ ಎರಡು ವರ್ಷದಲ್ಲಿ ಈ ಪಾಪಿ ಹುಡುಗ, ಸಾಕಷ್ಟು ಬಾರಿ ಈ ಬೊಂಬೆಯಂತಾ ಹುಡುಗಿ ಜೊತೆ ಎಲ್ಲ ರೀತಿಯ ಆಟ ಆಡಿಬಿಟ್ಟಿದ್ದ…

ಒಂದು ಹೆಣ್ಣು ಅಂತಾನೂ ನೋಡದೆ ಮರ್ಯಾದೆ ಬಿಟ್ಟು ತನಗೆ ಆಗಿದ್ದ ಅನ್ಯಾಯವನ್ನ , ಮೋಸವನ್ನ ಹೇಳ್ಕೊಂಡಿದ್ದ ಈ ಪಾಪದ ಹುಡುಗಿಗೆ ಪ್ರತಿದಿನ ಅವಮಾನ ಆಗ್ತಿತ್ತೆ ಹೊರತು, ನ್ಯಾಯ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ.. ಡೆತ್ ನೋಟ್ ಬರೆದು, ನನ್ನ ಸಾವಿನ ನಂತರವಾದ್ರೂ ನ್ಯಾಯ ಕೊಡಿಸಿ ಅಂತ ಬರೆದ ಮಂಜುಳಾ ಸಾವಿಗೆ ಶರಣಾಗಿಬಿಟ್ಟಿದ್ದಳು.ನೀನೆ ನನ್ನ ಜೀವ, ನಿನ್ನ ಬಿಟ್ಟು ಏನೂ ಇಲ್ಲಾ ಅಂತ ಹೇಳ್ತಿದ್ದ ರವಿಕಿರಣ್, ಮ್ಯಾಟ್ರು ಮದ್ವೆವರೆಗೂ ಬಂದು ನಿಂತಾಗ ಅದ್ಯಾಕಾಗಿ ಉಲ್ಟಾ ಹೊಡೆದು ಕಳ್ಳಾಟ ಶುರುಮಾಡಿದ್ದ…

ಬೆಳ್ಳಿಬೊಂಬೆ ತರ ಇರೋ ಹುಡುಗಿಯ ದೇಹ ಸೌಂದರ್ಯ ಮಾತ್ರ ಬೇಕಾಗಿತ್ತಾ.. ಅವಳನ್ನ ಮದ್ವೆ ಮಾಡ್ಕೊಳ್ಳೋ ಉದ್ದೇಶಾನೇ ಇರ್ಲಿಲ್ಲ ಅನ್ನೋ ಸಂಶಯ ಕಾಣುತ್ತೆ. ಅವನ ಆ ಚಂಗಲು ಬುದ್ದಿಗೆ ಒಂದು ನೆಪ ಜೊತೆಗೂಡಿತ್ತು ಅದೇನೆಂದ್ರೆ.. ಮಂಜುಳಾಗೆ ಅದಾಗಲೇ ಮದ್ವೆಯಾಗಿ ಡಿವೋರ್ಸ್ ಕೂಡ ಆಗಿತ್ತು. ಅವಳು ನಾಯಿಮುಟ್ಟಿದ ಮಡಿಕೆ ಅನ್ನೋ ಕೆಟ್ಟ ಭಾವನೆ.ಹೌದು.. ಮಂಜುಳಾಗೆ 16 ವರ್ಷ ವಯಸ್ಸಿರಬೇಕಾದ್ರೇನೆ ಯಾವ ಕಾರಣಕ್ಕೋ ಏನೋ ಮದ್ವೆ ಮಾಡಿಬಿಟ್ಟಿದ್ರು. ಆದ್ರೆ, ಆ ಮದುವೆ ಈಕೆಗೆ ಇಷ್ಟ ಇರ್ಲಿಲ್ಲ.

ಹೀಗಾಗಿ ಗಂಡನಿಗೆ ಗುಡ್ ಬೈ ಹೇಳಿದ್ದಳು. ಹೀಗಾಗಿ ಈ ಪಾಕಡ ಪ್ರೇಮಿಗೆ ಈ ದಂತದ ಬೊಂಬೆ ಕೇವಲ ಅಂದಚೆಂದ ಸವಿಯೋದಕ್ಕೆ, ಆಟ ಆಡೋಕೆ ಮಾತ್ರ ಏನೋ.. ಇಂತಾ ಹುಡಗನನ್ನ ಪ್ರಾಣಕ್ಕೆ ಪ್ರಾಣ ಅಂತ ಲವ್ ಮಾಡಿ ಯಾಮಾರಿಬಿಟ್ಟಳು ಪಾಪ ಈ ಹುಡುಗಿ. ಅದಾಗಲೂ ಕೂಡ.. ಪೊಲೀಸ್ರು ಒಂದು ಚೂರು ಅವಳ ಕಣ್ಣೀರಿಗೆ ಕರಗಿದ್ರೆ.. ಪ್ರೀತಿ ಕಥೆ ಹಾಳಾಗ್ಲಿ, ಮಂಜುಳಾನಾದ್ರೂ ಜೀವಂತ ಇರ್ತಿದ್ದಳೋ ಏನೋ.ಆದ್ರೆ.. ಫ್ರಾಡ್ ಪ್ರೇಮಿ ರವಿಕಿರಣನ ಮೋಸದಾಟಕ್ಕೆ ಸೋತು ಬೇಸತ್ತು , ಪ್ರೀತಿಕೊಂದ ಮೋಸಗಾರ ಹಾಗೂ ಅವನ ಮನೆಯವರ ಮೇಲೆ ದೂರು ಬರೆದ ಮಂಜುಳಾ, ನನಗೆ ಬದುಕಿದ್ದಾಗಲಂತೂ ನ್ಯಾಯ ಸಿಗಲಿಲ್ಲ. ನಾನು ಸತ್ತ ಮೇಲಾದ್ರೂ ಅವರಿಗೆ ಶಿಕ್ಷೆ ಆಗಲಿ. ನನ್ನ ಹಾಗೆ ಬೇರೆವ ಹುಡುಗಿಯೂ ಅನ್ಯಾಯ ಆಗದಿರಲಿ ಅಂತ ನಿರ್ಧರಿಸಿದ್ದ ಮಂಜುಳಾ ಸೇರಿದ್ದೇ ಸಾವಿನ ಮನೆಗೆ.

LEAVE A REPLY

Please enter your comment!
Please enter your name here