Home Cinema ಮೋದಿಯಿಂದ ಆಗಿದ್ದೇಗೆ ಬಾಲಸುಬ್ರಮಣ್ಯಂ ಸ್ವಾಭಿಮಾನ ಭಂಗ..? ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ :...

ಮೋದಿಯಿಂದ ಆಗಿದ್ದೇಗೆ ಬಾಲಸುಬ್ರಮಣ್ಯಂ ಸ್ವಾಭಿಮಾನ ಭಂಗ..? ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ : SPB ಧಗಧಗ..!

3411
0
SHARE

ಯಸ್. ನಮ್ಮ ಪ್ರಧಾನಿ ಮಿಸ್ಟರ್. ನರೇಂದ್ರಮೋದಿಗೆ ಯಾಕೋ ಬಾಲಿವುಡ್ ಮೇಲೆ ಶಾನೆ ಲವ್ ಆಗಿಬಿಟ್ಟಿದೆ. ಪ್ರತಿಸಲವೂ ಹಿಂದಿ ಸ್ಟಾರ್‌ಗಳನ್ನ ಬಿಗಿದಪ್ಪಿಕೊಳ್ಳೊ ಮೋದಿ ಈಗ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಕೆಂಗಣ್ಣಿಗೆ ಗುರಿಯಾಗಿಬಿಟ್ಟಿದ್ದಾರೆ. ಈ ಹಿಂದೆ ಕೂಡ ಅನೇಕ ಸಂದರ್ಭಗಳಲ್ಲಿ ಮೋದಿಯ ಬಾಲಿವುಡ್ ಪ್ರೀತಿ ಎದ್ದುಕಂಡಿತ್ತು. ಈಗ ದಕ್ಷಿಣ ಭಾರತದ ದಂತಕಥೆ ಎನಿಸಿಕೊಂಡಿರೋ ಗಾನಮಾಂತ್ರಿಕ ಎಸ್.ಪಿ.ಬಾಲಸುಬ್ರಮಣ್ಯಂ ಮೋದಿ ಮೇಲೆ ಗರಂ ಆಗಿಬಿಟ್ಟಿದಾರೆ.

ಪ್ರತಿವಿಷಯದಲ್ಲೂ ಬಾಲಿವುಡ್ ಸ್ಟಾರ್‌ಗಳಿಗೆ ಮಣೆ ಹಾಕೋ ಮೋದಿಗೆ ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ. ಇದು ಹೊಸ ವಿಷಯವೇನಲ್ಲ. ಎಲ್ಲಾ ಸಮಾರಂಭದಲ್ಲಿಯೂ ಮೋದಿ ಹಿಂದಿ ಚಿತ್ರರಂಗವನ್ನ ಹಾಡಿಹೊಗಳೊದು ವಾಡಿಕೆ. ಸೌತ್ ಇಂಡಿಯನ್ ಸಿನಿಮಾದ ಸಾಧನೆಗಳು ಮೋದಿ ಕಣ್ಣಿಗೆ ಕಾಣಿಸೋದೆ ಇಲ್ವಾ ಎನ್ನುವುದು ಕೆಲವರ ಊರಿ. ಇದಕ್ಕೆ ಉಪ್ಪುಖಾರ ಸುರಿಯೋ ಹಾಗೇ ಮತ್ತೊಮ್ಮೆ ದಕ್ಷಿಣ ಭಾರತದ ದಿಗ್ಗಜನನ್ನ ಅವಮಾನಿಸಿದ್ದಾರೆ ಮೋದಿ. ಎಸ್.ಪಿ.ಬಾಲಸುಬ್ರಮಣ್ಯಂ ಈ ಬಗ್ಗೆ ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಬೇಸರದ ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಸೌತ್ ಇಂಡಿಯನ್ ಸಿನಿಮಾಪ್ರಿಯರು ನೋಡಲೇಬೇಕಾದ ಸ್ಟೋರಿಯಿದು.ನಡೆದಿದಿಷ್ಟು. ರಾಷ್ಟ್ರಪಿತ ಮಹಾತ್ಮ ಗಾಂಧಿಯ ೧೫೦ನೇ ಜನ್ಮವರ್ಷದ ಸಂಭ್ರಮವನ್ನ ಅದ್ದೂರಿಯಾಗಿ ಆಚರಿಸಲು ಪ್ಲಾನ್ ಮಾಡಿದ ನರೇಂದ್ರ ಮೋದಿ ವಿಶೇಷ ಕಾರ್ಯಕ್ರವೊಂದನ್ನ ಆಯೋಜಿಸಿದ್ರು.

ಇಲ್ಲಿ ಸಿನಿಮಾಜಗತ್ತಿನ ಎಲ್ಲ ಘಟುನುಘಟಿಗಳು ಪಾಲ್ಗೊಂಡಿದ್ರು. ಆದರೆ ಅಲ್ಲಿ ಆಬ್‌ಸೆಂಟ್ ಆಗಿದ್ದು, ನಮ್ಮ ದಕ್ಷಿಣ ಭಾರತದ ಸ್ಟಾರ್‌ಗಳೇ. ನಮ್ಮವರಿಗೆ ಅಲ್ಲಿ ಬುಲಾವ್ ಇರಲಿಲ್ಲ. ಸೌಜನ್ಯಕ್ಕೂ ಒಂದು ಇನ್ವಿಟೇಶನ್ ಕೊಟ್ಟಿರಲಿಲ್ಲ. ಈ ಭೇದಭಾವ ಯಾಕೆ ಸ್ವಾಮಿ ಅಂತ ರಾಮ್‌ಚರಣ್ ಪತ್ನಿ ಉಪಸನಾ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಹಲವು ಸೆಲೆಬ್ರೆಟಿಗಳು ದ್ವನಿ ಎತ್ತಿದ್ರು. ಈ ಬೆಳವಣಿಗೆಗಳಿಗೆ ಈಗ ಹೊಸ ಪುಷ್ಟಿ ಸಿಕ್ಕಿದೆ. ಆಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಈಗ ಅಂದು ನಡೆದ ಒಂದು ಘಟನೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ತಾರತಮ್ಯದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಸೆಲೆಬ್ರಿಟಿಗಳ ಈ ವಿಡಿಯೋದಲ್ಲೂ ದಕ್ಷಿಣಭಾರತದ ಸ್ಟಾರ್‌ಗಳನ್ನ ಕಡೆಗಣಿಸಿರುವುದು ಬಹಳ ಕ್ಲಿಯರಾಗೇ ಕಾಣಿಸ್ತಿದೆ.

ಅಸಲಿಗೆ ಕಾರ್ಯಕ್ರಮದಲ್ಲಿ ಯಾರಿಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತೆ ಅವಕಾಶವಿರಲಿಲ್ಲ. ಎಲ್ಲರ ಮೊಬೈಲ್ ಪಡೆದುಕೊಂಡ ಸೆಕ್ಯುರಿಟಿ ಅದಕ್ಕೆ ಟೋಕನ್‌ಗಳನ್ನೂ ಕೊಟ್ಟಿದ್ರು. ನಾನು ಹಾಗೇ ಮೊಬೈಲ್ ನೀಡಿದ್ದೇ. ಆದರೆ ಬಾಲಿವುಡ್ ಸ್ಟಾರ್‌ಗಳು ಒಳಗಡೆ ಮೋದಿಯ ಜೊತೆ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ..? ಒಳಗೆ ಮೊಬೈಲ್ ಬಳಸುವಂತಿಲ್ಲ ಎಂದು ಹೇಳಿದ್ರೂ, ಬಾಲಿವುಡ್‌ನ ಅನೇಕ ಸ್ಟಾರ್‌ಗಳು ಮೋದಿ ಜೊತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಇದು ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನ ಸೃಷ್ಟಿಸಿದೆ ಅಂತ ಬಿಗ್ ಕ್ವಚ್ಚೆನ್ ಮಾರ್ಕ್ ಇಟ್ಟಿದ್ದಾರೆ ಎಸ್.ಪಿ.ಬಾಲಸುಬ್ರಮಣ್ಯಂ.

ಪಿ.ಎಂ.ಮೋದಿ ಕಣ್ಣಿಗೆ ಕಾಣಲ್ಲವೇಕೆ ದಕ್ಷಿಣ ಭಾರತೀಯ ಚಿತ್ರರಂಗ..?ಇನ್ನು ಈ ಹಿಂದೆ ನಮ್ಮ ಕನ್ನಡ ಚಿತ್ರರಂಗದ ನವರಸನಾಯಕ ಕೂಡ ಈ ವಿಚಾರವಾಗಿ ತಮ್ಮ ವಾಯ್ಸ್ ಎತ್ತಿದ್ರು. ತಮ್ಮ ಟ್ವಿಟರ್ ಖಾತೆಯಲ್ಲೂ ಬಾಣಬಿಟ್ಟಿದ್ದ ಜಗ್ಗೇಶ್, ಭಾಷೆಯ ವಿಷಯದಲ್ಲಿ ನೋ ಕಂಪ್ರಮೈಸ್ ಅಂತ ಗುಡುಗಿದ್ರು. ಈ ತಾರತ್ಯಮಗಳ ಅವಶ್ಯಕತೆಯಿಲ್ಲ. ಭಾಷೆಯ ವಿಚಾರದಲ್ಲಿ ಕೆಲವರು ಭೇದಭಾವ ತೋರಿಸದೇ ಹೋದ್ರೆ ಒಳಿತು ಅಂತ ಇನ್‌ಡೈರೆಕ್ಟ್ ಟಾಂಗ್ ಕೊಟ್ಟಿದ್ರು ಜಗ್ಗೇಶ್. ಒಟ್ಟಿನಲ್ಲಿ ಎಸ್.ಪಿ.ಬಿಯ ಈ ಹೊಸ ಬಾಂಬ್ ಎಲ್ಲರನ್ನೂ ಯೋಚಿಸುವಂತೆ ಮಾಡಿರೋದಂತೂ ಸುಳ್ಳಲ್ಲ. ಯಾಕಂದ್ರೆ ಇದು ದಕ್ಷಿಣ ಭಾರತೀಯ ಚಿತ್ರರಂಗದ ವರ್ಚಸ್ಸಿನ ಪ್ರಶ್ನೆ. ಹೀಗೆ ಮುಂದುವರೆದ್ರೆ ಮುಂದೊಂದು ದಿನ ಬಾಲಿವುಡ್ ಮುಂದೆ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗೋದು ಗ್ಯಾರಂಟಿ.

ಎಸ್.ಪಿ.ಬಾಲಸುಬ್ರಮಣ್ಯಂ ಮಾಡಿರೋ ಪೋಸ್ಟ್‌ನ ಹಿಂದಿನ ಮಾರ್ಮಿಕ ಅರ್ಥವೂ ಇದನ್ನೇ ಸೂಚಿಸಿದೆ. ಬಾಲಿವುಡ್ ನಟರು ಅಂದ್ರೆ ತುಂಬಾನೇ ಪ್ರೀತಿ ತೋರಿಸೋ ನರೇಂದ್ರ ಮೋದಿ, ಸ್ವಲ್ಪ ದಕ್ಷಿಣ ಭಾರತದ ನಟನಟಿಯರನ್ನೂ ಗೌರವಿಸೋದು ಕಲಿತುಕೊಂಡ್ರೆ ಉತ್ತಮ ಎನ್ನುವ ಮೇಸೆಜ್ ಕೂಡ ಈ ಎಸ್.ಪಿ.ಬಿ ಮಾತುಗಳಲ್ಲಿ ಅಡಗಿಕೊಂಡಿದೆ. ಈ ವಿವಾದಗಳಿಂದದ್ರೂ ನರೇಂದ್ರ ಮೋದಿ ಎಚ್ಚೆತ್ತುಕೊಂಡು ಸೌತ್ ಇಂಡಿಯನ್ ಸಿನಿಮಾ ಸ್ಟಾರ್‌ಗಳಿಗೆ ಪ್ರಾಮುಖ್ಯತೆ ಕೊಡ್ತಾರಾ ಎನ್ನುವುದೇ ಎಲ್ಲರ ಕ್ಯುರ‍್ಯಸಿಟಿ.

LEAVE A REPLY

Please enter your comment!
Please enter your name here