Home District ಮೋದಿ ಪೆಟ್ರೋಲ್ ,ಡೀಸೆಲ್ ದರ ಏರಿಸಿದಾಗ ಇವರೇಕೆ ಸುಮ್ನೆ ಇದ್ರು..?? ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಟಾಂಗ್..?!!

ಮೋದಿ ಪೆಟ್ರೋಲ್ ,ಡೀಸೆಲ್ ದರ ಏರಿಸಿದಾಗ ಇವರೇಕೆ ಸುಮ್ನೆ ಇದ್ರು..?? ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಟಾಂಗ್..?!!

659
0
SHARE

ಪೆಟ್ರೋಲ್ ,ಡೀಸೆಲ್ ದರ ಮೇಲಿನ ತೆರಿಗೆ ಹೆಚ್ಚಳವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಪೆಟ್ರೋಲ್,ಡೀಸಲ್ ದರ ಒಂದು ರೂಪಾಯಿ ಹೆಚ್ಚು ಮಾಡಿದ್ದರಿಂದ ತಕ್ಷಣ ಜನಸಾಮಾನ್ಯರಿಗೆ ಗುನ್ನಾ ಎಂದು ಹೇಳುತ್ತಾರೆ. ಆದ್ರೆ, ಪ್ರಧಾನಿ ಮೋದಿ ಹತ್ತಾರು ಬಾರಿ ದರ ಹೆಚ್ಚಳ ಮಾಡಿದ್ದಾಗ ಇವರು ಏಕೆ ಸುಮ್ನೆ ಇದ್ದರು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ರೈತರ ಸಾಲಮನ್ನಾ ಮಾಡಿದ್ದೇವೆ.ರೈತರ ಸಾಲಮನ್ನಾ ಮಾಡಿದ್ದರೂ ಕೆಲ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ದಯವಿಟ್ಟು ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಹಂತ ಹಂತವಾಗಿ ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ…

ಇದೇ ವೇಳೆ, ಸಾಲಮನ್ನಾದಲ್ಲಿ ಒಕ್ಕಲಿಗರಿಗೆ ಹೆಚ್ಚು ಲಾಭ ವಿಚಾರ ಬಗ್ಗೆ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಒಕ್ಕಲಿಗರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಯಾರು ಹೇಳಿದ್ದು?. ಈ ಬಗ್ಗೆ ಯಾರು ಅಂಕಿ ಅಂಶ ಯಾರು ಕೊಟ್ಟಿದ್ದು?. ಈ ಬಗ್ಗೆ ತನಿಖೆಯಾಗಬೇಕಾದ್ರೆ ಮಾಧ್ಯಮಗಳ ಮೇಲೆ ದೂರು ಕೊಡಬೇಕು…

ಮಾಧ್ಯಮಗಳ ಮೇಲೆ ದೂರು ನೀಡಿದ್ರೆ ,ಮಾದ್ಯಮಗಳನ್ನ ಕಟ್ಟು ಹಾಕುತ್ತಿದ್ದಾರೆ ಎಂದು ಹೇಳುತ್ತಾರೆ ಎಂದು ಗುಡುಗಿದ್ದಾರೆ.ಈ ಬಗ್ಗೆ ಸದನದಲ್ಲಿ ನಾನು ಉತ್ತರ ನೀಡುತ್ತೇನೆ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ…

LEAVE A REPLY

Please enter your comment!
Please enter your name here