Home Elections 2019 ಮೋದಿ ಶಕ್ತಿ ಕ್ಷೀಣಿಸಿ ದೆಹಲಿಯ ಗದ್ದುಗೆ ಏರುತ್ತಾರಂತೆ ರಾಜ್ಯದ ದಳಪತಿ HDK.! ಆ ಕರಿ ನಾಗರವೇ...

ಮೋದಿ ಶಕ್ತಿ ಕ್ಷೀಣಿಸಿ ದೆಹಲಿಯ ಗದ್ದುಗೆ ಏರುತ್ತಾರಂತೆ ರಾಜ್ಯದ ದಳಪತಿ HDK.! ಆ ಕರಿ ನಾಗರವೇ ನೀಡಲಿದ್ಯಂತೆ ಕುಮಾರಸ್ವಾಮಿಗೆ ರಾಷ್ಟ್ರವಾಳೋ ಶಕ್ತಿ.!?

1691
0
SHARE

ದೇವರು, ದೈವವನ್ನ ಅತಿಯಾಗಿ ನಂಬುವ ಕುಟುಂಬ ದೇವೆ ಗೌಡ್ರದ್ದು, ಸ್ವತಃ ದೇವೆಗೌಡ್ರು ದೇವರನ್ನ ಆರಾಧಿಸುತ್ತಾರೆ, ಪೂಜಿಸುತ್ತಾರೆ..  ಆಗಾಗಾ ಶಕ್ತಿ ಪೀಠಕ್ಕೆ ಹೋಗಿ ಹೋಮ ಹವನವನ್ನ ಮಾಡಿಸುತ್ತಿರುತ್ತಾರೆ, ಅದ್ರಂತೆ ಚುನಾವಣಾ ಪೂರ್ವದಲ್ಲಿ ಶೃಂಗೇರಿಯಲ್ಲಿ ಮಹಾ ಯಾಗವೊಂದನ್ನು ಸಹ ಮಾಡಿದ್ರು,  ಇನ್ನು ಅವರ ಪುತ್ರರ ರೇವಣ್ಣನ ಬಗ್ಗೆ ಇಡೀ ಕರ್ನಾಟಕ್ಕೆ ಗೊತ್ತಿದೆ, ಶಾಸ್ತ್ರ, ಸಂಪ್ರದಾಯವನ್ನ ಗೌಡ್ರಿಗಿಂತಲು ಹೆಚ್ಚಾಗಿ ನಂಬುವ ರೇವಣ್ಣ, ಸದಾ ಜ್ಯೋತಿಷಿಗಳು ಹೇಳುವ ಮಾತಿಗೆ ಕಠಿ ಬದ್ದವಾಗಿರುತ್ತಾರೆ.

ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಮುಹೂರ್ತ ಘಳಿಗೆಯನ್ನ  ನೋಡಿಕೊಂಡೇ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು. ಸರ್ಕಾರ ರಚನೆ ಆಗಿದೆ, ಮುಖ್ಯಮಂತ್ರಿಗಲು ಬಜೆಟ್ ಮಂಡಿಸಿ ಆಡಳಿತ ಯಂತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಅವರಿಗೆ ಅಂತಾನೇ ಒಂದು ಸರ್ಕಾರ ಬಂಗಲೇಯನ್ನ ನೀಡಲಾಗಿದೆ. ಆದ್ರೆ ಕುಮಾರಸ್ವಾಮಿ ಮಾತ್ರ ಆ ಬಂಗಲೆಗೆ ಹೋಗಲು ತಯಾರಿಲ್ಲ, ಯಾವುದೇ ಕಾರಣಕ್ಕೂ ಈಗಿರೋ ಸ್ವಂತಃ ಮನೆಯನ್ನ ಬಿಟ್ಟು ಬೇರೆ ಮನೆಗೆ ಕಾಲಿಡಲು ಸುತಾರಂ ಒಪ್ಪುತ್ತಿಲ್ಲ…

ಕುಮಾರಸ್ವಾಮಿ ಜೆ.ಪಿ. ನಗರದ ಮನೆಯನ್ನು ಮಾರಲು ನಿರ್ಧರಿಸಿದರು.ಖರೀದಿ ಮಾಡಲು ಬಂದವರು ಮುಂಗಡ ಹಣವನ್ನೂ ನೀಡಿದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಕುಮಾರಸ್ವಾಮಿಯವರಿಗೆ ಮಹತ್ವದ ಸಂದೇಶವೊಂದು ಬಂದು ತಲುಪಿತು. ಆ ಸಂದೇಶ ಬಂದ ನಂತರ ಕುಮಾರಸ್ವಾಮಿ ಆ ಮನೆ ಮಾರದಿರಲು ನಿರ್ಧಾರ ಮಾಡಿದ್ರು. ಅಂದೇ ಕುಮಾರಸ್ವಾಮಿಗೆ ಮಹತ್ವದ ಸಂದೇಶ ಒಂದು ಬಂದಿತ್ತು, ತಾನು ಮುಖ್ಯಮಂತ್ರಿಯಾಗುತ್ತೇನೆ ಅನ್ನೋದು ಒಂದು ವರ್ಷದ ಹಿಂದೆಯೇ ತಿಳಿದು ಹೋಗಿತ್ತು. ಅದು ಒಂದು ಕರಿನಾಗರದ ಮೂಲಕ..

ಕುಮಾರಸ್ವಾಮಿ ಈಗಿರೋ ಜೆಪಿ ನಗರದ ನಿವಾಸಕ್ಕೆ ಒಂದು ಕರಿನಾಗರ ಬಂದಿತ್ತು, ಆ ಕರಿನಾಗ ಅಂತಿಂಥದ್ದಾಗಿರಲಿಲ್ಲ, ಅದು ಅಕ್ಷರಶಃ ಅದೃಷ್ಟವನ್ನ ಹೊತ್ತು ತಂದಿತ್ತು, ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಅಧಿಕಾರ ಹಿಡಿಯುವಂತ ಲಕ್ ಅನ್ನು ಆ ಕರಿನಾಗರ ಕರುಣಿಸಿತ್ತು.  ಮನೆಯಲ್ಲಿ ಯಾವಾಗ ಸರ್ಪ ಪ್ರತ್ಯಕ್ಷವಾಯ್ತೋ ಕುಮಾರಸ್ವಾಮಿ ಅಂದೇ ನಿರ್ಧಾರ ಮಾಡಿ ಬಿಟ್ಟಿದ್ದರು.

ಯಾವುದೇ ಕಾರಣಕ್ಕೂ ಈ ಮನೆಯನ್ನ ಬಿಡಬಾರದು ಅಂತಾ, ಆ ಸಂಕಲ್ಪದೊಂದಿಗೆ ಮನೆಯಲ್ಲಿ ವಾಸವಿದ್ರು, ಕಾಕತಾಳಿಯವೋ ದೈವ ನಿರ್ಣಯವೋ ಸಿಎಂ ಖುರ್ಚಿ ಕುಮಾರಸ್ವಾಮಿಯನ್ನ ಹುಡುಕಿ ಕೊಂಡು ಬಂದಿತ್ತು, ಕಾಂಗ್ರೆಸ್ ನ ಭೇಷರತ್ ಬೆಂಬಲದಿಂದ ಸಾಂಧರ್ಬಿಕ ಕಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಹೋದರು…

ಕುಮಾರಸ್ವಾಮಿಯವರ  ಜಾತಕದಲ್ಲಿ ರಾಜಯೋಗಗಳಿಲ್ಲ. ಆದರೆ ಅಧಿಕಾರ ಯೋಗ ಇದೆ. ಇವರು ಎಂದಿಗೂ ಸ್ವತಂತ್ರವಾಗಿ ಅಧಿಕಾರವನ್ನು ಹಿಡಿಯಲಾರರು. ಮತ್ತೊಬ್ಬರ ಸಹಾಯದಿಂದಲೇ ಅಧಿಕಾರ ಅನುಭವಿಸುವ ಯೋಗ ಇರುವಂಥ ಜಾತಕ ಇವರದು. ಹೆಚ್ ಡಿಕೆ ಅವರದ್ದು  ಆರಿದ್ರಾ ನಕ್ಷತ್ರ, ಮಿಥುನ ರಾಶಿ. ಇದರಿಂದ ಅಧಿಕಾರ ಏನೋ ಲಭಿಸುತ್ತೆ, ಆದ್ರೆ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಂತೆ.

ಜ್ಯೋತಿಷಿಗಳು ಹೇಳಿದ್ದು !

ಕುಮಾರಸ್ವಾಮಿಯವರೇ ಕರಿನಾಗರ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ನೀವು ಕಳೆದುಕೊಂಡ ವೈಭವವನ್ನು ಮರಳಿ ಪಡೆಯುತ್ತೀರಿ. ಮುಖ್ಯಮಂತ್ರಿಗಿರಿ ಮಾತ್ರವಲ್ಲ, ನಿಮ್ಮ ತಂದೆಯಂತೆಯೇ ಈ ದೇಶದ ಪ್ರಧಾನಿಯಾಗುವ ಅವಕಾಶವೂ ಇದೆ. ಹಾಗಂತ ಕರಿ ನಾಗರ ಯಾವ ಮನೆಯಲ್ಲಿ ಕಾಣುತ್ತದೋ? ಆ ಮನೆಯವರಿಗೆಲ್ಲ ಇಂತಹ ಪಟ್ಟ ಒದಗುತ್ತದೆ ಎಂದು ಹೇಳಲಾಗದು. ಆದರೆ ನಿಶ್ಚಿತವಾಗಿ ಅವರು ತಮ್ಮ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಅವಕಾಶಗಳಿರುತ್ತವೆ. ನಿಮಗೆ ರಾಜಕೀಯವೇ ಸರ್ವಸ್ವ. ಹೀಗಾಗಿ ನಿಮ್ಮ ಗ್ರಹಗತಿಗಳಿಗೆ ಕರಿನಾಗರ ಕಂಡಿರುವುದು ಪೂರಕ. ಹಾಗೆಯೇ ನೀವು ಡೆಡ್ಲಿ ಪವರ್ ಹೊಂದುತ್ತೀರಿ.

ಯಾವ ಕಾರಣಕ್ಕೂಈ ಮನೆ ಮಾರಬೇಡಿ. ಮಾರದೆ ಇರುವುದಷ್ಟೇ ಅಲ್ಲ, ಸಾಧ್ಯವಾದಷ್ಟು ಬೇಗ ಅಲ್ಲಿಗೆ ಹೋಗಿ ವಾಸಿಸಿ. ಯಾಕೆಂದರೆ ಕರಿ ನಾಗರ ಕಂಡಿರುವುದರಿಂದ ಮತ್ತು ಅದರ ಪವರ್ ನಿಮಗೆ ಶೀಘ್ರಗತಿಯಲ್ಲಿ ದಕ್ಕಬೇಕು.ಅಂತಾ ಹೇಳಿದ್ರೆ, ಸೋ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ ಪ್ರಧಾನಿಯ ಸ್ಥಾನ ಸಿಗುತ್ತೆ ಅನ್ನೋ ವಿಷ್ಯ ಕೇಳಿದ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಮನೆ ಬಿಡುವ ತೀರ್ಮಾನ ಮಾಡಬಾರದು ಅಂದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here