Home Elections 2019 ಮೋದಿ ಸರ್ಕಾರದಲ್ಲಿ ಕಪ್ಪು ಹಣ ವಾಪಸ್ಸ್ ಬರುವ ಬದಲು ಇನ್ನು ಹೆಚ್ಚಾಗುತ್ತಲೇ ಹೋಗುತ್ತಿದ್ಯಾ..!? ಹೊರಬಿದ್ದಿದೆ ಸ್ಫೋಟಕ...

ಮೋದಿ ಸರ್ಕಾರದಲ್ಲಿ ಕಪ್ಪು ಹಣ ವಾಪಸ್ಸ್ ಬರುವ ಬದಲು ಇನ್ನು ಹೆಚ್ಚಾಗುತ್ತಲೇ ಹೋಗುತ್ತಿದ್ಯಾ..!? ಹೊರಬಿದ್ದಿದೆ ಸ್ಫೋಟಕ ಮಾಹಿತಿ..!?ಕಪ್ಪು ಹಣವೆಷ್ಟು, ಬ್ಲ್ಯಾಕ್ ಮನಿ ರಿಟರ್ನ್ ತರುವಲ್ಲಿ ವಿಫಲವಾದ್ರಾ ಮೋದಿ..!?

3360
0
SHARE

ಮೋದಿ ಪ್ರಧಾನಿ ಆಗುವುದಕ್ಕೂ ಮುಂಚಿನಿಂದಲೂ ಹಾಗು ಪ್ರಧಾನಿ ಆದ ಮೇಲು  ಈ ಒಂದು ಮಾತನ್ನ  ಪ್ರತಿ ಬಾರಿ ಹೇಳ್ತಿದ್ರು.  ನನ್ನ ಹೋರಾಟ ಕಪ್ಪು ಹಣದ ವಿರುದ್ದ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ಅದಕ್ಕಾಗಿ ನಾನು ಹಗಲಿರುಳು ಶ್ರಮ ಪಡುತ್ತಲೇ ಇರುತ್ತೇನೆ ಅಂತಾ ಸಾರಿ ಸಾರಿ ಹೇಳುತ್ತಿದ್ರು.  2014ರಲ್ಲಿ  ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಸಹ ಇದೇ ಕಪ್ಪು ಹಣದ ವಿಷಯವೇ ಅಂದ್ರು ಅತಿಶಯೋಕ್ತಿಯಲ್ಲ. ಯುಪಿಎ ಸರ್ಕಾರ ಮಾಡುತ್ತಿದ್ದ  ದುರಾಡಳಿತ ಒಂದು ಕಡೆ ಆದ್ರೆ,  ಇಡೀ ದೇಶವನ್ನ ಕಾಡುತ್ತಿದ್ದ ಕಪ್ಪು ಹಣ ಇನ್ನೊಂದು ಕಡೆ. ಈ ಕಪ್ಪು ಹಣ ಎಂಬ ಮಾಯ ಜಿಂಕೆಯನ್ನು ಬೆನ್ನತ್ತಿದ ಮೋದಿ…ಹೋದಲೆಲ್ಲ  ಕಪ್ಪು ಹಣ ವಾಪಸ್ ತರುತ್ತೇನೆ ಅನ್ನೋ ವಾಗ್ದಾನವನ್ನು ಮಾಡುತ್ತಿದ್ರು.  ನಮ್ಮ ಸರ್ಕಾರ  ಆಡಳಿತಕ್ಕೆ ಬಂದ ನೂರು ದಿನದಲ್ಲಿ ಕಪ್ಪು ಹಣ ತರುವುದಾಗಿ ಹೇಳಿದ್ರು. ಆದ್ರೆ  ಆ ಕೆಲಸ ಅಷ್ಟು ಸುಲುಭ ಅಲ್ಲ ಅನ್ನೋದು  ಕೇಸರಿ ನಾಥನಿಗೆ ಅರ್ಥವಾಗಿತ್ತು. ಕಪ್ಪು ಹಣದ ಬಗ್ಗೆ ಚುನಾವಣಾ ಪೂರ್ವದಲ್ಲಿ ಉದ್ದುದ್ದ ಭಾಷಣ ಮಾಡುತ್ತಿದ್ದ ಮೋದಿ ಅಧಿಕಾರದ ಗದ್ದುಗೆ ಏರಿದ ಮೇಲೆ ಅದ್ಯಾಕೋ ಇನ್ನಿಲ್ಲದಂತೆ ಮೌನ ವಹಿಸಿ ಬಿಟ್ರು..ಮೋದಿ ಕಪ್ಪು ಹಣದ ವಿಚಾರವಾಗಿ ದೇಶದ ಗಮನ ತನ್ನತ್ತ ಸೆಳೆದುಕೊಂಡಿದ್ರು, ವಿದೇಶದಿಂದ ಕಪ್ಪು ಹಣವನ್ನ ತಂದಿದ್ದೇ ಆದ್ರೆ ಎಲ್ಲರ ಅಕೌಂಟ್ ಗೆ ಸುಮಾರು 15 ಲಕ್ಷ ಹಾಕಬಹುದು ಅಂತಾನು ಹೇಳಿದ್ರು, ಆದೇ ರೀತಿಯಾಗಿ ಬಿಜೆಪಿಗೆ ಅಧಿಕಾರ ಕೊಡಿ ನೂರು ದಿನದಲ್ಲಿ ಕಪ್ಪು ಹಣ ತರ್ತೇನೆ ಅಂತಾನು ಹೇಳಿದ್ರು, ಆ ಯಾವ ಕಾರ್ಯವನ್ನೂ ಮೋದಿ ಮಾಡಲಿಲ್ಲ…ಕಪ್ಪು ಹಣ ತರುವುದು ಒತ್ತಟ್ಟಿಗಿರಲಿ ಇಲ್ಲಿಂದ ಸ್ವಿಸ್ ಬ್ಯಾಂಕ್ ಗೆ ಹೋಗುವ ಹಣವನ್ನ ತಡೆಯುವ ಕಾರ್ಯಕ್ಕೂ ಮೋದಿ ಕೈ ಹಾಕಲಿಲ್ಲ, ಅದ್ರ ಪ್ರತಿಫಲವೇ ಇಂದು ಸ್ವಿಸ್ ಬ್ಯಾಂಕ್ ನಲ್ಲಿ ಜಮೆ ಆಗಿರೋ ಮೊತ್ತ…..ವಿದೇಶಿಯರ ದೇಣಿಗೆ ಪ್ರಮಾಣದಲ್ಲಿ ಶೇಕಡಾ 3 ಏರಿಕೆ ಕಂಡುಬಂದಿದೆ. ಈ ಮೂಲಕ ಠೇವಣಿ ಮೊತ್ತ 100 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.2004ರಲ್ಲಿ ಶೇ. 56ರಷ್ಟು ಹೆಚ್ಚಳವಾಗಿತ್ತು, ಈಗ ಅಂದ್ರೆ 2017ರಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ.ಸಧ್ಯ ಶೇರು ಮಾರುಕಟ್ಟೆಯಲ್ಲಿ ರುಪಾಯಿ ಪಾತಾಳ ಕಾಣುತ್ತಿದೆ, ಆರ್ಥಿಕವಾಗಿ ಸದೃಡವಾಗಬೇಕಿದ್ದ ರುಪಾಯಿ ಡಾಲರ್ ಎದುರು ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿದೆ…ನೋಟ್ ಬ್ಯಾನ್ ನಂತರ ಆರ್ಥಿಕ ಪರಿಸ್ಥಿಯ ಅಧೋಗತಿಗೆ ಹೋದಾಗಲು ಸಹ ಗತ್ತಿನಲ್ಲಿ ಬೀಗುತ್ತಿದ್ದ ರುಪಾಯಿಗೆ ಈಗ ದೊಡ್ಡ ಆತಂಕ ಎದುರಾಗಿದೆ, ನೋಟ್ ಬ್ಯಾನ್ ಆದಾಗ ಇಡೀ ದೇಶಕ್ಕೆ ದೇಶವೇ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದರು ಡಾಲರ್ ಎದುರು ರುಪಾಯಿ ಗತ್ತಿನಿಂದ ಬೀಗುತ್ತಿತ್ತು, ಆ ಸಮಯದಲ್ಲಿ ರೂಪಾಯಿ ಮೌಲ್ಯ ಗಣನೀಯವಾಗಿ ಇಳಿಕೆ ಆಗುತ್ತೇ ಅಂತಾನೇ ಎಲ್ಲರು ಭಾವಿಸಿದ್ರು, ಆದ್ರೆ ತಜ್ಞರ ಅಂದಾಜನ್ನೆ ಅಂದು ತಲೆಕೆಳಗು ಮಾಡಿತ್ತು. ಇಂದು ಆ ಒಂದು ಕಾರಣದಿಂದ ರುಪಾಯಿ ಡಾಲರ್ ಎದುರು ನಿಲ್ಲಲು ಏದುಸಿರು ಬಿಡುತ್ತಿದೆ…ಒಟ್ಟಾರೆ  ಚೀನಾ ಮತ್ತು ಅಮೆರಿಕಾ ನಡೆಸುತ್ತಿರೋ ಟ್ರೇಡ್ ವಾರ್ ನಿಂದಾಗಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ, ಅದ್ರ ಎಪೆಕ್ಟ್ ಭಾರತದ ಮೇಲೆ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಮಾತ್ರವಲ್ಲ ದೇಶದ ರಾಜಕೀಯ ವ್ಯವಸ್ಥೆ ಮೇಲು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತೆ. ಸಧ್ಯ ಡಾಲರ್ ಎದುರು ಕುಸಿತ ಕಂಡಿರೋ ರುಪಾಯಿ ಚೇತರಿಸಿಕೊಳ್ಳಲಿದ್ಯಾ ಅಥವ ಏರಿಕೆ ಆಗಿ ಬೇರೆಯದ್ದೇ ಸ್ವರೂಪ ಪಡೆಯಲಿದ್ಯಾ ಅನ್ನೋದನ್ನ ಕಾದು ನೋಡಬೇಕು ಅಷ್ಟೆ…

LEAVE A REPLY

Please enter your comment!
Please enter your name here