Home Elections 2019 ಮೋದಿ ಹಾಕಿದ ಚಾಲೆಂಜ್ ಗೆ ಟಾಂಗ್ ಕೊಟ್ಟ HDK!”ಫಿಟ್ ನೆಸ್ ಬದಲು ಅಭಿವೃದ್ದಿಯ ಚಾಲೆಂಜ್ ತಗೊಳ್ಳಿ...

ಮೋದಿ ಹಾಕಿದ ಚಾಲೆಂಜ್ ಗೆ ಟಾಂಗ್ ಕೊಟ್ಟ HDK!”ಫಿಟ್ ನೆಸ್ ಬದಲು ಅಭಿವೃದ್ದಿಯ ಚಾಲೆಂಜ್ ತಗೊಳ್ಳಿ ಸ್ವಾಮಿ”.!? ರಾಷ್ಟ್ರದ ಗಮನ ಬೆರೆಡೆ ಸೆಳೆಯಲು ನಡೆಯುತ್ತಿದ್ಯಾ ಮಹಾ ಪ್ರಯತ್ನ.!?,

1951
0
SHARE

ನಿಮಗೆಲ್ಲಾ ಗೊತ್ತಿರೋ ಹಾಗೇ ಮೋದಿ ಪ್ರತಿ ದಿನ ಯೋಗಾಭ್ಯಾಸ ಮಾಡಿ ದೇಹವನ್ನ ಫಿಟ್ ಮಾಡಿಕೊಳ್ತಾರೆ. ಅದರಲ್ಲೂ ಪ್ರಧಾನಿ ಮೋದಿಯಿಂದ ಯೋಗಭ್ಯಾಸ ಕಲಿಯಬೇಕು ಅನ್ನೋ ಆಸೆ ಬಹಳಾ ಜನರದ್ದು. ಇತ್ತೀಚೆಗಷ್ಟೇ ಮೋದಿಯವರ ಹೆಸರಲ್ಲಿ ಯೂಟ್ಯೂಬ್ ನಲ್ಲಿ ಒಂದು ಚಾನೆಲ್ ಕೂಡ ಇದೆ. ಅದರಲ್ಲಿ ಮೋದಿ ಯೋಗಭ್ಯಾಸದ ಚಿತ್ರಣವನ್ನ 3ಡಿ ರೂಪದಲ್ಲಿ ಮಾಡಿ ಅಪ್ ಲೋಡ್ ಮಾಡಲಾಗಿದೆ. ಇದೇನು ಹೊಸ ಸುದಿಯಲ್ಲ. ಆದ್ರೀಗ ಹೊಸ ಸುದ್ದಿ.., ಬಿಸಿ..ಬಿಸಿ ಸುದ್ದಿ ಏನಂದ್ರೆ ಪ್ರಧಾನಿ ಮೋದಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿರೋದು..

ಬಹಳ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಕ್ರಿಕೆಟ್ ಟೀಂನ ನಾಯಕ ವಿರಾಟ್ ಕೋಹ್ಲಿ ಫಿಟ್ ನೆಸ್ ಚಾಲೆಂಜ್ ಹಾಕಿದ್ರು. ಈ ಸವಾಲನ್ನ ಮೋದಿ ಸ್ವೀಕರಿಸಿದ್ರು. ಯಾಕಂದ್ರೆ ಇದು ಕೇವಲ ಚಾಲೆಂಜ್ ಅಷ್ಟೇ ಅಲ್ಲ. ಇದೊಂದು ಅಭಿಯಾನ.ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌ ಅನ್ನೋ ಅಭಿಯಾನದಡಿ ಕೊಹ್ಲಿ ಹಾಕಿದ್ದ ಸವಾಲನ್ನ ಸ್ವೀಕರಿಸಿದ್ದ ಮೋದಿ ಈಗ ಫಿಟ್ ನೆಸ್ ಚಾಲೆಂಜ್ ಕಂಪ್ಲೀಟ್ ಮಾಡಿರೋದಾಗಿ 2 ನಿಮಿಷದ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ರು. ಇದೀಗ ಈ ವಿಡಿಯೋ ದೇಶದೆಲ್ಲೆಡೆಯಲ್ಲ ಹೊರ ದೇಶದಲ್ಲೂ ಸಖತ್ ವೈರಲ್ ಆಗಿದೆ…

ಇದಷ್ಟಕ್ಕೆ ಸುಮ್ಮನಾಗದ ಮೋದಿ ವಿಡಿಯೋ ಅಪ್ ಲೋಡ್ ಮಾಡಿದ್ದಲ್ಲದೇ, ಮರು ಚಾಲೆಂಜ್ ಗೆ ಕರ್ನಾಟಕದ ಸಿಎಂ ಕುಮಾರಸ್ವಾಮಿಯನ್ನ ನಾಮಿನೇಟ್ ಮಾಡಿದ್ದಾರೆ. ಇಷ್ಟಕ್ಕೂ ಮೋದಿ ಟ್ವೀಟರ್ ನಲ್ಲಿ ಹೆಚ್ ಡಿ ಕೆಗೆ ಸವಾಲ್ ಎಸೆದಿದ್ದು ಹೇಗೆ ಗೊತ್ತೆ..?ಇದು ನನ್ನ ಮಾರ್ನಿಂಗ್ ವ್ಯಾಯಾಮಗಳು. ಇದು ಯೋಗದ ಒಂದು ಭಾಗ.. ನಾನು ನಡೆಯುತ್ತಿರುವ ಈ ಟ್ರ್ಯಾಕ್ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಐದು ಪಂಚಭೂತದ ಎಲಿಮೆಂಟ್…

ನಾನು ಸಹ ಉಸಿರಾಟದ ವ್ಯಾಯಾಮವನ್ನ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಈ ಸವಾಲನ್ನ ಸ್ವೀಕರಿಸುವಂತೆ ಕರ್ನಾಟಕದ ಸಿಎಂ ಹೆಚ್ ಡಿ ಕುಮಾರಸ್ವಾಮಿಯನ್ನ ನಾಮಿನೇಟ್ ಮಾಡಲಿದ್ದೇನೆ. ಅಷ್ಟೇ ಅಲ್ಲದೇ, ಟೆಬಲ್ ಟೆನ್ನಿಸ್ ಆಟಗಾರರಾದ ಮಾನಿಕ್ ಬಾತ್ರಾಗೆ, ಭಾರತದ ಸಮಸ್ತ ಪೊಲೀಸ್ ಅಧಿಕಾರಿಗಳು ಪ್ರಮುಖವಾಗಿ 40 ವರ್ಷ ಮೀರಿದ ಅಧಿಕಾರಿಗಳಿಗೆ ಈ ಚಾಲೆಂಜ್ ಹಾಕುತ್ತಿದ್ದೇನೆ…

ಇಷ್ಟಕ್ಕೂ ಮೋದಿಗೆ ಕೊಹ್ಲಿ ಫಿಟ್ನೆಸ್ ಚಾಲೆಂಜ್ ಎಸೆದ್ರು ಸರಿ. ಕೊಹ್ಲಿಗೆ ಯಾರು ಫಿಟ್ ನೆಸ್ ಚಾಲೆಂಜ್ ಹಾಕಿದ್ರು.. ಅಂತೀರಾ? ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ರಾಠೋಡ್ ಟ್ವೀಟರ್ ನಲ್ಲಿ ಕೊಹ್ಲಿಗೆ ಈ ಚಾಲೆಂಜ್ ಅನ್ನ ನೀಡಿದ್ರು. ಕೊಹ್ಲಿ ಈ ಚಾಲೆಂಜ್ ಸ್ವೀಕರಿಸಿ, ನಂತ ಮೋದಿಗೆ ವರ್ಗಾಯಿಸಿದ್ರು. ಈಗ ಈ ಫಿಟ್ ನೆಸ್ ಚಾಲೆಂಜ್ ರಾಜ್ಯದ ಸಿಎಂಗೆ ಎದುರಾಗಿದೆ. ಹೇಳಬೇಕು ಅಂದ್ರೆ ಕೊಹ್ಲಿ ಬಿಟ್ಟ ಈ ಪಿಟ್ ನೆಸ್ ಚಾಲೆಂಜ್ ಬಾಣಕ್ಕೆ ರಾಜಕೀಯ ರೂಪ ಸಿಕ್ಕಿದೆ…ಮೋದಿ ಹಾಕಿರೋ ಈ ಫಿಟ್ ನೆಸ್ ಚಾಲೆಂಜ್ ಗೆ ಹೆಚ್ ಡಿ ಕುಮಾರಸ್ವಾಮಿ ಏನಂದ್ರು..? ಮೋದಿ ಕೊಟ್ಟ ಚಾಲೆಂಜ್ ಅನ್ನ ಸ್ವೀಕರಿಸಿದ್ರಾ? ಇಲ್ಲಾ ಚಾಲೆಂಜ್ ಗೆ ರಿಟರ್ನ್ ಚಾಲೆಂಜ್ ಹಾಕಿದ್ರಾ? ಈ ಎಲ್ಲ ಕುತೂಹಲ ರಾಜ್ಯದ ಜನರಲ್ಲಷ್ಟೇ ಅಲ್ಲ ದೇಶದ ಜನರಲ್ಲೂ ಮೂಡಿತ್ತು. ಈ ಚಾಲೆಂಜ್ ಗೆ ಕುಮಾರಸ್ವಾಮಿ ಸಹ ಟ್ವಿಟರ್ ನಲ್ಲೇ ಉತ್ತರ ಕೊಟ್ಟಿದ್ದಾರೆ. ಬನ್ನಿ ಕುಮಾರಸ್ವಾಮಿ ಉತ್ತರ ಏನಾಗಿತ್ತು ಅನ್ನೋದನ್ನ ನೋಡೋಣ..ಮೋದೀಜೀ ನನ್ನ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದಕ್ಕಾಗಿ ಧನ್ಯವಾದಗಳು. ಫಿಟ್ನೆಸ್ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂಬುವುದು ನನ್ನ ಅಭಿಪ್ರಾಯ. ಇದೇ ಕಾರಣದಿಂದ ನಾನು ಪ್ರತಿನಿತ್ಯದ ವ್ಯಾಯಾಮವನ್ನ ಮಾಡುತ್ತಾ ಬರುತ್ತಿದ್ದೇನೆ. ಆದರೆ ನಾನು ನನ್ನ ರಾಜ್ಯದ ಅಭಿವೃದ್ಧಿ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ. ಇದಕ್ಕೆ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ….

LEAVE A REPLY

Please enter your comment!
Please enter your name here