Home Crime ಮ್ಯಾಟ್ರಿಮೋನಿಯಲ್ಲಿ ಫೋಟೋ ನೋಡಿ ಪುಲ್ ಫಿದಾ..! 9 ತಿಂಗಳು ಬರೋಬ್ಬರಿ‌ 6 ಲಕ್ಷ ಹಣ..! ಈಗ...

ಮ್ಯಾಟ್ರಿಮೋನಿಯಲ್ಲಿ ಫೋಟೋ ನೋಡಿ ಪುಲ್ ಫಿದಾ..! 9 ತಿಂಗಳು ಬರೋಬ್ಬರಿ‌ 6 ಲಕ್ಷ ಹಣ..! ಈಗ ಕಂಬಿ ಹಿಂದೆ..

1328
0
SHARE

ಸುಂದರವಾದ ಫೋಟೋ ನೋಡಿದ‌ವನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ನಾ ಮದ್ವೆಯಾದ್ರೆ ಇವಳನ್ನೆ ಆಗೋದು ಅನ್ನುವಷ್ಟರ ಮಟ್ಟಿಗೆ ಅವನಲ್ಲಿ ಗಾಢಪ್ರೀತಿ ಮೂಡಿತ್ತು. ಮ್ಯಾಟ್ರಿಮೊನಿಯಲ್ಲಿ ಫೋಟೋ ನೋಡಿ ಫುಲ್ ಫಿದಾ ಆಗ್ಬಿಟ್ಟಿದ್ದ. ಆಕೆಯೂ ಆತನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟು ಪರಸ್ಪರ ಪ್ರೀತಿಸುತ್ತಿದ್ದರು. ಅದು ಯಾವ ರೀತಿ ಪ್ರೀತಿ ಪ್ರೇಮ ಅನ್ನೋ ಅಸಲೀ ಕಹಾನಿ 9 ತಿಂಗಳ ನಂತರ ಬಯಲಾಗಿದೆ.

ಈ ಫೋಟೋದಲ್ಲಿರುವಾಕೆಯ ಹೆಸರು ಲಕ್ಷ್ಮಿ ಅಲಿಯಾಸ್ ಲಕ್ಕಿ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದವಳು. ಈಕೆ‌ ಫೋಟೋಗಳಲ್ಲಿ ಟೀನೇಜ್ ಗರ್ಲ್ ಥರಾ ಫೋಸ್ ಕೊಟ್ಟಿರುವ ಈಕೆ ವಯಸ್ಸು 32. ಮೂವತ್ತೆರಡು ವರ್ಷ ಕಳೆದರೂ ಮದ್ವೆಯಾಗದೇ ಇದ್ದ ಲಕ್ಷ್ಮಿ, ಮ್ಯಾಟ್ರಿಮೋನಿಯಲ್ಲಿ ಫೋಟೋ ಅಪ್ ಲೋಡ್ ಮಾಡಿ ವರನ ಸರ್ಚ್ ನಲ್ಲಿದ್ದಳು. ಆ ಕಲರ್ ಫುಲ್ ಫೋಟೋ ನೋಡಿದ ಹಾಸನದ ವಿಜಯನಗರ ವಾಸಿ ಪರಮೇಶ್, ಆಕೆಯ ನಂಬರ್ ಪಡೆದು ಲವ್ ಪ್ರಫೋಸ್ ಮಾಡಿಬಿಟ್ಟಿದ್ದ. ಆಕೆಯೂ ಆತನ ಪ್ರೀತಿಯ ಒಪ್ಪಿಕೊಂಡು ಮದ್ವೆಯಾಗೋದಾಗಿ ಹೇಳಿದ್ದಳು. ಸೂಪರ್ ಹೆಂಡ್ತಿ ಅಂತ ಅನ್ಕೊಂಡ್ ಆಕೆ ಹೇಳಿದ ಕಡೆ ಹೋಗಿ ಲಕ್ಷ್ಮಿಯನ್ನು ಪರಮೇಶ ಮೀಟ್ ಮಾಡಿ ಬರುತ್ತಿದ್ದ.ಮುಂದೇನಾಯ್ತು ಅಂತಾ ಮೋಸ ಹೋದವರೇ ಹೇಳ್ತಾರೆ .

ಮೊದಲ‌ ಭೇಟಿಯಲ್ಲಿ 5 ಸಾವಿರ ಹಣ ಪಡೆದಿದ್ದಳು, ಆದ್ರೆ ಅಮಾಯಕ ಹಳ್ಳಿಹೈದ ಪರಮೇಶ ಕೇಳಿದಾಗಲೆಲ್ಲ ಆಕೆಯ ಅಕೌಂಟ್ ಗೆ ಹಣ ಹಾಕುತ್ತಿದ್ದ. ಹಾಸನಕ್ಕೆ ಬಂದಾಗ ಹೈ ಫೈ ಲಾಡ್ಜ್ ನಲ್ಲಿ ಉಳಿಸಿ ಆತಿಥ್ಯ ನೀಡಿ ಕಳುಹಿಸುತ್ತಿದ್ದ. ಆಕೆ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡ್ತೀದ್ದೀನಿ ಅಂತ ಹೇಳ್ಕೊಂಡಿದ್ದಳು. ಇದೇ ಕಾರಣಕ್ಕೆ ಡಬಲ್ ರೆಸ್ಪಕ್ಟ್ ಜೊತೆ ವಿಶೇಷ ಆತಿಥ್ಯ ನೀಡುತ್ತಿದ್ದನು. ಆದರೆ ಇತ್ತೀಚೆಗೆ ಪರಮೇಶನಿಗೆ ನಿನ್ನನ್ನು ನಾ ಮದ್ವೆಯಾಗಲ್ಲ ಅಂತ ಹೇಳಲು ಶುರುಮಾಡಿದ್ದಳು. ಒಂಬತ್ತು ತಿಂಗಳಲ್ಲಿ ಬರೋಬ್ಬರಿ‌ 6 ಲಕ್ಷ ಹಣವನ್ನು ಆಕೆಯ ಅಕೌಂಟ್ ಗೆ ಹಾಕಿ ಪಾಪರ್ ಆಗಿದ್ದ ಪರಮೇಶಿ.

ಹಾಗಾದ್ರೆ ನಾ ಕೊಟ್ಟಿರೋ 6 ಲಕ್ಷ ಹಣ ವಾಪಸ್ ಕೊಡು ಅಂತ ಪರಮೇಶ್ ಕೇಳಿದಾಗ ರೇಪ್ ಕೇಸ್ ಕೊಡ್ತೀನಿ ಅಂತ ಬೆದರಿಕೆ ಹಾಕಿದ್ದಳು ಅಷ್ಟೇ ಅಲ್ಲ ನಕಲಿ ಪೊಲೀಸ್ ಇನ್ಸ್ ಪೆಕ್ಟರ್ ರೆಡಿ ಮಾಡಿ ಅವಾಜ್ ಹಾಕಿಸಿದ್ದಳು. ಆಗ ಗೊತ್ತಾಯಿತು ಪರಮೇಶನಿಗೆ ಇದು ಪ್ರೀತಿಯಲ್ಲ. ಮೋಸದ ಬಲೆ‌ ಅಂತ.ಚಿಕ್ಕಬಳ್ಳಾಪುರದ ಯಲ್ಲಂಪಲ್ಲಿಯ ಲಕ್ಷ್ಮಿಯ ಮೋಸದ ‌ಜಾಲದಲ್ಲಿ ಬಿದ್ದಿದ್ದು ಅರಿವಾಗಿ ಪರಮೇಶ ಮಹಿಳಾ ಹೋರಾಟಗಾರರಾದ ಭಾಗ್ಯ, ಶಿವಮ್ಮರ ಮನೆ ಮುಂದೆ ಬಂದ.. ಹಾಸನ ಮಹಿಳಾ ಠಾಣೆಗೆ ದೂರು ಸಹ ಕೊಟ್ಟ. ಅದಾದ ಬಳಿಕ ಪ್ಲಾನ್ ಮಾಡಿ ಲಕ್ಷ್ಮಿ ಅಂಡ್ ಗ್ಯಾಂಗನ್ನು ಹಾಸನಕ್ಕೆ ಕರೆಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರೀತಿ ಹೆಸರಲ್ಲಿ‌ ಹತ್ತಾರು ಹುಡುಗರ ಬಲೆಗೆ ಬೀಳಿಸಿ ಲಕ್ಷ್ಮಿ ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಕಿತ್ತಿದ್ದಾಳೆಂಬುದು ತನಿಖೆ ವೇಳೆ ಗೊತ್ತಾಗಿದೆ. ಲಕ್ಷ್ಮಿ ಮತ್ತು ಆತನ ಜೊತೆ ಮೋಸ ಜಾಲದ ಪಾಲುದಾರನಾಗಿದ್ದ ಆ್ಯಂಟಿ ಕ್ರೈಮ್ ಅಂಡ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಧಮ್ಕಿ ಹಾಕುತ್ತಿದ್ದ ಕೋಲಾರ ಮೂಲದ ಶಿವ ಎಂಬಾತನೂ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here