Home KARNATAKA ಯಂಗ್ ಟೈಗರ್ ನಾಯಕ ವಿರಾಟ್ ಕೊಹ್ಲಿಯನ್ನ ಕೈ ಬಿಟ್ಟ BCCI..?! ನಾಯಕ ಯಾರು ಗೊತ್ತಾ..?! ಟೀಂನಲ್ಲಿ...

ಯಂಗ್ ಟೈಗರ್ ನಾಯಕ ವಿರಾಟ್ ಕೊಹ್ಲಿಯನ್ನ ಕೈ ಬಿಟ್ಟ BCCI..?! ನಾಯಕ ಯಾರು ಗೊತ್ತಾ..?! ಟೀಂನಲ್ಲಿ ಯಾರ‍್ಯಾರಿದ್ದಾರೆ..?!

6001
0
SHARE

ಸೆಪ್ಟೆಂಬರ್ 15 ರಿಂದ ಯುಎಇನಲ್ಲಿ ಆರಂಭವಾಗಲಿರೋ ಏಷ್ಯಾ ಕಪ್ ಟೂರ್ನಿಗೆ 16 ಮಂದಿ ಸದಸ್ಯರ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಮುಂಬೈನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಬಲಿಷ್ಠ ತಂಡವನ್ನೇ ಘೋಷಿಸಲಾಗಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿಯನ್ನ ನೀಡಲಾಗಿದೆ…

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಗಾಯಗೊಂಡಿದ್ದರು ಮುಂಬರುವ ಸರಣಿಯಲ್ಲಿ ಅವರು ಹೆಚ್ಚು ಫಿಟ್ ಆಗಿ ಬರಬೇಕೆಂಬ ಉದ್ದೇಶದಿಂದ ಕೊಹ್ಲಿಗೆ ವಿಶ್ರಾಂತಿಯನ್ನ ನೀಡಲಾಗಿದೆ. ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ಶಿಖರ್ ಧವನ್ ತಂಡದ ಉಪನಾಯಕರಾಗಿ ಆಯ್ಕೆಗೊಂಡಿದ್ದಾರೆ…

ಗಾಯದಿಂದ ಚೇತರಿಸಿಕೊಂಡಿರೋ ಕೇದಾರ್ ಜಾಧವ್, ಅಂಬಾಟಿ ರಾಯುಡು ಹಾಗೂ ಭುವನೇಶ್ವರ್ ಕುಮಾರ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನು ರಾಜಸ್ತಾನ ಮೂಲದ 20 ವರ್ಷದ ಯುವ ಎಡಗೈ ವೇಗಿ ಖಲೀಲ್ ಅಹ್ಮದ್ ಗೆ ಅವಕಾಶವನ್ನ ಕಲ್ಪಿಸಿರೋದು ಅಚ್ಚರಿಯನ್ನ ಹುಟ್ಟಿಸಿದೆ. ಉಳಿದಂತೆ ಏಷ್ಯಾಕಪ್ ಗೆ ಆಯ್ಕೆ ಮಾಡಲಾದ ತಂಡ ಇಂತಿದೆ…

—ರೋಹಿತ್ ಶರ್ಮಾ ( ನಾಯಕ) ಶಿಖರ್ ಧವನ್ ( ಉಪನಾಯಕ), ಕೆ.ಎಲ್. ರಾಹುಲ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ,ಮನೀಷ್ ಪಾಂಡೆ,ದಿನೇಶ್ ಕಾರ್ತಿಕ್, ಕೇಧಾರ್ ಜಾಧವ್, ಹಾರ್ದಿಕ್ ಪಾಂಡ್ಯಾ, ಕುಲ್ದೀಪ್ ಯಾದವ್,ಯುಜ್ವಿಂದರ್ ಚಹಲ್,ಅಕ್ಷರ್ ಪಟೇಲ್,ಭುವನೇಶ್ವರ್ ಕುಮಾರ್,ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್ ಗೆ ಸ್ಥಾನವನ್ನ ನೀಡಲಾಗಿದೆ…

LEAVE A REPLY

Please enter your comment!
Please enter your name here