Home Cinema ಯಜಮಾನನ ಹೊಸ ಹಾಡಿಗೆ ಫ್ಯಾನ್ಸ್ ಫುಲ್ ಬೋಲ್ಡ್..! ನಂಬರ್ ವನ್ ಟ್ರೆಂಡಿಂಗ್…! ನಿಂತ ನೋಡೋ “ಯಜಮಾನ”,...

ಯಜಮಾನನ ಹೊಸ ಹಾಡಿಗೆ ಫ್ಯಾನ್ಸ್ ಫುಲ್ ಬೋಲ್ಡ್..! ನಂಬರ್ ವನ್ ಟ್ರೆಂಡಿಂಗ್…! ನಿಂತ ನೋಡೋ “ಯಜಮಾನ”, ನೆನಪಾಗ್ತಿರೋದೇಕೆ “ರಾಜಕುಮಾರ”…!

851
0
SHARE

ಯಾರೇ ಬಂದರು.. ಎದುರ‍್ಯಾರೇ ನಿಂತರೂ.. ಮಾತು ತಪ್ಪದ ಯಜಮಾನ. ಸದ್ಯ ಸೋಷಿಯಲ್ ಪ್ಲಾಟ್ ಫಾರ್ಮ್‌ನಲ್ಲಿ ನಂ-೧ ಟ್ರೆಂಡಿಂಗ್‌ನಲ್ಲಿರುವ ನಯಾ ಯಜಮಾನನ, ನಯಾ ಹಾಡಿದು. ಆಫ್ಟ್‌ರ್ ಶಿವನಂದಿ, ಯಾರೋ ನೀನು & ಭಸ್ಸಣಿ ಸಾಂಗ್ ನಂತ್ರ ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದೆ.

ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ.ಹರಿಕೃಷ್ಣ ಸಂಗೀತ, ವಿಜಯ ಪ್ರಕಾಶ್ ಗಾಯನ ಹಾಗೂ ಸಂತೋಷ್ ಆನಂದ್ ರಾಮ್ ಸಾಹಿತ್ಯ ಹಾಡಿಗಿದ್ದು. ಸರಳ ಸುಂದರ ಪದಗಳ ಮೂಲಕ ಯಜಮಾನನ್ನು ವರ್ಣಿಸಿರುವ ರೀತಿ ಅತ್ಯದ್ಭುತವಾಗಿ ಮೂಡಿಬಂದಿದೆ. ಚಿತ್ರದ ಟೈಟಲ್ ಹಾಡನ್ನು ಗಾಯನಪ್ರಿಯರು ಬಿಟ್ಟು ಬಿಡದಂತೆ ಕೇಳುವಂತೆ ಮಾಡ್ತಿದೆ.ಹೌದು.. ಮಾತು ತಪ್ಪದ ಯಜಮಾನನ ಹಾಡುಗಳು ಸದ್ಯ ಎಲ್ಲೆಡೆ ಮೋಡಿಮಾಡ್ತಿದೆ.

ಹೀಗಿರುವಾಗ್ಲೇ ರಾಜಕುಮಾರನಾಗಿ ರಾರಾಜಿಸಿದ ಅಪ್ಪು ಅಭಿನಯದ ಬೊಂಬೆಯ ಹಾಡನ್ನು ಮೆಲುಕು ಹಾಕುವಂತೆ ಮಾಡ್ತಿದೆ. ಯಸ್, ಹೀಗೊಂದು ಸುದ್ದಿ ಸದ್ಯ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರ್ತಿದೆ. ಯಜಮಾನನ ನಯಾ ಹಾಡು ಮತ್ತು ಗೊಂಬೆ ಹೇಳುತೈತೆ ರಾಜಕುಮಾರ.. ಹಾಡಿನಲ್ಲಿ ಸೇಮ್ ಫೀಲಿಂಗ್ ಇದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಲ್ಲದೆ ಸಮುದ್ರದಲ್ಲಿ ಬೇಸರದಿಂದಿರುವ ದಚ್ಚು ನೋಡ್ತಿದ್ರೆ. ರಾಜಕುಮಾರನ ಕಥೆಗೂ ಯಜಮಾನನ ಕಥೆಗೂ ಏನಾದ್ರು ಹೊಲಿಕೆ ಇರಬಹುದಾ ಎಂಬ ಅಭಿಪ್ರಾಯಾಗಳು ಮೂಡುವಂತೆ ಮಾಡ್ತಿದೆ.ನಿಮಗೆ ಗೊತ್ತಿರ‍್ಲಿ. ಈ ರೀತಿ ಅಭಿಪ್ರಾಯ ಬರೋದಕ್ಕೆ ಕಾರಣ ಇದೆ.

ಅದ್ಯಾಕಂದ್ರೆ ರಾಜಕುಮಾರ ಚಿತ್ರದ ಬೊಂಬೆ ಹಾಡಿಗೆ ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದು ಇದೇ ಸಂತೋಷ್ ಆನಂದ್ ರಾಮ್. ಇದೇ ವಿಜಯ್ ಪ್ರಕಾಶ್ ಹಾಡನ್ನು ಹಾಡುವ ಮೂಲಕ ಮೋಡಿ ಮಾಡಿದ್ರು. ಈಗ ಅದೇ ಸಂತೋಷ್ ಆನಂದ್ ರಾಮ್ ಸಾಲುಗಳಿಗೆ ವಿಜಯ್ ಪ್ರಕಾಶ್ ಹಾಡಿರುವುದು ಗೊಂಬೆ ಹಾಡು ಮತ್ತೆ ಮತ್ತೆ ನೆನಪಾಗುವಂತೆ ಮಾಡ್ತಿದೆ. ಈ ಹಿಂದೆ ಬಿಡುಗಡೆಯಾದ ಯಜಮಾನನ ಮೂರು ಹಾಡುಗಳು ಫ್ರೆಶ್ ಫೀಲ್ ನೀಡಿದ್ವು.

ದರ್ಶನ ಅವರ ಜೀವನದ ಕಥೆ ಹೇಳುವ ಈ ಹಾಡು ಇದಾಗಿದ್ದು. ರಾಜಕುಮಾರ ಚಿತ್ರದ ನೆರಳು ಚಿತ್ರದಲ್ಲಿರಲಿದೆಯಾ ಎಂಬ ಅನುಮಾನ ಮೂಡಿವಂತೆ ಮಾಡ್ತಿದೆ.ಇನ್ನು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದ್ದು. ಈ ಹಾಡಿಗೆ ಸಿಕ್ಕ ರೆಸ್ಪಾನ್ಸ್ ಕಂಡು ವಿಜಯ್ ಅಚ್ಚರಿಗೊಂಡಿದ್ದಾರೆ. ಅದೇ ಖುಷಿಯಲ್ಲಿ ಅಭಿಮಾನಿಗಳ ಜೊತೆಗೆ ಲೈವ್‌ನಲ್ಲಿ ವಿಜಯ್ ಮಾತನಾಡಿದ್ದಾರೆ. ಒಂದು ಗಂಟೆಯಲ್ಲಿ ಒಂದು ಲಕ್ಷ ವ್ಯೂವ್ಸ್‌ನ್ನು ಪಡೆದುಕೊಂಡಿದ್ದು. ಸದ್ಯ ೧ ದಿನದಲ್ಲೇ ಒಂದು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿರುವ ಬಗ್ಗೆ ಥ್ರಿಲ್ಸ್ ಆಗಿದೆ ಎನ್ನುವ ವಿಜಯ್ ಪ್ರಕಾಶ್ ಹಾಡು ಮೂಡಿಬಂದ ಗಳಿಗೆ ಬಗ್ಗೆ ಹೇಳೋದು ಹೀಗೆ.

ಇನ್ನು ಚಿತ್ರಕ್ಕೆ ಹಾಡು ಪೋಣಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯಕ್ಕೆ ಸರಳ ಸುಂದರ ಪದಗಳ ಮೂಲಕ ಗಮನ ಸೆಳೆಯುತ್ತಿದ್ದು. ಚಿತ್ರರಂಗದಿಂದ ಭಾರಿ ಮೆಚ್ಚುಗೆಗಳು ವ್ಯಕ್ತವಾಕ್ತಿದೆ. ನಿರ್ದೇಶಕ ಪವನ್ ಒಡೆಯರ್ ಸಂತೋಷ್ ಆನಂದ್ ರಾಮ್ ಸಾಲುಗಳಿಗೆ ಉಘೇ ಉಘೇ ಅಂದಿದ್ದಾರೆ. ಅಲ್ಲದೆ ‘ವೆರಿ ಮೀನಿಂಗ್ ಫುಲ್ಸ್ ಸಾಹಿತ್ಯ- ಮತ್ತು ಟ್ಯೂನ್, ತುಂಬಾ ಚೆನ್ನಾಗಿದೆ. ಎನ್ನುವ್ ಮೂಲಕ ಚಿತ್ರತಂಡಕ್ಕೆ ಶುಭವಾಗಲಿದೆ ಎಂದು ಪವನ್ ಒಡೆಯರ್ ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿದ್ದಾರೆ.ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪೆ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಹಾಡಿನ ಜೊತೆಗೆ ಚಿತ್ರದ ಮೇಕಿಂಗ್ ಕೂಡ ಸದ್ದು ಮಾಡ್ತಿದ್ದು. ಟಗರು ಖ್ಯಾತಿಯ ಡಾಲಿ ಮಿಲನ್ ಲುಕ್ ಕೂಡ ಹಾಡಿನಲ್ಲಿ ರಿವೀಲ್ ಆಗಿದೆ. ದೇವರಾಜ್ ಮತ್ತು ದ ರ್ಶನ್ ತಂದೆ ಮಗನ ಪ್ರೀತಿ ಇದೆ. ಡಿ- ಬಾಸ್ ಪ್ರಾಣಿ ಪ್ರೀತಿಯ ಕಚಗುಳಿ ಅನಾವರಣವಾಗಿದೆ. ದರ್ಶನ್ ಜೊತೆಗೆ ಹಾಟ್ ಎಂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಮುಗ್ದ ನಗುವಿದೆ. ರವಿಶಂಕರ್ ಆರ್ಭಟದ ಜೊತೆಗೆ ಸಮುದ್ರದ ಕಡೆ ನಿಂತು ಸಂಕಟದಿಂದಿರುವ ಯಜಮಾನ ಈ ವಿಡಿಯೋ ಸಾಂಗ್‌ನಲ್ಲಿ ಚಿತ್ರದ ಮೇಲಿನ ಭರವಸೆ ಹೆಚ್ಚಾಗಿ ಮಾಡ್ತಿದೆ.

ಚಿತ್ರಕ್ಕೆ ಹರಿಕೃಷ್ಣ ಹಾಗೂ ಪಿ. ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದ್ದು. ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸದ್ಯ ಪ್ರಿಪ್ರೋಡಕ್ಷನ್ ಕೆಲಸದಲ್ಲಿ ಬಿಝೀಯಾಗಿರುವ ಚಿತ್ರ ಮುಂದಿನ ತಿಂಗಳು ಅದ್ಧೂರಿಯಾಗಿ ತೆರೆಗೆ ಬರೋದಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಅದೇನೇ ಇದ್ರು.. ಯಜಮಾನ ಹಾಡುಗಳ ಮೂಲಕ ಸೌಡು ಜೊತೆ ಬ್ಯಾಂಡ್ ಕ್ರಿಯೇಟ್ ಮಾಡ್ತಿದ್ದು. ಚಿತ್ರವನ್ನು ಯಜಮಾನನ ಕ್ರೇಜ್ ಹೆಜ್ಜಾಗುವಂತೆ ಮಾಡ್ತಿರೋದು ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here