Home Elections 2018 ಯಡಿಯೂರಪ್ಪ ಹೇಳಿದ್ರೂ ಅಂತ ಸರ್ಕಾರ ತೆಗೆಯೋಕೆ ಮಡಿಕೆ ಅಲ್ಲ…ಎಲ್ಲರೂ ಬುದ್ಧಿವಂತರೆ,ಎಲ್ಲರೂ ಪ್ರಜ್ಞಾವಂತರೇ ಎಂದ D K...

ಯಡಿಯೂರಪ್ಪ ಹೇಳಿದ್ರೂ ಅಂತ ಸರ್ಕಾರ ತೆಗೆಯೋಕೆ ಮಡಿಕೆ ಅಲ್ಲ…ಎಲ್ಲರೂ ಬುದ್ಧಿವಂತರೆ,ಎಲ್ಲರೂ ಪ್ರಜ್ಞಾವಂತರೇ ಎಂದ D K ಶಿವಕುಮಾರ್

634
0
SHARE

ಯಡಿಯೂರಪ್ಪ ಹೇಳಿದ್ರೂ ಅಂತ ರಾಜೀನಾಮೆ ಕೊಟ್ಟು ಎಲೆಕ್ಷನ್ ಗೆದ್ದು ಸರ್ಕಾರದ ತೆಗೆಯೋಕೆ ಅದೇನೂ ಮಡಿಕೆ ಅಲ್ಲ ಅಂತ ಅವರು ಖಡಕ್ ಆಗಿ ಹೇಳಿದ್ದಾರೆ..ಮೈತ್ರಿ ಸರ್ಕಾರ ಸಂಪುಟ ರಚನೆ ಬೆನ್ನಲ್ಲಿಯೇ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಅಸಮಾಧಾನ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ..ಇವತ್ತಲ್ಲ ನಾಳೆ ಅವಕಾಶ ಸಿಗುತ್ತದೆ ತಾಳ್ಮೆಯಿಂದಿರಿ ಅಂತ ಪಕ್ಷದ ಶಾಸಕರಲ್ಲಿ ಅವರು ಮನವಿ ಮಾಡಿದ್ದಾರೆ..

ಧರಂಸಿಂಗ್ ಸರ್ಕಾರದಲ್ಲಿ ತಮ್ಮನ್ನೂ ಸೇರಿದಂತೆ ದೇಶಪಾಂಡೆ, ಎಚ್.ಕೆ.ಪಾಟೀಲ್, ಪರಮೇಶ್ವರ್ ಅವರನ್ನೆಲ್ಲ ಈಚೆ ಇಟ್ಟಿದ್ರು..ಅಷ್ಟೇ ಅಲ್ಲ, ನಾನು ಹಿಂದೆ ಏಳು ತಿಂಗಳು ಧಮ್ ತಡೆದುಕೊಂಡು ಇರಲಿಲ್ವಾ ಅಂತ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ..ಕೆಲವು ಸಂದರ್ಭಗಳಲ್ಲಿ ತೀರ್ಮಾನ ಆಗಿರುತ್ತದೆ..ನಮ್ಮಲ್ಲಿನ್ನೂ ಅವಕಾಶ ಇದೆ ಅಂತ ಅವರು ಸಮಾಧಾನ ಹೇಳಿದ್ದಾರೆ.

ಎಲ್ಲರೂ ಪ್ರಜ್ಞಾವಂತರು, ಎಲ್ಲರೂ ಬುದ್ಧಿವಂತರು..ಯಡಿಯೂರಪ್ಪನವರು ಹೇಳಿದ್ರು ಅಂತ ರಾಜೀನಾಮೆ ಕೊಡಲ್ಲ..ಮತ್ತೆ ಎಲೆಕ್ಷನ್ ಗೆದ್ದು ಸರ್ಕಾರ ತೆಗೆಯೋಕೇ,ಕೆಳಗಡೆ ಹಾಕಿದ ತಕ್ಷಣ ಒಡೆದು ಹಾಕೋಕೆ ಅದೇನು ಮಡಿಕೆ ಅಲ್ಲ ಅಂತ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ..ಅವ್ರು ನಮ್ಮ ಜೊತೆ ಇದಾರೆ, ಇವ್ರು ಇದಾರೆ ಅಂತ ಯಡಿಯೂರಪ್ಪನವರು ತಪ್ಪು ಮಾಹಿತಿ ಕೋಡೋದ್ರಲ್ಲಿ ಅರ್ಥ ಇಲ್ಲ ಅಂತ ಹೇಳಿದ್ದಾರೆ.

ಹಿಂದೆ ಬಿಜೆಪಿಯವರು ಗಲಾಟೆ ಮಾಡಿಕೊಂಡು 40 ಸ್ಥಾನಕ್ಕಿಳಿದಿದ್ರು..ಅದಕ್ಕೂ ಹಿಂದೆ ಮೊಯಿಲಿ ಸರ್ಕಾರದ ಅವಧಿಯಲ್ಲಿ ನಾವು ಗಲಾಟೆ ಮಾಡಿಕೊಂಡು 36ಕ್ಕೆ ಇಳಿದಿದ್ದೆವು..ಮತ್ತೆ ಈಗ ಆ ರೀತಿ ಮಾಡಿಕೊಳ್ಳೋದು ಬೇಡ ಅಂತ ಶಿವಕುಮಾರ್ ತಿಳುವಳಿಕೆ ಹೇಳಿದ್ದಾರೆ.ಯಡಿಯೂರಪ್ಪ ಹೇಳಿದ್ರೂ ಅಂತ ರಾಜೀನಾಮೆ ಕೊಟ್ಟು ಎಲೆಕ್ಷನ್ ಗೆದ್ದು ಸರ್ಕಾರದ ತೆಗೆಯೋಕೆ ಅದೇನೂ ಮಡಿಕೆ ಅಲ್ಲ ಅಂತ ಅವರು ಖಡಕ್ ಆಗಿ ಹೇಳಿದ್ದಾರೆ..

 

LEAVE A REPLY

Please enter your comment!
Please enter your name here