Home Cinema “ಯಾರನ್ನಾದ್ರೂ ಗುಲಾಮನನ್ನಾಗಿ ನೋಡುವ ಮೊದಲು ಒಮ್ಮೆ ಯೋಚನೆ ಮಾಡಿ”… ಡಾಲಿ ಧನಂಜಯ್ ಅದ್ಯಾರಿಗೆ ಕೊಟ್ಟರು “ಎಚ್ಚರಿಕೆ”..!

“ಯಾರನ್ನಾದ್ರೂ ಗುಲಾಮನನ್ನಾಗಿ ನೋಡುವ ಮೊದಲು ಒಮ್ಮೆ ಯೋಚನೆ ಮಾಡಿ”… ಡಾಲಿ ಧನಂಜಯ್ ಅದ್ಯಾರಿಗೆ ಕೊಟ್ಟರು “ಎಚ್ಚರಿಕೆ”..!

449
0
SHARE

ಯಸ್, ಭೈರವಗೀತಾ.. ಡಾಲಿ ಧನಂಜಯ್ ಪ್ಲೇವರ್ ಇರುವ ಸಿನಿಮಾ. ಒಂದಿಲ್ಲೊಂದು ಕಾರಣದಿಂದ ಸದ್ದು ಮಾಡುತ್ತಾ, ಸುದ್ದಿ ಮಾಡ್ತಾನೇ ಬಂದ ಭೈರವಗೀತಾ ಟ್ರೇಲರ್ ನ್ನ ಇತ್ತೀಚಿಗೆ ಲಾಂಚ್ ಮಾಡಲಾಯ್ತು. ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ರು.

ಟಗರು ಬಳಿಕ, ಧನು ಮಾಡಿರುವ ಮಹಾಯಾಗವಿದು. ಅದು, ಭರ್ತಿ ನಾಲ್ಕು ಭಾಷೆಯಲ್ಲಿ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಪರಿಚಯವಾಗ್ತಿರುವ ಸಂತಸ ಒಂದ್ಕಡೆ, ಅಭಿಮಾನಿಗಳು ಚಿತ್ರವನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನುವ ಆತಂಕ ಇನ್ನೊಂದ್ಕಡೆ. ಹಾಗಾಗೇ, ಸಂಭ್ರಮ ಹಾಗೂ ಆತಂಕದ ಛಾಯೆಯನ್ನೊತ್ತೇ ಮಾತನಾಡಲು ಮುಂದಾದ ಧನಂಜಯ್ ಹೇಳಿದಿಷ್ಟು..

ಅಂದ ಹಾಗೇ, ಧನಂಜಯ್ ಇದೇ ಭೈರವಗೀತಾ ಮೂಲಕ ತಮ್ಮ ಬಹುದಿನಗಳ ಬಯಕೆಯೊಂದನ್ನ ಈಡೇರಿಸಿಕೊಂಡಿದ್ದಾರೆ. ಅದುವೇ ಬೈಯುವ ಬಯಕೆ. ಹೌದು, ಅಸಲಿಗೆ ಭೈರವಗೀತಾ ಮೇಲು ಮತ್ತು ಕೀಳು ನಡುವಿನ ಸಂಘರ್ಷವನ್ನೊಂದಿರುವ ಕಥೆ. ಇದೇ ಕಥೆಯಲ್ಲಿ ಗುಲಾಮಗಿರಿ ವಿರುದ್ಧ ಸಿಡಿದೇಳುವ ಪಾತ್ರ ಮಾಡಿರುವ ಧನಂಜಯ್, ಚಿತ್ರದಲ್ಲೊಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.

ಯಾರೇ ಯಾರನ್ನಾದ್ರೂ ಗುಲಾಮನನ್ನಾಗಿ ನೋಡುವ ಮೊದಲು ಒಮ್ಮೆ ಯೋಚನೆ ಮಾಡಿ ಅಂದಿದ್ದಾರೆ. ಇದೇ ಮಾತನ್ನ ಧನಂಜಯ್‌ಗೆ ನಿಜ ಜೀವನದಲ್ಲಿ ಅನೇಕರಿಗೆ ಹೇಳುವ ಆಸೆ ಇತ್ತಂತೆ. ಇದೀಗ ಅದೇ ಆಸೆ ಈಡೇರಿಸಿಕೊಂಡಿರುವ ಧನಂಜಯ್ ಈ ಮೂಲಕ ಕಾಲ್‌ಎಳೆದವ್ರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ…

LEAVE A REPLY

Please enter your comment!
Please enter your name here