Home District ಯಾರು ಗೊತ್ತಾ ಝಿರೋಯಿಂದ ಹೀರೋ ಆದ ದಿಟ್ಟ ಮಹಿಳೆ.!? ಏನು ಗೊತ್ತಾ ದೇಶವೇ ಮೆಚ್ಚೋ ಕೆಲಸ...

ಯಾರು ಗೊತ್ತಾ ಝಿರೋಯಿಂದ ಹೀರೋ ಆದ ದಿಟ್ಟ ಮಹಿಳೆ.!? ಏನು ಗೊತ್ತಾ ದೇಶವೇ ಮೆಚ್ಚೋ ಕೆಲಸ ಮಾಡಿದಾಕೆಯ ಯಶೋಗಾಥೆ.!

2231
0
SHARE

ಹೆಣ್ಣು ಅಬಲೆ ಅಲ್ಲ ಸಬಲೆ ಅನ್ನೋ ಮಾತನ್ನ ನಾವು ಪ್ರತಿನಿತ್ಯ ಕೇಳ್ತಾ ಇರ್ತೀವಿ, ಆದ್ರೆ ಆ ಮಾತು ಎಷ್ಟರ ಮಟ್ಟಿಗೆ ನಿಜ ಅನ್ನೋದು ಸಧ್ಯಕ್ಕೆ ಉತ್ತರ ಸಿಗದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ನಿಲ್ಲುತ್ತಾಳೆ. ಮುಂಬೈ ಮಹಾನಗರಿಯಲ್ಲಿ ಸ್ವಯಂ ಬದುಕು ಕಟ್ಟಿಕೊಂಡ ಒಬ್ಬ ದಿಟ್ಟ ಮಹಿಳೆ. ಆ ಮಹಿಳೆ ಮಾಡಿದ ಸಾಧನೆ ನಿಜಕ್ಕೂ ಶಹಬ್ಬಾಶ್ ಎನ್ನುಂತದ್ದು, ಸಮಾಜದ ಇತರ ಮಹಿಳೆಯರಿಗೂ ದಾರಿ ತೋರುವಂತದ್ದು. ಅಷ್ಟಕ್ಕೂ ಆಕೆ ಮಾಡಿದ್ದು ಹಪ್ಪಳ ತಯಾರಿಸುವಂತ ಕಾರ್ಯ..

ಕೇವಲ ಎಂಬತ್ತು ರೂಪಾಯಿ ಬಂಡವಾಳದಿಂದ ಆರಂಭಗೊಂಡ ಹಪ್ಪಳ ತಯಾರಿಕಾ ಕಾರ್ಯ ಪ್ರಾರಂಭದಲ್ಲಿ ಆರು ಜನ ಮಹಿಳೆಯರೊಂದಿಗೆ ಶುರುವಾಯಿತು, ಮೊದಲದಿನದ ಆರಂಭಿಕ ಗಳಿಕೆ ಒಂದು ರೂಪಾಯಿ,  ಹೀಗೆ ಆರಂಭಗೊಂಡ  ಹಪ್ಪಳ ಉದ್ಯಮ ಮಹಿಳೆಯರ ಸ್ವಾವಲಂಬಿ ಬದುಕಿಗೆ ಊರುಗೋಲಾಯಿತು, ಭಾರತದಂತಹ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯೇ ಪ್ರಧಾನ ಪಾತ್ರವಹಿಸುತ್ತಾಳೆ,   ಮನೆಯಿಂದ  ಹೊರಗಡೆ ಕಾರ್ಯ ನಿರ್ವಹಿಸಿದ್ರು ಕೂಡ ದಣಿವಿಲ್ಲದೇ ಗೃಹ ಕಾರ್ಯದಲ್ಲಿ ತನ್ನನ್ನೂ ತೊಡಗಿಸಿಕೊಳ್ಳುತ್ತಾಳೆ. ಅದಕ್ಕೆ ಉತ್ತಮ ಉದಾಹರಣೆಯೇ  ಜಸ್ವಂತಿ ಬೆನ್,  ಕೇವಲ ಕುಟುಂಬ ನಿರ್ವಾಹಣೆಯು ಅಷ್ಟೇ ಅಲ್ಲದೆ ಸ್ವಾವಲಂಬಿ ಬದಕು ಕಟ್ಟಿಕೊಳ್ಳವುದರ ಜೊತೆಗೆ ಸಾವಿರಾರು ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ,

ಸಣ್ಣ ಬಂಡವಾಳದಿಂದ ಆರಂಭಗೊಂಡ ಹಪ್ಪಳ ತಯಾರಿಕಾ ಉದ್ಯಮ, ಹಂತ ಹಂತವಾಗಿ  ಬೆಳೆಯುತ್ತಾ ಹೊಯಿತು ಅಧಿಕೃತವಾಗಿ ಈ ಹಪ್ಪಳ ಉದ್ಯಮಕ್ಕೆ ಒಂದು ಹೆಸರನ್ನ ಸೂಚಿಸಬೇಕಾಗಿತ್ತು, ಈ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದ್ದ  ಜಸ್ವಂತಿ ಬೆನ್ ತನ್ನ ಎಲ್ಲಾ ಸಹೊದ್ಯೋಗಿಗಳ ಒಂದು  ಸಭೆ ಕರೆದ್ರು,  ಈ ಉದ್ಯಮಕ್ಕೆ ಸರಿಯಾದ ಹೆಸರನ್ನ  ಸೂಚಿಸುವಂತೆ ಹೇಳಿದ್ರು,  ಆ ಮಹಿಳಾ ಸದಸ್ಯರಲ್ಲಿ ಒಬ್ಬಳಾದ ಧೀರಜ್ ಬೆನ್ ಎನ್ನುವವರು  ಈ ಉದ್ಯಮಕ್ಕೆ ಲಿಜ್ಜತ್  ತ್ ಹಪ್ಪಳ ಎಂಬ ಹೆಸರನ್ನ ಸೂಚಿಸಿದ್ರು ಇದಕ್ಕೆ ಜಸ್ವಂತಿಬೆನ್ ಮತ್ತು ಉಳಿದ ಎಲ್ಲಾ ಸದಸ್ಯರು ಸಮ್ಮತಿಸಿದ್ರು.

80 ರೂಪಾಯಿ ಬಂಡವಳದಿಂದ ಆರಂಭಿಸಿದ ಈ  ಲಿಜ್ಜತ್  ಹಪ್ಪಳ ಉದ್ಯಮ, ಪ್ರಾರಂಭದಲ್ಲಿ  100 ಹಪ್ಪಳ ಮಾತ್ರ ತಯಾರಿಸಲಾಗುತ್ತಿತ್ತು, ಈಗ ಈ ಉದ್ಯಮ ಬಾನೆತ್ತರಕ್ಕೆ ಬೆಳೆದು ನಿಂತಿದೆ, ದೇಶದ 16 ರಾಜ್ಯಗಳಲ್ಲಿ 88 ಹಪ್ಪಳ ತಯಾರಿಕೆ  ಕೇಂದ್ರಗಳನ್ನ ತೆರೆಯಲಾಗಿದ್ದು, ದಿನವೊಂದಕ್ಕೆ 1 ಕೋಟಿ ಹಪ್ಪಳ ಗಳನ್ನ  ಉತ್ಪಾದಿಸಲಾಗುತ್ತಿದೆ, ಹೀಗೆ ಈ ಉದ್ಯಮ ಭಾರತದ ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. 85ರ  ಇಳಿ ವಯಸ್ಸಿನಲ್ಲೂ  ಜಸ್ವಂತಿಬೆನ್ ಪ್ರತಿದಿನ  ಹಪ್ಪಳ ತಯಾರಿಕೆಯಲ್ಲಿ ಮಗ್ನನಾಗುತ್ತಾಳೆ, ಅದರ ಜೊತೆ ಉದ್ಯಮದ ವ್ಯವಹಾರದ ಕಡೆ ಗಮನ ಹರಿಸುತ್ತಾಳೆ,  ಹೀಗೆ ಒಂದು ದಿನ, ಬಂದೇ ಬಿಡ್ತು,  ಹಪ್ಪಳ ತಯಾರಿಕೆಗೆ ಬಹುದೊಡ್ದ ಚಾಲೆಂಜಿಂಗ್ ಟಾಸ್ಕ್,

ಎರಡೇ ದಿನದಲ್ಲಿ ಆರುವರೆ ಲಕ್ಷ ಹಪ್ಪಳ ಪೂರೈಸುವ ಒಪ್ಪಂದಕ್ಕೆ ಮಾತು ಕೊಟ್ರು ಜಸ್ವಂತಿಬೆನ್, ಗಿರ್ ಗಾಂವ್  ಪಟ್ಟಣದ  ಹಪ್ಪಳ ತಯಾರಿಕಾ ಘಟಕ  ಬಹಳ ಚಿಕ್ಕ ತಯಾರಿಕೆ ಯುನಿಟ್ ಆಗಿತ್ತು, ಆಗಾ ಜಸ್ವಂತಿಬೆನ್ ಕೂಡಲೆ ಪುಣೆಯ ಇನ್ನೊಂದು ಬ್ರಾಂಚ್ ನ  ಸಹಾಯ ಕೋರಿದ್ರು. ಜಸ್ವಂತಿ ಬೆನ್  ಪುಣೆ  ಬ್ರಾಂಚ್ ನ  ಮುಖ್ಯಸ್ಥೆ  ಚೇತನ್ ಬೆನ್ ಅವರೊಂದಿಗೆ ಪೋನ್ ಮೂಲಕ ಮಾತನಾಡಿ  ಎರಡೇ ದಿನಗಳಲ್ಲಿ 300 ಬಾಕ್ಸ್ ಗಳಲ್ಲಿ ,ಆರುವರೆ ಲಕ್ಷ ಹಪ್ಪಳಗಳನ್ನ ತಯಾರಿಸಿ ಕಳುಹಿಸಿಕೊಡಿ ಎಂದು ತಿಳಿಸಿದ್ರು, ತಕ್ಷಣ  ಕಾರ್ಯ ಪ್ರವೃತ್ತರಾದ  ಪುಣೆ ಬ್ರಾಂಚ್ ನ ಮುಖ್ಯಸ್ಥೆ  ಚೇತನ್ ಬೆನ್,  ತಮ್ಮ ಮಹಿಳಾ ಸದಸ್ಯರ  ಸಭೆ ಕರೆದ್ರು, ಆ ಸಭೆಯಲ್ಲಿ ಎರಡು ದಿನಗಳಲ್ಲಿ ಆರುವರೆ ಲಕ್ಷ ಹಪ್ಪಳದ ಸರಕನ್ನ ಪೂರೈಸುವ ಒಪ್ಪಂದಕ್ಕೆ ಬರಲಾಯಿತು,

ಒಂದೆ ದಿನದಲ್ಲಿ  4700 ಕೆಜಿ ಬೇಳೆ ಕಾಳುಗಳನ್ನ ಯಂತ್ರದ ಸಾಹಯದಿಂದ ಕುಟ್ಟಿ ಪುಡಿಮಾಡಲಾಯಿತು, ಇದರ ಜೊತೆ ರುಚಿಕರ ಮತ್ತು ಸ್ವಾದಕ್ಕಾಗಿ ಅಫಘಾನಿಸ್ತಾನಿಂದ ಅಮದು ಮಾಡಿಕೊಂಡ ಇಂಗನ್ನು, ಮಿಕ್ಸ ಮಾಡಲಾಯಿತು. ಇದರ ಜೊತೆ ಮೆಣಸುಕಾಳುಗಳನ್ನ ಸಣ್ಣಗೆ ಪುಡಿಮಾಡಿ, ರುಚಿಗೆ  ತಕ್ಕ ಉಪ್ಪಿನ  ಬಿಸಿ ದ್ರಾವಣವನ್ನ ಮಿಶ್ರಣ ಮಾಡಲಾಗುತ್ತದೆ, ಹೀಗೆ ಹಲವು ವಿಧಾನಗಳ ಮೂಲಕ ಹಪ್ಪಳ ತಯಾರಿಕೆಯ ಮುದ್ದೆಯಾಕಾರದ ಹಿಟ್ಟು ಸಿದ್ದಗೊಳ್ಳುತ್ತೆ,   ಇಲ್ಲಿಂದ ಆರಂಭಗೊಳ್ಳುತ್ತೆ ಹಪ್ಪಳ ತಯಾರಿಕೆಯ ಕೆಲಸ.ವಾ,ಓ   ಯುದ್ದಕ್ಕೆ ಸಿದ್ದಗೊಂಡವರಂತೆ ಮಹಿಳಾ ಸದಸ್ಯರು  ತಲಾ ಒಬ್ಬೊಬ್ಬರಂತೆ  ಒಂದೆ ದಿನದಲ್ಲಿ 800 ಹಪ್ಪಳ ತಯಾರಿಕೆಯ ಗುರಿ ಮುಟ್ಟಲೆಬೇಕಾಗಿತ್ತು,  ಹೀಗೆ ಪುಣೆ ಬ್ರಾಂಚ್ ನ 800 ಮಹಿಳಾ ಸದಸ್ಯರು, ಕುಟುಂಬದ ಜವಾಬ್ದಾರಿಗಳನ್ನ ನಿಭಾಯಿಸುವ ಕೆಲಸ ಒಂದು ಕಡೆಯಾದ್ರೆ,

ಒಂದೆ ದಿನದಲ್ಲಿ 800 ಹಪ್ಪಳ ತಯಾರಿಸುವ ಕೆಲಸ ಇನ್ನೊಂದು ಕಡೆ. ಈ ಎಲ್ಲ ಒತ್ತಡಗಳ ನಡುವೆ, ಆ ಮಹಿಳೆಯರು ತಮಗೆ ಕೊಟ್ಟ ಟಾಸ್ಕ್ ಕಂಪ್ಲೀಟ್ ಮಾಡಿಯೇ ಬಿಟ್ಟರು, ಅಲ್ಲಿಗೆ ಜಸ್ವಂತಿ ಬೆನ್ ಹೆಸರು ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿತ್ತು.1956ರಲ್ಲಿ ಪ್ರಾರಂಭವಾಗ ಲಿಜಪ್ ಹಪ್ಪಳ ಅನ್ನೋ ಸಂಸ್ಥೆ ಮೊದಲಿಗೆ 4 ಪಾಪಡ್ ಪಾಕೆಟ್ ತಯಾರು ಮಾಡಿ ಮಾರಾಟ ಮಾಡಿತ್ತು. ಸಣ್ಣದಾಗಿ ಶುರುವಾಗಿದ್ದ ಈ ಸಂಸ್ಥೆ ಸಧ್ಯ ದೇಶದೆಲ್ಲೆಡೆ 32 ಸಾವಿರ ಮಹಿಳಾ ಸದ್ಯರನ್ನ ಹೊಂದಿದೆ, ಪ್ರಾರಂಭದಲ್ಲಿ ಜಸ್ವಂತಿ ಬೆನ್ ಮತ್ತು ನಾಲ್ಕು ಜನ ಮಹಿಳಾ ಸದಸ್ಯರು ನಾಲ್ಕು ಪಾಪಡ್ ಪಾಕೆಟ್ ಗಳನ್ನ ಆನಂದ ಜೀ ಮತ್ತು ಪ್ರೇಮ್ ಜೀ..ಅಂಗಡಿಗೆ ಮಾರಾಟ ಮಾಡುತ್ತಾರೇ. ಅಲ್ಲಿಂದಲೇ ಶುರುಲಾಗಿತ್ತು ಹಪ್ಪಳಕ್ಕೆ ಸುವರ್ಣದ ದಿನಗಳು.

ಪುಣೆಯ ಲಿಜತ್ ಹಪ್ಪಳ  ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಒಟ್ಟು  ಮಹಿಳೆಯರ ಸಂಖ್ಯೆ 800. ಇಷ್ಚು ದೊಡ್ಡ ಉದ್ಯಮದಲ್ಲಿ, ಪ್ರತಿ ಮಹಿಳೆಯರು ತಯಾರಿಸಿದ  ಹಪ್ಪಳಗಳನ್ನ ವ್ಯವಸ್ಥಿತವಾಗಿ  ಪರಿಶೀಲನೆಗೆ ಒಳಪಡಿಸಲಾಗುತ್ತೆ, ಅಲ್ಲದೆ , ಅದರ ತೂಕ, ಅಳತೆಯನ್ನ ಯಂತ್ರದ ಮುಖೇನ ಚೆಕ್ ಮಾಡಲಾಗುತ್ತೆ, ಮಾತ್ರವಲ್ಲ ಈ ಸಂಸ್ಥೆಯೂ  ಅಶಿಕ್ಷಿತ ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ನೀಡುತ್ತಾ  ಬರುತ್ತಿದೆ, ಈ ಮೂಲಕ ಮಹಿಳಾ ಶಿಕ್ಷಣಕ್ಕೆ ಈ ಸಂಸ್ಥೆ ಒತ್ತು ನೀಡುತ್ತಿದೆ.ನನ್ನ ಮಗಳ ಎಂಜಿನಿಯಿರಿಂಗ್ ಮುಗಿಸಿ ಎಂ.ಎಸ್, ಮಾಡುವ ಕನಸು ಕಂಡಿದ್ದಳು  ಮಗಳ ವಿದ್ಯಾಭ್ಯಾಸಕ್ಕಾಗಿ  27 ಲಕ್ಷದ ಅವಶ್ಯಕತೆ ಇತ್ತು, ಅಷ್ಟು ದೊಡ್ಡ ಮೂತ್ತದ ಹಣ ಹೊಂದಿಸುವುದು ಕಷ್ಟಕರವಾಗಿತ್ತು,. ಆಗಾ  ಮೀನಾ ಎನ್ನುವ ಮಹಿಳೆ  ನಮಗೆ  ಸಹಾಯ ಮಾಡುವ ನೆಪದಲ್ಲಿ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತಾಡಿದಳು ಆದ್ರೆ ಆ ಸಂರ್ಧಭದಲ್ಲಿ  ನಮ್ಮ ನೆರವಿಗೆ ಬಂದು   ಮಗಳ ವಿಧ್ಯಾಭ್ಯಾಸದ ಕನಸನ್ನ ಸಕಾರಗೊಳಿಸಿದ್ದು ಇದೆ ಲಿಜ್ಜತ್.

ಲಿಜ್ಜತ್ ಹಪ್ಪಳದ  ಪ್ರತಿ ಪಾಕೆಟ್ ನಲ್ಲೂ 120 ಹಪ್ಪಳ ಗಳನ್ನ  ವ್ಯವಸ್ಥಿತವಾಗಿ ಜೊಡಿಸಲಾಗುತ್ತದೆ. ಇದು ಅಲ್ಲದೆ ಹೇಳಿದ ಸಮಯಕ್ಕೆ ಡೆಲಿವರಿ ನೀಡಲಾಗುತ್ತೆ ,.ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಲಿಜತ್ ಹಪ್ಪಳ ಸದಾ ಮುಂದೆ ಇದೆ, ನಮ್ಮ ಉತ್ಪನ್ನಗಳಿಗೆ ಬೇಡಿಕೆ  ಹೆಚ್ಚುತ್ತಲೆ ಇದೆ , ರಫ್ತಿನ ಪ್ರಮಾಣ ಕೂಡಾ ಏರಿಕೆ ಕಂಡಿದೆ , ಉತ್ಪನ್ನಗಳು ಹೆಚ್ಚಿದಂತೆಲ್ಲಾ  ,  ಮಸಾಲಾ ಪೌಡರ್, ಅರಿಶಿನಪುಡಿ, ಖಾರದ ಪುಡಿ,  ತಯಾರಾಗುತ್ತೆ, ನಾವು ಮುಖ್ಯವಾಗಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಇವುಗಳ ತೇವಾಂಶ ಪರೀಕ್ಷೆಗೆ ಲ್ಯಾಬಾರೆಟರಿ ತೆರೆದಿದ್ದೇವೆ, ಲಿಜ್ಜತ್ ನ  ಮತ್ತೊಂದು ವಿಶೇಷ ಖಾದ್ಯವೆಂದರೆ  ಚಪಾತಿ , ಮುಂಬೈನ ಪ್ರಸಿದ್ದ ಹೊಟೆಲ್ ಗಳಾದ  ಟ್ರೈಡೆಂಟ್,  ಓಬೆರಾಯ, ಓವರ್ ಸೀಸ್ ಬ್ಯಾಂಕ್. 80 ರೂಪಾಯಿ ಲೋನ್ ನಿಂದ ಆರಂಭಗೊಂಡ ಹಪ್ಪಳ ಉದ್ಯಮ ಇಂದು ವಾರ್ಷಿಕ 70 ಕೋಟಿ ಮುಟ್ಟಿದೆ,

ಸದ್ಯ ಈ ಸಂಸ್ಥೆಯಲ್ಲಿ 45,000 ಮಹಿಳೆಯರು ಕಾರ್ಯನಿರ್ವವಹಿಸುತ್ತಿದ್ದಾರೆ,  ಲಿಜತ್ ಸಂಸ್ಥೆಯ ಮೂಲ ಉದ್ದೇಶವೇ ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡೊದು ಈ ನಿಟ್ಟಿನಲ್ಲಿ  ಲಿಜತ್ ಸಂಸ್ಥೆ  ಗ್ರಾಮೀಣಾ ಬಾಗಗಳಲ್ಲಿ ಹಪ್ಪಳ ಕೇಂದ್ರಗಳನ್ನ ತೆರೆಯಲು ಮುಂದಾಗುತ್ತೆ, ಅದಕ್ಕೆ ಸೂಕ್ತ ಜಾಗಕ್ಕಾಗಿ ಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗುತ್ತೆ, ಜಾಗ ದೊರೆತ ತಕ್ಷಣವೆ ಹಪ್ಪಳ ತಯಾರಿಕೆಗೆ ಮುಂದಾಗುತ್ತೆ,ಲಿಜತ್ ಹಪ್ಪಳ ಉದ್ಯಮ ಈಗಾ ದೇಶದ ಬಹು ದೊಡ್ಡ ಉದ್ಯಮವಾಗಿ ಹೊರಹೊಮ್ಮಿದೆ, ಸದ್ಯ ಈ ಉದ್ಯಮದಲ್ಲಿ 45,000 ಸಾವಿರಾ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ, ಲಿಜತ್ ಸಂಸ್ಥೆ ಹಂತ ಹಂತವಾಗಿ ಮಹಿಳೆಯರನ್ನ ಸ್ವಾವಲಂಬನೆ ಗೊಳಿಸುತ್ತಾ  ತನ್ನ ಗುಣಮಟ್ಟವನ್ನ ಕಾಯ್ದುಕೊಳ್ಳುವುದರ ಜೊತೆ ಗ್ರಾಹಕರ ವಿಶ್ವಾವಾಸವನ್ನ ಉಳಿಸಿಕೊಂಡಿದೆ, ಸೋ ದೇಶದಲ್ಲಿ ಲಿಜ್ಜತ್ ಹಪ್ಪಳ ಕ್ರಾಂತಿಯನ್ನೇ ಮಾಡಿದೆ. ಮಹಿಳಾ ಸಬಲೀಕರಣ, ಮತ್ತು ಮಹಿಳಾ ಸ್ವಾವಲಂಬನೆಯಲ್ಲಿ ಜಸ್ವಂತಿ ಬೆನ್ ಮಾಡಿರೋ ಸಾಧನೆ ನಿಜಕ್ಕೂ ಇಡೀ ಮಹಿಳಾ ಸಮಾಜಕ್ಕೆ ಆದರ್ಶ.

LEAVE A REPLY

Please enter your comment!
Please enter your name here