Home Crime ಯಾರೂ ಅಂತರಜಾತಿ ವಿವಾಹವಾಗಬೇಡಿ ಅಂತ ಡೆತ್ ನೋಟ್ ಬರೆದಿಟ್ಟು,ಗಂಡನ ಅಗಲಿಕೆಯಿಂದ ಮನನೊಂದು ಪತ್ನಿ ನೇಣಿಗೆ ಶರಣು…!

ಯಾರೂ ಅಂತರಜಾತಿ ವಿವಾಹವಾಗಬೇಡಿ ಅಂತ ಡೆತ್ ನೋಟ್ ಬರೆದಿಟ್ಟು,ಗಂಡನ ಅಗಲಿಕೆಯಿಂದ ಮನನೊಂದು ಪತ್ನಿ ನೇಣಿಗೆ ಶರಣು…!

6029
0
SHARE

ಅವರಿಬ್ಬರು ಚಿಕ್ಕ ವಯಸ್ಸಿನಲ್ಲೆ ಪ್ರೀತಿಯ ಬಲೆಗೆ ಬಿದ್ದಿದ್ದು, ಜಾತಿ ಆಸ್ತಿ ಅಂತಸ್ತು ಎಲ್ಲವನ್ನು ಮೀರಿ ಒಂದು ವರ್ಷದಿಂದಷ್ಟೆ ಪ್ರೇಮ ವಿವಾಹವಾಗಿದ್ರು. ಆದ್ರೆ ಇಬ್ಬರ ಪ್ರೇಮ ವಿವಾಹಕ್ಕೆ ಜಾತಿ ನೆಪವಿಟ್ಟು ಅಟ್ಟಹಾಸ ಮೆರೆದಿದ್ದ ಜಾತಿವಾದಿಗಳ ಸಂಚಿಗೆ ಸಿಲುಕಿದ ನೊಂದ ಗೃಹಿಣಿ ಇಂದು ಆತ್ಮಹತ್ಯೆಯ ಹಾದಿ ಹಿಡಿದಿದ್ದು, ಮದುವೆಯಾಗಿ ವರ್ಷ ಕಳೆಯುವ ಮುನ್ನವೆ ಇಬ್ಬರು ಮಸಣ ಸೇರುವ ಮುಖಾಂತರ ದಾರುಣ ಅಂತ್ಯ ಕಂಡಿದ್ದಾರೆ.

ನನ್ನ ಸಾವಿಗೆ ನಾನೆ ಕಾರಣ ದಯವಿಟ್ಟು ಎಲ್ಲರು ನನ್ನ ಕ್ಷಮಿಸಿಬಿಡಿ ನಿಮ್ಮನೆಲ್ಲ ಬಿಟ್ಟು ಮೋಸ ಮಾಡಿ ಹೋಗುತ್ತಿದ್ದೇನೆ, ಹರೀಶ್ ಯಿಲ್ಲದೆ ನನಗೆ ಪ್ರತಿದಿನವೂ ನರಕವಾಗುತ್ತಿದೆ ಹೀಗಾಗಿ ನಾನು ಹರೀಶನ ಬಳಿ ಹೋಗುತ್ತಿದ್ದೇನೆ. ನೀವೆಲ್ಲರು ನನ್ನನ್ನು ಮಗಳಂತೆ ನೋಡಿಕೊಂಡಿದ್ದೀರಾ, ತವರು ಮನೆಯ ನೆನಪನ್ನ ಕಳೆದಿದ್ದೀರಾ ಹರೀಶನನ್ನ ನನ್ನ ತಮ್ಮ ಸಾಯಿಸಿಲ್ಲ, ಅವನ ಸಾವಿನ ಹಿಂದೆ ಬೇರೆ ಯಾರದ್ದೇ ಕೈವಾಡವಿದ್ರು ಅವರನ್ನ ನಾನು ಬಿಡೋದಿಲ್ಲ. ಹರೀಶ ಮತ್ತು ನಾನು ಗೌತಮಿಯ ಮಗುವನ್ನು ಸಾಕಿಕೊಳ್ಳಬೇಕು ಅಂದುಕೊಂಡಿದ್ವಿ ಆದ್ರೆ ಅದು ಸಾಧ್ಯವಾಗಲಿಲ್ಲ, ನಾದಿನಿಯನ್ನ ಚೆನ್ನಾಗಿ ನೋಡಿಕೊಳ್ಳಿ.

ನನ್ನನ್ನು ತವರು ಮನೆಯವರು ನೋಡಲು ಯಾರೇ ಬಂದ್ರು ಅವರನ್ನು ದೂಷಿಸಬೇಡಿ ಅವರು ನೋಡಿಕೊಂಡು ಹೋಗಲಿ. ಅಪ್ಪ ನಿನ್ನ ಜೊತೆ ಕಳೆದಂತ ಈ ಎಂಟು ತಿಂಗಳು ತುಂಬಾ ಸಂತೋಷದಿಂದ್ದೆ, ನನಗೆ ಹರೀಶ ಎಲ್ಲಾ ಸಂಬಂಧಗಳನ್ನು ಕೊಟ್ಟಿದ್ದ.ಶೃಂಗಾರಣ್ಣ ನನ್ನ ಕ್ಷಮಿಸಿಬಿಡಿನೀಮಗೆ ನೀಡಿದ್ದ ಮಾತನ್ನು ಮುರಿದು ಬಿಟ್ಟು ಹೋಗುತ್ತಿದ್ದೇನೆ. ಅಮ್ಮ ನಿನಗೆ ನೀಡಿದ ಮಾತು ನನ್ನ ಕೈಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ.ಒಳ್ಳೆ ಮನೆ ತನದವರಿಗೆ ನಾದಿನಿ ಯರನ್ನ ಕೊಟ್ಟು ಮದುವೆ ಮಾಡಿಕೊಡಿ, ಕ್ಷಮಿಸುಬಿಡು ಸಹನಾ. ಕೊನೆಯದಾಗಿ ಒಂದು ಮಾತು ದಯವಿಟ್ಟು ಯಾರು ಅಂತರಜಾತಿಯ ವಿವಾಹವಾಗಬೇಡಿ, ಮನೆಯವರನ್ನ ಒಪ್ಪಿಸಿ ಮದುವೆಯಾಗಿ. ” ಮಿಸ್ ಯು ಎವರಿ ಓನ್” ಇಂತಿ ನಿಮ್ಮ ಮಗಳು ಮೀನಾಕ್ಷಿ.ಎನ್.

ಪತಿಯ ಮರ್ಯಾದೆ ಹತ್ಯೆಯಿಂದ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ಮೀನಾಕ್ಷಿ (೨೨) ಆತ್ಮಹತ್ಯೆ ಮಾಡಿಕೊಂಡಿರುವ ದುದೈವಿ. ಅಂದಹಾಗೆ ಬಿದಲೂರಿನ ಹರೀಶ್ ಎಂಬಾತನನ್ನ ಕಳೆದ ಒಂಬತ್ತು ತಿಂಗಳ ಹಿಂದೆ ಮೀನಾಕ್ಷಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಳು. ಆದ್ರೆ ಅಂಜರ್ತಾತಿ ವಿವಾಹ ಮೀನಾಕ್ಷಿ ಮನೆ ಕಡೆಯವರಿಗೆ ಸಿಟ್ಟನ್ನ ತಂದಿಟ್ಟಿತ್ತು. ಮದುವೆಯಿಂದ ಸುಮ್ಮನಿದ್ದ ಮೀನಾಕ್ಷಿ ತಮ್ಮ ವಿನಯ್ ಎಂಬಾತ ತನ್ನ ಭಾವನಿಗೆ ಬಣ್ಣದ ಮಾತುಗಳನ್ನೇಳಿ ಊರಿಗೆ ಕರೆಸಿಕೊಂಡು ಕಳೆದ ನವೆಂಬರ್ ೨೦ ರಂದು ನಲ್ಲೂರು ಗ್ರಾಮದ ಗುಲಾಬಿ ತೋಟದಲ್ಲಿ ಹರೀಶ್‌ನನ್ನ ಹತ್ಯೆ ಮಾಡಿದ್ದ.

ಈ ಮರ್ಯಾದೆ ಹತ್ಯೆ ಪ್ರಕರಣ ಇಡಿ ದೇವನಹಳ್ಳಿ ತಾಲೂಕನ್ನೆ ಬೆಚ್ಚಿ ಬಳಿಸಿತ್ತು. ತನ್ನ ಪತಿಯ ಕೊಲೆಯಿಂದಾಗಿ ಮೀನಾಕ್ಷಿ ಕೂಡ ಸಾಕಷ್ಟು ಮನನೊಂದಿದ್ದರು. ಇನ್ನೂ ನೆನ್ನೆ ರಾತ್ರಿ ಕೊಲೆಯಾದ ಹರೀಶ್ ತಂದುಕೊಟ್ಟಿದ್ದ ಸೀರೆಯನ್ನ ಹುಟ್ಟುಕೊಂಡಿದ್ದ ಮಿನಾಕ್ಷಿ ಪತಿಯ ಅಗಲಿಕೆಯ ನೊವ್ವನ್ನ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಬೆಳಗ್ಗಿನ ಜಾವ ೫.೩೦ ರ ಸುಮಾರಿಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣ ಕುಟುಂಬಸ್ಥರು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಸಾವನ್ನಪ್ಪಿರುವ ಸುದ್ದಿ ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ ಡೇತ್‌ನೋಟ್ ಬರೆದಿರುವ ಮಿನಾಕ್ಷಿ ಯಾರು ಕೂಡ ದಯವಿಟ್ಟು ಅಂತರ್ಜಾತಿ ವಿವಾಹ ಆಗಬೇಡಿ, ಮನೆಯವರನ್ನ ಒಪ್ಪಿಸಿ ಮದುವೆಯಾಗಿ ಅಂತಾ ಸಂದೇಶ ಸಾರಿದ್ದಾಲೆ. ಜತೆಗೆ ತನ್ನ ಪತಿಯನ್ನ ಕೊಲೆ ಮಾಡಿದ ತಮ್ಮ ವಿನಯ್ ಸೇರಿದಂತೆ ಇನ್ಯಾರು ಭಾಗವಹಿಸಿದ್ದಿರಾ ಯಾರನ್ನು ನಾನು ಬಿಡೋದಿಲ್ಲ ಅಂತಾ ಡೇತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ಇನ್ನೂ ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here