ಇನ್ನೊಂದೆಡೆ ದೇವೇಗೌಡ್ರ ವಿರುದ್ಧ ಮಧುಗಿರಿ ಮಾಜಿ ಶಾಸಕ ರಾಜಣ್ಣ ಗುಡುಗಿದ್ದಾರೆ… ದೇವೇಗೌಡರು, ಅವರ ಸೊಸೆ, ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಹೋಗುತ್ತಾರೆ…
ಯಾರೂ ಬೇಕಾದರೂ ಬಂದು ಇಲ್ಲಿ ಹೋಗಲು ತುಮಕೂರು ರೆಡ್ ಲೈಟ್ ಏರಿಯಾ ಆಗಿದೆಯಾ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಪ್ರಶ್ನಿಸಿದ್ದಾರೆ.ಇದೇ ವೇಳೆ, ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರ ಜಂಟಿ ಸಭೆ ನಡೆಸಲಾಯ್ತು…
ಇನ್ನೂ ಬಂಡಾಯವಾಗಿ ಅಖಾಡಕ್ಕಿಳಿದಿರೋ ಮುದ್ದಹನುಮೇಗೌಡ ಮತ್ತು ಕೆಎನ್ ರಾಜಣ್ಣ ಅವರ ಮನವೊಲಿಸುವ ವಿಶ್ವಾಸವನ್ನ ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತೆ ಎಂದಿದ್ದಾರೆ.
ಒಟ್ನಲ್ಲಿ ದೋಸ್ತಿಗಳ ನಡುವಿನ ಬಂಡಾಯದ ಲಾಭವನ್ನ ಪಡೆಯಲು ಇತ್ತ ಬಿಜೆಪಿ ಹವಣಿಸುತ್ತಿದೆ… ಇಬ್ಬರು ಗೌಡ್ರ ಜಗಳದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಗೆ ಲಾಭವಾಗುತ್ತಾ.. ಇಲ್ಲಾ ಮುದ್ದಹನುಮೇಗೌಡ್ರನ್ನ ಕಣದಿಂದ ಹಿಂದೆ ಸರಿಯುವಂತೆ ದೋಸ್ತಿಗಳು ಮಾಡ್ತಾರಾ ಶುಕ್ರವಾರದವರೆಗೆ ಕಾದು ನೋಡಬೇಕು…