Home District ಯಾವುದೇ CM ರಾಜ್ಯವನ್ನ ಒಡೆದಾಳುವ ನೀತಿ ಅನುಸರಿಸಿರಲಿಲ್ಲ, ಇದೀಗ ಕುಮಾರಸ್ವಾಮಿ ಅಂತಹ ಕೆಲಸಕ್ಕೆ ಕೈಹಾಕಿದ್ದಾರೆ-B.S.Yadiyurappa…

ಯಾವುದೇ CM ರಾಜ್ಯವನ್ನ ಒಡೆದಾಳುವ ನೀತಿ ಅನುಸರಿಸಿರಲಿಲ್ಲ, ಇದೀಗ ಕುಮಾರಸ್ವಾಮಿ ಅಂತಹ ಕೆಲಸಕ್ಕೆ ಕೈಹಾಕಿದ್ದಾರೆ-B.S.Yadiyurappa…

1574
0
SHARE

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೂಗು ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಕಿಡಿಕಾರಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಆದ ಮೇಲೆ ಯಾವುದೇ ಮುಖ್ಯಮಂತ್ರಿ ರಾಜ್ಯವನ್ನ ಒಡೆದಾಳುವ ನೀತಿ ಅನುಸರಿಸಿರಲಿಲ್ಲ.ಆದ್ರೇ ಕುಮಾರಸ್ವಾಮಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯವನ್ನು ವಿಭಜಿಸುವ ಕೆಲಸಕ್ಕೆ ಯಾರು ಕೈ ಹಾಕಬಾರದು. ಅಭಿವೃದ್ಧಿ ಗೆ ಪ್ರತಿಭಟನೆ ಮಾಡಿ, ಆದ್ರೇ ರಾಜ್ಯ ವಿಭಜಿಸುವುದು ಬೇಡ. ಸ್ವಾಮೀಜಿಗಳು ಮನವೊಲಿಸುವ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುವ ಕೆಲಸ ನಾನು ಮಾಡುತ್ತಿದ್ದೇನೆ.ರಾಜ್ಯವನ್ನು ಒಡೆದಾಳುವುದ ಜೆಡಿಎಸ್ ಮುಖ್ಯ ಉದ್ದೇಶ, ಬೆಂಕಿ ಹಚ್ಚುವ ಕೆಲಸ ಮಡೊದೆ ಅಪ್ಪ ಮಕ್ಕಳ ಮಾಡುತ್ತಿದ್ದಾರೆ ಯಡಿಯೂರಪ್ಪ ಆರೋಪಿಸಿದ್ದಾರೆ.‌

ನಿವು ನನಗೆ ಓಟ್ ಕೊಟ್ಟಿಲ್ಲ ಸೌಲಭ್ಯ ಕೇಳುವ ಅಧಿಕಾರ ನಿಮಗಿಲ್ಲ ಎಂದು ಧಿಮಾಕಿನ, ಸೊಕ್ಕಿನ ಮಾತನಾಡುತ್ತಿದ್ದಾರೆ.ಕುಮಾರಸ್ವಾಮಿ ಆಡಿದ ಮಾತಿನ ಬಗ್ಗೆ ದೇವೇಗೌಡರು ಪ್ರತಿಕಿಯಿಸುತ್ತಿಲ್ಲ, ದೇವೇಗೌಡರ ಮೌನ ಕುಮಾರಸ್ವಾಮಿ ಹೇಳಿಕೆ ಸಮ್ಮತಿ ಸೂಚಿಸಿದಂತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕುಮಾರಸ್ವಾಮಿ ಸ್ವಾಮೀಜಿ ಗಳ ಮನವೊಲಿಸಬೇಕಿತ್ತು.

ಆದ್ರೆ, ಆ ಕೆಲಸ ಮಾಡದೆ ಅಣ್ಣತಮ್ಮಂದಿರಂತೆ ಇದ್ದವರ ಮಧ್ಯ ಜಗಳ ಹಚ್ಚುವ ಕೆಲಸ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯಕ್ಕೆ ಉತ್ತರ ಕರ್ನಾಟಕ ಕೊಡುಗೆ ದೊಡ್ಡದಿದೆ. ಚಿನ್ನ, ಅನ್ನ, ವಿದ್ಯುತ್ ಸೇರಿದಂತೆ ಉತ್ತರ ಕರ್ನಾಟಕದಿಂದ ಬರುತ್ತಿದೆ.ಕೇವಲ ಬೆಂಗಳೂರಿಂದ ಮಾತ್ರ ಆದಾಯ ಬರುತ್ತಿದೆ ಅನ್ನೊದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here