Home Elections 2019 ಯುಪಿಯಲ್ಲಿ ಸೈಕಲ್ ಏರಿ ಹೊರಟ ಆನೆ..! ಮೋದಿ ನಿದ್ದೆಗೆಡಿಸಲಿದೆ ಎಸ್ಪಿ-ಬಿಎಸ್ಪಿ ಮೈತ್ರಿ..! ತಲಾ 38 ಕ್ಷೇತ್ರಗಳಲ್ಲಿ...

ಯುಪಿಯಲ್ಲಿ ಸೈಕಲ್ ಏರಿ ಹೊರಟ ಆನೆ..! ಮೋದಿ ನಿದ್ದೆಗೆಡಿಸಲಿದೆ ಎಸ್ಪಿ-ಬಿಎಸ್ಪಿ ಮೈತ್ರಿ..! ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧಾರ..! ಮಹಾಘಟಬಂಧನದಿಂದ ಕಾಂಗ್ರೆಸ್ ಹೊರಕ್ಕೆ!

406
0
SHARE

ಉತ್ತರ ಪ್ರದೇಶ ಗೆದ್ದರೆ ದೇಶ ಗೆದ್ದಂತೆ ಅಂತಾರೆ ರಾಜಕೀಯ ಪಂಡಿತರು… ಇತಿಹಾಸ ಪುಟಗಳನ್ನು ತಿರುವಿ ಹಾಕಿ ನೋಡದ್ರೆ ಆ ಮಾತು ಅಕ್ಷರಷಃ ಸತ್ಯ ಕೂಡ… ಉತ್ತರ ಪ್ರದೇಶ ಗೆದ್ದು ದೇಶದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್, ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿವೆ.. ಈಗ ಯುಪಿಯಲ್ಲಿ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಬಿಟ್ಟು ರಾಜಕೀಯ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಅಸ್ತಿತ್ವಕ್ಕೆ ಹೋರಾಟ ನಡೆಸಬೇಕಾಗಿದೆ.

2019ರ ಲೋಕಸಮರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶದ ಮೇಲೆ ಬಹುತೇಕ ರಾಜಕೀಯ ಪಕ್ಷಗಳ ದೃಷ್ಟಿ ನೆಟ್ಟಿದೆ.. ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕಾದ್ರೆ ಅತಿ ಹೆಚ್ಚು ಅಂದ್ರೆ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರೋ ಯುಪಿ ಗೆಲ್ಲಲೇಬೇಕಾಗಿದೆ.. 2014ರಲ್ಲಿ 74 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈ ಬಾರಿ ಕೂಡ ಯುಪಿಯಲ್ಲಿ ಜಯಭೇರಿ ಬಾರಿಸಲು ರಣತಂತ್ರ ರೂಪಿಸುತ್ತಿದೆ… ಆದ್ರೆ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಎಸ್ಪಿ-ಬಿಎಸ್ಪಿ ಮಹಾಮೈತ್ರಿ ಮಾಡಿಕೊಂಡಿವೆ…

ಲಖನೌದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ಪಿ ಮುಖ್ಯಸ್ಥೆ ಮಾಯವತಿ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಉಭಯ ಪಕ್ಷಗಳ ಮೈತ್ರಿಗೆ ಅಂತಿಮ ಮುದ್ರೆ ಒತ್ತಿದ್ರು… 38 ಕ್ಷೇತ್ರಗಳಲ್ಲಿ ಬಿಎಸ್ಪಿ, 38 ಕ್ಷೇತ್ರಗಳಲ್ಲಿ ಎಸ್ಪಿ ಸ್ಪರ್ಧಿಸಲು ನಿರ್ಧರಿಸಿದ್ದು, ಎರಡು ಕ್ಷೇತ್ರಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿ ಮೈತ್ರಿಕೂಟದಿಂದ ಹೊರಗಿಟ್ಟಿದ್ದಾರೆ ಮಾಯಾವತಿ ಮತ್ತು ಅಖಿಲೇಶ್ ಯಾದವ್.

ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಪರೋಕ್ಷವಾಗಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಡಲಾಗಿದೆ. ಇದನ್ನು ಮಾಯಾವತಿ ಅವರು ಕಾಂಗ್ರೆಸ್ಸಿಗೆ ಕೊಟ್ಟ ಭಿಕ್ಷೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಇನ್ನೂ ಅಖಿಲೇಶ್ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎಸ್ಪಿ, ಬಿಎಸ್ಪಿ ಜೊತೆಯಾಗಿ ಎದುರಿಸಲಿದ್ದು, ದೇಶದಲ್ಲಿ ಹೊಸ ರಾಜಕೀಯ ಕ್ರಾಂತಿಯಾಗಲಿದೆ ಎಂದರು.

ಒಟ್ಟಾರೆ ಎಸ್ಪಿ-ಬಿಎಸ್ಪಿ ಮಹಾಮೈತ್ರಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಿದ್ದಗೆಡಿಸಿದೆ… ಆನೆ ಸೈಕಲ್ ಏರಿದ್ರೆ ಕಮಲ ಕಮರಿಹೋಗುವ ಭೀತಿ ಬಿಜೆಪಿ ನಾಯಕರಿಗೆ ಕಾಡಲಾರಂಭಿಸಿದೆ… ಮತ್ತೊಂದೆಡೆ ಯುಪಿಯಲ್ಲಿ ಅಸ್ತಿತ್ವ ಕಳೆದುಕೊಂಡಿರೋ ಕಾಂಗ್ರೆಸ್ ಇದೀಗ ಏಕಾಂಗಿಯಾಗಿ ಅಖಾಡಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ…

LEAVE A REPLY

Please enter your comment!
Please enter your name here