Home Crime ಯುವಕನನ್ನು ಕಾಡು ಹಂದಿ ಎಂದು ಭಾವಿಸಿ ಗುಂಡು ಹಾರಿಸಿದ ಬೇಟೆಗಾರ..?! ಗುಂಡೇಟಿಗೆ ಯುವಕ ಬಲಿ…

ಯುವಕನನ್ನು ಕಾಡು ಹಂದಿ ಎಂದು ಭಾವಿಸಿ ಗುಂಡು ಹಾರಿಸಿದ ಬೇಟೆಗಾರ..?! ಗುಂಡೇಟಿಗೆ ಯುವಕ ಬಲಿ…

758
0
SHARE

ಕೊಡಗು ಜಿಲ್ಲೆಯಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದೆ. ಇತ್ತೀಚೆಗೆ ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದ ಎಮ್ಮೆತ್ತಾಳು ಗ್ರಾಮದಲ್ಲಿ ಶೂಟೌಟ್ ನಡೆದಿದ್ದು, ಗುಂಡೇಟಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಬೇಟೆಗೆಂದು ತೆರಳಿದ್ದ ಸಂದರ್ಭ ಈ ಗುಂಡೇಟು ಪ್ರಕರಣ ನಡೆದಿದ್ದು, ಆಕಸ್ಮಿಕವಾಗಿ ಗುಂಡೇಟು ತಗುಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೊಡಗಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ಶೂಟೌಟ್ ಪ್ರಕರಣ ಇದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಕೊಡಗು ಇತ್ತೀಚೆಗೆ ಜಲಪ್ರಳಯಕ್ಕೆ ತುತ್ತಾಗಿ ಅಕ್ಷರಶಃ ತೊಳೆದು ಹೋಗಿರುವ ಜಿಲ್ಲೆ. ಆಗಸ್ಟ್‍ನಲ್ಲಿ ಕೊಡಗಿನಲ್ಲಿ ನಡೆದ ಆ ಮಹಾದುರಂತದಿಂದ ಇನ್ನು ಅಲ್ಲಿನ ಜನ ಚೇತರಿಸಿಕೊಂಡಿಲ್ಲ. ಮಹಾ ಮಳೆಯ ಎಫೆಕ್ಟ್ ಯಾವ ರೀತಿ ಅಲ್ಲಿನ ಜನರನ್ನ ಕಂಗಾಲಾಗಿಸಿತ್ತು ಅಂದ್ರೆ ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳೋದ್ರೆಲ್ಲೇ ಕೊಡಗಿನ ಮಂದಿ ನಿರತರಾಗಿದ್ದಾರೆ. ಹೀಗಿದ್ದು, ಕಳೆದೆರಡು ತಿಂಗಳು ಶಾಂತವಾಗಿದ್ದ ಕೊಡಗಿನಲ್ಲಿ ಮತ್ತೆ ಅಪರಾಧ ಪ್ರಕರಣಗಳು ತಲೆ ಎತ್ತುತ್ತಿವೆ.

ಒಂದೇ ತಿಂಗಳ ಅಂತರದಲ್ಲಿ ಮೂರು ಶೂಟೌಟ್ ಪ್ರಕರಣಗಳು ನಡೆದಿದ್ದು ಆತಂಕ ಸೃಷ್ಟಿ ಮಾಡಿದೆ. ಮಡಿಕೇರಿ ಸಮೀಪದ ಎಮ್ಮೆತ್ತಾಳು ಗ್ರಾಮದಲ್ಲಿ ಬೇಟೆಗೆಂದು ತೆರಳಿದ್ದ ರಂಜಿತ್ ಎಂಬ ವ್ಯಕ್ತಿ ತಮ್ಮದೇ ಸಂಬಂಧಿಕನ ಗುಂಡೇಟಿಗೆ ಬಲಿಯಾಗಿದ್ದಾನೆ.ಎಮ್ಮೆತ್ತಾಳು ಗ್ರಾಮದ ನಿವಾಸಿ ರಂಜಿತ್ ತನ್ನ ಸಂಬಂಧಿಕನಾದ ದಿನೇಶ್ ಎಂಬವರೊಡನೆ ಬೇಟೆಗೆ ತೆರಳಿದ್ದು ಎನ್ನಲಾಗಿದ್ದು, ಬೇಟೆಗೆ ಕಾದು ಕುಳಿತ್ತಿದ್ದ ಸಂದರ್ಭ ದಿನೇಶ್ ಕಾಡು ಹಂದಿ ಎಂದು ಭಾವಿಸಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ದಿನೇಶ್‍ನ ಬಂದೂಕಿನಿಂದ ಹಾರಿದ ಗುಂಡು ರಂಜಿತ್ ಎದೆ ಹೊಕ್ಕಿದ್ದು ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಈ ವಿಚಾರವನ್ನು ಸ್ವತಃ ದಿನೇಶ್ ತಮ್ಮ ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿದ್ದು, ನಂತರ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಡಿಕೇರಿ ಸುತ್ತ ಮುತ್ತ ಮೂರು ಗುಂಡೇಟು ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here