Home Crime ಯುವತಿಯನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಒಂದು ಮಗುವಿನ ತಂದೆಗೆ ಟಾರ್ಚರ್..! ವಿಚಿತ್ರ ಘಟನೆಗೆ ಬೆಚ್ಚಿದ ಮೈಸೂರು..!!

ಯುವತಿಯನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಒಂದು ಮಗುವಿನ ತಂದೆಗೆ ಟಾರ್ಚರ್..! ವಿಚಿತ್ರ ಘಟನೆಗೆ ಬೆಚ್ಚಿದ ಮೈಸೂರು..!!

560
0
SHARE

ಸಾಮಾನ್ಯವಾಗಿ ಹುಡುಗಿಯನ್ನ ಚುಡಾಯಿಸಿದ ಅನ್ನೋ ಕಾರಣಕ್ಕೆ ಹಿಗ್ಗಾ ಮುಗ್ಗಾ ಥಳಿಸೋದು ಸಾಮಾನ್ಯ . ಆದ್ರೆ ಇದಕ್ಕೆ ವಿರುದ್ದವಾದ ಪ್ರಕರಣವೊಂದು ನಡೆದಿದೆ. ಯುವತಿಯನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ತಾಲಿಬಾನ್ ರೀತಿಯಲ್ಲಿ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ದೇಶಾದ್ಯಂತ ಪುರುಷರು ಲೈಂಗಿಕ ಕಿರುಕುಳ ನೀಡಿದ್ರು ಎಂಬ ಕಾರಣಕ್ಕೆ ಮೀಟು ಅಭಿಯಾನ ನಡೆಯುತ್ತಿದ್ರೆ, ಮೈಸೂರಿನಲ್ಲಿ ಯುವತಿಯೇ ಯುವಕನ ಮೇಲೆ ದೌರ್ಜನ್ಯ ಮಾಡಿಸಿರುವ ಪ್ರಕರಣ ನಡೆದಿದೆ. ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಗೌಸ್ ಪಿರ್ ಎಂಬಾತದೌರ್ಜನ್ಯಕ್ಕೆ ಒಳಗಾಗಿದ್ದಾನೆ.

ಅಷ್ಟಕ್ಕೂ ಈ ದೌರ್ಜನ್ಯ ತಾಲಿಬಾನ್ ಮಾದರಿಯಲ್ಲಿ ನಡೆದಿದ್ದು, ಆತಂಕ ಉಂಟು ಮಾಡಿದೆ. ಗೌಸ್ ಪಿರ್ ಈಗಾಗಲೇ ಮದುವೆಯಾಗಿದ್ದು ಮಕ್ಕಳೂ ಕೂಡಾ ಇವೆ. ಅದ್ರೆ, ಈತನ ಮನೆ ಸಮೀಪದ ರೇಷ್ಮಾ ಎಂಬಾಕೆ ಗೌಸ್ ಪಿರ್ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿದ್ದಾಳೆ. ಅಲ್ಲದೆ ಎರಡನೇ ಮದುವೆಯಾಗುವಂತೆ ಪೀಡಿಸಿದ್ದಾಳೆ.

ಇದಕ್ಕೆ ಗೌಸ್ ಪಿರ್ ಒಪ್ಪದಿದ್ದಾಗ ಆಕೆ ಸಂಬಂಧಿಕರಾದ ಸಲೀಂ, ಮುಬಾಜರ್. ಇಮ್ರಾನ್, ಸಾಬು ಎಂಬುವರು ಹಲ್ಲೆ ಮಾಡಿದ್ದಾರೆ.ಯುವತಿ ವಿಚಾರವನ್ನು ಮರೆ ಮಾಚಲು ಗೌಸ್ ಪಿರ್ ಗೆ ಗಂಧದ ಮರ ಕಳವು ಮಾಡಲಾಗಿದೆ ಎಂಬ ಆರೋಪ ಹೊರಿಸಲಾಗಿದೆ. ಮೈಸೂರು ತಾಲೂಕು ವರುಣಾ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ದೌರ್ಜನ್ಯ ಮಾಡಲಾಗಿದ್ದು, ಈ ಬಗ್ಗೆ ನೊಂದ ಗೌಸ್ ಪಿರ್ ಈಗ ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಯುವತಿ ರೇಷ್ಮ ನೀಡುತ್ತಿದ್ದ ಟಾರ್ಚರ್ ಗೆ ಗೌಸ್ ಪಿರ್ ಪತ್ನಿಯೇ ಸಾಕ್ಷಿಯಾಗಿದ್ದಾಳೆ.ಎಲ್ಲೆಡೆ ಯುವಕರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ ಮಾತು ಕೇಳಿಬರುತ್ತಿರುವ ವೇಳೆಯಲ್ಲಿ , ಯುವಕರಿಗಿಂತ ನಾವೇನೂ ಕಮ್ಮಿ ಎಂಬಂತೆ ಯುವತಿಯರೂ ಕೂಡ ಟಾರ್ಚರ್ ಕೊಡಲು‌ ಮುಂದಾಗಿದ್ದಾರೆ. ಸದ್ಯ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here