Home Crime ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬ್ಲಾಕ್ ಮೇಲ್.. ಬದುಕನ್ನೇ ಕತ್ತಲಾಗಿಸಿದ ಪಬ್ ಜಿ ಗೇಮ್...

ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬ್ಲಾಕ್ ಮೇಲ್.. ಬದುಕನ್ನೇ ಕತ್ತಲಾಗಿಸಿದ ಪಬ್ ಜಿ ಗೇಮ್ ಪಾರ್ಟನರ್..

928
0
SHARE

ಅವರಿಬ್ಬರು ಪಬ್ ಜಿ ಗೇಮ್ ಪಾರ್ಟನರ್, ಆದ್ರೆ ಆಕೆಗೆ ಈ ಗೇಮ್ ನ ಪಾರ್ಟನರನೇ ಒಂದು ದಿನ ತನ್ನ ಪಾಲಿಗೆ ವಿಲನ್ ಆಗ್ತಾನೇ ಎಂಬ ಚಿಕ್ಕ ಕಲ್ಪನೆಯು ಆಕೆಗೆ ಇರಲಿಲ್ಲ. ಆಟದ ಮೂಲಕ ಪರಿಚಯವಾದವನು ಯುವತಿಯ ಬಾಳಿನೊಂದಿಗೆ ಆಟವಾಡಿ, ಆಕೆಯ ಬದುಕನ್ನು ಕತ್ತಲಾಗಿಸಿದ್ದಲ್ಲದೇ, ತಾನು ಕೂಡ ಪೋಲಿಸರ ಅತಿಥಿಯಾಗಿದ್ದಾನೆ. ಇಂದಿನ ಯುವ ಸಮೂಹವನ್ನ ತನ್ನತ್ತ ಆಕರ್ಷಿಸಿಕೊಂಡು ಹುಚ್ಚೆದ್ದು ಕುಣಿಯುವಂತೆ ಮಾಡಿದೆ‌ ಈ ಪಬ್ ಜಿ ಎಂಬ ಗೇಮ್.

ಈ ಆನ್ ಲೈನ್ ಗೇಮ್‌ನ್ನು ಯಾರ ಜೊತೆಗಾದ್ರು‌ ಆಡಬಹುದು. ಬೆಳಗಾವಿ ಯುವತಿಯು ಕೂಡ ಪಬ್ ಜಿ ಗೇಮ್ ಗೆ ಅಡಿಕ್ಟ್‌ ಆಗಿ ಗುಜರಾತ್ ಮೂಲದ ಯುವಕನೊಂದಿಗೆ ಪಾರ್ಟನರ್ ಆಗಿ ಗೇಮ್ ಆಡ್ತಿದ್ಲು. ಈ ಗೇಮ್ ಮೂಲಕ ಪರಿಚಯವಾದ ಇಬ್ಬರು ಮೊಬೈಲ್ ನಂ ಎಕ್ಸ್ಚೇಂಜ್ ಮಾಡಿಕೊಂಡು ಪರಸ್ಪರ ಚಾಟಿಂಗ್, ಕಾಲಿಂಗ್ ಅಂತ ಲವ್ವಿ-ಡವ್ವಿ ಶುರುವಿಟ್ಟುಕೊಂಡಿದ್ರು. ಯುವತಿಯನ್ನ ಮರಳು ಮಾಡಿದ್ದ 24 ವರ್ಷದ ಪಾಪಿ ಮಿಥುಲ್ ಕಾನ್ಸಾರಾ ತಾನು ತನ್ನ ಊರು ಮುಂಬೈ ತನಗೆ 3 ಲಕ್ಷ ಸಂಬಳವಿದೆ ಅಂತೆಲ್ಲ ಬುರುಡೆ ಬಿಟ್ಟಿದ್ದ. ಈತನ ಸಂಬಳ, ಮಾತು ಕೇಳಿ ಬೆಳಗಾವಿಯ ಹುಡುಗಿ ಕೂಡ ಯಾಮಾರಿ ಹೋಗಿದ್ಲು.

ಈ ಮಧ್ಯೆ ಕಾಮುಕ ಮಿಥುಲ್ ಮುಂಬೈಗೆ ಬರುವಂತೆ ಒತ್ತಾಯಿಸಿದ್ದ. ಈತನ ಮಾತು ನಂಬಿ ಹೋಗಿದ್ದ ಯುವತಿ ಆ ಪಾಪಿಯೊಂದಿಗೆ ಎರಡು ದಿನ ಲಾಡ್ಜ್ ನಲ್ಲಿ‌ದ್ದಳು. ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಮಿಥುಲ್ ಆಕೆಗೆ ಗೊತ್ತಾಗದಂತೆ ಚಿತ್ರಿಕರಿಸಿಕೊಂಡಿದ್ದ.ಯುವತಿ ಮುಂಬೈನಿಂದ ಹಿಂದುರಿಗಿದ ಬಳಿಕ ಯುವತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡ ಪಾಪಿ ಮಿಥುಲ್ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು‌ ಶುರುಮಾಡಿದ್ದ. ಯುವತಿ ಹಣ ನೀಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಪಾಪಿ ಮಿಥುಲ್ ಯುವತಿಯ ಸ್ನೇಹಿತರ ಫೇಸ್ ಬುಕ್ ಗೆ ಅಶ್ಲೀಲ ಪೋಟೊಗಳನ್ನ ಟ್ಯಾಗ್ ಮಾಡಿದ್ದಾನೆ.

ಕೂಡಲೇ ಸ್ನೇಹಿತರು ಯುವತಿಗೆ ವಿಷಯ ತಿಳಿಸಿದ್ದರಿಂದ ಗಾಬರಿಗೊಂಡ ಯುವತಿ ಮನೆಯವರಿಗೆ ವಿಷಯ ತಿಳಿಸಿ, ಬೆಳಗಾವಿ ಪೋಲಿಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ಪ್ರಕರಣ ಜವಾಬ್ದಾರಿ ಹೊತ್ತ ಸಿಸಿಬಿ ಪೋಲಿಸರು ಗುಜರಾತ್ ಮೂಲದ ಮಿಥುಲ್ ಕಾನ್ಸಾರಾನನ್ನ ಬಂಧಿಸಿದ್ದಾರೆ.ಸಾಮಾಜಿಕ ಜಾಲತಾಣಗಳ ಮೂಲಕ ನಂಬಿ ಮೋಸ ಹೋಗಿರುವವರ ಸಾಕಷ್ಟು ಘಟನೆಗಳು ಕಣ್ಮುಂದ್ರೆ ಇದ್ರು ಕೂಡ ಇನ್ನೂ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕವೇ ಮೋಸಹೋಗುತ್ತಿರುವುದು ದುರಂತವೇ ಸರಿ.

 

LEAVE A REPLY

Please enter your comment!
Please enter your name here