ಸ್ಯಾಂಡಲ್ವುಡ್ನಲ್ಲಿ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿ ಬಿಗ್ ಫೈಟ್ ಕ್ರಿಯೆಟ್ ಆಗಲಿದೆ. ಯಂಗ್ ನಟನೊಬ್ಬ ಹಳೆ ಹುಲಿಗೆ ಟಕ್ಕರ್ ಕೊಡೋಕೆ ಸಿದ್ಧನಾಗಿರುವ ವಿಷಯ ಕೇಳಿ ಗಾಂಧಿನಗರ ಅಲ್ಲಾಡಿಹೋಗಿದೆ. ಈ ಸಿನಿಮಾ ಕುಸ್ತಿಯಲ್ಲಿ ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋ ಲೆಕ್ಕಚಾರ ಶುರುವಾಗಿಹೋಗಿದೆ.ನಿಖಿಲ್ ಕುಮಾರ್ ಸ್ವಾಮಿ. ಸ್ಯಾಂಡಲ್ವುಡ್ನ ಯುವರಾಜಾ. ಬೆಳ್ಳಿಗ್ಗೆಯೆಲ್ಲಾ ಕುರುಕ್ಷೇತ್ರ.. ರಾತ್ರಿಯೆಲ್ಲಾ ಸೀತಾರಾಮ ಕಲ್ಯಾಣದ ಧ್ಯಾನವನ್ನ ಮಾಡ್ತಿರುವ ಬ್ರದರ್ ಪುತ್ರ ನಿಖಿಲ್ ಇದೀಗ ದೊಡ್ಮನೆಯ ಮುಂದೆ ತೊಡೆ ತಟ್ಟಿ ನಿಲ್ಲುವ ನಿರ್ಧಾರಕ್ಕೆ ಬಂದಿದ್ದಾರೆ. ಅದು, ಗಲ್ಲಾಪೆಟ್ಟಿಗೆಯಲ್ಲಿ.
ಯಸ್, ಚಿತ್ರಮಂದಿರದ ಅಂಗಳದಲ್ಲಿ ನಟಸಾರ್ವಭೌಮನಿಗೆ ಸೀತಾರಾಮ ಕಲ್ಯಾಣ ಮುಖಾಮುಖಿಯಾಗಲಿದೆ. ಹೀಗೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.ಯಸ್, ಮೊನ್ನೆಯಷ್ಟೇ ನಟಸಾರ್ವಭೌಮನ ಬಿಡುಗಡೆಯ ದಿನವನ್ನ ಲಾಕ್ ಮಾಡಲಾಗಿತ್ತು. ಚಿತ್ರಮಂದಿರಗಳಲ್ಲಿ ಎಂಟ್ರಟೈನ್ಮೆಂಟ್ನ ಪವರ್ ಸಪ್ಲೈ ಇದೇ ಜನವರಿ ೨೪ಕ್ಕೆ ಆಗಲಿದೆ ಅನ್ನುವ ಸುದ್ದಿ, ಪವರ್ ಸ್ಟಾರ್ ಫ್ಯಾನ್ಸ್ಗೆ ಇನ್ನಿಲ್ಲದ ಖುಷಿ ತಂದು ಕೊಟ್ಟಿತ್ತು.ಇದೀಗ, ಸೀತಾರಾಮ ಕಲ್ಯಾಣ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡಲಾಗಿದೆ. ಗಣರಾಜ್ಯೋತ್ಸವ ದಿನದ ಪ್ರಯುಕ್ತ, ಸೀತಾರಾಮ ಕಲ್ಯಾಣ ಮಾಡಿಯೇ ಬಿಡುವ ತೀರ್ಮಾನಕ್ಕೆ ಬರಲಾಗಿದೆ. ಅಲ್ಲಿಗೆ ವರ್ಷದ ಆರಂಭದಲ್ಲೇ ಬಾಕ್ಸಾಫೀಸ್ ವಾರ್ಗೆ ವೇದಿಕೆಯನ್ನ ನಿರ್ಮಿಸಿದಂತಾಗಿದೆ.
ನಿಮಗೆ ಗೊತ್ತಿರಲಿ, ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮನ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳೂ ಗಾಂಧಿನಗರಕ್ಕಿವೆ. ಅದ್ರಲ್ಲೂ ನಿಖಿಲ್ ಹಾಗೂ ಸಿ,ಎಂ. ಕುಮಾರಸ್ವಾಮಿಯವ್ರಿಗಂತೂ ಸೀತಾರಾಮನ ಮೇಲೆ ಇನ್ನಿಲ್ಲದ ಕಾನ್ಫಿಡೆನ್ಸ್ ಇದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕುಮಾರಣ್ಣ.. ಸೀತಾರಾಮ ಕಲ್ಯಾಣ, ಇತಿಹಾಸ ನಿರ್ಮಿಸಿಯೇ ನಿರ್ಮಿಸುತ್ತೆ ಕಣ್ಣಣ್ಣ ಅನ್ನುವ ಭವಿಷ್ಯವನ್ನೂ ತುಂಬಾ ಹಿಂದೇನೇ ಹೇಳಿಯಾಗಿದೆ.ಕುಮಾರಣ್ಣ ನುಡಿದ ಭವಿಷ್ಯ, ಸೀತಾರಾಮ ಕಲ್ಯಾಣದ ಮೇಲಿನ ಎಕ್ಸ್ಫೆಕ್ಟೆಶನ್ಸ್ನ್ನೂ ಇಮ್ಮಡಿಗೊಳಿಸಿದೆ. ಹಾಗಾಗೇ, ನಿಖಿಲ್ ಜಾದೂ ನೋಡಲು ಕಾಯುತ್ತಾ ಕುಂತಿರುವ ಅಭಿಮಾನಿಗಳಲ್ಲಿ ಸಿನಿಮಾ ನೋಡುವ ತವಕ ಮೊದಲಿಂದನೂ ತುಸು ಹೆಚ್ಚೇ ಇದೆ. ಇದೇ ತವಕದ ಫಲವೆನ್ನುವಂತೆ..
ಮೊದಲ ದಿನ ನೂಕುನುಗ್ಗಲು ನಡೆಯೋದು ಪಕ್ಕಾ ಅನ್ನುವ ಮಾತುಗಳು ಕೇಳಿ ಬರ್ತಿವೆ. ಹೀಗಿರುವಾಗ್ಲೇ, ನಟಸಾರ್ವಭೌಮನ ಅಂಗಳದಲ್ಲಿ ಸೀತಾರಾಮ ಕಲ್ಯಾಣ ಮಾಡುವ ನಿರ್ಧಾರ, ಅನೇಕರ ಹುಬ್ಬನ್ನೂ ಏರಿಸಿದೆ.ಅಂದ ಹಾಗೇ, ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡ್ತಿರುವ ಸುದ್ದಿಯ ಪ್ರಕಾರ, ಒಂದ್ವೇಳೆ.. ಸೀತಾರಾಮ ಕಲ್ಯಾಣ & ನಟಸಾರ್ವಭೌಮ, ಬಾಕ್ಸಾಫೀಸಿನಲ್ಲಿ ಮುಖಾಮುಖಿಯಾಗಿದ್ದೇ ಆದಲ್ಲಿ, ಜನವರಿ ೨೪ ರಚಿತಾ ರಾಮ್ ಜೀವನದ ಮಹತ್ವದ ದಿನವಾಗಲಿದೆ. ಕಾರಣ, ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮ ಎರಡರಲ್ಲೂ ಡಿಂಪಲ್ ಕ್ವೀನ್ ಗ್ಲ್ಯಾಮರ್ ಇದೆ.ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮದಲ್ಲಿ, ಪವರ್ ಸ್ಟಾರ್ ಪುನೀತ್ ಫೋಟೊ ಜರ್ನಲಿಸ್ಟ್ ಪಾತ್ರದಲ್ಲಿದ್ದಾರೆ.
ಇತ್ತ, ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣದಲ್ಲಿ ನಿಖಿಲ್ ಪಕ್ಕಾ ದೇಸಿ ಹುಡುಗನಾಗಿ ಕಾಣಸಿಗಲಿದ್ದಾರೆ. ಇನ್ನೂ.. ಎರಡು ಸಿನಿಮಾಗಳಲ್ಲೂ ಆಕ್ಷನ್ ಸಿಕ್ವನ್ಸ್ಗಳಿಗೆ ಕಮ್ಮಿ ಇಲ್ಲ. ಈ ಅರ್ಥದಲ್ಲಿ ಆಕ್ಷನ್ ಪ್ರಿಯರಿಗೆ ಜನವರಿ ೨೪ಕ್ಕೆ ಡಬಲ್ ಧಮಾಕಾ ಸಿಗುವದು ಪಕ್ಕಾ. ಬಾಕ್ಸಾಫೀಸಿನಲ್ಲಿ ಬಹುದೊಡ್ಡ ಹಣಾಹಣಿ ನಡೆಯೋದು ಪಕ್ಕಾ.ಅದೇನೆ ಇರ್ಲಿ, ಸದ್ಯ ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮ ಬಾಕ್ಸಾಫೀಸಿಗೆ ಒಟ್ಟೊಟ್ಟಿಗೆ ಬೆಂಕಿ ಇಡಲು ಸಿದ್ಧವಾಗಿವೆ. ಇದೇ ಬೆಂಕಿಯ ಬಲೆಗೆ ಕೋಟಿಗಳೂ ಯಾವ ಲೆಕ್ಕದಲ್ಲಿ ಲೂಟಿಯಾಗಲಿವೆ ಅನ್ನುವ ಪ್ರಶ್ನೆನೂ ಎದ್ದಿದೆ. ಇದ್ರ ನಡುವೆ.. ಯಾವ ಸಿನಿಮಾಗೆ, ಪ್ರೇಕ್ಷಕರ ಜೈಕಾರ ಹಾಗೂ ಹೂವಿನ ಹಾರ ಬೀಳುತ್ತೆ ಅನ್ನುವ ಚರ್ಚೆನೂ ಗಾಂಧಿನಗರದ ಕಾನಿಷ್ಕ ಅಂಗಳದಲ್ಲಿ ಶುರುವಾಗಿದೆ.