Home Crime “ಯೋಧರ ಬಲಿದಾನ ವ್ಯರ್ತವಾಗಲು ಬಿಡಲ್ಲ. ಪ್ರತೀಕಾರ ತೀರಿಸಿಕೊಳ್ಳದೇ ಸುಮ್ಮನಿರಲ್ಲ” ರಕ್ತ ಪಿಪಾಸು ಭಯೋತ್ಪಾದಕರಿಗೆ ಪ್ರಧಾನಿ ಎಚ್ಚರಿಕೆ..!

“ಯೋಧರ ಬಲಿದಾನ ವ್ಯರ್ತವಾಗಲು ಬಿಡಲ್ಲ. ಪ್ರತೀಕಾರ ತೀರಿಸಿಕೊಳ್ಳದೇ ಸುಮ್ಮನಿರಲ್ಲ” ರಕ್ತ ಪಿಪಾಸು ಭಯೋತ್ಪಾದಕರಿಗೆ ಪ್ರಧಾನಿ ಎಚ್ಚರಿಕೆ..!

2848
0
SHARE

ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮದಲ್ಲಿ ಸಿಆರ್‌ಪಿಎಫ್ ನ 42 ಯೋಧರ ಬಲಿ ಪಡೆದ ಭಯೋತ್ಪಾದಕರು ರಣಕೇಕೆ ಹಾಕಿದ್ದಾರೆ. ಪಾಕಿಸ್ತಾನ ಕೃಪಾಪೋಷಿತ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿ ಹೊಣೆ ಹೊತ್ತಿಕೊಂಡಿದೆ.

ರಕ್ತದ ಕೋಡಿ ಹರಿಸಿರೋ ಪಾಕಿಸ್ತಾನ ಮೂಲದ ಈ ಉಗ್ರ ಸಂಘಟನೆಗೆಳ ತಕ್ಕ ಪಾಠ ಕಲಿಸಲು ಭಾರತ ಪಣತೊಟ್ಟಿದೆ. ಭದ್ರತಾ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸಭೆಯಲ್ಲಿ ಉಗ್ರರ ದಾಳಿಯ ಬಗ್ಗೆ ಪರಾಮರ್ಶೆ ಮಾಡಲಾಯ್ತು.ಬಳಿಕ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ದಾಳಿ ಹೊಣೆ ಹೊತ್ತವರು ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂದು ವಾರ್ನ್ ಮಾಡಿದರು.ಭಯೋತ್ಪಾದಕರ ಧಮನಕ್ಕಾಗಿ ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಪ್ರಧಾನಿ ಘೋಷಿಸಿದರು..ಜನರ ರಕ್ತ ಕುದಿಯುತ್ತಿದ್ದು, ಭಯೋತ್ಪಾದನೆ ಹಿಂದಿರೋ ಶಕ್ತಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಅತ್ತ ಉತ್ತರ ಪ್ರದೇಶದ ಜಾನ್ಸಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ವಿರುದ್ಧ ಕಿಡಿಕಾರಿದರು.

ಭಯೋತ್ಪಾದಕರ ದಾಳಿಯಿಂದಾಗಿ 42 ಮಂದಿ ಸಿಆರ್‌ಪಿಎಫ್ ಯೋಧರ ಸಾವಿನಿಂದ ಇಡೀ ಭಾರತ ದುಃಖದ ಕಡಲಿನಲ್ಲಿ ಮುಳುಗಿದೆ. ವೀರಯೋಧರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದೇಶದ 130 ಕೋಟಿ ಭಾರತೀಯರಿಗೆ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.ಪಾಕ್ ಪ್ರಾಯೋಜಕತ್ವದಲ್ಲಿ ಜೈಷ್-ಇ- ಮೊಹಮ್ಮದ್ ಉಗ್ರ ಸಂಘಟನೆ ಈ ದುಷ್ಕೃತ್ಯವಸೆಗಿದೆ.

ಭಾರತ ಪ್ರತೀಕಾರ ತೀರಿಸಿಕೊಳ್ಳಲು ಬೇಕಾದಂತಹ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಎಂದು ತಿಳಿಸಿದ್ದಾರೆ.ಇದೇ ವೇಳೆ ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಈ ವಿಷಯ ತಿಳಿಸಿದ್ದಾರೆ.

ಭಯೋತ್ಪಾದನೆಯ ಅರ್ಥವನ್ನು ಪುನರ್ ವ್ಯಾಖ್ಯಾನಿಸಲು ಎಂಇಎ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ತೊಡಗಿಸಲಿದೆ. ದೇಶದ ಭದ್ರತೆ ಕಾಪಾಡಿಕೊಳ್ಳುವದನ್ನು ಖಾತರಿ ಪಡಿಸಲು ಭದ್ರತಾ ಪಡೆಗಳು ಎಲ್ಲಾ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲಿ ಎಂದಿದ್ದಾರೆ.42 ಯೋಧರ ರಕ್ತ ಹೀರಿದ ಭಯೋತ್ಪಾದಕರನ್ನು ಮಟ್ಟಹಾಕಲು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕೆಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.

ಭಾರತದಲ್ಲಿ ಮತ್ತೆ ವಿಧ್ವಂಸಕ ಕೃತ್ಯವೆಸಗದಂತೆ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕೆಂಬ ಒತ್ತಾಯ ಬಲವಾಗಿ ವ್ಯಕ್ತವಾಗುತ್ತಿದೆ. ಹೀಗಾಗಿ ಮೋದಿ ಸರ್ಕಾರ ಯಾವ ನಿಲುವ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here