Home KARNATAKA ರಕ್ಷಣೆಗಾಗಿ ಹೆಲ್ಮೆಟ್ ಧರಿಸೋದು ಕಡ್ಡಾಯ, ಆದರೆ ಹೆಲ್ಮೆಟ್ ಇವನ ಪಾಲಿಗೆ ಯಮಸ್ವರೂಪಿಯಾಗಿದ್ದು ಹೇಗೆ ಗೊತ್ತಾ..??!

ರಕ್ಷಣೆಗಾಗಿ ಹೆಲ್ಮೆಟ್ ಧರಿಸೋದು ಕಡ್ಡಾಯ, ಆದರೆ ಹೆಲ್ಮೆಟ್ ಇವನ ಪಾಲಿಗೆ ಯಮಸ್ವರೂಪಿಯಾಗಿದ್ದು ಹೇಗೆ ಗೊತ್ತಾ..??!

2762
0
SHARE

ಕಂಬಕ್ಕೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟ ಕೆಟಿಎಂ ರೈಡರ್, ಆತ ಸಾಫ್ಟ್ ವೇರ್ ಇಂಜಿನಿಯರ್. ವಿಕೆಂಡ್ ಅಂತ ಸ್ನೇಹಿತರೊಂದಿಗೆ ರಾತ್ರಿ ಹೊರ ಹೋಗಿದ್ದ. ಸ್ನೇಹಿತರೊಂದಿಗೆ ರಾತ್ರಿ ಇಡೀ ಸಿಟಿ ರೌಂಡ್ಸ್ ಮುಗಿಸಿಕೊಂಡು ಮುಂಜಾನೆ ಮನೆಯತ್ತ ಪ್ರಯಾಣ ಬೆಳೆಸಿದ್ದ. ಆದ್ರೆ, ಅತಿಯಾದ ಸ್ಪೀಡ್ ಗೆ ಬ್ರೇಕ್ ಹಾಕಿದ ವಿಧಿ. ಆತನ ಪ್ರಾಣ ಪಕ್ಷಿಯನ್ನ ಜೊತೆಯಲ್ಲಿ ಕರೆದೊಯ್ದಿದ್ದಾನೆ…

ಸಾಫ್ಟ್ ವೇರ್ ಇಂಜಿನಿಯರ್ ಪ್ರಾಣ ತೆಗೆದ ಹೆಲ್ಮೆಟ್.ಸಂಚಾರಿ ಪೊಲೀಸ್ರು ದಿನೇ ದಿನೇ ಬೈಕ್ ಸವಾರರಿಗೆ ಹೆಲ್ಮೆಟ್ ಹಾಕ್ಕೊಂಡು ಗಾಡಿ ಓಡ್ಸಿ ಎಂದು ಹೇಳಿದ್ರು ಮಾತು ಕೇಳದ ವಾಹನ ಸವಾರರು ಹೇರ್ ಸ್ಟೈಲ್ ಹಾಳಾಗುತ್ತೆ ಎಂದು ಹೆಲ್ಮೆಟ್ ಹಾಕದೆ ಓಡಾಡ್ತಾರೆ, ಆದ್ರೆ ಇಲ್ಲಿ ಹೆಲ್ಮೆಟ್ ಹಾಕ್ಕೊಂಡು ಬೈಕ್ ಓಡಿಸ್ತಿದ್ದ ವಾಹನ ಸವಾರನೊಬ್ಬ ಆಕ್ಸಿಂಡೆಂಟ್ ಆಗಿ ಸಾವನ್ನಪ್ಪಿದ್ದಾನೆ…

ಅರೆರೇ ಇದೇನಪ್ಪ ಹೆಲ್ಮೆಟ್ ಹಾಕ್ಕೊಂಡ್ರು ಹೇಗೆ ಸಾವನ್ನಪ್ಪಿದ್ದಾನೆ ಅಂತ ಯೋಚಿಸ್ತಿದ್ದೀರಾ. ಜಾಸ್ತಿ ಯೋಚಿಸ್ಬೇಡಿ ಹೆಲ್ಮೆಟ್ ನಿಂದ ಬಾಳಿ ಬದುಕಬೇಕಾದ ಸಾಫ್ಟ್ ವೇರ್ ಇಂಜಿನಿಯರ್ ಪ್ರಾಣ ಪಕ್ಷಿ ಹಾರಿಯೋಯ್ತು..??ಈತನ ಹೆಸ್ರು ನಿತಿನ್ ಗಣಪತಿ. ಮೂಲತಃ ಮಡಿಕೇರಿಯವ್ರು. ಸುಮಾರು ವರ್ಷಗಳಿಂದ ಬೆಂಗಳೂರಿನ ಹೆಬ್ಬಾಳ ದಾಸರಹಳ್ಳಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ…

ನಿನ್ನೆ ಮಧ್ಯಾಹ್ನ ತನ್ನ ಸ್ನೇಹಿತರನ್ನ ಭೇಟಿ ಮಾಡಲು ತನ್ನ ಕೆಟಿಎಂ ಬೈಕನ್ನೇರಿ ಮನೆಯಿಂದ ಹೊರಟಿದ್ದ.ಹಾಗೆ ಹೊರಟಿದ್ದ ನಿತಿನ್ ಗಣಪತಿ ತಡರಾತ್ರಿವರೆಗೂ ಸ್ನೇಹಿತರೊಂದಿಗಿದ್ದು, ಮುಂಜಾನೆ ಮನೆ ಕಡೆ ಹೊರಟಿದ್ದ. ಆ ವೇಳೆ ಕಲ್ಯಾಣನಗರ ಹಂಡ್ರೆಡ್ ಫೀಟ್ ರೋಡ್ ನ ಮಾಣಿಕ್ಯ ಜ್ಯುವೆಲರ್ಸ್ ಮುಂಭಾಗ ವೇಗವಾಗಿ ಬಂದಿದ್ದು, ಕಂಟ್ರೋಲ್ ತಪ್ಪಿ ಡಿವೈಡರ್ ಮುಂದೆ ಇದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆ ವೇಳೆ ನಿತಿನ್ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ…

ಆ ಅಪಘಾತದ ದೃಶ್ಯಗಳು ಮಾಣಿಕ್ಯ ಜ್ಯುವೆಲ್ಲರ್ಸ್ ಶಾಪ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಗೆ ಹಾಕಿಕೊಳ್ಳಬೇಕಾದ ಹೆಲ್ಮೆಟ್ ನ್ನ ಕೈಲಿಡಿದುಕೊಂಡು ಸವಾರಿ ಮಾಡ್ತಿದ್ದು, ಟರ್ನಿಂಗ್ ನಲ್ಲಿ ಹೆಲ್ಮೆಟ್ ಹ್ಯಾಂಡಲ್‌ಗೆ ತಾಕಿದ್ರಿಂದ ಬೈಕ್ ನ ಕಂಟ್ರೋಲ್ ತಪ್ಪಿ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಟ್ರಾಫಿಕ್ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ…

 

LEAVE A REPLY

Please enter your comment!
Please enter your name here