ಪ್ರೇಮ್.. ಪ್ರೇಮ್.. ಪ್ರೇಮ್.. ನಿಮಗ್ಯಾರು ಸಾಟಿ. ಇಂಥಹದ್ದೊಂದು ಮಾತುಗಳೂ ಇದೀಗ ಮತ್ತೆ ಕೇಳಿ ಬರ್ತಿವೆ. ಕಾರಣ, ಪ್ರೇಮ್ ಮತ್ತೆ ಬಂದಿದ್ದಾರೆ. ಅಖಾಡಕ್ಕಿಳಿದಿದ್ದಾರೆ.ಯಸ್, ಪ್ರೇಮ್.. ನಯಾ ಸಿನಿಮಾ ಶುರುವಾಗಿದೆ. ಹೌದು, ದಿ ವಿಲನ್ ಚಿತ್ರದ ಬಳಿಕ ಪ್ರೇಮ್ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ.
ತಮ್ಮ ಭಾಮೈದನಿಗಾಗಿ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಇದಕ್ಕೆ.. ಇತ್ತೀಚಿಗೆ ಮುನ್ನುಡಿ ಬರೆದ ಪ್ರೇಮ್, ಪತ್ನಿ ರಕ್ಷಿತಾ ಹುಟ್ಟು ಹಬ್ಬದ ಪ್ರಯುಕ್ತ.. ಅದ್ಧೂರಿಯಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ರು. ಭಾಮೈದ ಅಭಿಷೇಕ್ನನ್ನ ರಾಣಾವನ್ನಾಗಿಸಿ ಎಲ್ಲರಿಗೂ ಪರಿಚಯಿಸಿದ್ರು
ಏಕ್ ಲವ್ ಯಾ.. ಇದು, ಪ್ರೇಮ್ ನಿರ್ದೇಶನದ ಮುಂದಿನ ಸಿನಿಮಾದ ಟೈಟಲ್. ಯಸ್, ಹೆಸರೇ ಹೇಳುವಂತೆ.. ಇದು, ಪಕ್ಕಾ ಲವ್ ಸ್ಟೋರಿ.
ಅದು, ಇಂದಿನ ದಿನಗಳಲ್ಲಿ ನಡೆಯುವ ಪ್ರೇಮ್ ಕಹಾನಿ. ಇದಕ್ಕೆ ಕೈಗನ್ನಡಿ ಅನ್ನುವಂತೆ ಚಿತ್ರದ ಫಸ್ಟ್ ಲುಕ್ ರೆಡಿ ಮಾಡಿರುವ ಪ್ರೇಮ್, ಆಗ್ಲೇ.. ನಿರೀಕ್ಷೆಗಳನ್ನ ಹುಟ್ಟುಹಾಕುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.ಯಸ್, ವೀಟೆಂಜ್ ಕಾರಿನ ಮೇಲೆ ಕುಂತ ರಕ್ಷಿತಾ ಸಹೋದರನ ಸ್ಟೈಲು, ಹಿಂದೆ.. ಕೇಳಿ ಬರುವ ಹಾಡು.. ಸದ್ಯ, ಪ್ರೇಮ್ ಭಕ್ತಗಣಕ್ಕೆ ವಿಪರೀತ ಕಿಕ್ ಕೊಡ್ತಿದೆ. ಬಹುಶ, ಇದೇ ಕಾರಣಕ್ಕೋ ಏನೋ ಪ್ರೇಮ್ ಬಗ್ಗೆ ಗುಣಗಾನ ನಡೆಯುತ್ತಿದೆ.
ಯಾರೇ ಬಂದ್ರೂ ಪ್ರೇಮ್ಗೆ ಸಾಟಿ ಇಲ್ಲ ಬಿಡಿ ಬಾಸ್ ಅನ್ನುವ ಮಾತುಗಳೂ ಗಾಂಧಿನಗರದ ಗಲ್ಲಿಗಳಲ್ಲೂ ಕೇಳಿ ಬರ್ತಿವೆ.ಅಂದ ಹಾಗೇ.. ಆಫ್ಟರ್ ದಿ ವಿಲನ್ ಮತ್ತೊಮ್ಮೆ ನಿರ್ದೇಶಕನ ಕುರ್ಚಿ ಮೇಲೆ ಕುಂತಿರುವ ಪ್ರೇಮ್, ಏಕ್ ಲವ್ ಯಾ ಸಿನಿಮಾ ಮೂಲಕ ಹೇಳಲು ಹೊರಟಿರೋದಾದ್ರೂ ಏನು.. ಚಿತ್ರದ ಕಥೆ ಏನು.. ಇಂಥಹದ್ದೊಂದು ಸಹಜ ಕೂತುಹಲಗಳಿಗೆ ಪ್ರೇಮ್ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡ್ತಾರೆ.ಏಕ್ ಲವ್ ಯಾ ಮೂಲಕ ಗಾಂಧಿನಗರಕ್ಕೆ ಪರಿಚಯವಾಗ್ತಿರುವ ರಕ್ಷಿತಾ ಸಹೋದರ ಅಭಿಷೇಕ್, ಇಲ್ಲಿ ರಾಣಾ ಆಗಿ ಬದಲಾಗಿದ್ದಾರೆ.
ಆಕ್ಟಿಂಗು.. ಫೈಟಿಂಗು.. ಡ್ಯಾನ್ಸು.. ಎಲ್ಲದ್ರಲ್ಲೂ ಪಳಗಿರುವ ಅಭಿಷೇಕ್ ಅಲಿಯಾಸ್ ರಾಣಾ, ನ್ಯೂಯಾರ್ಕ್ನಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಇಂಥ, ರಾಣಾ.. ತುಂಬು ನಿರೀಕ್ಷೆಗಳನ್ನೊತ್ತು, ಕನಸನ್ನೊತ್ತು ಇದೀಗ ಅಖಾಡಕ್ಕಿಳಿತಿದ್ದಾರೆ. ಕನ್ನಡ ಪ್ರೇಕ್ಷಕರು ಹರಸಿ ಹಾರೈಸುತ್ತಾರೆ ಅನ್ನುವ ನಂಬಿಕೆಯಲ್ಲಿದ್ದಾರೆ.ಇನ್ನು ಪ್ರೇಮ್ ಕಂಡ ನಯಾ ಕನಸಿಗೆ, ರಕ್ಷಿತಾನೇ ಬೆನ್ನೆಲುಬು. ಹೌದು.. ಚಿತ್ರಕ್ಕೆ ರಕ್ಷಿತಾ ಬಂಡವಾಳ ಹೂಡುತ್ತಿದ್ದಾರೆ.
ಸಹೋದರನ ಮೊದಲ ಚುಂಬನಕ್ಕೆ ಬೇಕಿರುವ ಎಲ್ಲ ಅಗತ್ಯತೆಗಳನ್ನ ಪೂರೈಸಲು ಸಿದ್ಧವಾಗಿರುವ ರಕ್ಷಿತಾ ಮುಖದಲ್ಲಿ ಡಬಲ್ ಸಂಭ್ರಮ ಎದ್ದು ಕಾಣುತ್ತಿತ್ತು. ಕಾರಣ, ಒಂದ್ಕಡೆ ಸಹೋದರನ ಸಿನಿಮಾ ಲಾಂಚ್ ಸಮಾರಂಭ, ಇನ್ನೊಂದ್ಕಡೆ ಹುಟ್ಟುಹಬ್ಬದ ಸಡಗರ. ಇದೆಲ್ಲದ್ರ ನಡುವೆ, ಗಾಂಧಿನಗರದ ಗಲ್ಲಿಗಳಲ್ಲಿ ಕೂತುಹಲ ಗರಿಗೇದರಿದೆ. ಅದುವೇ ಏಕ್ ಲವ್ ಯಾ ಚಿತ್ರದ ನಾಯಕಿ ಯಾರು ಅನ್ನೋದು. ಹೀಗೆ ಗರಿಗೇದರಿದ ಕೂತುಹಲಕ್ಕೆ ತಕ್ಕಂತೆ..
ಆಗ್ಲೇ, ಕೀರ್ತಿ ಸುರೇಶ್ ಹಾಗೂ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿವೆ. ಹೌದು, ಸದ್ಯ ಹರಿದಾಡ್ತಿರುವ ಸುದ್ದಿಗಳ ಪ್ರಕಾರ ಸಾಯಿ ಪಲ್ಲವಿ ಅಥ್ವಾ ಕೀರ್ತಿ ಸುರೇಶ್ ಚಿತ್ರದ ನಾಯಕಿಯಾಗುವ ಎಲ್ಲ ಸಾಧ್ಯತೆಗಳಿವೆ.ಅಂದ ಹಾಗೇ ಏಕ್ ಲವ್ ಯಾ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಸದ್ಯ, ಫಸ್ಟ್ ಲುಕ್ನಿಂದನೇ ಕಿಕ್ ಏರಿಸುತ್ತಿರುವ ಸಿನಿಮಾದ ಚಿತ್ರೀಕರಣ.. ಸದ್ಯದಲ್ಲೇ ಶುರುವಾಗಲಿದೆ. ಅಲ್ಲಿವರೆಗೂ ವೇಟ್ & ವಾಚ್…