Home Cinema ರಕ್ಷಿತ್-ರಶ್ಮಿಕಾ ಬ್ರೇಕಪ್ ಸುದ್ಧಿಗೆ ಹೇಳಿದ್ದೇನು ಗೊತ್ತಾ ಕರ್ಣ..?! ಜಾಲತಾಣಗಳಿಂದ ದೂರವಿರಲು ಇದಾ ಕಾರಣ..?! “ನೋ ಬ್ರೇಕಪ್”..!

ರಕ್ಷಿತ್-ರಶ್ಮಿಕಾ ಬ್ರೇಕಪ್ ಸುದ್ಧಿಗೆ ಹೇಳಿದ್ದೇನು ಗೊತ್ತಾ ಕರ್ಣ..?! ಜಾಲತಾಣಗಳಿಂದ ದೂರವಿರಲು ಇದಾ ಕಾರಣ..?! “ನೋ ಬ್ರೇಕಪ್”..!

269
0
SHARE

ಗೌರವಾನ್ವಿತ ಜನರೇ, ಬೇರೆ ಸಂಗತಿಗಳತ್ತ ಗಮನಹರಿಸಲು ನಾನು ಸೋಶಿಯಲ್ ಮೀಡಿಯಾದಿಂದ ದೂರ ಸರಿಯುತ್ತಿರುವುದಾಗಿ ನಾನು ಘೋಷಿಸಿದ್ದೆ. ಆದರೆ, ಕೆಲ ಸಂಗತಿಗಳ ಬಗ್ಗೆ ಸ್ಪಷ್ಟಪಡಿಸಲು ನಾನು ಮತ್ತೆ ಬರಬೇಕಾಯಿತು. ಕಳೆದೆರಡು ದಿನಗಳಲ್ಲಿ ಹರಡುತ್ತಿರುವ ಸುದ್ದಿ ಲಿಟ್ರಲ್ಲಿ ಒಬ್ಬ ವ್ಯಕ್ತಿ ಯಾವುದನ್ನು ಪ್ರೀತಿಸಿದ್ದನೋ, ಯಾವುದಕ್ಕಾಗಿ ಬದುಕಿದ್ದನೋ ಅದನ್ನೇ ದೋಚಿದಂತೆ ಆಯ್ತು…

ನೀವೆಲ್ಲ ರಶ್ಮಿಕಾ ಬಗ್ಗೆ ನಿಮ್ಮದೇ ಆದ ಅಭಿಪ್ರಾಯಗಳನ್ನು ಸೃಷ್ಠಿಸಿಕೊಂಡಿದ್ದೀರಾ. ನಾನು ನಿಮ್ಮಲ್ಲಿ ಯಾರನ್ನೂ ಇದಕ್ಕಾಗಿ ದೂಷಿಸಲ್ಲ, ಯಾಕಂದ್ರೆ ಅದನ್ನು ಆ ರೀತಿ ತೋರಿಸಲಾಯ್ತು. ನಾವು ಏನನ್ನು ಕೇಳುತ್ತೇವೆಯೋ ಅದನ್ನು ಸಹಜವಾಗಿ ಎಲ್ಲರೂ ನಂಬುತ್ತಾರೆ. ಆದರೆ, ಕೇಳಿದ್ದೆಲ್ಲ ಸತ್ಯವಾಗಿರಬೇಕಿಲ್ಲ. ಇನ್ನೊಂದು ಮಗ್ಗುಲಿನಿಂದ ನಾವ್ಯಾರೂ ಯೋಚಿಸದೇ ತೀರ್ಮಾನಕ್ಕೆ ಬಂದು ಬಿಡುತ್ತೇವೆ…

ನಾನು ರಶ್ಮಿಕಾಳನ್ನು ಎರಡು ವರ್ಷಗಳಿಂದ ಬಲ್ಲೆ. ಮತ್ತು ನಿಮ್ಮೆಲ್ಲರಿಗಿಂತ ಹೆಚ್ಚಾಗಿ ನಾನು ಅವಳನ್ನು ಅರ್ಥಮಾಡಿಕೊಂಡಿದ್ದೇನೆ. ಇಲ್ಲಿ ಹಲವು ಸಂಗತಿಗಳನ್ನು ಜಡ್ಜ್ ಮಾಡುವುದನ್ನು ಬಿಡಿ. ದಯವಿಟ್ಟು ಆಕೆಗೆ ಶಾಂತಿಯಿಂದ ಇರಲು ಬಿಡಿ. ಎಲ್ಲ ವಿಷಯಗಳೂ ಆದಷ್ಟು ಬೇಗ ನಿರ್ಧಾರವಾಗಲಿದೆ ಎಂದು ನಾನು ನಂಬಿದ್ದೇನೆ. ಮತ್ತು ನಿಮ್ಮೆಲ್ಲರಿಗೂ ಸತ್ಯ ಸಂಗತಿ ಮನವರಿಕೆಯಾಗಲಿದೆ…

ದಯವಿಟ್ಟು ಯಾವುದೇ ಸುದ್ದಿಯನ್ನ ನಂಬಬೇಡಿ. ಯಾರಿಗೂ ರಶ್ಮಿಕಾಳಿಂದಾಗಲಿ ಅಥವಾ ನನ್ನಿಂದಾಗಲಿ ಯಾವುದೇ ನೇರ ಮಾಹಿತಿ ಇಲ್ಲ. ಹಲವರು ಅವರ ಅವಶ್ಯಕತೆಗೆ ಅನುಗುಣವಾಗಿ ಸುದ್ದಿಯನ್ನು ಹುಟ್ಟುಹಾಕ್ತಾ ಇದ್ದಾರೆ. ಕಲ್ಪನೆಗಳು ಸತ್ಯವಲ್ಲ..! ಈ ಮಾಹಿತಿ ಎಲ್ಲರಿಗೂ ತಿಳಿಯುವ ತನಕ ಈ ಪೇಜನ್ನು ಜೀವಂತವಾಗಿ ಇಡುತ್ತೇನೆ….

ಅತಿ ಅವಶ್ಯಕವೆನಿಸಿದಾಗ ನಾನು ಮತ್ತೆ ಬರುತ್ತೇನೆ. ಮತ್ತು ನಾನು ಸೋಶಿಯಲ್ ಮೀಡಿಯಾ ಬಿಟ್ಟಿದ್ದಕ್ಕೂ, ಇದ್ಯಾವುದಕ್ಕೂ ಸಂಬಂಧವಿಲ್ಲ. ಸೋಶಿಯಲ್ ಮೀಡಿಯಾ ಚಟವಾಗುತ್ತಿರುವ ಹಿನ್ನೆಲೆಯಲ್ಲಿ ನಾನು ಇದನ್ನು ಬಿಟ್ಟು, ಕೆಲಸದ ಮೇಲೆ ನನ್ನ ಸಂಪೂರ್ಣ ನಿಗಾ ಇಡಬೇಕು ಎಂದು ನಾನು ನಿರ್ಧರಿಸಿದ್ದೇನೆ….

LEAVE A REPLY

Please enter your comment!
Please enter your name here