Home Cinema ರಕ್ಷಿತ್ ಶೆಟ್ಟಿ-ರಶ್ಮಿಕಾ ಬ್ರೇಕಪ್ ನಿಜಾನಾ..? ಈಗೊಂದು ಸುದ್ಧಿ ಗಾಂಧಿನಗರದಲ್ಲಿ ವೈರಲ್..!? ಏನೇಳ್ತಾರೆ ಮಿಸ್ಟರ್ & ಮಿಸ್ಸಸ್...

ರಕ್ಷಿತ್ ಶೆಟ್ಟಿ-ರಶ್ಮಿಕಾ ಬ್ರೇಕಪ್ ನಿಜಾನಾ..? ಈಗೊಂದು ಸುದ್ಧಿ ಗಾಂಧಿನಗರದಲ್ಲಿ ವೈರಲ್..!? ಏನೇಳ್ತಾರೆ ಮಿಸ್ಟರ್ & ಮಿಸ್ಸಸ್ ರಕ್ಷಿತ್ ಈ ಬ್ರೇಕಪ್ ವದಂತಿ ಬಗ್ಗೆ..?!

4802
0
SHARE

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಒಂದಾದ ರಕ್ಷಿತ್ ರಶ್ಮಿಕಾ ಮುಂದೆ ನಿಜಜೀವನದಲ್ಲೂ ಒಂದಾದ್ರು. ಕಳೆದ ವರ್ಷ ಇಬ್ಬರ ನಿಶ್ಚಿತಾರ್ಥ ಕೂಡ ನೆರವೇರಿದೆ.ಇಬ್ಬರು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರೋದ್ರಿಂದ ದಿಷ್ಟು ವರ್ಷಕಳೆದು ಮದುವೆಯಾಗಬೇಕು ಅಂತ ಅಂದುಕೊಂಡಿದಾರೆ. ಆದ್ರೆ ಅಷ್ಟರಲ್ಲಿ ಕೆಲ ವಿಕೃತಾನಂದ ಪಡೋ ವ್ಯಕ್ತಿ ಇವರಿಬ್ಬರ ಬ್ರೇಕ್ ಅಪ್ ಆಯ್ತು ಅಂತ ಸುದ್ದಿ ಹರಿಬಿಡ್ತಾ ಇದಾರೆ.ಅವರಿಬ್ಬರ ನಡೆವೆ ಏನೂ ಕಿರಿ ಕಿರಿ ಇಲ್ಲ ಅನ್ನೋದು ಚಿತ್ರರಂಗದವರಿಗೆಲ್ಲಾ ಗೊತ್ತಾ.. ಆದ್ರೆ ಕೆಲವು ವಿಕೃತ ಸಂತೋಷ ಪಡೋ ವ್ಯಕ್ತಿಗಳು ಮಾತ್ರ ತಾವೇ ಒಂದು ಸ್ಕ್ರಿಪ್ಟ್ ರೆಡಿ ಮಾಡಿ ರಕ್ಷಿತ್-ರಶ್ಮಿಕಾ ಬೇರಾಗಿದ್ದಾರೆ ಅನ್ನೋ ಗಾಸಿಪ್ ಹರಿಬಿಟ್ಟಿದಾರೆ.ಇಂಥಾ ಕಿರಿಕ್ ಗಳು ಶುರುವಾಗಿದ್ದಕ್ಕೆ ಮೂಲ ಕಾರಣ ಒಂದು ತೆಲಗು ಸಿನಿಮಾ.

ಅದು ರಶ್ಮಿಕಾ ನಟಿಸಿರೋ ಗೀತ ಗೋವಿಂದಂ ಸಿನಿಮಾ. ಗೀತಗೋವಿಂದಂ.. ಟಾಲಿವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರೋ ಬಹುನಿರೀಕ್ಷೆಯ ಸಿನಿಮಾ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಈ ಸಿನಿಮಾದ ನಾಯಕ.ನಮ್ಮ ಕಿರಿಕ್ ಬೆಡಗಿ ರಶ್ಮಿಕಾ ಈ ಚಿತ್ರದ ನಾಯಕಿ.ಇತ್ತೀಚಿಗಷ್ಟೇ ಗೀತಗೋವಿಂದಂ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ವು. ಈ ಚಿತ್ರದ ಆಡಿಯೋವನ್ನ ಬಿಡುಗಡೆ ಮಾಡಿದ್ದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್.ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅಲ್ಲು ಅರ್ಜುನ್ ರಶ್ಮಿಕಾನ ಹಾಡಿ ಹೊಗಳಿದ್ರು.ಹೌದು ರಶ್ಮಿಕಾರ ಸ್ನಿಗ್ದ ಸೌಂದರ್ಯ, ಮುಗ್ದ ನಗೆ , ಮೋಹಕ ನಟನೆಯನ್ನ ಟಾಲಿವುಡ್ ಕೂಡ ಮೆಚ್ಚಿಕೊಳ್ತಿದೆ.

ಟಿ ಟೌನ್ ನಲ್ಲಿ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಟಾಲಿವುಡ್ ನಲ್ಲಿ ರಶ್ಮಿಕಾ ಕ್ರೇಜ್ ಹೇಗಿದೆ ಅಂತ ಗೊತ್ತಾಗಬೇಕಂದ್ರೆ, ಮೊನ್ನೆ ಗೀತ ಗೋವಿಂದಂ ಆಡಿಯೋ ರಿಲೀಸ್ ನಲ್ಲಿ ರಶ್ಮಿಕಾ ವೇದಿಕೆಗೆ ಬಂದಾಗ ಅಭಿಮಾನಿಗಳ ಕೇಕೆ ಹೇಗಿತ್ತು ಅನ್ನೋದನ್ನ ನೀವು ನೋಡಬೇಕು.ನಮ್ಮ ಕಿರಿಕ್ ಬೆಡಗಿಗೆ ಇಡೀ ಸೌತ್ ಇಂಡಿಯಾದಲ್ಲೇ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.ಸೌಥ್ನ ಬಿಗ್ ಸ್ಟಾರ್ ಗಳ ಜೊತೆಗೆ ನಟಿಸೋ ಅವಕಾಶ ಒಲಿದು ಬರ್ತಿದೆ. ಇನ್ನೂ ಗೀತ ಗೋವಿಂದಂ ಬಂದ ನಂತರವಂತೂ ಈ ಅವಕಾಶಗಳು ಇನ್ನೂ ಹೆಚ್ಚಾದ್ರೂ ಅಚ್ಚರಿಯಿಲ್ಲ.ಆದ್ರೆ ಯಾವ ಗೀತಗೋವಿಂಧಂ ರಶ್ಮಿಕಾಗೆ ಸಕ್ಸಸ್ ತಂದುಕೊಡ್ತಿದೆಯೋ, ಅದೇ ಕಿರಿಕಿರಿಯನ್ನೂ ತಂದೊಡ್ಡಿದೆ ಅಂದ್ರೆ ನೀವು ನಂಬಲೇಬೇಕು.

ಹೌದು ಗೀತ ಗೋವಿಂದಂ ಸಿನಿಮಾದಿಂದ ರಶ್ಮಿಕಾಗೆ ಸಿಕ್ಕಾಪಟ್ಟೆ ಕಿರಿಯಾಗ್ತಿದೆ.ಗೀತಗೋವಿಂದಂ ಸಿನಿಮಾದ ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಅಂತೆಯೇ ಚಿತ್ರದ ಟೀಸರ್, ಸಾಂಗ್ ಗಳು ರೊಮ್ಯಾಂಟಿಕ್ ಆಗೇ ಇವೆ. ಟೀಸರ್ – ಹಾಡುಗಳಲ್ಲಿನ ವಿಜಯ್-ರಶ್ಮಿಕಾ ರೊಮ್ಯಾನ್ಸ್ ಗಮನ ಸೆಳೀತಿದೆ. ಆದ್ರೆ ಕೆಲ ರಕ್ಷಿತ್ ಫ್ಯಾನ್ಸ್ ಗೆ ಮಾತ್ರ ಇದು ಕಣ್ಣು ಕುಕ್ಕುತಾ ಇದೆ.ರಶ್ಮಿಕಾ, ಹೇಳಿ ಕೇಳಿ ರಕ್ಷಿತ್ ಶೆಟ್ಟಿಯ ಭಾವಿ ಪತ್ನಿ. ಅಸಲಿಗೆ ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಈ ಇಬ್ಬರೂ ಎಂಗೇಜ್ ಆದ್ರು. ಎಂಗೇಜ್ ಮೆಂಟ್ ಆದ ಮೇಲೂ ರಶ್ಮಿಕಾ ಕನ್ನಡದ ಚಮಕ್ ಮತ್ತು ಅಂಜನಿಪುತ್ರ ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ಅವುಗಳಲ್ಲಿ ರಶ್ಮಿಕಾ ಹೋಮ್ಲಿ ಗರ್ಲ್ ಪಾತ್ರ ಮಾಡಿದ್ರು.

ಆದ್ರೆ ಗೀತಗೋವಿಂದಂ ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡಿದಾರೆ. ಈ ಬೋಲ್ಡ್ ಅವತಾರ ನೋಡಿ, ರಕ್ಷಿತ್ ಫ್ಯಾನ್ಸ್ ಉರಿದು ಬಿದ್ದಿದಾರೆ. ಈಗ ಕೆಲ ದಿನಗಳ ಹಿಂದೆ ರಶ್ಮಿಕಾ ಟ್ವಿಟ್ಟರ್ ನಲ್ಲಿ ಒಂದು ಬೋಲ್ಡ್ ಪೋಸ್ಟರ್ ನ ಹಾಕಿದ್ರು.ಅಷ್ಟಕ್ಕೂ ಈ ರೀತಿಯ ಗಾಸಿಪ್ ಹರಿಯಬಿಡೋದಕ್ಕೆ ರಶ್ಮಿಕಾ ಗೀತ ಗೋವಿಂದಂ ಸಿನಿಮಾದಲ್ಲೇ ನಟಿಸಿದ್ದೇ ಕಾರಣ ಅಂದ್ರೆ ತಪ್ಪಾಗಲ್ಲ. ರಶ್ಮಿಕಾ ಆ ಚಿತ್ರದಲ್ಲಿ  ಬೋಲ್ಡ್ ಆಗಿ ನಟಿಸಿದ್ದೇ ತಡ ಇಷ್ಟೆಲ್ಲಾ ಕೆಟ್ಟ ಬೆಳವಣಿಗೆಗಳು ಆಗ್ತಿವೆ.ಚಿತ್ರರಂಗದಲ್ಲಿರುವ ನಾಯಕ ನಟನೊಬ್ಬ ಚಿತ್ರರಂಗದಲ್ಲಿರೋ ನಟಿಯನ್ನೇ ಮದುವೆ ಆದರೆ ಈ ಕಿರಿಕ್ ಶುರುವಾಗುತ್ತದೆ. ಎಂಗೇಜ್ ಮೆಂಟ್ ಅಥವಾ ಮದುವೆ ಆಗಿರೋ ಆ ಹುಡುಗಿ ಸಿನಿಮಾಗಳಲ್ಲಿ ಅಭಿನಯಿಸಲೇಬಾರದು.

ಅಕಸ್ಮಾತ್ ಅಭಿನಯಿಸಿದರೂ ಗೌರಮ್ಮನಂಥ ಪಾತ್ರಗಳಲ್ಲೇ ಅಭಿನಯಿಸಬೇಕು ಅನ್ನೋದು ಬಹಳಷ್ಟು ಸಿನಿ ಪ್ರಿಯರ, ಅದರಲ್ಲೂ ಆ ನಾಯಕ ನಟನ ಅಭಿಮಾನಿಗಳ ಅಭಿಪ್ರಾಯ.ರಶ್ಮಿಕಾ ಮಂದಣ್ಣ ತಮಗೆ ಬುದ್ಧಿ ಹೇಳಿದ ಅಭಿಮಾನಿಯೊಬ್ಬನಿಗೆ, ನಿಮ್ಮ ಕಾಳಜಿಗೆ ಧನ್ಯವಾದ , ಆದರೆ ಈ ಮಾತನ್ನು ಹೇಳಬೇಕಾದವರು ರಕ್ಷಿತ್, ಅವರು ಹೇಳಲಿ ನೋಡೋಣ ಎಂದು ತಕ್ಕ ಉತ್ತರ ಕೊಟ್ಟಿದ್ದಾರೆ. ಆದರೆ ರಕ್ಷಿತ್ ಕೂಡ ಈ ವಿಷಯದಲ್ಲಿ ಸಣ್ಣ ಬುದ್ಧಿ ತೋರಿದರೆ ಅದು ಸರಿಯಲ್ಲ ಅನ್ನೋದು ಸಿನಿ ಪಂಡಿತರ ಅನಿಸಿಕೆ. ಯಾಕಂದ್ರೆ ಇಬ್ಬರೂ ಇರೋದು ಚಿತ್ರರಂಗ ಎಂಬ ಕಲರ್ ಫುಲ್ ಲೋಕದಲ್ಲಿ.

ಇಲ್ಲಿನ ಜೀವನ ಹೇಗಿರುತ್ತದೆ ಎಂಬುದು ಮದುವೆ ಆಗುವ ಇಬ್ಬರಿಗೂ ಗೊತ್ತೇ ಇರುತ್ತದೆ. ಅವೆಲ್ಲವನ್ನೂ ಅವರು ಯೋಚನೆ ಮಾಡಿಯೇ ಮದುವೆ ಆಗುವ ನಿರ್ಧಾರಕ್ಕೆ ಬರಬೇಕಾಗುತ್ತದೆ. ಒಮ್ಮೆ ಕಮಿಟ್ ಆದಮೇಲೆ, ಇನ್ನೊಬ್ಬರ ಕೆರಿಯರ್ ನಲ್ಲಿ ಮೂಗು ತೂರಿಸೋದು ಅಷ್ಟು ಸರಿಯಲ್ಲ ಅನ್ನೋದು ಹಲವರ ಅನಿಸಿಕೆ. ಕೆಲವು ಸ್ವಘೋಷಿತ ಸಂಸ್ಕೃತಿಯ ಗಾರ್ಡ್ ಗಳು ಚಿತ್ರರಂಗದಲ್ಲಿ ಬೆಳೆಯುತ್ತಿರೋ ಒಬ್ಬ ರಶ್ಮಿಕಾ ಮಂದಣ್ಣ ಅವರ ಕಾಲೆಳೆಯುವ, ಎಚ್ಚರಿಕೆ ಕೊಟ್ಟು ಹೀಗಳೆಯುವ, ಗೀತ ಗೋವಿಂದಂ ಚಿತ್ರದಲ್ಲಿ ಕೊಂಚ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಅನ್ನುವ ಕಾರಣಕ್ಕೆ…

ಆಕೆಯ ಕೆರಿಯರ್ ಅನ್ನೇ ಗೋವಿಂದ ಎನಿಸುವ ಕೆಲಸ ಮಾಡಲು ಪ್ರಯತ್ನ ಪಡ್ತಾ ಇರೋದು ಮಾತ್ರ ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ.ಇನ್ನು ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್ ಸುದ್ದಿ ಅಪ್ಪಟ ಸುಳ್ಳು.. ಈ ಇಬ್ಬರೂ ಜೊತೆಯಾಗೇ ಇದ್ದಾರೆ., ಜೊತೆಯಾಗೇ ಇರಲಿ… ಅಂಬರೀಶ್ – ಸುಮಲತಾ, ವಿಷ್ಣುವರ್ಧನ್-ಭಾರತಿ ತರಹ ರಕ್ಷಿತ್-ರಶ್ಮಿಕಾ ಕೂಡ ತಾರಾದಂಪತಿಗಳಾಗಿ  ಖುಷಿಖುಷಿಯಗಿರಲಿ  ಅನ್ನೋದೇ ನಮ್ ಹಾರೈಕೆ..

LEAVE A REPLY

Please enter your comment!
Please enter your name here