Home Cinema ರಜಿನಿ ಅವತಾರಕ್ಕೆ “ಗಾಂಧಿನಗರ” ದಿಗಿಲು..? ಪೆಟ್ಟಾ ಆಗುತ್ತಾ “ಚಂದನವನ”ಕ್ಕೆ ಸವಾಲು..? ಪೆಟ್ಟಾ…! “ಕನ್ನಡ ಚಿತ್ರರಂಗಕ್ಕೆ ಪೆಟ್ಟು”

ರಜಿನಿ ಅವತಾರಕ್ಕೆ “ಗಾಂಧಿನಗರ” ದಿಗಿಲು..? ಪೆಟ್ಟಾ ಆಗುತ್ತಾ “ಚಂದನವನ”ಕ್ಕೆ ಸವಾಲು..? ಪೆಟ್ಟಾ…! “ಕನ್ನಡ ಚಿತ್ರರಂಗಕ್ಕೆ ಪೆಟ್ಟು”

874
0
SHARE

ಹೌದು, ಕೆ.ಜಿ.ಎಫ್ ಕನ್ನಡದ ಜೊತೆ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಯಲ್ಲಿ ಏಕಕಾಲಕ್ಕೆ ಆಯಾ ಭಾಷೆಗಳಲ್ಲಿ ಬಿಡುಗಡೆಯಾಯ್ತಲ್ಲ, ಆಗ, ಸಿನಿಪ್ರೇಮಿಗಳೂ ಚಿತ್ರವನ್ನ ಮುಗಿಬಿದ್ದು ನೋಡಿದ್ರು. ಎಷ್ಟರ ಮಟ್ಟಿಗೆ ಅಂದ್ರೆ ತೆಲುಗು, ತಮಿಳು, ಮಲಯಾಳಂನಿಂದನೇ ಹತ್ತು ಕೋಟಿಗೂ ಅಧಿಕ ಹಣ ಕೆ,ಜಿ.ಎಫ್ ಖಜಾನೆಯನ್ನ ಬಂದು ಸೇರಿಕೊಂಡಿತ್ತು.

ಅದು, ಜಸ್ಟ್ ಮೂರೇ ದಿನದಲ್ಲಿ. ಇದು, ಸಹಜವಾಗಿ ಅಲ್ಲಿನವರ ಕಣ್ಣುರಿಗೆ ಕಾರಣವಾಗಿತ್ತು. ಇದುವೇ ಮತ್ತೆ ಡಬ್ಬಿಂಗ್ ಕೂಗಿಗೆ ಜೀವ ತುಂಬುಬಂತೆ ಮಾಡಿತ್ತು.ಕೆ.ಜಿ.ಎಫ್ ತೆರೆಗೆ ಬಂದಾಗ ತಮಿಳು ಚಿತ್ರರಂಗದಲ್ಲಿ ಒಳಜಗಳವೇ ನಡೆದು ಹೋಗಿತ್ತು. ಕೆ.ಜಿ.ಎಫ್ ಚಿತ್ರವನ್ನ ವಿತರಣೆ ಮಾಡಿದ್ದ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ವಿರುದ್ಧ ವಿಜಯ್ ಸೇದುಪತಿ ತಿರುಗಿಯೂ ಬಿದ್ದಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮಿಳು ಚಿತ್ರರಂಗದ ವಿರುದ್ಧ ವಿಶಾಲ್ ವ್ಯವಸ್ಥಿತ ಪಿತೂರಿ ಮಾಡ್ತಿದ್ದಾರೆ ಅನ್ನುವ ಆರೋಪನೂ ಕೇಳಿ ಬಂದಿತ್ತು.

ಇನ್ನೂ ಇದ್ರ ನಡುವೆನೇ ಕೆ.ಜಿ.ಎಫ್ ಎದುರು ಬಂದಿದ್ದ ರಜಿನಿ ಅಳಿಯ ಧನುಷ್ ಅಭಿನಯದ ಮಾರಿ ೨ ಮಕಾಡೆ ಮಲಗಿತು. ಇಷ್ಟೇ ಸಾಕಿತ್ತು.. ಡಬ್ಬಿಂಗ್ ಕೂಗು ಪ್ರತಿಧ್ವನಿಸಲು. ಹಾಗಾಗೇ, ಕನ್ನಡ ಸಿನಿಮಾ ಡಬ್ ಮಾಡಿ, ಕನ್ನಡದ ಜೊತೆ ಜೊತೆಯಲ್ಲಿ ತಮಿಳಲ್ಲೂ ಡಬ್ ಮಾಡಿ.. ಎರಡನ್ನೂ ಏಕಕಾಲಕ್ಕೆ ಅವರು ತಮಿಳುನಾಡಿನಲ್ಲಿ ಬಿಡುಗಡೆ ಮಾಡುವುದಾದ್ರೆ, ನಾವ್ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯೊಂದಿಗೆ ಇದೀಗ ತಮಿಳು ಚಿತ್ರರಂಗ ಡಬ್ಬಿಂಗ್‌ಗೆ ಮುಂದಾಗಿದೆ. ಪಿಟ್ಟಾ ಮೂಲಕ ಶುಭಾರಂಭ ಮಾಡಲು ಸಿದ್ಧವಾಗಿದೆ.

ಅಲ್ಲಿಗೆ ಸಂಕ್ರಾಂತಿಗೆ ರಜಿನಿ ತಮಿಳು ಹಾಗೂ ಕನ್ನಡ ಮಾತನಾಡುತ್ತಾನೇ ಕರ್ನಾಟಕದಲ್ಲಿ ಅಬ್ಬರಿಸೋದು ಬಹುತೇಕ ಖಾತ್ರಿಯಾದಂತಾಗಿದೆ. ಇದುವೇ ಇದೀಗ ಕನ್ನಡ ಚಿತ್ರರಂಗದ ಆತಂಕವನ್ನೂ ಹೆಚ್ಚಿಸಿದೆ. ಕಾರಣ, ರಜಿನಿಯ ಪೆಟ್ಟಾ ಕರ್ನಾಟಕದಲ್ಲಿ ಮೂಲ ರೂಪದ ಜೊತೆ ಜೊತೆಯಲ್ಲಿ ಕನ್ನಡಕ್ಕೆ ಡಬ್ ಆಗಿಯೂ ತೆರೆಗೆ ಬಂದ್ರೆ, ಕನ್ನಡ ಚಿತ್ರಗಳಿಗೆ ಇನ್ನಿಲ್ಲದ ಹೊಡೆತ ಬೀಳೋದು ಖಾತ್ರಿ. ಚಿತ್ರಮಂದಿರಗಳ ಸಮಸ್ಯೆ ಎದುರಾಗೋದು ಖಾತ್ರಿ.

ಒಟ್ನಲ್ಲಿ ಪೆಟ್ಟಾ ಸಿನಿಮಾದ ಟ್ರೇಲರ್ ಸದ್ಯ ಬಿಡುಗಡೆಯಾಗಿದೆ. ಅಲ್ಲಿಗೆ ನಿರೀಕ್ಷೆಗಳೂ ಗಗನಕ್ಕೇರಿವೆ. ಟ್ರೇಲರ್ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಶುರುಮಾಡಿದ್ದಾರೆ. ಮುಂದೆ, ಇದೇ ಪೆಟ್ಟಾ ಪರಾಕ್ರಮ ಹೇಗಿರಲಿದೆ. ಪೆಟ್ಟಾ ಡಬ್ಬಿಂಗ್ ರೂಪದಲ್ಲಿ ಕರ್ನಾಟಕಕ್ಕೆ ಬರ‍್ತಾನಾ.. ಎಲ್ಲ ಪ್ರಶ್ನೆಗಳಿಗೆ ಉತ್ತರ ಸಂಕ್ರಾಂತಿ ಹಬ್ಬಕ್ಕೆ ಸಿಗಲಿದೆ. ಅಲ್ಲಿವರೆಗೂ ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here