Home District ರಜಿನಿ ಕಾಂತ್-ಕಮಲ್ ಹಾಸನ್ ಆಗಲಿದ್ದಾರ ದ್ರಾವಿಡ ನಾಯಕರಿಗೆ ಹೊಸ ಪರ್ಯಾಯ.!? ಕರುಣಾನಿಧಿಯೊಂದಿಗೆ ಅಂತ್ಯ ತಮಿಳು ರಾಜಕೀಯದ...

ರಜಿನಿ ಕಾಂತ್-ಕಮಲ್ ಹಾಸನ್ ಆಗಲಿದ್ದಾರ ದ್ರಾವಿಡ ನಾಯಕರಿಗೆ ಹೊಸ ಪರ್ಯಾಯ.!? ಕರುಣಾನಿಧಿಯೊಂದಿಗೆ ಅಂತ್ಯ ತಮಿಳು ರಾಜಕೀಯದ ಹಳೆ ಅಧ್ಯಾಯ.!

685
0
SHARE

ಅದು 1996ರ ಸಮಯ… ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತ್ತು, ಮುಂದಿನ ಪ್ರಧಾನಿ ಯಾರ್ ಆಗಬೇಕು ಅನ್ನೋದೇ ದೊಡ್ಡ ಚರ್ಚೆಯಾಗಿತ್ತು, ಆ ಸಮಯಕ್ಕೆ ಕನ್ನಡಿಗ ಹೆಚ್ ಡಿ ದೇವೆಗೌಡ್ರ ನೇತೃತ್ವದ ಸಂಯುಕ್ತ ರಂಗ ಸರ್ಕಾರ ರಚಿಸಲು ಮುಂದೆ ಬಂದಿತ್ತು. ನಿರೀಕ್ಷೆಯಂತೆ ದೇವೇಗೌಡ್ರು ರಾಷ್ಟ್ರದ 11 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು,ಇನ್ನೊಂದು 1998ರ ಸಮಯ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವದಲ್ಲಿ ಇತ್ತು, ಆದೇ ಸಮಯಕ್ಕೆ ಸಂಸತ್ ನಲ್ಲಿ ವಿಶ್ವಾಸದ ಕೊರತೆ ಎದುರಾಗಿತ್ತು, ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮಂಡನೆ ಮಾಡಲೇ ಬೇಕಿತ್ತು,

ದೃರದೃಷ್ಟವಶಾತ್ ಒಂದೇ ಒಂದು ಮತದ ಅಂತರದಲ್ಲಿ ಅಟಲ್ ಜೀ ಅವರ ಸರ್ಕಾರ ಬಿದ್ದು ಹೋಗಿತ್ತು. ಪ್ರಿಯ ವೀಕ್ಷಕರೇ ಈ ಎರಡು ಘಟನೆಗಳನ್ನ ನಾವು ಇಂದು ನಿಮಗೆ ಅದ್ಯಾವ ಕಾರಣಕ್ಕೆ ಹೇಳುತ್ತಿದ್ದೇವೆ ಅಂದ್ರೆ , ಈ ಎರಡು ಘಟನೆಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಘಟನೆಗಳು,  ಸ್ವಾತಂತ್ರ ಭಾರತದಿಂದ ಇಲ್ಲಿವರೆಗೂ ಯಾರೂ ಕೂಡ ಈ ಎರಡು ಘಟನೆಗಳನ್ನ ಮರೆಯಲು ಸಾಧ್ಯವೇ ಇಲ್ಲ, ಈ ಎರಡು ಘಟನೆಗಳ ಹಿಂದೆ ಇದ್ದಿದ್ದು ಬೇರೆ ಯಾರು ಅಲ್ಲ ತಮಿಳು ನಾಡಿನ ಧೀಮಂತ ರಾಜಕಾರಣಿಗಳಾದ ಕಲೈನಾರ್ ಕರುಣಾ ನಿಧಿ ಮತ್ತು ಪುರಚ್ಚಿ ತಲೈವಿ ಸೆಲ್ವಿ ಜಯಲಲಿತಾ.

ದೇವೇಗೌಡರ ವಿಚಾರದಲ್ಲಿ ಅಂದು ಕರುಣಾನಿಧಿ ಮಹತ್ತರವಾದ ಪಾತ್ರ ವಹಿಸಿದ್ದರಿಂದಲೇ ಕನ್ನಡಿಗರೊಬ್ಬರು ಪ್ರಧಾನಿಯಾಗಿ ದೇಶವನ್ನಾಳಿದ್ರು, ಅಂದು ಜಯಲಲಿತಾ ಕೋಪ ಮಾಡಿಕೊಂಡಿದ್ದ ಒಂದೇ ಒಂದು ಕಾರಣಕ್ಕೆ ಅಟಲ್ ಜಿ ಸರ್ಕಾರವೇ ಉರುಳಿಹೋಗಿತ್ತು, ಈ ಎರಡು ಘಟನೆಗಳು ರಾಷ್ಟ್ರ ರಾಜಕಾರಣದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳು ಅತ್ಯಂತ ಪ್ರಭಲ ಶಕ್ತಿಗಳಾಗಿ ಎದ್ದು ನಿಲ್ಲುವಂತೆ ಮಾಡಿದ್ದವು, ಅಂದು ಕೇಂದ್ರದಲ್ಲಿ ಶಕ್ತಿಯುತ ಪ್ರಭಾವ ಬೀರುತ್ತಿದ್ದ ಪಕ್ಷಗಳು ಇಂದು ತಮ್ಮ ನೆಲದಲ್ಲಿ ನಾಯಕನಿಲ್ಲದೆ ಅನಾಥವಾಗುತ್ತಿದೆ.ರಾಷ್ಟ್ರ ರಾಜಕಾರಣದಲ್ಲೇ ಇಷ್ಟೊಂದು ಪ್ರಭಾವ ಹೊಂದಿದ್ದ ಈ ಇಬ್ಬರು ನಾಯಕರು ತಮಿಳುನಾಡಿನ ಮಟ್ಟಿಗೆ ಅನಭಿಷಿಕ್ತ ದೊರೆಗಳು.

ಅವರು ಕಾಲಲ್ಲಿ ತೋರಿಸಿದ ಕೆಲಸವನ್ನ ತಲೆಮೇಲೆ ಹೊತ್ತುಕೊಂಡು ಮಾಡುವಂತ ಕಾರ್ಯಕರ್ತರನ್ನ ಹೊಂದಿದಂತವರು. ಇಬ್ಬರಿಗೂ ಅವರದ್ದೇ ಆದ ಶಕ್ತಿ ಇತ್ತು, ಇಬ್ಬರಿಗೂ ಅವರದ್ದೇ ಆದ ವರ್ಚಸ್ಸಿತ್ತು, ಇಬ್ಬರಿಗೂ ಅವರದ್ದೇ ಆದ ಇತಿಹಾಸವಿತ್ತು.  93ನೇ ವಯಸ್ಸಿನಲ್ಲೂ ಪ್ರಸ್ತುತತೆಯನ್ನು ಹೊಂದಿದ್ದ ಕರುಣಾನಿಧಿ ಮತ್ತು ಸಂಕೀರ್ಣ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿಯನ್ನು ಹಿಡಿದಿದ್ದರು.  ಸಿನಿಮಾ ನಟಿಯ ಸ್ಥಾನದಿಂದ ‘ಅಮ್ಮ’ನಾಗಿ ಸಾಗಿದ ಜಯಲಲಿತಾರದ್ದು ಚರಿತ್ರಾರ್ಹ ಬದುಕು. ಅಚ್ಚರಿ ಎಂದರೆ, ಎರಡೂ ಶಕ್ತಿಗಳು ಎರಡು ವರ್ಷದ ಅಂತರದಲ್ಲಿ ನಿರ್ಗಮಿಸುವ ಮೂಲಕ ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ವಿಜೃಂಬಿಸಿ, ತನ್ನದೇ ಮೈಲುಗಲ್ಲು ಸ್ಥಾಪಿಸಿದ್ದ ಪಕ್ಷಗಳು ಈಗ ಸರಿಯಾದ ನಾಯಕರಿಲ್ಲದೇ ಸೊರಗುತ್ತಿದೆ,

ಈ ಇಬ್ಬರು ನಾಯಕರ ನಿರ್ಗಮನದ ಬಳಿಕ ದ್ರಾವಿಡ ರಾಜಕಾರಣ, ಎರಡು ಪ್ರಮುಖ ಪಕ್ಷಗಳ ಭವಿಷ್ಯ ಮುಂದೇನಾಗಲಿದೆ ಎಂಬ ಪ್ರಶ್ನೆ ಬೃಹದಾಕಾರವಾಗಿ ಎದ್ದು ನಿಂತಿದೆ. ಇಡೀ ದೇಶದಲ್ಲಿ ಪ್ರಾದೇಶಿಕ ಅಸ್ಮಿತೆಯೇ ಪ್ರಮುಖವಾಗಿರುವ ರಾಜ್ಯ ತಮಿಳುನಾಡು. ದೇಶದ ಇತರ ಭಾಗಗಳು ರಾಷ್ಟ್ರೀಯ ಪಕ್ಷಗಳ ತೆಕ್ಕೆಗೆ ಜಾರುತ್ತ, ದಿನೇ ದಿನೇ ಪ್ರಾದೇಶಿಕ ಪಕ್ಷಗಳ ಬಲ ಕುಸಿಯುತ್ತಿದ್ದರೂ ರಾಷ್ಟ್ರೀಯ ಪಕ್ಷಗಳಿಗೆ ತಡೆಗೋಡೆಯಂತೆ ನಿಂತದ್ದು ತಮಿಳುನಾಡು ಮಾತ್ರ. ಅಂಥ ರಾಜ್ಯದಲ್ಲಿ ದ್ರಾವಿಡ ರಾಜಕಾರಣದ ಪ್ರಾದೇಶಿಕ ಅಸ್ಮಿತೆ ಉಳಿಯುವುದೇ? ನಾಯಕತ್ವ ದುರ್ಬಲಗೊಂಡು ರಾಷ್ಟ್ರೀಯ ಪಕ್ಷಗಳ ಪ್ರವೇಶಕ್ಕೆ ವೇದಿಕೆ ಒದಗುವುದೇ ಎಂಬ ಪ್ರಶ್ನೆ ಎದ್ದು ನಿಂತಿದೆ.

ಆ ನಿಟ್ಟಿನಲ್ಲಿ ನೋಡೋದ್ ಆದ್ರೆ ಡಿಎಂಕೆಗೆ ಆಗಲಿ ಎರಡೆಲೆ ಪಕ್ಷಕ್ಕೆ ಆಗಲಿ ಸಮರ್ಥ ನಾಯಕರಿಲ್ಲ ಅನ್ನೋದೇ ವಿಪರ್ಯಾಸ.ಸಧ್ಯ ತಮಿಳುನಾಡಿನ ಹೊಸ ತಲೈವಾ ಯಾರು ಅನ್ನೋ ಪ್ರಶ್ನೆ ಎದುರಾಗಿದೆ, ಕರುಣಾನಿಧಿ, ಜಯಲಲಿತಾ ಕಾಲದಲ್ಲಿ ದ್ವೇಷ, ಅಸೂಯೆ, ಈರ್ಷ್ಯೇ, ಹಗರಣ, ಆರೋಪ, ಪ್ರತ್ಯಾರೋಪ, ಇವುಗಳೇ ತುಂಬಿದ್ದವು. ಆದ್ರೀಗ ಕಾಲ ಬದಲಾಗುತ್ತಿದೆ, ಅರ್ಧಶತಮಾನಗಳ ಕಾಲ ತಮಿಳುನಾಡಿನ ದಿವ್ಯದೀಪ್ತಿಯಾಗಿ ಬೆಳಗಿದ್ದ ಎರಡು ಪಕ್ಷಗಳು ತುಂಬಲಾರದ ಶೂನ್ಯವನ್ನ ಅನುಭವಿಸುತ್ತಿದೆ, ಡಿಎಂಕೆಗೆ ಕರುಣಾನಿಧಿಯದ್ದೇ ಒಂದು ಪ್ರಶ್ನೆಯಾದ್ರೆ,

ಎಐಎಡಿಎಂಕೆಗೆ ಎಮ್ ಜಿಆರ್, ಜಯಲಲಿತಾರದ್ದೇ ಪ್ರಶ್ನೆ, ಇಂತಹ ಸಂಧರ್ಬದಲ್ಲಿ ಎರಡು ಪಕ್ಷಗಳಿಂದ ಆ ಜಾಗವನ್ನ ತುಂಬ ಬಲ್ಲ ಶಕ್ತಿ ಯಾರಿಗೂ ಇಲ್ಲ, ತಮಿಳು ಜನ ಅಷ್ಟು ಸುಲಭವಾಗಿ ಯಾರನ್ನೂ ಒಪ್ಪೋದಿಲ್ಲ, ಈಗಿನ ಪರಿಸ್ಥಿತಿಯಲ್ಲಿ ಆಸ್ಥಾನಕ್ಕೆ ಇಬ್ಬರು ನಾಯಕರ ಹೆಸರು ಬಲವಾಗಿ ಕೇಳಿ ಬರುತ್ತಿದೆ, ಆ ಹೆಸರುಗಳು ಬೇರೆಯಾವುವು ಅಲ್ಲ, ಒಬ್ರು ಉಳಗನಾಯಗನ್ ಕಮಲ್ ಹಾಸನ್, ಮತ್ತು ಸೂಪರ್ ಸ್ಟಾರ್ ರಜಿನಿಕಾಂತ್,ಜಯ ಕಾಲವಾದನಂತರ ರಾಜಕೀಯದಲ್ಲಿ ಒಂದಿಷ್ಟು ಗಮನ ಸೆಳೆದಿರೋದು ಅಂದ್ರೆ ಅದು ರಜಿನಿಕಾಂತ್ ಕಮಲ್ ಹಾಸನ್, ತಮಿಳುನಾಡಿನ ರಾಜಕೀಯಕ್ಕೆ ದ್ರಾವಿಡ ಚಳುವಳಿ,

ಹಿಂದಿವಿರೋಧಿ ಚಳುವಳಿಯ ಭದ್ರ ಬುನಾದಿ ಇದ್ರು ಸಹ 5 ದಶಕಗಳ ಕಾಲ ರಾಜ್ಯಭಾರ ಮಾಡಿದ್ದು ತಾರಾ ಬಳಗವೇ ಅನ್ನೋ ಅಚ್ಚರಿಯ ಸತ್ಯ. ದ್ರಾವಿಡ ಜನರು ದೇವರನ್ನ ತಿರಸ್ಕಾರ ಮಾಡಿದ್ರು ಮಾಡಿಯಾರು ಆದ್ರೆ ಸಿನಿದೇವರನ್ನ ಮಾತ್ರ ಯಾವುದೇ ಕಾರಣಕ್ಕೂ ತಿರಸ್ಕಾರ ಮಾಡುವವರಲ್ಲ, ಆ ಕಾರಣಕ್ಕೇನೆ ಎಮ್ ಜಿಆರ್, ಕರುಣಾ ನಿಧಿ, ಜಯಲಲಿತಾ ಸಿನಿರಂಗದಿಂದ ಬಂದು ಇಡೀ ರಾಜ್ಯವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ರು,ತಮಿಳು ನಾಡಿನ ಸಧ್ಯದ ಪರಿಸ್ಥಿತಿಯಲ್ಲಿ ಸಿನಿ ವರ್ಚಸ್ಸೇ ಮುಖ್ಯವಾದ್ರೆ ಡಿಎಂಕೆ, ಎಐಎಡಿಎಕೆ ಪಕ್ಷಗಳು ಕಳೆಗುಂದೋದ್ರಲ್ಲಿ ಯಾವುದೇ ಅನುಮಾನವಿಲ್ಲ,

ಈಗಾಗಲೇ ರಾಜಕೀಯ ಪ್ರವೇಶ ಮಾಡಿರೋ ರಜಿನಿಕಾಂತ್, ಕಮಲ್ ಹಾಸನ್ ತಾರಾ ಬಲದ ಆಧಾರದ ಮೇಲೆ ತಮಿಳಿರಿಗೆ ತಲೈವರ್ ಆಗ್ತಾರ ಅನ್ನೋದು ಎಲ್ಲರಲ್ಲೂ ಪ್ರಶ್ನೆಯಾಗಿ ಕಾಡುತ್ತಿದೆ.ಇಬ್ಬರು ರಾಜಕೀಯ ಪ್ರವೇಶ ಸಂದರ್ಭಕ್ಕೂ, ಎಮ್ ಜಿಆರ್, ಜಯಾ ರಾಜಕೀಯ ಪ್ರವೇಶದ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸವಿದೆ, ಕರುಣಾನಿಧಿ- ಜಯಾ ನಡುವಿವೇ ವಿವಾದ ತಾರಕಕ್ಕೆ ಏರಿದಾಗ ಬದಲಾವಣೆ ತರುವ ನಿಟ್ಟಿನಲ್ಲಿ ರಾಜಕೀಯದ ಮಾತನಾಡುತ್ತಿದ್ದ ರಜಿನಿಕಾಂತ್ ಗಟ್ಟಿ ನಿರ್ಧಾರ ತೆಗೆದುಕೊಂಡವರಲ್ಲ, ಜಯಾ ನಿರ್ಗಮನದ ನಂತರ ದೇವರ ಅಪ್ಪಣೆಯ ಮೇರೆಗೆ ರಾಜಕೀಯ ಪ್ರವೇಶವನ್ನೂ ಮಾಡಿಬಿಟ್ಟಿದ್ದಾರೆ,

ಅವರ ನಡೆ ಮುಂದೆ ಹೇಗಿರಲಿದೆ ಅನ್ನೋದನ್ನ ಕಾದುನೋಡಬೇಕು ಅಷ್ಟೆ,ಇಬ್ಬರು ಸ್ಟಾರ್ ನಡರು ರಾಜ್ಯದಾದ್ಯಂತ ದೊಡ್ಡದಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ, ರಜಿನಿ ಮಾಸ್ ಅಭಿಮಾನಿಗಳನ್ನ ಹೊಂದಿದ್ರೆ, ಕಮಲ್ ಕ್ಲಾಸ್ ಅಭಿಮಾನಿಗಳನ್ನ ಹೊಂದಿದ್ದಾರೆ, ಅಭಿಮಾನಿಗಳೇ ಪಕ್ಷದ ಕಾರ್ಯಕರ್ತರಾಗಿ ಇಬ್ಬರು ನಾಯಕರಿಗೂ ಅವಕಾಶ ಒದಗಿಸುತ್ತಾರೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ, ಕಮಲ್ ಹಾಸನ್ ಬೌದ್ಧಿಕವಾಗಿ ಹೆಚ್ಚು ಸಾಮರ್ಥ್ಯವಿದ್ದರು ಅವರ ಮಾತುಗಳು ಸಾಮಾನ್ಯ ಜನರಿಗೆ ಮುಟ್ಟುವುದಿಲ್ಲ, ರಜಿನಿಕಾಂತ್ ವಿಚಾರಕ್ಕೆ ಬಂದ್ರೆ ಆಪಾರ ದೈವ ಭಕ್ತ, ಅದ್ಯಾತ್ಮ ಜೀವಿ, ಕೆಲವು ಇತಿಮಿತಿಗಳನ್ನ ಮೀರಿದ್ದೇ ಆದಲ್ಲಿ ಇಬ್ಬರಲ್ಲಿ ಒಬ್ಬರಲ್ಲಿ ಒಬ್ಬರು ಹೊಸ ತಮಿಳ್ ತಲೈವರ್ ಆಗಿ ಹೊರ ಹೊಮ್ಮಲಿದ್ದಾರೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ.ಇನ್ನು ಹಲವಾರು ಸಿನಿ ನಟರು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ,

ವಿಜಯ್ ಕಾಂತ್ , ಶರತ್ ಕುಮಾರ್ ಕೂಡ ಪಟ್ಟಕ್ಕಾಗಿ ಹಾತೋರೆಯುತ್ತಿದ್ದಾರೆ, ಆದ್ರೆ ಆ ಯಾವರ್ಯಾರು ರಜಿನಿ ,ಕಮಲ್ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ, ಕರುಣಾನಿಧಿ-ಜಯಾ  ಅನುಪಸ್ಥಿತಿಯಲ್ಲಿ ರಜಿನಿ ಕಮಲ್ ಗೆ ನೆಲೆ ಸಿಕ್ಕಿದ್ದೇ ಆದಲ್ಲಿ, ಮತ್ತೊಮ್ಮೆ ತಮಿಳು ನಾಡಿನಲ್ಲಿ ಸಿನಿಮೀಯ ತಿರುವು ಪಡೆದೇ ತೀರಲಿದೆ.ತಮಿಳು ನಾಡಿನಲ್ಲಿ ಇದುವರೆಗೂ ರಾಜಕೀಯ ಪಕ್ಷಗಳದ್ದು ಅರಣ್ಯ ರೋಧನ, ಅಲ್ಲಿ ಯಾವ ರಾಷ್ಟ್ರೀಯ ಪಕ್ಷಗಳಿಗೂ ಪ್ರವೇಶ ಇಲ್ಲ, ಇದಕ್ಕೆ ಕಾರಣಕರ್ತರಾಗಿದ್ದು ಒನ್ಸ್ ಆಗೇನ್ ಇದೇ ಜಯಲಲಿತಾ ಅಂಡ್ ಕರುಣಾನಿಧಿ, ಸಧ್ಯ ಇಬ್ಬರು ಅಲ್ಲಿಲ್ಲ ಹೀಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಸುಲಭವಾಗಿ ರಾಜ್ಯ ಪ್ರವೇಶ ಮಾಡುತ್ತವಾ, ಅಥವಾ ಪರೋಕ್ಷವಾಗಿ ರಾಜ್ಯವನ್ನ ನಿಯಂತ್ರಣ ಮಾಡುತ್ತವಾ ಅನ್ನೋ ಅನುಮಾನ ಇದ್ದೇ ಇದೆ,

ಈಗಿನ ಪರಿಸ್ಥಿತಿ ಬಿಜೆಪಿಯ ಪ್ರವೇಶಕ್ಕೆ ಹದವಾದ ನೆಲವನ್ನು ಒದಗಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಜಗಳವಾಡುತ್ತಿರುವ ಎಐಎಡಿಎಂಕೆಯ ಎರಡು ಬಣಗಳು ಬಿಜೆಪಿ ಮಧ್ಯಸ್ಥಿಕೆಯಲ್ಲಿ ಒಂದಾಗಿರುವುದು ಇದರ ಸೂಚನೆ. ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಗ್ರ್ಯಾಂಡ್‌ ಎಂಟ್ರಿ ಪಡೆದುಕೊಳ್ಳುವುದು ನಿಶ್ಚಿತ. ಈ ನಿಟ್ಟಿನಲ್ಲಿ ಈಗಾಗಲೇ ಸಂಘಟನೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಎಐಎಡಿಎಂಕೆಯ ಸಣ್ಣ ಪಾಲುದಾರನಾಗಿ ಸೇರಿಕೊಂಡು ಮುಂದೆ ಬೆಳೆಯುವ ಪ್ಲ್ಯಾನ್‌ ಅದರದ್ದು. ಇದರ ಜತೆಗೆ ಡಿಎಂಕೆಯ ಒಳಗಿನ ಸೋದರ ಜಗಳವನ್ನು ಕೂಡಾ ಬಳಸಿಕೊಳ್ಳುವ ಸಾಧ್ಯತೆ ಇದೆ.

ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟ ಬೇಗುದಿ ಹೊಂದಿರುವ ಎಂ.ಕೆ. ಅಳಗಿರಿಯನ್ನು ಸೆಳೆದುಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿ ಇಲ್ಲ.  ಕಾಂಗ್ರೆಸ್ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ನದ್ದೂ ಕೂಡ ಇಲ್ಲಿ ಹೀನಾಯ ಸ್ಥಿತಿ, 50 ವರ್ಷದ ಹಿಂದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ನಂತರದ ವರ್ಷದಲ್ಲಿ ಅವಶೇಷ ಇಲ್ಲದಂತೆ ಆಗಿಹೋಗಿದೆ, ಡಿಎಂಕೆ ಜೊತೆ ಸಖ್ಯಹೊಂದಿತ್ತಾದರು ಮತ್ತೆ ತನ್ನ ವರ್ಚಸ್ಸನ್ನ ಮರುಸ್ಥಾಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಹೋಗಿದೆ.

ತಮಿಳುನಾಡಿನ ರಾಜಕೀಯದಲ್ಲಿ ಕರುಣಾ ಮತ್ತು ಜಯಲಲಿತಾರ ಒಂದು ಯುಗಾಂತ್ಯವಾಗಿದೆ, ಹೊಸಯುಗದ ಪ್ರವರ್ತಕರು ಯಾರಾಗಲಿದ್ದಾರೆ ಅನ್ನೋ ಕುತೂಹಲ ದಟ್ಟವಾಗಿ ಮೇಳೈಸುತ್ತಿದೆ. 2019ರ ಚುನಾವಣೆಗೂ ಮುನ್ನ ಸ್ಥಳೀಯ ಚುನಾವಣೆಗಳು ನಡೆಯಲಿದೆ ಈ ಸಮಯದಲ್ಲಿ ದ್ರಾವಿಡ ರಾಜಕೀಯ ಹೇಗಿರಲಿದೆ, ಮುಂದೆ ಯಾರ ಪ್ರಾಬಲ್ಯ ಇರಲಿದೆ ಅನ್ನೋದ್ರ ಕೆಲವು ಚಿತ್ರಣ ಸಿಗಲಿದೆ, 2019ರ ನಂತರ ನಡೆಯಲಿರೋ ವಿಧಾನಸಭಾ ಚುನಾವಣೆಯಲ್ಲಿ ತಮಿಳ್ ನ ಹೊಸ ತಲೈವರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಲಿದೆ.

LEAVE A REPLY

Please enter your comment!
Please enter your name here