Home Crime ರತಿ ಕ್ರೀಡೆ ನೋಡಿದ ಮಗನ ಕೊಲೆಗೆ ಸ್ಕೆಚ್ ಹಾಕಿದ ತಾಯಿ.! ಪರಪುರುಷನ ದೇಹಸುಖಕ್ಕೆ ಕರುಳ ಬಳ್ಳಿಯನ್ನೆ...

ರತಿ ಕ್ರೀಡೆ ನೋಡಿದ ಮಗನ ಕೊಲೆಗೆ ಸ್ಕೆಚ್ ಹಾಕಿದ ತಾಯಿ.! ಪರಪುರುಷನ ದೇಹಸುಖಕ್ಕೆ ಕರುಳ ಬಳ್ಳಿಯನ್ನೆ ಕೊಂದ ನಿಷ್ಕರುಣಿ

6600
0
SHARE

ಒಂದು ವಾರದಿಂದ ಕಾಣೆಯಾಗಿದ್ದ ಮಗು ಶವವಾಗಿ ಪತ್ತೆ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕಲ್ ಪುರದಲ್ಲಿ ಗ್ರಾಮದಲ್ಲಿ ನಡೆದಿದೆ. ಆದರೆ ಮಗು ಸಾವಿನ ಹಿಂದಿನ ರಹಸ್ಯ ಬೇದಿಸಿದ ಪೊಲೀಸರಿಗೆ ಭಾರಿ ಶಾಕ್ ಕಾದಿತ್ತು.ಈ ಪುಟ್ಟ ಬಾಲಕನ ಹೆಸ್ರು ಪ್ರೀತಂ ಅಂತ….ಈ ಪೋರ ಏನೇನು ಕನಸುಗಳನ್ನು ಕಂಡಿದ್ನೋ ಏನೋ…

ವಿಧಿಯಾಟ ಈ ಪ್ರೀತಂ ಸ್ವತಃ ತನ್ನ ತಾಯಿಯಿಂದಲೇ ಹತ್ಯೆಗೆ ಈಡಾಗಿದ್ದಾನೆ. ಪರಪುರಷನೊಂದಿಗೆ ನಡೆಸುತ್ತಿದ್ದ ‘ರತಿಕ್ರೀಡೆ’ ನೋಡಿದ್ದೇ ಪ್ರೀತಂ ಜೀವನಕ್ಕೆ ಮುಳುವಾಗಿದೆ. ಮಗ ರತಿಕ್ರೀಡೆಯನ್ನು ನೋಡಿದ್ದಕ್ಕೆ ಕಿರಾತಕಿ ತಾಯಿ, ಪ್ರೀಯಕರ ಒಟ್ಟಿಗೆ ಪ್ಲಾನ್ ಮಾಡಿ ಈ ಪ್ರೀತಂನನ್ನು ಯಮನಪಾದಕ್ಕೆ ಕಳುಹಿಸಿಬಿಟ್ರು.

ಕೊಳ್ಳೇಗಾಲ ತಾಲೂಕಿನ ಸಿಲ್ಕಲ್‍ಪುರದಲ್ಲಿ ಪ್ರೀತಂ ಕಾಣೆಯಾಗಿದ್ದ. ಆಗ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು. ಅಷ್ಟರಲ್ಲಿ ಅಂದ್ರೆ ಅಕ್ಟೋಬರ್ 10ರಂದು ಕಜ್ಜಿಹುಂಡಿ ಗ್ರಾಮದ ಕೆರೆಯಲ್ಲಿ ಪ್ರೀತಂ ಶವವಾಗಿ ಪತ್ತೆಯಾದ. ಬಳಿಕ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾದಗ ಒಂದೂ ಕ್ಲ್ಯೂ ಸಹ ಪತ್ತೆಯಾಗಿಲ್ಲ…

ಕೊನೆಗೆ ಪೊಲೀಸರು ಸಿಲ್ಕಲ್‍ಪುರ ಗ್ರಾಮಸ್ಥರೊಬ್ಬರನ್ನ ವಿಚಾರಣೆ ನಡೆಸಿದಾಗ… ತಾಯಿ ಸಾಕಮ್ಮಳ ಅನೈತಿಕ ಸಂಬಂಧವನ್ನು ಪೊಲೀಸರ ಮುಂದೆ ಹೇಳಿದ್ರು. ಇಂದೊಂದೇ ಪೊಲೀಸರಿಗೆ ಸಿಕ್ಕ ಕ್ಲ್ಯೂ.ಬಳಿಕ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು, ತಾಯಿ ಸಾಕಮ್ಮ, ಪ್ರೀಯಕರ ನಾಗರಾಜ್ ಮೂರ್ತಿ ಕೈಗೆ ಕೊಳ ತೊಡಗಿಸಿ ಠಾಣೆಗೆ ಕರೆತಂದು, ಒಬ್ಬೊಬ್ಬರಿಗೆ ಎರಡೇರಡು ಲಾತ ಕೊಟ್ಟಾಗ…

ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ನಮ್ಮಿಬ್ಬರ ರತಿಕ್ರೀಡೆಯನ್ನು ಮಗ ರೆಡ್ ಹ್ಯಾಂಡ್ ಆಗಿ ನೋಡಿದ. ಬಳಿಕ ಪ್ರೀತಂ ಬೇರೆಯವರಿಗೆ ಹೇಳಿಬಿಡ್ತಾನೆ ಎಂದು ಕೊಂದು ಹಾಕ್ತೀದ್ವೀ ಅಂತ ಸತ್ಯವನ್ನ ಪೊಲೀಸರ ಮುಂದೆ ಕಕ್ಕಿದರು.ಇನ್ನು ಶನಿವಾರದಂದು ನಾನು ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದೆ. ನನ್ನ ಮಗ ಶಾಲೆ ಮುಗಿಸಿ ಬೆಳಗ್ಗೆ 11 ಗಂಟೆಗೆ ಮನೆ ಬಂದಿದ್ದ.

ನಂತರ ನನ್ನ ಮಗ ಹೊರಗೆ ಆಟವಾಡಲು ಹೋದವನು ಮನೆಗೆ ವಾಪಸ್ ಬರಲಿಲ್ಲ. ರಾತ್ರಿಯೆಲ್ಲ ನನ್ನ ಮಗನ್ನು ಹುಡುಕಾಡಿದ್ವೀ ಆದ್ರೆ ಸಿಗಲಿಲ್ಲ.. ಮರುದಿನ ಭಾನುವಾರ ಬೆಳಗ್ಗೆ ಠಾಣೆಗೆ ದೂರು ನೀಡಿದೆ ಕಜ್ಜಿಹುಂಡಿ ಕೆರೆಯಲ್ಲಿ ನನ್ನ ಮಗನ ಶವ ಪತ್ತೆಯಾದಗ ಇದೊಂದು ಕೊಲೆ ಅಂತ ಅನ್ನಿಸಿತು. ಕೊನೆಗೆ ಪ್ರಕರಣವನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ ಅಂತ ಮೃತ ಪ್ರೀತಂ ತಂದೆ ಕಣ್ಣೀರು ಹಾಕಿದ್ದಾರೆ.

LEAVE A REPLY

Please enter your comment!
Please enter your name here