Home District ರಮೇಶ್ ಜಾರಕಿಹೊಳಿ ಮನೆ ಬಾಗಿಲಿಗೇ ಹೋದ ಕುಮಾರಸ್ವಾಮಿ..! ಉಮೇಶ್ ಜಾಧವ್ ಬಳಿಕ ಶುರುವಾಗುತ್ತಿತ್ತಾ ರಾಜೀನಾಮೆ ಸರದಿ?...

ರಮೇಶ್ ಜಾರಕಿಹೊಳಿ ಮನೆ ಬಾಗಿಲಿಗೇ ಹೋದ ಕುಮಾರಸ್ವಾಮಿ..! ಉಮೇಶ್ ಜಾಧವ್ ಬಳಿಕ ಶುರುವಾಗುತ್ತಿತ್ತಾ ರಾಜೀನಾಮೆ ಸರದಿ? ಕಾಂಗ್ರೆಸ್ ಅತೃಪ್ತರ ಮನವೊಲಿಸಲು ಖುದ್ದು ಸಿಎಂ ಎಚ್ಡಿಕೆ ಪ್ರಯತ್ನ

564
0
SHARE

ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರ ರಾಜೀನಾಮೆ ಆತಂಕ ಇನ್ನೂ ಕಡಿಮೆಯಾಗಿಲ್ಲ..ಸ್ವತಃ ಸಿಎಂ ಕುಮಾರಸ್ವಾಮಿಯವರಿಗೇ ವಿಶ್ವಾಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ..

ದಿಢೀರ್ ಅಂತ ಸಿಎಂ ಕುಮಾರಸ್ವಾಮಿ, ಇವತ್ತು ಅತೃಪ್ತ ಕಾಂಗ್ರೆಸ್ ಶಾಸಕರ ಮನೆ ಬಾಗಿಲಿಗೇ ಹೋಗಿ ಸಮಾಧಾನ ಮಾಡಲು ಮುಂದಾಗಿದ್ದಾರೆ..ಡಾಕ್ಟರ್ ಉಮೇಶ್ ಜಾಧವ್ ರಾಜೀನಾಮೆ ಬಳಿಕ ಇನ್ನಷ್ಟು ವಿಕೆಟ್ ಪತನವಾಗುತ್ತದೆ ಎಂಬ ಸ್ಪಷ್ಟ ಸುಳಿವು ಅರಿತ ಸಿಎಂ ನೇರವಾಗಿ ಅತೃಪ್ತಿ ಶಮನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೇ ತಳಮಳ ಕಡಿಮೆಯಾಗಿಲ್ಲ..

ಯಾವಾಗ ಯಾರು ರಾಜೀನಾಮೆ ಕೊಡುತ್ತಾರೋ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿರುವಂತೆ ಕಾಣುತ್ತಿದೆ.. ಅದರಲ್ಲೂ ಡಾಕ್ಟರ್ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾದ ಬಳಿಕ ಈಗ ಅವರೊಂದಿಗೆ ಇದ್ದ ಮತ್ತೆ ಮೂವರು ಶಾಸಕರು ರಾಜೀನಾಮೆ ಕೊಡುವ ಸುಳಿವು ಅರಿತ ಸಿಎಂಗೆ ಈಗ ಮತ್ತೆ ಪರೀಕ್ಷೆಯ ಕಾಲ ಶುರುವಾಗಿದೆ..ಸಿಎಂ ಕುಮಾರಸ್ವಾಮಿ ಇವತ್ತು ದಿಢೀರ್ ಅಂತ ರಮೇಶ್ ಜಾರಕಿಹೊಳಿಯವರ ಮನೆಗೆ ದೌಡಾಯಿಸಿದರು..ಹಿಂದೆ ಬಿಜೆಪಿ ಕಡೆ ಮುಖ ಮಾಡಿ ಮುಂಬೈನಲ್ಲಿದ್ದಾರೆ ಎನ್ನಲಾಗಿದ್ದ ರಮೇಶ್ ಜಾರಕಿಹೊಳಿ,ಮಹೇಶ್ ಕುಮಟಳ್ಳಿ, ನಾಗೇಂದ್ರ ಜೊತೆ ಚರ್ಚೆ ನಡೆಸಿದರು..

ಹಿಂದೆಲ್ಲ ಅತೃಪ್ತರ ಸಮಸ್ಯೆ ಎದುರಾಗಲೆಲ್ಲ ಅದು ಕಾಂಗ್ರೆಸ್ ಗೆ ಸಂಬಂಧಿಸಿದ್ದು ಅಂತ ಸುಮ್ಮನಿರುತ್ತಿದ್ದ ಸಿಎಂ ಇವತ್ತು ತಾವೇ ಹೋಗಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. .ಜಾಧವ್ ರಾಜೀನಾಮೆ ಬಳಿಕ ಕೆಲವೇ ದಿನಗಳಲ್ಲಿ ಈ ಮೂವರೂ ರಾಜೀನಾಮೆ ಕೊಡುತ್ತಾರೆಂಬ ಖಚಿತ ಮಾಹಿತಿಯ ಮೇರೆಗೆ ಸಿಎಂ,ನೇರವಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ..

ಮನೆ ಬಾಗಿಲಿಗೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಮಾತುಕತೆ ನಡೆಸಿದ್ದರಿಂದ ರಮೇಶ್ ಜಾರಕಿಹೊಳಿ ಸ್ವಲ್ಪ ಸಮಾಧಾನಗೊಂಡಿದ್ದಾರೆ..ಸಿಎಂ ಮೇಲೆ ಅಸಮಾಧಾನ ಇಲ್ಲ ಅಂತ ಪ್ರತಿಕ್ರಿಯಿಸಿ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಲ್ಲಿ ಅಸಮಾಧಾನ ಇದ್ದೇ ಇದೆ ಅಂತ ಮತ್ತೆ ಸರ್ಕಾರದಲ್ಲಿ ಕಂಪನ ಸೃಷ್ಟಿಸುವ ಮುನ್ಸೂಚನೆ ನೀಡಿದರು.ಇನ್ನು ಶಾಸಕ ನಾಗೇಂದ್ರ ಮಾತ್ರ ಏನೂ ಇಲ್ಲ ಎಂಬಂತೆ ಪ್ರತಿಕ್ರಿಯಿಸಿದರು..

ಆದ್ರೆ ಬಳ್ಳಾರಿ,ಬೆಳಗಾವಿಗೆ ಸಂಬಂಧಿಸಿದಂತೆ ಸಮಸ್ಯೆ ಇದೆ ಎಂಬುದನ್ನು ನಾಗೇಂದ್ರ ಒಪ್ಪಿಕೊಂಡಿದ್ದಾರೆ..ಆ ಮೂಲಕ ಕಾಂಗ್ರೆಸ್ ನಲ್ಲಿನ ಅಸಮಾಧಾನವನ್ನು ದೃಢಿಕರಿಸಿದ್ದಾರೆ..ಒಟ್ಟಿನಲ್ಲಿ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಹೋಯಿತು ಎನ್ನುತ್ತಿರುವಾಗ ಮತ್ತೆ ಸಣ್ಣದಾಗಿ ಹೊಗೆ ಕಾಣಿಸಿಕೊಳ್ಳುತ್ತಿದೆ..ಇದಕ್ಕೆ ಪರಿಹಾರ ಎಂಬಂತೆ ಅತೃಪ್ತ ಶಾಸಕರನ್ನು ಸಮಾಧಾನಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಪುಟ ವಿಸ್ತರಣೆ ಮಾಡುತ್ತಾರೆಂಬ ಸುದ್ದಿಯೂ ಇದೆ..

LEAVE A REPLY

Please enter your comment!
Please enter your name here