Home District ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಉಮೇಶ್ ಜಾಧವ್, ನಾಗೇಂದ್ರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ-ಸಿದ್ದು

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಉಮೇಶ್ ಜಾಧವ್, ನಾಗೇಂದ್ರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ-ಸಿದ್ದು

718
0
SHARE

ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರ ಅನರ್ಹಗೊಳಿಸುವಂತೆ ಶಿಫಾರಸ್ಸು ಮಾಡಲು ಸ್ಪೀಕರ್‌ಗೆ ಮನವಿ ಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಧರಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ,ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಮತ್ತು ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರನ್ನ ವಿರುದ್ಧ ಶಿಸ್ತು ಕ್ರಮಕ್ಕೆ ತೀರ್ಮಾನಿಸಲಾಗಿದೆ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಫೆಬ್ರವರಿ 15ರವರಗೆ ಬರಲು ಸಾಧ್ಯವಿಲ್ಲ ಎಂದು ನಾಲ್ವರು ಶಾಸಕರು ತಿಳಿಸಿದ್ದಾರೆ.

ಈ ನಾಲ್ವರೂ ಶಾಸಕರಿಗೆ ಸಾಕಷ್ಟು ಅವಕಾಶ ಕೊಟ್ಟೆ,ಶೋಕಾಸ್ ನೊಟೀಸ್ ನೀಡಿದೆ.ನಾಲ್ವರೂ ಸಹ ಉತ್ತರ ನೀಡಿ ತಾವು ಕಾಂಗ್ರೆಸ್ ಗೆ ನಿಷ್ಠರು.ಪಕ್ಷ ಬಿಟ್ಟು ಹೋಗಲ್ಲ ಎಂದು ಉತ್ತರಿಸಿದ್ದರು. ಅವರಿಗೆ ವೈಯಕ್ತಿಕವಾಗಿ ಬಂದು ಭೇಟಿ ಮಾಡುವಂತೆ ನೊಟೀಸ್ ಜಾರಿ ಮಾಡಿದ್ದೆ‌‌.

ಆದರೆ ಅದಕ್ಜೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹಾಗಾಗಿ ನಾವು ವಿಪ್ ಜಾರಿ ಮಾಡಿದ್ದೆವು.ಆದರೂ ಮೊನ್ಬೆ ಹಾಗು ನಿನ್ನೆ ವಿಧಾನಸಭೆ ಕಲಾಪಕ್ಕೂ ಗೈರು ಹಾಜರಾಗಿದ್ದರು.ಈ ಎಲ್ಲ ವಿಷಯಗಳನ್ನು ಶಾಸಕಾಂಗ ಸಭೆಯಲ್ಲಿ ಚರ್ಚಿಸಿದ್ದೇವೆ. ಸಂಬಂಧಿಸಿದ ನಾಲ್ವರೂ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಸರ್ವಾನುಮತದ ನಿರ್ಣಯವಾಗಿದೆ‌.

ಹಾಗಾಗಿ ನಾನು ಇಂದು ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ನಾಲ್ವರೂ ಶಾಸಕರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ‌ಜರುಗಿಸುವಂತೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here