Home Cinema ರಮ್ಯಾ ಹಾಕಿದ ನೀರ್ ದೋಸೆ “ತೂತು” ಎಂದು ಕೋರ್ಟ್ ಕೇಸಿಗೆ ಎಳ್ಳು ನೀರು..?! ಮೋದಿ ಕಳ್ಳ...

ರಮ್ಯಾ ಹಾಕಿದ ನೀರ್ ದೋಸೆ “ತೂತು” ಎಂದು ಕೋರ್ಟ್ ಕೇಸಿಗೆ ಎಳ್ಳು ನೀರು..?! ಮೋದಿ ಕಳ್ಳ ಎಂದು ಟ್ವೀಟ್ ಮಾಡಿದ್ದ ದಿವ್ಯ ಸ್ಪಂದನ, ಕೇಸು ಬಿದ್ದ ಮೇಲೆ ಆಗಬಹುದೇ ರಮ್ಯಾ ಬಂಧನ?

1625
0
SHARE

ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ದೊಡ್ಡ ಹೆಸರು. ಸಿನಿಮಾರಂಗದಲ್ಲೇ ಇದ್ದ ಕಾಲದಲ್ಲಿ ಈಕೆ ಕನ್ನಡದ ನಂಬರ್ ಒನ್ ನಟಿಯಾಗಿದ್ದವರು. ಆದರೆ ತಮ್ಮ ಚಿತ್ರಗಳಿಂದ ತಮ್ಮ ನಟನೆಯಿಂದ ಸುದ್ದಿ ಮಾಡಿದಷ್ಟೇ ಈಕೆ ಕಾಂಟ್ರವರ್ಸಿಗಳಿಂದಲೂ ಜನಪ್ರಿಯ ರಾಗಿದ್ದರು ಅನ್ನೋದಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಉದಾಹರಣೆಗಳಿವೆ.ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ಅವರಿಗೆ ಸದ್ಯಕ್ಕೆ ಎರಡು ವಿಷಯಗಳು ಅಟಕಾಯಿಸಿ ಕೊಂಡಿವೆ. ಅದರಲ್ಲಿ ಒಂದು ತಾವೇ ಹಾಕಿದ ಕೇಸಿನ ವಿಷಯದ್ದು. ಇನ್ನೊಂದು ತಮ್ಮ ಮೇಲೆ ಬಿದ್ದಿರೋ ಕೇಸಿನದ್ದು. ನೀರ್ ದೋಸೆ ಚಿತ್ರದ ವಿಷಯಕ್ಕೆ ಪತ್ರಕರ್ತರು ಮತ್ತು ಛಾಯಾಗ್ರಾಹಕರ ಮೇಲೆ ರಮ್ಯಾ ಹಾಕಿದ್ದ ಕೇಸು ಬಿದ್ದು ಹೋಗಿದೆ.

ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದಕ್ಕೆ ರಮ್ಯಾ ಅವರ ಮೇಲೆ ಕೇಸು ದಾಖಲಾಗಿದೆ.ಪ್ರಧಾನಿ ಮೋದಿ ವಿರುದ್ಧ ಮಾಡಿದ ಟ್ವೀಟ್ ನಿಂದಾಗಿ ರಮ್ಯಾ ಅವರ ಮೇಲೆ ಬಿದ್ದಿರೋ ಕೇಸಿನ ವಿಷಯಕ್ಕೆ ಬರೋಕೆ ಮುಂಚೆ ನೀರ್ ದೋಸೆ ಚಿತ್ರದ ವಿಷಯದಲ್ಲಿ ಏನಾಗಿತ್ತು ಅಂತ ನೋಡೋಣ ಬನ್ನಿ.ನಿರ್ದೇಶಕ ವಿಜಯ್ ಪ್ರಸಾದ್ ಅವರ ಎರಡನೇ ಚಿತ್ರ ನೀರ್ ದೋಸೆ. ಅದರಲ್ಲಿ ಜಗ್ಗೇಶ್ಮತ್ತು ದತ್ತಣ್ಣ ಅವರು ಪ್ರಮುಖ ಪಾತ್ರ ಮಾಡಿದ್ದರು. ಆದರೆ ಚಿತ್ರದ ಆರಂಭದಲ್ಲೇ ನಾನು ಜಗ್ಗೇಶ್ ಜೊತೆ ಆಕ್ಟ್ ಮಾಡಲ್ಲ, ಅವರಿಗೆ ಹೀರೋಯಿನ್ ಆಗಲ್ಲ ಅಂತ ತಕರಾರು ತೆಗೆದಿದ್ದರು ರಮ್ಯಾ.

ಆನಂತರ ಅವರದ್ದು ಜಗ್ಗೇಶ್ ಗೆ ಜೋಡಿ ಆಗೋ ಹೀರೋಯಿನ್ ಪಾತ್ರ ಅಲ್ಲ ಅಂತ ಗೊತ್ತಾದ ಮೇಲೆ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು.ಜಗ್ಗೇಶ್ ಗೆ ನಾಯಕಿ ಆಗಲ್ಲ ಅಂತ ರಮ್ಯಾ ಹೇಳಿದ ಈ ವಿಷಯ ಕೂಡ ಆಗ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಜಗ್ಗೇಶ್ ಮತ್ತು ರಮ್ಯಾ ನಡುವೆ ಮಾತಿನ ಸಮರವೇ ನಡೆದಿತ್ತು. ಕೊನೆಗೆ ಅದು ಹೇಗೋ ಕಾಂಪ್ರೊಮೈಸ್ ಆಗಿ, ಇಬ್ಬರೂ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು.ಹೀಗೆ ನೀರ್ ದೋಸೆ ಚಿತ್ರವೇನೋ ಸೆಟ್ಟೇರಿತ್ತು. ಹಲವು ದಿನಗಳ ಕಾಲ ಚಿತ್ರೀಕರಣವೂ ನಡೆದಿತ್ತು. ಆದರೆ, ನೀರ್ ದೋಸೆ ದೆಸೆಯಿಂದ ಕೆಲವು ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಕಂಟಕ ಬರುತ್ತೆ ಅಂತ ಆಗ ಯಾರಿಗೂ ಗೊತ್ತಿರಲಿಲ್ಲ.

ಹೇಳಿ ಕೇಳಿ ನೀರ್ ದೋಸೆ ಚಿತ್ರದಲ್ಲಿ ರಮ್ಯಾ ಅವರದ್ದು ಗ್ಲಾಮರಸ್ ಪಾತ್ರ. ಗ್ಲಾಮರಸ್ ಅಂದ್ರೆ ಮಾಮೂಲಿ ಗ್ಲಾಮರಸ್ ಪಾತ್ರ ಅಲ್ಲ. ಅದು ಕಾಲ್ ಗರ್ಲ್ ಪಾತ್ರ. ಹಾಗಾಗಿ ಆ ಚಿತ್ರದಲ್ಲಿ ರಮ್ಯಾ ಅವರ ಉಡುಗೆ ತೊಡುಗೆಗಳು ಬೋಲ್ಡ್ ಆಗಿಯೇ ಇದ್ದವು. ಮುಂದೆ ಅದೇ ಈ ಕಿರಿಕಿರಿಗೆ ಕಾರಣವಾಯ್ತು.ಹೌದು ಒಮ್ಮೆ ನೀರ್ ದೋಸೆ ಚಿತ್ರದ ಶೂಟಿಂಗ್ ಜಾಗಕ್ಕೆ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಸಹಜವಾಗಿಯೇ ಅಲ್ಲಿಗೆ ಪತ್ರಕರ್ತರು ಮತ್ತು ಕೆಲವು ಛಾಯಾಗ್ರಾಹಕರು ಆಗಮಿಸಿದ್ದರು. ಆದರೆ ಚಿತ್ರೀಕರಣ ನಡೆಯುವಾಗ ಅಲ್ಲಿ ತುಂಡುಡುಗೆ ತೊಟ್ಟ ರಮ್ಯಾ ಕಾಣಿಸಿಕೊಂಡರು. ಹೇಳಿ ಕೇಳಿ ರಮ್ಯಾ ಅವರಂಥ ನಟಿ ಅಂಥ ತುಂಡುಡುಗೆಯಲ್ಲಿ ಕಾಣಿಸಿಕೊಂಡರೆ ಅದು ಸೆನ್ಸೇಷನಲ್ ಸುದ್ದಿಯೇ ಅಲ್ಲವೇ.

ಹಾಗಾಗಿ, ಕೆಲವು ಪತ್ರಕರ್ತರು ತಮ್ಮ ಪತ್ರಿಕೆಗಳಿಗೆ ಈ ಪೋಟೋ ಬೇಕು ಎಂದು ಛಾಯಾಗ್ರಾಹಕ ರಿಗೆ ಫೋಟೋ ತೆಗೆಯುವಂತೆ ಸೂಚಿಸಿದರು. ಅಲ್ಲಿದ್ದ ಛಾಯಾಗ್ರಾಹಕರು ಕೂಡಲೇ ತಮ್ಮ ಕ್ಯಾಮೆರಾ ಕೈಗೆತ್ತಿಕೊಂಡರು. ಆದರೆ ಅದು ರಮ್ಯಾ ಅವರ ಕಣ್ಣಿಗೆ ಕಾನೂನನ್ನೇ ಕೈಗೆತ್ತಿಕೊಂಡಂತೆ ಕಾಣಿಸಿತು.ಕೂಡಲೇ ಕೋಪದಿಂದ ರಿಯಾಕ್ಟ್ ಮಾಡಿದ ರಮ್ಯಾ, ನೀವು ಹೀಗೆಲ್ಲಾ ಫೋಟೋ ತೆಗೆಯುವಂತಿಲ್ಲ ಎಂದು ತಾಕೀತು ಮಾಡಿದರು. ಆದರೆ, ಅಯ್ಯೋ, ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು ಎಂಬಂತೆ ಪ್ರೆಸ್ ಮೀಟ್ ಗೆ ಬಂದಮೇಲೆ ಫೋಟೋ ತೆಗೆಯಲೇ ಬೇಕು ಎನ್ನುತ್ತಾ ತಮ್ಮ ಕಾಯಕವನ್ನು ಮುಂದುವರಿಸಿದರು ಛಾಯಾಗ್ರಾಹಕರು. ಅದಾದ ನಂತರ ಆ ಚಿತ್ರಗಳು ಒಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು.

ಹಾಗಾಗಿ ಛಾಯಾಗ್ರಾಹಕರು ಮತ್ತು ಆ ಚಿತ್ರವನ್ನು ಪ್ರಕಟಿಸಿದ ಪತ್ರಕರ್ತನ ಮೇಲೆ ರಮ್ಯಾ ಫುಲ್ ಗರಂ ಆದರು. ಕೂಡಲೇ ಅವರೆಲ್ಲರ ಮೇಲೆ ಕೇಸು ಹಾಕಿಸಿ ಗಹಗಹಿಸಿ ನಕ್ಕಿದ್ದರು.ನಂತರ ಪತ್ರಕರ್ತರು ಮತ್ತು ಛಾಯಾಗ್ರಾಹಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ರಮ್ಯಾ ಅದಕ್ಕೆ ಬೆಲೆಯನ್ನೇ ಕೊಡಲಿಲ್ಲ. ನಾನು ಯಾವುದೇ ಕಾರಣಕ್ಕೂ ಕೇಸು ವಾಪಸು ತೆಗೆದುಕೊಳ್ಳೋದಿಲ್ಲ ಅಂತ ಖಡಕ್ಕಾಗಿ ಹೇಳಿಬಿಟ್ಟರು. ಪರಿಣಾಮವಾಗಿ ಅಲ್ಲಿಂದ ಇಲ್ಲಿಯವರೆಗೂ ಪತ್ರಕರ್ತರನ್ನು, ಮತ್ತು ಛಾಯಾಗ್ರಾಹಕರನ್ನು ಕೋರ್ಟಿಗೆ ಅಲೆದಾಡಿಸಿದ್ದರು ರಮ್ಯಾ.ಆ ಸಮಯದಲ್ಲಿ ಜಗ್ಗೇಶ್ ಕೂಡಾ ರಮ್ಯಾ ಅವರ ವಿರುದ್ಧ ಮಾತನಾಡಿದರು. ಇದು ಅವರಿಬ್ಬರ ನಡುವೆ ಇನ್ನಷ್ಟು ವಿರಸಕ್ಕೆ ಕಾರಣವಾಯ್ತು.

ಆಗಿನಿಂದ ಈಗಿನವರೆಗೂ ಚಿತ್ರನಟ ಜಗ್ಗೇಶ್ ಹಲವು ವಿಷಯಗಳಿಗೆ ರಮ್ಯಾನ ಟೀಕೆ ಮಾಡ್ತಾನೇ ಇರ್ತಾರೆ.. ಇತ್ತೀಚಿಗೆ  ವ್ಯಕ್ತಿಯೋರ್ವ ‘ರಮ್ಯಾ ಮೇಡಂ ಅವರು ಸಿಕ್ಕಾಪಟ್ಟೆ ರಾಜಕೀಯ ಗೊತ್ತಿರೊ ಥರ ಮಾತಾಡ್ತಾ ಇದ್ದಾರೆ.. ಅವರಿಗೆ ಸ್ವಲ್ಪ ಕ್ಲಾಸ್ ತಗೋಳಿ ಸರ್..’ ಅಂತ ಜಗ್ಗೇಶ್‌‌ರನ್ನು ಆಗ್ರಹಿಸಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಜಗ್ಗೇಶ್‌‌, ‘ಪರರ ಪರಿವರ್ತಿಸಲು ವ್ಯಯ ಮಾಡುವ ಸಮಯವನ್ನ ನಿಮ್ಮ ಪರಿವರ್ತನೆಗೆ ಬಳಸಿಕೊಳ್ಳಿ! ಬದುಕು ಪಕ್ವವಾಗುತ್ತೆ! ಹೋದ ಸಮಯ ಮತ್ತೆಬರದು! ಕಾಲಾಯತಸ್ಮೈನಮಃ’ ಅಂತ ಬುದ್ಧಿವಾದ ಹೇಳಿದ್ದರು.ಆದರೆ ಆಗ ಜಗ್ಗೇಶ್ ಹೇಳಿದಂತೆ ಈಗ ಕಾಲ ರಮ್ಯಾ ಅವರಿಗೆ ಬುದ್ಧಿ ಹೇಳಿದೆ. ಅದು ಕೋರ್ಟ್ ನ ಮೂಲಕ.

ಹೌದು ಇಷ್ಟು ದಿನಗಳವರೆಗೆ ನಡೆದ ಈ ಕೇಸಿನ ತೀರ್ಪು ಕೊಟ್ಟಿರೋ ಕೋರ್ಟು, ಇದರಲ್ಲಿ ಪತ್ರಕರ್ತರು ಮತ್ತು ಛಾಯಾಗ್ರಾಹಕರ ಯಾವ ತಪ್ಪೂ ಇಲ್ಲ ಎಂದು ಹೇಳಿ ರಮ್ಯಾ ಅವರ ವಾದವನ್ನು ತಳ್ಳಿ ಹಾಕಿದೆ. ಹಾಗಾಗಿ ರಮ್ಯಾ ಅಂದು ದೊಡ್ಡದಾಗಿ ಪೋಸು ಕೊಟ್ಟು ಹಾಕಿದ್ದ ಕೇಸು ಈಗ ಬಿದ್ದು ಹೋಗಿದೆ. ಇದು ರಮ್ಯಾ ಅವರಿಗೆ ಸದ್ಯಕ್ಕೆ ಬಿದ್ದಿರುವ ಮೊದಲ ಏಟು.ಪ್ರಧಾನಿ ನರೇಂದ್ರ ಮೋದಿ ಅವರನ್ನ ಕೆಣಕಿ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ ಕಾಂಗ್ರೆಸ್ ನಾಯಕಿ ರಮ್ಯಾ ಮತ್ತೊಮ್ಮೆ  ಪೇಚಿಗೆ ಸಿಲುಕಿದ್ದಾರೆ. ಪ್ರತಿಸಾರಿಯಂತೆ ಮತ್ತೊಮ್ಮೆ ರಮ್ಯಾ ನಗೆಪಾಟಲಿಗೆ ಈಡಾಗಿದ್ದಾರೆ.  ರಮ್ಯಾ ವಿರುದ್ಧ ಟ್ವಿಟರ್‌, ಫೇಸ್ ಬುಕ್ ನಲ್ಲಿ ಟೀಕೆ, ವ್ಯಂಗ್ಯದ ಸಂದೇಶಗಳು ಹರಿದಾಡತೊಡಗಿದ್ದು,  ಸಿಕ್ಕಾಪಟ್ಟೆ ವೈರಲ್ ಆಗಿವೆ.

ಇತ್ತೀಚೆಗೆ ದೇಶದಾದ್ಯಂತ ಮೋದಿ ವಿರುದ್ಧ ಕೇಳಿ ಬರ್ತಾ ಇರೋ ಮಾತು ಅಂದ್ರೆ, ಮೋದಿ ಚೌಕೀದಾರ ಅಲ್ಲ, ಪಾಲುದಾರ. ಹಾಗಾಗಿ ಮೇರಾ ಪಿಎಮ್ ಚೋರ್ ಹೈ ಅನ್ನೋದು. ಇದನ್ನು ಬಹುತೇಕ ಜಾಲತಾಣಿಗರು ತಮ್ಮ ಪೋಸ್ಟ್ ಗಳಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದರ ಜೊತೆಗೆ ಮೇರಾ ಪಿಎಮ್ ಚೋರ್ ಹೈ ಎನ್ನುವ ಸಾಲು ಇರೋ ಟೀ ಶರ್ಚ್ ಗಳನ್ನು ಹಾಕಿಕೊಂಡು ಮೋದಿಯನ್ನು ವಿರೋಧಿಸುತ್ತಿದ್ದಾರೆ. ಆದರೆ ವಿಪರ್ಯಾಸ ಅಂದ್ರೆ ರಮ್ಯಾ ಕೂಡ ಇದೇ ಮೋದಿ ಚೋರ್ ಹೈ ಎನ್ನುವ ಸಾಲನ್ನೇ ಟ್ವೀಟ್ ಮಾಡಿದ್ದರು. ಆದರೆ ಅದೇ ಟ್ರೋಲ್ ಮಾಡಿದ ಬೇರೆ ಯಾರ ಮೇಲೂ ದಾಖಲಾಗದ ಕೇಸು ರಮ್ಯಾ ಅವರ ಮೇಲೆ ದಾಖಲಾಗಿದೆ.

ಉತ್ತರ ಪ್ರದೇಶದ ಗೊಮ್ಟಿ ನಗರ ಪೊಲೀಸ್ ಸ್ಟೇಷನ್ ನಲ್ಲಿ ರಮ್ಯಾ ಅವರ ವಿರುದ್ಧ ಎರಡು ಸೆಕ್ಷನ್ ಗಳ ಅಡಿಯಲ್ಲಿ ಕೇಸು ದಾಖಲಾಗಿದೆ.ಒಟ್ಟಿನಲ್ಲಿ ಮತ್ತೊಮ್ಮೆ ರಾಜಕೀಯವಾಗಿಯೂ ರಮ್ಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಮ್ಯಾ ಮಾಡಿದ ಟ್ವೀಟ್ ಆಕೆಗೆ ಸಂಕಷ್ಟ ತಂದಿದೆ. ಅಸಲಿಗೆ, ರಮ್ಯಾ ಅವರ ಟ್ವೀಟ್ ಗಳು ಹೇಗಿರುತ್ತವೆ ಅಂದ್ರೆ, ಅವರ ಪಕ್ಷದವರೇ ಇವರ ಟ್ವೀಟ್ ಗಳ ಬಗ್ಗೆ ಪ್ರಶ್ನೆ ಮಾಡಿದರೆ, ಅವರು ಟ್ವೀಟ್ ಮಾಡಿದ್ದನ್ನು ನಾನು ನೋಡಿಲ್ಲ, ಹಾಗಾಗಿ ಅದರ ಬಗ್ಗೆ ಕಾಮೆಂಟ್ ಮಾಡೊಲ್ಲ ಎಂದು ಜಾರಿಕೊಂಡುಬಿಡುತ್ತಾರೆ. ಹೀಗೆ, ತಮ್ಮ ವಿವಾದಾತ್ಮಕ ಕೆಲಸಗಳ ಮೂಲಕ ಸದ್ದು ಮಾಡೋ ರಮ್ಯಾ ವಿರುದ್ಧ ಈಗ ಕೇಸೊಂದು ದಾಖಲಾಗಿದೆ, ಅವರು ಹಾಕಿದ ಕೇಸೊಂದು ಬಿದ್ದು ಹೋಗಿದೆ. ರಮ್ಯಾ ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಅನ್ನೋದು ಮುಂದಿನ ಕುತೂಹಲ.

LEAVE A REPLY

Please enter your comment!
Please enter your name here