Home Cinema ರವಿಚಂದ್ರನ್-ಉಪೇಂದ್ರ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್..!! ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಲಿದ್ದಾರೆ ಕ್ರೇಜಿಸ್ಟಾರ್-ರಿಯಲ್‌ಸ್ಟಾರ್..!?

ರವಿಚಂದ್ರನ್-ಉಪೇಂದ್ರ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್..!! ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಲಿದ್ದಾರೆ ಕ್ರೇಜಿಸ್ಟಾರ್-ರಿಯಲ್‌ಸ್ಟಾರ್..!?

2067
0
SHARE

ರವಿಚಂದ್ರ.. ರವಿಚಂದ್ರನ್ ಹಾಗೂ ಉಪೇಂದ್ರ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನೊತ್ತು ಇವತ್ತು ಸೆಟ್ಟೇರಿದ ನಯಾ ಸಿನಿಮಾ.ರಿಯಲ್ ಸ್ಟಾರ್ ಮತ್ತು ಕ್ರೇಝೀಸ್ಟಾರ್ ಸಮಾಗಮವಿರುವ ಚಿತ್ರ ರವಿಚಂದ್ರ. ಇದೇ ಮೊದಲ ಬಾರಿಗೆ ರವಿಚಂದ್ರನ್ ಹಾಗೂ ಉಪೇಂದ್ರ ಈ ಚಿತ್ರದ ಮೂಲಕ ಒಟ್ಟಿಗೆ ಕಾಣಿಸಿಕೊಳ್ತಿರೋದು ಇಲ್ಲಿನ ಬಹುದೊಡ್ಡ ವಿಶೇಷ. ಇಂದು ಬಸವನಗುಡಿ ಅಂದ ಹಾಗೇ ರವಿಚಂದ್ರ, ತೆಲುಗಿನ ಬಲಪು ಚಿತ್ರದ ಕನ್ನಡ ಅವತರಣಿಕೆ.

ಮುಖ್ಯ ಪಾತ್ರದಲ್ಲಿ ಇಲ್ಲಿ ಉಪ್ಪಿ ಕಾಣಸಿಗಲಿದ್ದರೆ, ರವಿಚಂದ್ರನ್ ಮತ್ತೊಂದು ಮಹತ್ತರ ಪಾತ್ರವನ್ನ ನಿರ್ವಹಿಸಲಿದ್ದಾರೆ. ಇನ್ನು, ಇವರಿಬ್ಬರನ್ನ ಒಂದುಗೂಡಿಸುವ ಸಾಹಸ ಮಾಡಿರೋದು ಓಂ ಪ್ರಕಾಶ್ ರಾವ್.ರವಿಚಂದ್ರ ಬೆಸಿಕಲಿ ಅಂಡರ್‌ವರ್ಲ್ಡ್ ಬೇಸ್ಡ್ ಸಿನಿಮಾ. ರವಿ ಮತ್ತು ಚಂದ್ರ ಪಾತ್ರದಲ್ಲಿ ಉಪ್ಪಿ, ರವಿಚಂದ್ರನ್ ಕಾಣಿಸಿಕೊಳ್ತಿದ್ದಾರೆ.

ಅಲ್ಲದೆ ರಿಮೇಕ್ ಸಿನಿಮಾ ಆದ್ರು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದೀವಿ ಎನ್ನುವ ನಿರ್ದೇಶಕರು ಚಿತ್ರದ ರೇರ್ ಕಾಂಬಿನೇಷನ್ ಬಗ್ಗೆ ಹೇಳೋದು ಹೀಗೆ.ಆರ್. ಎಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುವ ಎಲ್ಲಾ ಸಿನಿಮಾಗಳಿಗೆ ರವಿಚಂದ್ರನ್ ಅವರೇ ಕ್ಲಾಪ್ ಮಾಡ್ತಾ ಬಂದಿದ್ದು. ಇಂದು ಅದೇ ಬ್ಯಾನರ್‌ನ ಚಿತ್ರದಲ್ಲಿ ನಟಿಸ್ತಿರುವ ಖುಷಿಯಲ್ಲಿದ್ರು.

ಓಂ ಪ್ರಕಾಶ್ ನಿರ್ದೇಶನ ಟೆಕ್ನಿಕಲಿ ಹೇಗಿರುತ್ತೆ ಅನ್ನೊದು ಕುತೂಹಲವಿದೆ ಎನ್ನುವ ರವಿಚಂದ್ರನ್, ಟೈಟಲ್‌ನಲ್ಲಿ ನಾನು ಹೀರೋ, ಸಿನಿಮಾದಲ್ಲಿ ಉಪೇಂದ್ರ ಹೀರೊ ಆಗಿ ನಟಿಸುತ್ತಿದ್ದಾರೆ. ೧೪ ವರ್ಷಗಳ ಹಿಂದೆ ಆದಿ ಶೇಷ ಸಿನಿಮಾ ಮಾಡಲು ಹೊರಟಿದ್ವಿ ಕಾರಣಾಂತರಗಳಿಂದ ನಿಂತುಹೋಗಿತ್ತು. ಅದರ ಬದ್ಲಿಗೆ ಈಗ ಈ ಸಿನಿಮಾ ಮಾಡ್ತಿರುವ ಖುಷಿ ಇದೆ ಎನ್ನುವ ಕ್ರೇಝೀ ಸ್ಟಾರ್ ಕ್ರೇಜಿ ಮಾತುಗಳು ಇಲ್ಲಿದೆ.

ಇನ್ನು ಮೂರು ದಿಗ್ಗಜ ನಿರ್ದೇಶಕರು ಇರುವ ಚಿತ್ರಕ್ಕೆ ರಿಯಲ್ ಸ್ಟಾರ್ ನಾಯಕ. ಟ್ರೇಡಿಷನಲ್ ಲುಕ್‌ನಲ್ಲಿ ಮಿಂಚ್ತಿದ್ದ ರಿಯಲ್ ಸ್ಟಾರ್ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಎ ಸಿನಿಮಾ ಮಾಡಿದಾಗಿನಿಂದಲ್ಲೂ ರವಿಚಂದ್ರನ್ ಅವರ ಜೊತೆಗೆ ಒಡಾನಾಟದಲ್ಲಿರುವ ಉಪ್ಪಿ. ಕರ್ಮಷಿಯಲ್ ಸಿನಿಮಾ ಮೂಲಕ ರವಿಮಾಮನ ಜೊತೆ ನಟಿಸುತ್ತಿರುವ ಖುಷಿಯಲ್ಲಿ ಮಾತನಾಡಿದ್ದು ಹೀಗೆ.

LEAVE A REPLY

Please enter your comment!
Please enter your name here