Home Crime ರವಿ ಡಿ. ಚೆನ್ನಣ್ಣನವರ್ ಬಂದ್ರೂ ಸಿಲಿಕಾನ್ ಸಿಟಿಯಲ್ಲಿ ಕೇವಲ ಒಂದು ಮೊಬೈಲ್‌ಗೋಸ್ಕರ ಬರ್ಬರ ಹತ್ಯೆ..!!!

ರವಿ ಡಿ. ಚೆನ್ನಣ್ಣನವರ್ ಬಂದ್ರೂ ಸಿಲಿಕಾನ್ ಸಿಟಿಯಲ್ಲಿ ಕೇವಲ ಒಂದು ಮೊಬೈಲ್‌ಗೋಸ್ಕರ ಬರ್ಬರ ಹತ್ಯೆ..!!!

913
0
SHARE


ಕೇವಲ ಒಂದು ಮೊಬೈಲ್‌ಗೋಸ್ಕರ ಒಂದು ಪ್ರಾಣವನ್ನೇ ಬಲಿ ಪಡೆದಿದ್ದಾರೆ. ರವಿ ಡಿ. ಚೆನ್ನಣ್ಣನವರ್ ಬಂದ್ರೂ ಸಿಲಿಕಾನಿ ಸಿಟಿಯಲ್ಲಿ ಕೊಲೆ, ರಾಬರಿಗಳಿಗೆ ಕೊನೆ ಅನ್ನೋದೆ ಸಿಕ್ತಿಲ್ಲ… ಸಾಲು, ಸಾಲು ಹೆಣ ಬೀಳ್ತಾ ಇದ್ರೂ, ಖಾಕಿಗಳು ಮಾತ್ರ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಸುಮ್ಮನಿದ್ದಾರೆ….

ರವಿ ಚೆನ್ನಣ್ಣನರ್ ವೆಸ್ಟ್ ಡಿವಿಜನ್‌ಗೆ ಬರ್ತಿದ್ದಂಗೆ ಜನ ಬಿಲ್ಡಪ್ ಕೊಟ್ಟಿದ್ದೋ ಕೊಟ್ಟಿದ್ದು. ಅರ್ಧ ಬೆಂಗಳೂರೇ ರವಿ ಚನ್ನಣ್ಣನವರ್ ಕೈಯಲ್ಲಿದೆ. ರೌಡಿಗಳು, ಪರೋಡಿಗಳು, ರಾಬ್ರಿ ಡವ್ ಗಳೆಲ್ಲಾ ಊರು ಬಿಟ್ಟು ಹೋಗ್ಬೇಕು ಅಂತಾ ಫೇಸ್ ಬುಕ್ ನಲ್ಲಿ ಬರ್ದಿದ್ದೇ ಬರ್ದಿದ್ದು..

ರವಿ ಚೆನ್ನಣ್ಣನವ್ ಕೂಡಾ ರಾತ್ರಿಯೆಲ್ಲಾ ಬೈಕ್ ನಲ್ಲಿ ಸುತ್ತು ಹೊಡ್ದಿದ್ದೇ ಹೊಡ್ದಿದ್ದು…ಆದ್ರೆ ಏನೂ ಪ್ರಯೋಜನ ಇಲ್ಲ…ರವಿ ಚನ್ನಣ್ಣನವರ್ ಬಂದ ಮೇಲೇನೆ ವೆಸ್ಟ್ ಡಿವಿಜನ್ ನಲ್ಲಿ ಜಾಸ್ತಿ ಕ್ರೈಂಗಳಾಗ್ತಿದೆ… ಮೊದ್ಲೆಲ್ಲಾ ಮೊಬೈಲ್ ಕಿತ್ಕೊಂಡು ಹೋಗ್ತಿದ್ರು, ಆದ್ರೀಗ ಪ್ರಾಣ ತೆಗೆದು, ಮೊಬೈಲ್ ಕಿತ್ಕೊಂಡು ಹೋಗುವಷ್ಟು ಸ್ವತಂತ್ರ ಸಿಕ್ಕಿದೆ ರವಿ ಚೆನ್ನಣ್ಣನವರ್ ಬಂದ ಮೇಲೆ…

 

ಈ ಹುಡುಗನಿಗೀಗ ಕೇವಲ 21 ವರ್ಷ, ಈತನ ಹೆಸಲು ರಾಹುಲ್, ರಾಜೇಶ್ವರಿ ಥಿಯೇಟರ್‌ನಲ್ಲಿ ಕೆಲಸ ಮಾಡ್ಕೊಂಡಿದ್ದ. ರಾತ್ರಿ ಫ್ರೆಂಡ್ಸ್ ದೀಪಾಂಜಲಿ ನಗರದಲ್ಲಿ ದೇವ್ರು ಕೂರ್ಸಿದ್ರಿಂದ ಊಟಕ್ಕೆಂದು ಹೋಗಿದ್ದ. ವಾಪಸ್ ಬರುವಾಗ ಬೈಕ್ ನಲ್ಲಿ ಬಂದಿದ್ದ ರಾಬ್ರಿ ಡವ್ ಗಳು ಚಾಕು ತೋರ್ಸಿ ಮೊಬೈಲ್ ಕೇಳಿದ್ದಾರೆ… ಕೊಡಲ್ಲ ಅಂದಿದ್ದಕ್ಕೆ ಚಾಕು ಚುಚ್ಚಿ ಮೊಬೈಲ್ ಕಿತ್ಕೊಂಡು ಹೋಗಿದ್ದಾರೆ..

ನಿನ್ನಯಷ್ಟೇ, 4,800 ರೂಪಾಯಿ ಕೊಟ್ಟು ಹೊಸ ಮೊಬೈಲ್ ತಗೊಂಡಿದ್ದ ರಾಹುಲ್ ತನ್ನ ತಾಯಿಯ ಫಸ್ಟ್ ಫೋಟೋ ಹಿಡ್ದು ಮೊಬೈಲ್ ನ ಸ್ಕ್ರೀನ್ ಸೇವರ್ ಮಾಡ್ಕೊಂಡಿದ್ದ. ಸಂಜೆ ಮನೆ ಬಿಡುವಾಗ್ಲೂ ತಾಯಿ ಜೊತೆ ಸೆಲ್ಫಿ ತಗೊಂಡಿದ್ದ. ತಾಯಿ ಫೋಟೋ ಇದ್ದಿದ್ರಿಂದ್ಲೇ ದರೋಡೆಕೋರರಿಗೆ ಮೊಬೈಲ್ ಕೊಡೋಕೆ ಒಪ್ಪಿರ್ಲಿಲ್ಲ. ಆದ್ರೂ ಬಿಡದ ರಾಬ್ರಿಗಳು ಇವನ ಪಕ್ಕೆಬೆಲುಗಿ ಚುಚ್ಚಿ ಮೊಬೈಲ್ ಸ್ನಾಚ್ ಮಾಡ್ಕೊಂಡು ಹೋಗಿದ್ದಾರೆ…

ಮಜಾ ಅಂದ್ರೆ ಇವನ ಕೊಲೆ ಮಾಡಿದ ಜಾಗದ ನೂರು ಮೀಟರ್ ನಲ್ಲೇ ಹೊಯ್ಸಳಾ ರೌಂಡ್ಸ್ ಬೇರೆ ಇತ್ತು.. ಆದ್ರೂ, ದರೋಡೆಕೋರರು ಜಗ್ಗದೇ ಚುಚ್ಚಿ ಸಾಯ್ಸಿದ್ದಾರೆ ಅಂದ್ರೆ ಲೆಕ್ಕ ಹಾಕೊಳ್ಳಿ ಈ ಬ್ಯಾಟರಾಯನಪುರ ಪೊಲೀಸ್ ನೋರ್ನಾ ಕಂಡ್ರೆ ಇನ್ನೆಷ್ಟು ಭಯ ಇದೆ ಅಂಥಾ. ಅಫ್ಟ್ರಾಲ್ 5 ಸಾವಿರ ಮೊಬೈಲ್‌ಗೆ ಕೊಲೆ ಮಾಡ್ತಾರೆ ಅಂದ್ರೆ 10 ಗ್ರಾಂ ಚಿನ್ನ ಕಂಡ್ರೆ ಬಿಡ್ತಾರಾ…

LEAVE A REPLY

Please enter your comment!
Please enter your name here