Home Cinema ರಶ್ಮಿಕಾಗಾಗಿ ದೇವಸ್ಥಾನ ಕಟ್ಟಲು ಮುಂದಾಯ್ತಾ ಭಕ್ತಗಣ..?

ರಶ್ಮಿಕಾಗಾಗಿ ದೇವಸ್ಥಾನ ಕಟ್ಟಲು ಮುಂದಾಯ್ತಾ ಭಕ್ತಗಣ..?

1612
0
SHARE

ಸಿನಿಮಾ ಸ್ಟಾರ್‌ಗಳು ಕೆಲವರಿಗೆ ಕೇವಲ ಆಕ್ಟ್ ಮಾಡೋ ನಟರಾಗಿರಲ್ಲ. ಬದಲಾಗಿ ದೇವರಾಗಿಬಿಟ್ಟಿರ‍್ತಾರೆ. ಆ ದೇವರಾಗಿಗೋಸ್ಕರ ಏನು ಬೇಕಾದ್ರೂ ಮಾಡಲು ಅಭಿಮಾನಿಗಳು ರೆಡಿಯಾಗಿರ‍್ತಾರೆ. ಈಗ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣಗೂ ಇಂತಹ ಡೈಹಾರ್ಡ್ ಫ್ಯಾನ್‌ಗಳು ಹುಟ್ಟಿಕೊಂಡ್ರಾ ಎನ್ನುವ ಪ್ರಶ್ನೆ ಬಂದಿದೆ.ಯಾಕಂದ್ರೆ ದಿನೇದಿನೇ ಹೆಚ್ಚಾಗ್ತಿರೋ ರಶ್ಮಿಕಾ ಫ್ಯಾನ್ ಫಾಲೊವಿಂಗ್ ಹಾಗೂ ಸಿನಿಮಾಗಳ ಸಂಖ್ಯೆ ನೋಡ್ತಿದ್ರೆ ರಶ್ಮಿಕಾ ಟಾಕ್ ಆಫ್ ದಿ ಟೌನ್ ಆಗಿರೋದ್ಯಾಕೆ ಎನ್ನುವ ವಿಷಯ ಬಹಳ ಕ್ಲಿಯರ್ ಆಗಿ ತಿಳಿಯುತ್ತೆ. ಆದರೂ ರಶ್ಮಿಕಾ ಅಂದ್ರೆ ರಶ್ಮಿಕಾನೇ ಬಿಡಿ.ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಮನದಾಳದ ಆಸೆಯೊಂದನ್ನ ಬಿಚ್ಚಿಟ್ಟಿದ್ದಾರೆ.

ರಶ್ಮಿಕಾ ತನಗಾಗಿ ಯಾರಾದ್ರೂ ದೇವಸ್ಥಾನ ಕಟ್ಟಿದ್ರೆ ಚೆನ್ನಾಗಿರುತ್ತೆ ಎನ್ನುವ ಕನಸಿನಲ್ಲಿದ್ದರಂತೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳಿಗೋಸ್ಕರ ದೇವಸ್ಥಾನ ಕಟ್ಟಿಸುವ ಪರಿಪಾಠ ಯಾಕೋ ರಶ್ಮಿಕಾಗೆ ಸಕತ್ ಇಷ್ಟವಾದಂತಿದೆ. ಹಾಗಾಗೀ, ಎಲ್ಲೋ ಇನ್‌ಡೈರೆಕ್ಟ್ ಆಗಿ ತಮ್ಮ ಅಭಿಮಾನಿಗಳಿಗೆ ತನಗೂ ದೇವಸ್ಥಾನ ಕಟ್ಟಿ ಎಂದಿರೋಹಾಗಿದೆ. ಏಕಾಏಕಿ ರಶ್ಮಿಕಾಗೆ ಈ ಮಹದಾಸೆ ಯಾಕೇ ಹುಟ್ಟಿತೋ ಗೊತ್ತಿಲ್ಲ. ಬಹುಶಃ ತೆಲುಗು ಚಿತ್ರರಂಗದಲ್ಲಿ ಬಹಳ ಆಕ್ಟಿವ್ ಆಗಿ ಹೆಸರು ಮಾಡ್ತಿರೋ ರಶ್ಮಿಕಾ ಮುಂದೆ ನನಗೂ ಅಭಿಮಾನಿಗಳಿಂದ ಈ ಗೌರವ ಸಿಗಲಿ ಎನ್ನುವ ಬಯಕೆಯಿರಬಹುದೇನೊ…?

ಅಸಲಿಗೆ ರಶ್ಮಿಕಾಗೆ ಈ ಆಸೆ ಹುಟ್ಟಿದ್ದೇ ನಟಿ ಖುಷ್ಬೂರಿಂದ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ತಮ್ಮದೇ ಛಾಪು ಮೂಡಿಸಿದ ಖೂಷ್ಬೂ ಅಭಿಮಾನಿ ಬಳಗದ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ೨೦ ವರ್ಷಗಳ ಹಿಂದೆಯೇ ಪಂಚಭಾಷಾ ನಟಿ ಎನಿಸಿಕೊಂಡು ಪ್ಯಾಪುಲರ್ ಆದ ಖೂಷ್ಬುಗೆ ಫ್ಯಾನ್ಸ್ ಹವಾನೇ ಬೇರೆ ಇತ್ತು. ತಮ್ಮ ಫೇವರಿಟ್ ನಟಿಗೆ ದೇವಸ್ಥಾನವಿದ್ರೆ ಚೆನ್ನಾಗಿರುತ್ತೆ ಅಂತ ಡಿಸೈಡ್ ಮಾಡಿದ ಖುಷ್ಬು ಅಭಿಮಾನಿಗಳು ಖುಷ್ಬು ಹೆಸರಿನಲ್ಲಿ ದೇವಸ್ಥಾನವನ್ನ ನಿರ್ಮಾಣ ಮಾಡಿಯೇಬಿಟ್ರು.

ಆ ಟೈಮ್‌ನಲ್ಲಿ ಖುಷ್ಬು ಸಿನಿಮಾಗಳ ಸೌಂಡ್ ಹಾಗಿತ್ತು ಬಿಡಿ. ಚಿತ್ರರಂಗವನ್ನ ಅಕ್ಷರಶಃ ಆಳಿದ ಕೀರ್ತಿಗೆ ಸಲ್ಲಿಸಿದ್ದ ಗೌರವವದು. ಖುಷ್ಬು ಕಾಲದ ಸ್ವೀಟ್ ಮೂಮೆಂಟ್‌ಗಳನ್ನ ನೆನಪಿಸಿಕೊಂಡ ರಶ್ಮಿಕಾಗೆ ತಂದೆ ಕೂಡ ಖುಷ್ಬು ಸಿನಿಟೈಮ್ ಹೇಗಿತ್ತು ಅಂತ ಪಾಠ ಮಾಡಿದ್ರಂತೆ.ಅಭಿಮಾನಿಗಳು ತಮ್ಮ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸಬೇಕಾದ್ರೆ ಪಾತ್ರಗಳ ಮೂಲಕ ಪರ್ಮನೆಂಟಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಸಂಪಾದಿಸಬೇಕು. ನಿರಂತರವಾಗಿ ಸಿನಿಮಾರಂಗದಲ್ಲಿ ಸಾಧನೆ ಮಾಡಿರಬೇಕು. ರಶ್ಮಿಕಾಗೆ ಭಾರೀ ದೊಡ್ಡಮಟ್ಟದ ಫ್ಯಾನ್ ಬಳಗವಿದ್ರೂ ದೇವಸ್ಥಾನ ಕಟ್ಟಿಸೋಕೆ ಇಟ್ಸ್ ಟು ಅರ್ಲಿ ಅಂತಿದೆ ಗಾಂಧಿನಗರ.

ಆದರೆ ನಾಯಕಿಯಾಗಿ ರಶ್ಮಿಕಾ ಅಚಿವ್‌ಮೆಂಟ್‌ಗಳನ್ನೂ ತಳ್ಳಿಹಾಕುವಂತಿಲ್ಲ. ಶಾರ್ಟ್ ಟೈಮ್‌ನಲ್ಲೇ ತಮ್ಮ ಸಿನಿಮಾರ್ಕೆಟನ್ನ ವಿಸ್ತರಿಸಿಕೊಂಡಿರೋ ಈ ಕಿರಿಕ್ ಹುಡುಗಿಗೂ ದೊಡ್ಡ ಫ್ಯಾನ್ ಬೇಸ್ ಇದೆ. ತಮ್ಮ ಸಿನಿಮಾ ಹಾಗೂ ಕಾಂಟ್ರವರ್ಶಿಯಲ್ ಹೇಳಿಕೆಗಳಿಂದ ಸದಾ ಸುದ್ಧಿಯಲ್ಲಿರೋ ರಶ್ಮಿಕಾಗೆ ಇನ್ನೂ ಇಂತಹ ದೇವಸ್ಥಾನದ ಗೌರವಗಳಿಗೆ ಟೈಮ್ ಇದೆ ಎನ್ನಬಹುದು.ಈಗ ರಶ್ಮಿಕಾಗೆ ತನಗೂ ಯಾರಾದ್ರೂ ಈ ರೀತಿಯ ಫ್ಯಾನ್‌ಗಿರಿ ಮೆರೆಯಲಿ ಎನ್ನುವ ಆಸೆ ಹುಟ್ಟಿಕೊಂಡಿರೋದು ಆಶ್ಚರ್ಯವೇ ಸರಿ.

ರಶ್ಮಿಕಾ ಮನಸ್ಸಿನಲ್ಲಿ ಇಂತಹ ಒಂದು ಯೋಚನೆ ಹೇಗೆಬಂತು ಎನ್ನುವುದರ ಬಗ್ಗೆಯೂ ಡೌಟ್ ಇದೆ. ರಶ್ಮಿಕಾ ಅಭಿಮಾನಿಗಳೇನಾದ್ರೂ ಇವರನ್ನ ದೇವಸ್ಥಾನ ಕಟ್ಟಿಸುವ ವಿಚಾರವಾಗಿ ಮಾತನಾಡಿದ್ರಾ ಎನ್ನುವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಹಿಟ್ ಮೇಲೆ ಹಿಟ್ ಕೊಟ್ರೂ ಶಾಶ್ವತವಾಗಿ ಫ್ಯಾನ್ಸ್ ಹೃದಯಗಳಲ್ಲಿ ನೆಲೆಯೂರೋದು ಅಷ್ಟು ಸುಲಭದ ಮಾತಲ್ಲ. ಈಗಾಗಲೇ ಕನ್ನಡ ಚಿತ್ರರಂಗದಿಂದ ಸ್ವಲ್ಪ ಗ್ಯಾಪ್ ಪಡೆದುಕೊಡಿರೋ ರಶ್ಮಿಕಾರನ್ನ ಕನ್ನಡಿಗರು ನಿಧಾನವಾಗಿ ಮರೆತುಬಿಟ್ಟಿದಾರೆ. ಇನ್ನು ದೇವಸ್ಥಾನದ ವಿಷಯಕ್ಕೆ ಬಂದ್ರೆ ರಶ್ಮಿಕಾ ತೆಲುಗು ಫ್ಯಾನ್‌ಗಳಿಂದ ಆಫಿಶಿಯಲ್ ಸ್ಟೇಟ್‌ಮೆಂಟ್ ಬಂದಿಲ್ಲ.

ಹಾಗಾಗೀ, ಯಾರು ಯಾರಿಗೋಸ್ಕರ ದೇವಸ್ಥಾನ ಕಟ್ತಾರೆ ಎನ್ನುವ ಸೀಕ್ರೆಟ್‌ನ್ನ ಖುದ್ದು ರಶ್ಮಿಕಾನೇ ರಿವೀಲ್ ಮಾಡಬೇಕಾಗಿದೆ. ಅಂತೂ ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಓಡೋ ಕುದುರೆ ಎನಿಸಿಕೊಂಡಿರೋ ಈ ಕಿರಿಕ್ ಹುಡುಗಿಯ ಹೆಸರಿನಲ್ಲಿ ದೇವಸ್ಥಾನ ಕಟ್ಟಿದ್ರೂ ಆರ್ಶ್ಚಯ ಪಡಬೇಕಿಲ್ಲ.

LEAVE A REPLY

Please enter your comment!
Please enter your name here