Home Cinema ರಶ್ಮಿಕಾ ಜೊತೆ ಲಿಪ್ ಲಾಕ್,ಏನಂದ್ರು ದೇವರಕೊಂಡ..? ಡಿಯರ್ ಕಾಮ್ರೇಡ್‌ನಲ್ಲಿ ಮುತ್ತಿನ ಮಳೆ, ಶೆಟ್ಟಿ ಹುಡುಗರು ಕೆಂಡ..!ವಾಟ್.....

ರಶ್ಮಿಕಾ ಜೊತೆ ಲಿಪ್ ಲಾಕ್,ಏನಂದ್ರು ದೇವರಕೊಂಡ..? ಡಿಯರ್ ಕಾಮ್ರೇಡ್‌ನಲ್ಲಿ ಮುತ್ತಿನ ಮಳೆ, ಶೆಟ್ಟಿ ಹುಡುಗರು ಕೆಂಡ..!ವಾಟ್.. ರಕ್ಷಿತ್ ಶೆಟ್ಟಿ ಬಗ್ಗೆ ಹೀಗಂದ್ರಾ ಅರ್ಜುನ್ ರೆಡ್ಡಿ..?

379
0
SHARE

ಹೌದು.. ವಿಜಯ್ ದೇವರ ಕೊಂಡ ಪ್ರಕಾರ ಲಿಪ್‌ಲಾಕ್ ಎಂಬುದು ಎಮೋಷನಲ್ ಫೀಲಿಂಗ್ ಆಗಿದ್ದು. ಬೇರೆ ದೃಶ್ಯಗಳನ್ನು ಬಿಟ್ಟು ಜನರು ಏಕೆ ಕೇವಲ ಮುತ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೊಂಚ ಅಸಮಾಧಾನವನ್ನು ಮಾಡಿಕೊಂಡಿದ್ದ ವಿಜಯ್. ಸಿನಿಮಾದಲ್ಲಿ ಅಗತ್ಯವಿರುವ ಕಾರಣಕ್ಕೆ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸಿದ್ದೇವೆ, ಚಿತ್ರಕ್ಕಾಗಿ ರಶ್ಮಿಕಾ ಸಿಕ್ಕಾಪಟ್ಟೆ ತಯಾರಿಗಳನ್ನು ಮಾಡಿದ್ದು ಚೆನ್ನಾಗಿ ನಟಿಸಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡಬೇಕೆಂದಿದ್ದಾರೆ. ಇನ್ನು ಮೊದಲಿನಿಂದ್ಲು ಟಾಲಿವುಡ್‌ಮತ್ತು ಸ್ಯಾಂಡಲ್‌ವುಡ್‌ನಲ್ಲಿ ರ ಶ್ಮಿಕಾ ಮತ್ತು ರಕ್ಷಿತ್ ಲವ್ ಅಫೇರ್‌ಗಳ ಬಗ್ಗೆ ಮಾತುಗಳು ಕೇಳಿ ಬರ್ತಾನೇ ಇದೆ. ಇದಕ್ಕೆಲ್ಲಾ ನೋ ಎನ್ನುತ್ತಲೇ ಬಂದಿದೆ ಈ ಜೋಡಿ.

ಆದ್ರೆ ಇದೇ ವೇಳೆ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿರುವ ವಿಜಯ್. ರಕ್ಷಿತ್ ಆಕ್ಷನ್ ಕಟ್‌ನಲ್ಲಿ ಮೂಡಿಬಂದಿದ್ದ ಕನ್ನಡದ ಉಳಿದವರು ಕಂಡಂತೆ ಸಿನಿಮಾವನ್ನು ನೋಡಿದ್ದೇನೆ ಎಂದಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು. ಕಿರಿಕ್ ಪಾರ್ಟಿ ಚಿತ್ರವನ್ನು ನೋಡಿದ್ದೇನೆ. ಇನ್ನು ಕನ್ನಡವನ್ನು ಕಲಿಯೋದಕ್ಕೆ ಪ್ರಯತ್ನಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಟ್ರೇಲರ್ ನೋಡಿದ ಅಭಿಮಾನಿಗಳು ಕಿಸ್ಸಿಂಗ್ ಸೀನ್ ಟಾರ್ಗೆಟ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್‌ಗಳನ್ನು ಮಾಡ್ತಿದ್ದು. ಇದರಿಂದ ವಿಜಯ್ ದೇವರಕೊಂಡ ಕಸಿವಿಸಿಗೊಂಡಿದ್ದಾರೆನ್ನಲಾಗ್ತಿದೆ.

ಲಿಪ್‌ಲಾಕ್ ವಿಚಾರವಾಗಿ ಸದ್ಯ ಕಿರಿಕಿರಿ ಅನುಭವಿಸ್ತಿದ್ದು. ಈ ಸಿನಿಮಾದಲ್ಲಿ ಕೊಂಚ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾಗೆ ರಕ್ಷಿತ್ ಫ್ಯಾನ್ಸ್‌ಗಳು ಮತ್ತೆ ಬುದ್ಧಿಮಾತುಗಳನ್ನ ಹೇಳ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾಡ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ರಶ್ಮಿಕಾ ನಾನು ನನ್ನ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿದ್ದೇನೆ. ಅವರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿತ್ತೇನೆ.ಅವರು ನನ್ನ ಸಿನಿಮಾದಲ್ಲಿನ ಪರ್ಫಾಮೆನ್ಸ್‌ಗಳ ಬಗ್ಗೆ ಸಂತೋಷಗೊಂಡಿದ್ದಾರೆ.

ಅಷ್ಟು ಸಾಕು ನಂಗೆ ಅಂತಾರೆ ರಶ್ಮಿಕಾ. ಅಂದ್ಹಾಗೆ ವಿಜಯ್ ಅರ್ಜುನ್ ರೆಡ್ಡಿ ಚಿತ್ರದಿಂದ ಡಿಯರ್ ಕಾಂಮ್ರೇಡ್ ವರೆಗೂ ಎಲ್ಲಾ ಸಿನಿಮಾದಲ್ಲಿ ಲಿಪ್‌ಲಾಕ್ ಸೀನ್ ಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಸ್ಯಾಂಡಲ್‌ವುಡ್ & ಟಾಲಿವುಡ್ ಪ್ರೇಕ್ಷಕರು ವಿಜಯ್ ದೇವರಕೊಂಡರನ್ನು ಟಾಲಿವುಡ್‌ನ ಇಮ್ರಾನ್ ಹಶ್ಮಿ ಎಂದು ಟ್ರೋಲ್ ಸಹ ಮಾಡ್ತಿದ್ದಾರೆ.ಇನ್ನು.. ಡಿಯರ್ ಕಾಮ್ರೇಡ್ ಚಿತ್ರ ಭರತ್ ಕಾಮಾ ನಿರ್ದೇಶನದಲ್ಲಿ ಮೂಡಿಬಂದಿದು, ನವೀನ್ ಯೆರನೆಸ್, ವೈ ರವಿಶಂಕರ್ ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿಬಂದಿದ್ದು. ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿದೆ. ಇನ್ನು ಚಿತ್ರ ಇದೇ ತಿಂಗಳು ೨೬ರಂದು ಬಿಡುಗಡೆಯಾಗುತ್ತಿದೆ. ತೆಲುಗು ಮಾತ್ರವಲ್ಲ ಕನ್ನಡ, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಅದೇನೇ ಇದ್ರು.. ಸದ್ಯ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಆಗ್ತೀರುವ ಕಿರಿಕಿರಿ ಕಂಡು ವಿಜಯ್ ಗರಂ ಆಗಿದ್ದು. ರಶ್ಮಿಕಾ ವಿಜಯ್ ದೇವರ ಕೊಂಡ ಡಿಯರ್ ಕಾಂಮ್ರೇಡ್ ಕಹಾನಿಯಲ್ಲಿ ಇನ್ನೇಷ್ಟು ಕಿಸ್ಸಿಂಗ್ ಸೀನ್ ಗಳಿರಲಿದೆ. ಚಿತ್ರದಲ್ಲಿ ಇನ್ಯಾವೆಲ್ಲಾ ಅಂಶಗಳು ಅಡಕವಾಗಿರಬಹುದೆಂಬ ಪ್ರಶ್ನೆಗಳಿಗುತ್ತರ ಚಿತ್ರದ ಬಿಡುಗಡೆ ನಂತರವೇ ಸಿಗಲಿದೆ.

LEAVE A REPLY

Please enter your comment!
Please enter your name here