Home District ರಶ್‌ನಲ್ಲಿ ಗಂಡಸರ ಮಧ್ಯೆ ಹೆಂಗಪ್ಪಾ ನಿತ್ಕೊಂಡು ವೋಟ್ ಹಾಕೋದು ಅಂತಾ ಯೋಚಿಸುತ್ತಿರುವ ಮಹಿಳೆಯರೇ ನಿಮಗೆ ಬಿಗ್...

ರಶ್‌ನಲ್ಲಿ ಗಂಡಸರ ಮಧ್ಯೆ ಹೆಂಗಪ್ಪಾ ನಿತ್ಕೊಂಡು ವೋಟ್ ಹಾಕೋದು ಅಂತಾ ಯೋಚಿಸುತ್ತಿರುವ ಮಹಿಳೆಯರೇ ನಿಮಗೆ ಬಿಗ್ ಗಿಫ್ಟ್..?! ಈ ಸ್ಟೋರಿ ಓದಿ…!!

2212
0
SHARE

ವೋಟ್ ಹಾಕಲು ಯಾರಪ್ಪ ಹೋಗ್ತಾರೆ.. ಆ ರಶ್‌ನಲ್ಲಿ ಗಂಡಸರ ಮಧ್ಯೆ ನಿತ್ಕೊಂಡು ಬಿಸಿಲಿನಲ್ಲಿ ಹೆಂಗಪ್ಪಾ ವೋಟ್ ಹಾಕೋದು ಎನ್ನೋ ಮಹಿಳೆಯರಿಗೆ ಇಲ್ಲಿದೆ ಕೂಲ್ ಆಗುವ ಸುದ್ದಿ,. ನಿಮಗಾಗೇ ಈ ಬಾರಿ ಚುನಾವಣಾ ಆಯೋಗ ಸ್ಪೆಷಲ್ ಆಗಿ ಸಪರೇಟ್ ಬೂತ್‌ ರೆಡಿ ಮಾಡಿದ್ದಾರೆ. ಆದ್ದರಿಂದ ನೀವು ಆರಾಮ್ಸೆ ಹೋಗಿ ಮತ ಹಾಕಿ ಬನ್ನಿ…

ಬೆಂಗಳೂರಿನಲ್ಲಿ ಫಸ್ಟ್ ಟೈಮ್ ವೋಟ್ ಹಾಕ್ತಿರೋ 18 ವರ್ಷ ತುಂಬಿದ ಹುಡ್ಗೀರೇ. ಈಗಾಗ್ಲೆ ವೋಟ್ ಹಾಕಿರೋ ಮಹಿಳೆಯರೇ ಹಾಗೂ ಅಜ್ಜಿಯರೇ.. ಕಷ್ಟ ಪಟ್ಟು ಲೈನ್ ನಲ್ಲಿ ನಿಂತು ವೋಟ್ ಹಾಕ್ಬೇಕಲ್ವಾ ಅಂತಾ ತಲೆ ಚಚ್ಚಿಕೊಳ್ಳಬೇಡಿ. ವೋಟ್ ಹಾಕಲು ಗಂಡಸರ ಮಧ್ಯೆ ಲೈನ್ ನಲ್ಲಿ ನಿಂತುಕೊಳ್ಳೋ ತಾಪತ್ರಯ ಇಲ್ಲಾ…

ಯಾಕೆಂದ್ರೆ ಬೆಂಗಳೂರಿನ 27 ಕ್ಷೇತ್ರಗಳಲ್ಲೂ ಪಿಂಕ್ ಬೂತ್‌ಗಳನ್ನಾ ಮಾಡಿದೆ ಚುನಾವಣಾ ಆಯೋಗ. ಹೆಸರೆ ಹೇಳುವ ಹಾಗೆ ಬೂತ್ ಪೂರ್ತಿ ಪಿಂಕ್ ಮಯವಾಗಿರುತ್ತೆ.. ಮತಗಟ್ಟೆಗಳ ಟೇಬಲ್ ಗಳನ್ನು ಪಿಂಕ್ ಪೇಪರಿಂದ ಶೃಂಗರಿಸುತ್ತಾರೆ.. ಮತಗಟ್ಟೆಗಳ ಅಧಿಕಾರಿಗಳನ್ನು ಸಹ ಮಹಿಳೆಯರನ್ನೆ ನೇಮಿಸಿರುತ್ತಾರೆ…

ಎಲ್ಲಾ ಮಹಿಳಾ ಅಧಿಕಾರಿಗಳು ಸಹ ಆ ದಿನ ಪಿಂಕ್ ಸಮವಸ್ತ್ರ ಧರಿಸಿವುದು ಈ ಬೂತ್ ನ ವಿಶೇಷ.. ಇನ್ನೂ ವೋಟ್ ಮಾಡಲು ಬರುವ ಹೆಣ್ಣು ಮಕ್ಕಳಿಗೆ ಶೌಚಾಲಯ ಹಾಗೂ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ ಸಹ ಮಾಡಲಾಗಿದೆ.ಬೆಂಗಳೂರಿನಲ್ಲಿ ಈ ಎಕ್ಸ್ ಪೆರಿಮೆಂಟ್ ಫಸ್ಟ್ ಟೈಮ್ ಮಾಡಲಾಗ್ತಿದೆ. ಪ್ರತಿ ಒಂದು ಕ್ಷೇತ್ರದಲ್ಲಿ 5 ಪಿಂಕ್ ಬೂತ್ ಗಳನ್ನ ಮಾಡ್ತಿದ್ದಾರೆ…

ಸೊ ಆ ದಿನದಂದು ಪಿಂಕ್ ಬೂತ್ ನಾ ಎಲ್ಲಾ ಜವಾಬ್ದಾರಿಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ.. ಇದರಲ್ಲಿ ಹೆಣ್ಣುಮಕ್ಕಳಿಗೆ ಮೊದಲ ಆಧ್ಯತೆ..ಪ್ರಪ್ರಥಮಬಾರಿಗೆ ಚುನಾವಣಾಧಿಕಾರಿಗಳು ಮಾಡಿರುವ ಈ ಕಾಂನ್ಸೆಪ್ಟ್‌ಗೆ ಲೇಡಿಸ್ ಸೆಕ್ಷನ್ ಕಡೆಯಿಂದ್ಲೂ ಶಬ್ಬಾಸ್ ಗಿರಿ ಕೊಡಲಾಗ್ತಿದೆ…

ಬಟ್ ಇಷ್ಟೆಲ್ಲಾ ಮಾಡಿದ್ರೂ ನೀವು ವೋಟ್ ಗೆ ಬರ್ಲಿಲ್ಲ ಅಂದ್ರೆ ತಪ್ಪಾಗುತ್ತೆ.. ಸೋ ಬನ್ನಿ ಪಿಂಕ್ ಬೂತ್ ನಲ್ಲಿ ಕೂಲ್ ಕೂಲ್ ಆಗಿ ವೋಟ್ ಹಾಕಿ…ಎಂಜಾಯ್ ಮಾಡಿ.. ಹೆಣ್ಣು ಮಕ್ಕಳು ಮಿಸ್ಡ್ ಮಾಡ್ದೇ ವೋಟ್ ಹಾಕ್ಲಿ ಅನ್ನೋದೆ ನಮ್ಮ ಪ್ರಜಾಟಿವಿ ಕಾಳಜಿ…

LEAVE A REPLY

Please enter your comment!
Please enter your name here