Home Cinema ರಾಕಿಂಗ್ ಸ್ಟಾರ್ ಯಶ್ ಮನವಿಗೂ ಕ್ಯಾರೇ ಅನ್ನದ ಅಭಿಮಾನಿಗಳು ಮಾಡ್ತಿರೋದೇನು ಗೊತ್ತಾ..?! “ಕ್ಷಮೆ ಕೇಳೋವರೆಗೂ ಯುದ್ಧ...

ರಾಕಿಂಗ್ ಸ್ಟಾರ್ ಯಶ್ ಮನವಿಗೂ ಕ್ಯಾರೇ ಅನ್ನದ ಅಭಿಮಾನಿಗಳು ಮಾಡ್ತಿರೋದೇನು ಗೊತ್ತಾ..?! “ಕ್ಷಮೆ ಕೇಳೋವರೆಗೂ ಯುದ್ಧ ನಿಲ್ಲಿಸೋ ಮಾತೇ ಇಲ್ಲ”…ತಾರಕಕ್ಕೇರಿದ ಕಿಚ್ಚ-ಯಶ್ ಅಭಿಮಾನಿಗಳ ಸಮರ…

752
0
SHARE

ಯಶ್ & ಸುದೀಪ ಅಭಿಮಾನಿಗಳ ಎರಡನೇ ಎಪಿಸೋಡಿನ ಯುದ್ಧ ಅತಿರೇಕಕ್ಕೆ ಹೋದ ಬೆನ್ನಲ್ಲೇ.. ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ. ಕದನ ವಿರಾಮ ಮಾಡುವಂತೆ ಘೋಶಿಸಿದ್ದಾರೆ. ಯಸ್.. ಯಶ್ ಅಭಿಮಾನಿಗಳು.. ಕಿಚ್ಚನ ಅಭಿಮಾನಿಗಳು ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದಿರುವದನ್ನ ಕಂಡ ಯಶ್ ಕೊನೆಗೂ ಮೌನ ಮುರಿದ್ದಾರೆ. ಸಾಕು ನಿಲ್ಲಿಸಿ ಅಂದಿದ್ದಾರೆ…

ಹೌದು, ಎಲ್ರಿಗೂ ಗೊತ್ತಿರುವಂತೆ.. ಪ್ರಜಾಟಿವಿಯಲ್ಲಿ ಹಿಂದೆ ಸುದ್ದಿಯಾದಂತೆ, ಸುದೀಪ ಅಭಿಮಾನಿಗಳು ಸುದೀಪ ಮನವಿಗೆ ಸ್ಪಂದಿಸಿ, ಸುಮ್ಮನಾಗಿದ್ದರೂ.. ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಕ್ಷಮೆ ಕೇಳಲೇಬೇಕೆಂದು ಹಠ ಹಿಡಿದಿದ್ದರು. ಯಶ್ ಅನ್ನುವ ಅಭಿಯಾನದ ಅಡಿ, ಕನ್ನಡ ಚಿತ್ರರಂಗದ ಕೆಲ ತಾರೆಯರು ಸುದೀಪ ಬಗ್ಗೆ ಮಾತನಾಡಿದ ಮಾತುಗಳ ವಿಡಿಯೋಗಳನ್ನ ಹಾಕಿ.. ಅವರು ಏಕವಚನದಲ್ಲಿ ಕರೆದ್ರೆ ಒಂದು ನ್ಯಾಯ, ಯಶ್ ಕರೆದ್ರೆ ಅದು ದುರಂಕಾರದ ಪರಮಾವಧಿನಾ ಅನ್ನುವ ಪ್ರಶ್ನೆಗಳನ್ನ ಕೇಳಲು ಶುರುವಿಟ್ಟುಕೊಂಡಿದ್ದರು…

ಅಭಿಮಾನಿಗಳ ಇದೇ ಅಭಿಮಾನ, ಅದ್ಯಾವಾಗ.. ಸಾಮಾಜಿಕ ಜಾಲತಾಣದಲ್ಲಿ ಕಿರಿಕಿರಿಗೆ ಕಾರಣವಾಯ್ತೋ, ಕನ್ನಡ ಚಿತ್ರರಂಗದ ಮರ್ಯಾದೆ ಬೀದಿಗೆ ಬರಲು ಶುರುವಾಯ್ತೋ, ಬೇರೆ ನಟ ಹಾಗೂ ನಟಿಯರ ಹೆಸರನ್ನ.. ತಮ್ಮ ಸಮರದಲ್ಲಿ ಯಾವಾಗ, ಯಶ್ ಅಭಿಮಾನಿಗಳು ಎಳೆದು ತಂದ್ರೋ.. ಆಗ, ಸಾಕೆನ್ನುವ ನಿರ್ಧಾರಕ್ಕೆ ಬಂದಂತ ರಾಜಾಹುಲಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಡಕ್ ವಾರ್ನಿಂಗ್‌ನ್ನ ತಮ್ಮಭಿಮಾನಿಗಳಿಗೆ ನೀಡಿದ್ದಾರೆ…

ಯಶ್ ವಾರ್ನಿಂಗ್:ಎಲ್ಲರಿಗೂ ನಮಸ್ಕಾರ. ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್ ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು. ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೇ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡ್ಬೇಡಿ…

ಸುದೀಪ್ ಅವರ ಮೇಲೆ ಗೌರವವಿದೆ ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳುವುದಕ್ಕಾಗಿ ಅವ್ರನ್ನ ಅಗೌರವದಿಂದ ಕಾಣೋದು ಸರಿಯಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ…

ಇದು ಯಶ್ ಅಭಿಮಾನಿಗಳಿಗೆ ಕೊಟ್ಟ ವಾರ್ನಿಂಗ್. ಸಾಕು ನಿಲ್ಲಿಸಿ.. ಘನತೆನಿಂದ ವರ್ತಿಸಿ ಎಂದು ಯಶ್ ಹೇಳಿದ್ರೂ.. ಅದ್ಯಾಕೋ, ರಾಮಾಚಾರಿಯ ಅಭಿಮಾನಿಗಳು.. ಸುದೀಪ ಅಭಿಮಾನಿಗಳಂತೆ, ಯಶ್ ಮಾತನ್ನ ಸುತಾರಾಂ ಒಪ್ಪಿಕೊಳ್ಳಲು ತಯಾರಿಲ್ಲ. ಹೌದು, ಇವರು, ಹೇಳಿ ಕೇಳಿ ರಾಜಾಹುಲಿಯ ಫ್ಯಾನ್ಸ್. ಅಷ್ಟು ಬೇಗ ಯಾವದನ್ನೂ ಬಿಡಲ್ಲ…

ಯಶ್ ಅವ್ರನ್ನ ಅದ್ರಿಸ್ತೀನಿ ಅಂತ ಬಂದವರನ್ನ ಉದುರಿಸೋವರೆಗೂ ಸುಮ್ಮನಾಗಲ್ಲ. ಬಹುಶ, ಇದೇ ಕಾರಣಕ್ಕೋ ಏನೋ, ಯಶ್ ಮನವಿಗೂ ಸ್ಪಂದಿಸದ ಡೈ ಹಾರ್ಡ್ ಅಭಿಮಾನಿಗಳು, ನಿಮ್ಮ ಮಾತಿಗೆ ಬೆಲೆ ಕೊಟ್ಟು ಸುಮ್ಮನಿರ‍್ತೇವೆ.. ಆದರೂ ದುರಂಹಕರಾದ ಪರಮಾವಧಿ ಎಂದು ಮಾತು ಹೇಳಿದ ತಪ್ಪಿಗೆ.. ಮಾತನ್ನ ಹಿಂಪಡೆದು ಸುದೀಪ ಅಭಿಮಾನಿಗಳು ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡದು ಕುಂತಿದ್ದಾರೆ…

ಈ ಮೂಲಕ.. ಸ್ಟಾರ‍್ಸ್ ನೆಮ್ಮದಿ ಬಯಸಿದ್ರೂ. ಒಗ್ಗಟ್ಟು ಬಯಸಿದ್ರೂ.. ಅಭಿಮಾನಿಗಳು ಮಾತ್ರ ಬಯಸಲ್ಲ.. ಕಿತ್ತಾಟ ನಿಲ್ಸಲ್ಲ ಅನ್ನುವ ಸಂದೇಶವನ್ನೂ ನೀಡಿದ್ದಾರೆ ಅಣ್ತಮ್ಮನ ಅಭಿಮಾನಿಗಳು. ಅದೇನೆ ಇರ‍್ಲಿ.. ಸುದೀಪರಂತೆ, ಯಶ್ ಮನವಿ ಮಾಡಿದ್ದಾರೆ. ಹೆಬ್ಬುಲಿ ಮಾಡಿದ ಮನವಿಗೆ ಬೆಲೆ ಕೊಟ್ಟು ಅಭಿಮಾನಿಗಳು ವಿವಾದಕ್ಕೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದಾರೆ. ಯಶ್ ಅಭಿಮಾನಿಗಳು ಕೂಡಾ ಯಶ್ ಮನವಿಗೆ ಸ್ಪಂದಿಸಿ, ಕಿತ್ತಾಟ ನಿಲ್ಲಿಸುತ್ತಾರಾ ಅಥ್ವಾ ಅಭಿಯಾನ ಮುಂದುವರೆಸುತ್ತಾರಾ ಕಾದು ನೋಡಬೇಕು..

LEAVE A REPLY

Please enter your comment!
Please enter your name here