Home Cinema ರಾಘವೇಂದ್ರ ರಾಜ್ ಕುಮಾರ್ ಅಮ್ಮನೆ ಮನೆ ಮೂಲಕ, ಚಿತ್ರರಂಗದಲ್ಲಿ ನಾಯಕನಾಗಿ ರೀ ಎಂಟ್ರಿಗೆ ಸ್ಯಾಂಡಲ್‌ವುಡ್ ಶಾಕ್..!!...

ರಾಘವೇಂದ್ರ ರಾಜ್ ಕುಮಾರ್ ಅಮ್ಮನೆ ಮನೆ ಮೂಲಕ, ಚಿತ್ರರಂಗದಲ್ಲಿ ನಾಯಕನಾಗಿ ರೀ ಎಂಟ್ರಿಗೆ ಸ್ಯಾಂಡಲ್‌ವುಡ್ ಶಾಕ್..!! ಹೇಗಿದ್ದಾರೆ ಗೊತ್ತಾ ಈಗ ರಾಘಣ್ಣ..!!?

586
0
SHARE

ದೊಡ್ಮನೆ ಅಭಿಮಾನಿಗಳಲ್ಲಿ ಅತೀವ ಕೂತುಹಲ ಕೆರಳಿಸಿದ ಅಮ್ಮನೆ ಮನೆ ಚಿತ್ರದ ಮುಹೂರ್ತ ರಾಘಣ್ಣ ಹುಟ್ಟುಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚಾರಣೆಯ ಪ್ರಯುಕ್ತ ನಡೆದಿದೆ.ಸಹೋದರನ ಸಿನಿಮಾದ ಶುಭಘಳಿಗೆ ಕಣ್ತುಂಬಿಕೊಳ್ಳಲು, ಶಿವಣ್ಣ ಹಾಗೂ ಪುನೀತ್ ಮುಹೂರ್ತಕ್ಕೆ ಆಗಮಿಸಿದ್ದು ಅಮ್ಮನೆ ಮನೆ ಅಂಗಳದ ಕಳೆ ಹೆಚ್ಚಿಸಿತ್ತು.

ಅಮ್ಮನೆ ಮನೆ ಮೂಲಕ, ಚಿತ್ರರಂಗದಲ್ಲಿ ನಾಯಕನಾಗಿ ರೀ ಎಂಟ್ರಿ ಕೊಟ್ಟಿರುವ ರಾಘಣ್ಣ, ಚಿತ್ರದಲ್ಲಿ ದೈಹಿಕ ಶಿಕ್ಷಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಭರ್ತಿ ಹದಿನಾಲ್ಕು ವರ್ಷಗಳ ಬಳಿಕ ಮುಖಕ್ಕೆ ಬಣ್ಣ ಹಚ್ಚಿದ ಖುಷಿಯಲ್ಲಿದ್ದ ರಾಘಣ್ಣ ಇಲ್ಲಿ ರಾಘವೇಂದ್ರ ರಾಜ್ ಕುಮಾರ್ ಆಗಿ ಕಾಣಸಿಗ್ದೇ, ನಿರ್ದೇಶಕರ ನಟನಾಗಿ ಕಣಕ್ಕಿಳಿಯುತ್ತಿದ್ದಾರೆ.

ಇನ್ನೂ, ಅಮ್ಮನೆ ಮನೆ ಮೂಲಕ.. ಪಾರ್ವತಮ್ಮ ರಾಜ್ ಕುಮಾರ್ ಅವ್ರಿಗಿದ್ದ ಕೊನೆಯ ಆಸೆಯನ್ನ ಈಡೇರಿಸಿದ ಸಂತೃಪ್ತಿಭಾವ ರಾಘಣ್ಣದ್ದು. ಹೌದು, ನಿಮಗೆ ಗೊತ್ತಿರಲಿ, ಪಾರ್ವತಮ್ಮರನ್ನ ರಾಘಣ್ಣ ಅತೀವವಾಗಿ ಪ್ರೀತಿಸುತ್ತಿದ್ದರು. ಪಾರ್ವತಮ್ಮಗೂ ರಾಘಣ್ಣ ಅಂದ್ರೆ ವಿಶೇಷ ಪ್ರೀತಿ ಇತ್ತು. ಹೀಗಿದ್ದೂ ಪಾರ್ವತಮ್ಮ ರಾಜ್ ಕುಮಾರ್ ಅವ್ರಿಗೆ ಒಂದು ಕೊರಗಿತ್ತು. ಅದುವೇ ರಾಘಣ್ಣ ನಟನೆನಿಂದ ಹಿಂದೆ ಸರಿಯಲು ತಾವೇ ಕಾರಣ ಅನ್ನೋದು.

ಇದೇ ನೋವಿನ ಮಾತನ್ನ ಪಾರ್ವತಮ್ಮ ರಾಘಣ್ಣ ಬಳಿನೂ ಹೇಳಿಕೊಂಡಿದ್ದರು. ಆಗ, ಮತ್ತೇ ಬಣ್ಣ ಹಚ್ಚುವ ಭರವಸೆಯನ್ನ ಪಾರ್ವತಮ್ಮನವ್ರಿಗೆ ರಾಘಣ್ಣ ನೀಡಿದ್ರು. ಅದೇ ಭರವಸೆ ಇದೀಗ ಅಮ್ಮನ ಮನೆ ಮೂಲಕ ಈಡೇರಿದೆ.ಅಂದ ಹಾಗೇ ಭಾವನಾತ್ಮಕ ಕಥೆಯನ್ನೊಂದಿರುವ ಅಮ್ಮನ ಮನೆಗೆ ನಿಕಿಲ್ ಮಂಜು ನಿರ್ದೇಶನವಿದೆ.

ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನ ದೋಚಿರುವ ನಿಕಿಲ್ ಮಂಜು, ಅಮ್ಮ ಹಾಗೂ ಮಗನ ಭಾಂದವ್ಯವನ್ನ ಮನ ಮುಟ್ಟುವಂತೆ ಬಿಚ್ಚಿಡುವ ಪ್ರಯತ್ನವನ್ನಿಲ್ಲಿ ಮಾಡಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ರಾಘಣ್ಣ ಅವ್ರನ್ನ ತೆರೆ ಮೇಲೆ ತರುವ ಪ್ರಯತ್ನ ಮಾಡಲಿದ್ದಾರೆ.ಇನ್ನೂ ಚಿತ್ರದ ಮತ್ತೊಂದು ಸ್ಪೆಷಲ್ ಸಂಗತಿ ಅಂದ್ರೆ ಅದು ಹಿರಿಯ ಗಾಯಕಿ ಬಿ.ಜಯಶ್ರೀ.

ಹೌದು, ಬಿ.ಜಯಶ್ರೀ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅಮ್ಮನ ಪಾತ್ರವನ್ನ ನಿರ್ವಹಿಸಲಿದ್ದಾರೆ. ಇನ್ನು ಮಾನಸಿ ಸುಧೀರ್, ರೋಹಿಣಿ ನಾಗೇಶ್, ಹೀಗೆ ದೊಡ್ಡ ತಾರಾಬಳಗ ಅಮ್ಮನ ಮನೆಯಲ್ಲಿ ಇರಲಿದೆ. ಪಿ.ವಿ.ಆರ್.ಸ್ವಾಮಿ ಕ್ಯಾಮರಾ ವರ್ಕ್ ಇರುವ ಚಿತ್ರಕ್ಕೆ ಸಮೀರ್ ಕುಲಕರ್ಣಿ ಸಂಗೀತವಿರಲಿದೆ. ಇನ್ನು ಆರ್ ಎಸ್ ಕುಮಾರ್ ಚಿತ್ರದ ನಿರ್ಮಾಪಕ.ಸದ್ಯ ಸ್ವಾತಂತ್ರ್ಯ ದಿನದಂದು ಸೆಟ್ಟೇರಿರುವ ಅಮ್ಮನ ಮನೆಯ ಚಿತ್ರೀಕರಣ, ಬೆಂಗಳೂರಿನ ಸುತ್ತ ಮುತ್ತ ಸೆಪ್ಟೆಂಬರ್ ಮೊದಲ ವಾರದಿಂದ ಶುರುವಾಗಲಿದೆ.

LEAVE A REPLY

Please enter your comment!
Please enter your name here