Home District ರಾಘವೇಂದ್ರ ಸ್ವಾಮಿಗಳ ಪವಾಡ..! ಸಾಲಿಗ್ರಾಮವಾದ ಮಂತ್ರಾಕ್ಷತೆ..!?

ರಾಘವೇಂದ್ರ ಸ್ವಾಮಿಗಳ ಪವಾಡ..! ಸಾಲಿಗ್ರಾಮವಾದ ಮಂತ್ರಾಕ್ಷತೆ..!?

674
0
SHARE

ಮಂತ್ರಾಕ್ಷತೆ, ನಿರ್ಮಾಲ್ಯ ಸಾಲಿಗ್ರಾಮವಾಗಿ ಪರಿವರ್ತನೆ ಯಾದ ಪವಾಡ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಬಾಗಲಕೋಟೆಯ ವಿದ್ಯಾಗಿರಿಯ 12ನೇ ಕ್ರಾಸ್ ನಲ್ಲಿರುವ ಪ್ರಹ್ಲಾದ್ ಸೀಮಿಕೇರಿ ಎಂಬುವರ ಮನೆಯಲ್ಲಿ ಈ ಪವಾಡ ನಡೆದಿದೆ. ಪ್ರಹ್ಲಾದ್ ಸೀಮಿಕೇರಿ ಮಂತ್ರಾಲಯ ಶ್ರೀ ಗುರುರಾಘವೇಂದ್ರರಾಯರ ಪರಮ ಭಕ್ತರಾಗಿದ್ದಾರೆ.

ಆರು ತಿಂಗಳ ಹಿಂದೆ ಪ್ರಹ್ಲಾದ್ ಸೀಮಿಕೇರಿ ಅವ್ರು ಮಂತ್ರಾಲಯದಿಂದ ಮಂತ್ರಾಕ್ಷತೆ ತಂದಿದ್ದರು. ಆದ್ರೆ 15 ದಿನಗಳ ಹಿಂದೆ ಮಂತ್ರಾಕ್ಷತೆ,ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿದೆ ಎನ್ನಲಾಗ್ತಿದೆ. ಇನ್ನು ಪೂಜೆ ಮಾಡುವ ವೇಳೆ ಕುಟುಂಬಸ್ಥರಿಗೆ ಮಂತ್ರಾಕ್ಷತೆ ನೋಡುವ ವೇಳೆ ಕಂಡು ಬಂದ ಅಚ್ಚರಿಗೊಂಡಿದ್ದಾರೆ. ಅದ್ರಂತೆ ನಿನ್ನೆ ಮಂತ್ರಾಲಯ ಶ್ರೀಗಳು ಖಚಿತ ಎಂದ ಮೇಲೆ ಈ ಪವಾಡ ಬಹಿರಂಗ ಪಡಿಸಿದ್ದಾರೆ.

ಪವಾಡ ನಿಜ ಎಂದ ಮಂತ್ರಾಲಯ ಶ್ರೀ ಸುಬುಧೆಂದ್ರತೀರ್ಥರು ಈಗಾಗಲೇ ಕುಟುಂಬಸ್ಥರಿಗೆ ಸ್ಪಷ್ಟಪಡಿಸಿದ್ದಾರೆ. ಶ್ರೀಗಳ ಖಚಿತತೆ ಮೇಲೆ ಇಂದು ಮಾಧ್ಯಮಗಳಿಗೆ ಸೀಮಿಕೇರಿ ಕುಟುಂಬಸ್ಥರು ಪವಾಡ ಬಹಿರಂಗಪಡಿಸಿದ್ದಾರೆ. ಮಂತ್ರಾಲಯ ಶ್ರೀಗಳ ಸಮ್ಮುಖ ಪರೀಕ್ಷೆ ನಡೆಸಿ ಖಚಿತ ಪಡಿಸಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಇಷ್ಟು ದಿನ ಸಾಲಿಗ್ರಾಮ ವಿಚಾರವನ್ನು ಕುಟುಂಬಸ್ಥರು ಗೌಪ್ಯವಾಗಿಟ್ಟಿದ್ದರು. ಇಂದು ಗುರುವಾರ ರಾಘವೇಂದ್ರರ ವಾರ ಶುಭದಿನದಲ್ಲಿ ಪವಾಡವನ್ನು ಸೀಮಿಕೇರಿ ಕುಟುಂಬ ಬಹಿರಂಗ ಪಡಿಸಿದ್ದಾರೆ.

ಮಂತ್ರಾಕ್ಷತೆ, ನಿರ್ಮಾಲ್ಯ ಒಟ್ಟು ಹತ್ತು ಸಾಲಿಗ್ರಾಮಗಳಾಗಿ ಬದಲಾಗಿದ್ದವು. ನಿತ್ಯ ನಿರಂತರ ಪೂಜೆಗಾಗಿ ಐದು ಸಾಲಿಗ್ರಾಮಗಳನ್ನು ಪ್ರಹ್ಲಾದ್ ಸೀಮಿಕೇರಿ ಮಂತ್ರಾಲಯ ಮಠಕ್ಕೆ ನೀಡಿದ್ದಾರೆ. ಇದು ರಾಘವೇಂದ್ರ ರಾಯರ ಅನುಗ್ರಹ ಎಂದು ಸೀಮಿಕೇರಿ ಕುಟುಂಬ ನಂಬಿದೆ. ಅಲ್ಲದೇ ಬ್ರಾಹ್ಮಣ ಸಂಪ್ರದಾಯದಲ್ಲಿ ಸಾಲಿಗ್ರಾಮ ಪವಿತ್ರವಾದ ಸ್ಥಾನ ಪಡೆದಿದೆ.

 

LEAVE A REPLY

Please enter your comment!
Please enter your name here