Home Cinema ರಾಜಕಾರಣಿಗಳಿಂದ ಹಿಂಸೆಯಾಗ್ತಿದೆ, ಹೀಗಂದ್ರೇಕೆ ಭಟ್ಟರು..? ನಿಖಿಲ್-ಸುಮಲತಾ ರಾಜಕಾರಣ ಸೆಣಸಾಟದ ಬಗ್ಗೆ ಪರೋಕ್ಷವಾಗಿ ಹೀಗೆ ಹೇಳಿದ್ರಾ ಭಟ್ರು..?

ರಾಜಕಾರಣಿಗಳಿಂದ ಹಿಂಸೆಯಾಗ್ತಿದೆ, ಹೀಗಂದ್ರೇಕೆ ಭಟ್ಟರು..? ನಿಖಿಲ್-ಸುಮಲತಾ ರಾಜಕಾರಣ ಸೆಣಸಾಟದ ಬಗ್ಗೆ ಪರೋಕ್ಷವಾಗಿ ಹೀಗೆ ಹೇಳಿದ್ರಾ ಭಟ್ರು..?

1827
0
SHARE

ಅರೆಅರೆ ಹಮಾರಾ ಭಟ್ ಸಾಬ್ ಕೋ ಕ್ಯಾ ಹೋಗಾಯಾ ಜೀ? ನಮ್ಮ ನಿಮ್ಮೆಲ್ಲರ ಫೇವರಿಟ್ ವಿಕಟಕವಿ ಯೋಗಾರಾಜ್ ಭಟ್ರು ಯಾಕೋ ಒಂದು ಪ್ರತಿಜ್ಞೆ ಮಾಡಿರೋಹಾಗಿದೆ ಕಣ್ರೀ. ಸಾಮಾನ್ಯವಾಗಿ ಯಾವಾಗಲೂ ಭಟ್ರು ತಮ್ಮ ಲೇಖನಿಯನ್ನ ತಮಾಷೆ,ಹಾಸ್ಯ ಹಾಗೂ ವಿಡಂಬನೆಗೆ ಬಳಸೋದು ವಾಡಿಕೆ.

ಆದ್ರೆ ಈಗ ಕಹಾನಿ ಮೇ ತೋಡಾ ಟ್ವೀಸ್ಟ್ ಹೇ. ಇಷ್ಟುದಿನ ನಗೋದಕ್ಕೆ ಸೀಮಿತವಾಗಿದ್ದ ಭಟ್ರ ಬರಹಗಳು ಈಗ ಬೇರೆಯಾದೆ ಸ್ವರೂಪ ಪಡೆದುಕೊಂಡಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಂದೂ ತುಟಿಕ್‌ಪಿಟಿಕ್ ಅನ್ನದ ಭಟ್ರು ಈಗ ತಮ್ಮ ಮೊನಚಾದ ಪೆನ್ನಲ್ಲೇ ಮನಸ್ಸಿನ ಮಾತುಗಳನ್ನ ಆಚೆ ಹಾಕಿದ್ದಾರೆ. ಈ ಡಿಸಿಶನ್ ಈಗ ಟಾಕ್ ಆಫ್ ದಿ ಟೌನ್ ಆಗಿದ್ದು, ಗಾಂಧಿನಗರದಲ್ಲಿ ಬಹಳ ಚರ್ಚೆಯಾಗುತ್ತಿದೆ.

ಹ್ಯಾವ್ ಎ ಡೀಪ್ ಲುಕ್..’ಸಕಲರಿಗೂ ನಮಸ್ಕಾರ, ಇದೊಂದು ಸಣ್ಣ ಬಿನ್ನವತ್ತಳೆ. ನಾನು ಯೂವುದೇ ಥರದ ರಾಜಕಾರಣದ ಆರಾಧಕ ಅಲ್ಲ. ಎಡಬಲ ಮಧ್ಯ ಮೇಲೆಕೆಳಗೆ ಜಾತಿಪಾತಿ ಯಾವುದಕ್ಕೂ ನಾ ಸೇರಿಲ್ಲ. ನನ್ನ ಕೆಲವು ಕವನದ ಸಾಲುಗಳನ್ನ, ಗಾದೆ ರೀತಿಯ ಬರಹಗಳನ್ನ ರಾಜಕೀಯ ಪಕ್ಷಗಳು ಸುಮ್ಮನೇ ಬಳಸಿಕೊಳ್ಳುತ್ತಿವೆ. ಅದೊಂಥರ ಹಿಂಸೆ.. ಆದ್ದರಿಂದ ಓದುಗರು ಮತ್ತು ನೋಡುಗರು ನನ್ನನ್ನೂ ಯಾವಪಕ್ಷಕಕ್ಕೂ ಸೇರಿಸದೇ, ಜೋಡಿಸದೇ ನನ್ನ ರಾಜಕೀಯ ನಿರ್ಲಿಪ್ತತೆಯನ್ನ ಕಾಪಾಡಬೇಕಾಗಿ ಪ್ರಾರ್ಥನೆ…

ನಿಮ್ಮವನು ..ಯೋಗ್‌ರಾಜ್ ಭಟ್’ಇಟ್ ವಾಸ್ ಎ ಕ್ಲಿಯರ್ ಕಟ್ ಲೈನ್ಸ್. ಯೋಗ್‌ರಾಜ್ ಭಟ್ ಮನಸ್ಸಿನಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಸೇರುವ ಅಥವಾ ಬೆಂಬಲಿಸುವ ಆಸಕ್ತಿ ಇಲ್ಲ. ತಮ್ಮ ಸಿನಿಮಾ ಮೂಲಕ ಪ್ರೇಕ್ಷಕರನ್ನ ತಲುಪುವ ಜಾಣತನ ಹೋಂದಿರೋ ಭಟ್ರು ’ನೋ ಫಾರ್ ಪಾಲಿಟಿಕ್ಸ್’ ಅಂತ ಕಡ್ಡಿಮುರಿದಂತೆ ಹೇಳಿರೋದು ಚಿತ್ರರಂಗದ ಹಲವು ಮಂದಿಗೆ ಆರ್ಶ್ಚಯವನ್ನುಂಟು ಮಾಡಿದೆ. ಯಾಕಂದ್ರೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾವು ಹೇಗಿದೆ ಅಂತ ಎಲ್ಲರಿಗೂ ಗೊತ್ತಿರೋ ವಿಷಯನೇ. ಎಲ್ಲರೂ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿಯ ಸ್ಪರ್ಧೆಯ ವಿಚಾರವಾಗಿ ತಮ್ಮ ತಮ್ಮ ನಿಲುವುಗಳನ್ನ ಹೊಂದಿದ್ದಾರೆ.

ಆದರೆ ಭಟ್ರರಿಗೆ ಮಾತ್ರ ಯಾವ ಬಣಕ್ಕೂ ಸೇರೊ ಇಂಟ್ರೆಸ್ಟ್ ಇಲ್ಲ ಅನಿಸುತ್ತೆ. ತಮ್ಮ ಬುದ್ಧಿ ಉಪಯೋಗಿಸಿ ಬರೆಯೋ ಸಾಹಿತ್ಯವನ್ನ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳೊದು ಭಟ್ರಿಗೆ ಸುತಾರಂ ಇಷ್ಟವಿಲ್ಲ. ಹಾಗಾಗೀ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಜಾಣತನ ತೋರಿಸೋ ಕೆಲವು ಪೊಲಿಟಿಕಲ್ ಪಾರ್ಟಿಗಳಿಗೆ ಚಳಿ ಬಿಡಿಸಿದ್ದಾರೆ ಈ ವಿಕಟಕವಿ.ಇತ್ತೀಚೆಗೆ ಸುಮಲತಾ ಹಾಗೂ ನಿಖಿಲ್ ತೀವ್ರ ಹಣಾಹಣಿಯ ನಡುವೆ ಕನ್ನಡ ಚಿತ್ರರಂಗ ಡಿವೈಡ್ ಆಗುವ ಲಕ್ಷಣಗಳು ಕಾಣ್ತಿರೋ ಬೆನ್ನಲ್ಲೇ ಯೋಗ್‌ರಾಜ್ ಭಟ್ ತಮ್ಮ ಓಪಿನಿಯನ್ ಹೊರಹಾಕಿರುವುದು ಒಂದು ಹೊಸ ತಿರುವು ಅಂತಾನೇ ಹೇಳಬಹುದು. ಭಟ್ರು ಬರೆಯುವ ಸಾಹಿತ್ಯಕ್ಕೆ ಒಂದು ದೊಡ್ಡ ಫ್ಯಾನ್ ಫಾಲೊವಿಂಗ್ ಇದೆ.

ಭಟ್ರ ಈ ಟ್ಯಾಲೆಂಟ್ ಕೆಲವು ರಾಜಕೀಯ ದುರುದ್ದೇಶಗಳಿಗೆ ಬಳಕೆಯಾಗ್ತಿರೋದು ಭಟ್ರ ಕೋಪಕ್ಕೆ ಗುರಿಯಾಗಿದೆ. ಪವರ್‌ಸ್ಟಾರ್ ಪುನೀತ್ ಹಾಗೂ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹೇಳಿಕೆಗಳಿಗೆ ಪೂರಕವಾಗಿದೆ ಭಟ್ರ ಈ ಲೇಟೆಸ್ಟ್ ನ್ಯೂಸ್. ಭಟ್ರಿಗೂ ಯಾವುದೋ ಅಭ್ಯರ್ಥಿ ಅಥವಾ ಪಕ್ಷದ ಜೊತೆ ತಮ್ಮ ಹೆಸರು ತಳುಕು ಹಾಕಿಕೊಳ್ಳೊಕೆ ಮನಸ್ಸು ಒಪ್ತಿಲ್ಲ. ಅಕಸ್ಮಾತ್ ಭಟ್ರನ್ನ ತಮ್ಮ ರಾಜಕೀಯ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಐಡಿಯಾ ಹಾಕಿದವರಿಗೆ ಈ ಪೋಸ್ಟ್ ತೀವ್ರ ನಿರಾಸೆ ಉಂಟುಮಾಡುತ್ತೆ.

ಯಾಕಂದ್ರೇ ಭಟ್ರ ನಿಲುವು ಬಹಳ ಸ್ಪಷ್ಟವಾಗಿದೆ. ಸಿನಿಮಾನೇ ಯೋಗರಾಜ್ ಭಟ್ ಮೂಲ ಮಾಧ್ಯಮಾ. ಎಡಬಲ, ಈ ಅಭ್ಯರ್ಥಿ, ಆ ಪಕ್ಷ ಎನ್ನುವ ತಿಕಲಾಟ, ಹೊಡೆದಾಟಗಳಿಗೆ ಭಟ್ರ ಲೈಫ್‌ನಲ್ಲಿ ಜಾಗವಿಲ್ಲ ಎನ್ನುವುದು ಈಗ ಸಾಬೀತಾಗಿದೆ. ಅಷ್ಟಕ್ಕೂ ಯಾವ ರಾಜಕೀಯ ಅಭ್ಯರ್ಥಿ ಹಾಗೂ ಪಕ್ಷದಿಂದ ತಮಗೆ ಹಿಂಸೆಯಾಗ್ತಿದೆ ಎನ್ನುವ ರಹಸ್ಯವನ್ನ ಮಾತ್ರ ಭಟ್ರು ತಮ್ಮ ಈ ಪತ್ರದಲ್ಲಿ ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಪೊಲಿಟಿಕಲಿ ಭಟ್ರಿಗೆ ಸ್ವಲ್ಪ ಪ್ರೈವಸಿ ಬೇಕಾಗಿದೆ. ಭಟ್ರ ಈ ಹಕ್ಕನ್ನ ಕಿತ್ತುಕೊಂಡು ಕ್ವಾಟ್ಲೆ ಕೊಟ್ಟ ಆ ರಾಜಕೀಯ ತಲೆಗಳು ಯಾರು ಎನ್ನುವ ಪ್ರಶ್ನೆಗೆ ಸ್ವತಃ ಯೋಗ್‌ರಾಜ್ ಭಟ್ರೇ ಆನ್ಸರ್ ಮಾಡಬೇಕು…!

LEAVE A REPLY

Please enter your comment!
Please enter your name here