Home Crime ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ HDK ಶೂಟೌಟ್ ಆದೇಶ..! HDK ಶೂಟೌಟ್ ಆದೇಶಕ್ಕೆ BSY ಆಕ್ರೋಶ..!

ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ HDK ಶೂಟೌಟ್ ಆದೇಶ..! HDK ಶೂಟೌಟ್ ಆದೇಶಕ್ಕೆ BSY ಆಕ್ರೋಶ..!

507
0
SHARE

ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಕೊಲೆ ಪ್ರಕರಣದ ಆರೋಪಿ ಮೇಲೆ ಸಿಎಂ ಕುಮಾರಸ್ವಾಮಿ ಶೂಟೌಟ್ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಎಂ ಕುಮಾರಸ್ವಾಮಿ ಆದೇಶ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ಲಾರಿ ಹರಿಸಿದವನ ವಿರುದ್ಧ ಇಲ್ಲದ ಶಿಸ್ತುಕ್ರಮ ಜೆಡಿಎಸ್ ಮುಖಂಡನ ಹತ್ಯೆ ಮಾಡಿದವನ ಮೇಲೆ ಏಕೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಕೆಜಿಎಪ್ ಮೀರಿಸುವ ಚಿತ್ರದ ಖಳನಾಯಕ ನಾಗಿ ಕುಮಾರಸ್ವಾಮಿ ಬಿಂಬಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಕುಮಾರಸ್ವಾಮಿಯೇನು ರಾಜ್ಯಕ್ಕೆ ಮುಖ್ಯಮಂತ್ರಿನಾ ಅಥವಾ ಜೆಡಿಸ್ ಪಕ್ಷಕ್ಕೆ ಮುಖ್ಯಮಂತ್ರಿನಾ ಅಂತ ಪ್ರಶ್ನೆ ಮಾಡಿದ್ದಾರೆ.ಜೆಡಿಎಸ್ ಕಾರ್ಯಕರ್ತ ಹತ್ಯೆ ಆರೋಪಿ ಮೇಲೆ ಸಿಎಂ ಕುಮಾರಸ್ವಾಮಿ ಶೂಟೌಟ್ ಆದೇಶಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ಸಿಎಂ ಕುಮಾರಸ್ವಾಮಿ ಶೂಟೌಟ್ ಮಾಡಿ ಅಂತ ಹೇಳಿಕೆ ಕೊಟ್ಟಿರೋದು ತಪ್ಪು…

ಅವರ ಹೇಳಿಕೆಯಿಂದ ರಾಜ್ಯದ ಮೇಲೆ ಪರಿಣಾಮ ಬೀರಲಿದೆ.ಹೀಗಾಗಿ ಸಿಎಂ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೋರಬೇಕು ಅಂತ ಯಡಿಯೂರಪ್ಪ ಆಗ್ರಹಿಸಿದ್ದಾರೆ. ನಾನು ಆವೇಶದಲ್ಲಿ ಹೇಳಿದ್ದೆ, ಆದ್ರೆ ಸಿಎಂ ಆಗಿ ಹೇಳಿಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಈಗ ಸಿಎಂ ಆಗಲ್ಲವೇ? ಅಂತ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಜೆಡಿಎಸ್‌ ಆಗಲಿ, ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಕಾರ್ಯಕರ್ತರ ಹತ್ಯೆ ಸಹಿಸಲು ಸಾಧ್ಯವಿಲ್ಲ. ಹಂತಕರಿಗೆ ಸೂಕ್ತ ಶಿಕ್ಷೆ ಆಗಲೇಬೇಕು, ಅದರಲ್ಲಿ ಎರಡು ಮಾತಿಲ್ಲ ಅಂತ ಯಡಿಯೂರಪ್ಪ ಹೇಳಿದ್ದಾರೆ.ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ 7 ಜನ ಹಾಗೂ ಇತರರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಪ್ರಸನ್ನ, ಸ್ವಾಮಿ, ಮುತ್ತೇಶ್, ಶಿವರಾಜು, ಯೋಗೇಶ್ ಹೇಮಂತ್ ಹಾಗೂ ಇತರರ ಮೇಲೆ ಐಪಿಸಿ ಸೆಕ್ಸನ್ 143, 146, 148, 341, 307, 302,120b,114 ರಿತ್ಯ ಪ್ರಕರಣ ದಾಖಲು ಮಾಡಲಾಗಿದೆ. ಕಾರ್ ನಲ್ಲಿ ಮೃತ ಪ್ರಕಾಶ್ ಜೊತೆ ಇದ್ದ ತೊಪ್ಪನಹಳ್ಳಿಯ ಅಭಿಲಾಷ್ ನೀಡಿದ ದೂರಿನನ್ವಯ ಮದ್ಧೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. .ಆರೋಪಿಗಳು ತೊಪ್ಪನಹಳ್ಳಿ ಹಾಗೂ ಮದ್ದೂರು ನಿವಾಸಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here