Home Cinema ರಾಜಕೀಯ ಚದುರಂಗದಾಟಕ್ಕೆ ಪ್ರಕಾಶ್ ರೈ ಎಂಟ್ರಿ. . ! ವರ್ಕೌಟ್ ಆಗುತ್ತಾ ಪ್ರಕಾಶ್ ಪೊಲಿಟಿಕಲ್ ಥಿಯರಿ....

ರಾಜಕೀಯ ಚದುರಂಗದಾಟಕ್ಕೆ ಪ್ರಕಾಶ್ ರೈ ಎಂಟ್ರಿ. . ! ವರ್ಕೌಟ್ ಆಗುತ್ತಾ ಪ್ರಕಾಶ್ ಪೊಲಿಟಿಕಲ್ ಥಿಯರಿ. . ?

997
0
SHARE

ರಾಜಕೀಯಕ್ಕೆ ಧುಮುಕಲು ಬಹುಭಾಷಾ ನಟ ಪ್ರಕಾಶ್ ರೈ ಸಜ್ಜಾಗಿದ್ದಾರೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ಅವರು ಪ್ರಕಟಿಸಿದ್ದಾರೆ. ಅವರೇ ಮುಂದೆ ಬಂದು ರಾಜಕೀಯ ಕುರಿತು ಮಾತನಾಡಿದ್ದಾರೆ. ಕೋಮುವಾದ ವಿರುದ್ಧ ಹೋರಾಟ ನಡೆಸುವ ಕಾಂಗ್ರೆಸ್ ನನಗೆ ಬೆಂಬಲ ನೀಡಲಿ ಎಂದು ಹೇಳಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಪ್ರಕಾಶ್ ರೈ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರೋ ಪ್ರಕಾಶ್ ರೈ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಬಿಜೆಪಿಯ ರಾಜಕೀಯ ಧೋರಣೆಗಳ ವಿರುದ್ಧ ಮಾತನಾಡುತ್ತಿದ್ದ ಪ್ರಕಾಶ್ ರೈ ಈಗ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಬಲವನ್ನ ಉಳಿಸಿಕೊಳ್ಳಲು ಒದ್ದಾಡುತ್ತಾರೆ. ರಾಜ್ಯದಲ್ಲಿರುವ ಮೂರು ಪಕ್ಷಗಳು ಟೈಮ್ ವೇಸ್ಟ್ ಮಾಡ್ತಿವೆ. ನನಗಂತೂ ಯಾವ ಪಕ್ಷದಿಂದಲೂ ಸ್ಪರ್ಧಿಸುವ ಆಸೆಯಿಲ್ಲ.

ಬೇಕಿದ್ದರೆ ಕೋಮುವಾದದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ನನಗೆ ಬೆಂಬಲ ಘೋಷಿಸಲಿ, ಆಗ ಒಂದು ನಿರ್ಧಾರಕ್ಕೆ ಬರ್ತಿನಿ’ ಎಂದು ತಿಳಿಸಿದ್ದಾರೆ.ಜನಪರವಾಗಿ ದನಿ ಎತ್ತಲು ಯಾವ ಭಯವೂ ಇಲ್ಲ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ. ಸದ್ಯದಲ್ಲೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here