Home Elections 2019 ರಾಜಕೀಯ ನಿವೃತ್ತಿ ನಿರ್ಧಾರ ಕೈಗೊಂಡಿದ್ದರಂತೆ HDK.! ಕಾಂಗ್ರೆಸ್ ನಾಯಕರ ಫೋನ್ ಕರೆ ಬದಲಾಯಿಸಿತು ನಿರ್ಧಾರ..! 2...

ರಾಜಕೀಯ ನಿವೃತ್ತಿ ನಿರ್ಧಾರ ಕೈಗೊಂಡಿದ್ದರಂತೆ HDK.! ಕಾಂಗ್ರೆಸ್ ನಾಯಕರ ಫೋನ್ ಕರೆ ಬದಲಾಯಿಸಿತು ನಿರ್ಧಾರ..! 2 ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ನಿಜಕ್ಕೂ ಸವಾಲು…

1633
0
SHARE

ಕಳೆದ ವರ್ಷ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗ ಜೆಡಿಎಸ್ ಕೇವಲ 38 ಸ್ಥಾನ ಗಳಿಸಿದ್ದು ನೋಡಿ, ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ನಿವೃತ್ತಿ ನಿರ್ಧಾರ ಕೈಗೊಂಡಿದ್ದರಂತೆ.

ಆದರೆ, ಕಾಂಗ್ರೆಸ್ ನಾಯಕರಿಂದ ಬಂದ ಒಂದೇ ಒಂದು ಫೋನ್ ಕರೆ ಅವರ ನಿರ್ಧಾರವನ್ನು ಬದಲಿಸುವಂತೆ ಮಾಡಿತಂತೆ ಹಾಗಂತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.ಕೇವಲ ಒಂದು ವರ್ಷದ ಹಿಂದೆ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಾಗ, ಕೇವಲ 38 ಸ್ಥಾನಗಳಿಸಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

ಚುನಾವಣಾ ಫಲಿತಾಂಶ ನೋಡಿ ತೀವ್ರ ಬೇಸರಗೊಂಡಿದ್ದ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದರಂತೆ. ಆದರೆ, ಆ ಕ್ಷಣದಲ್ಲೇ ಕಾಂಗ್ರೆಸ್ ನಾಯಕರಿಂದ ಬಂದ ಫೋನ್ ಕರೆ, ತಮ್ಮ ನಿರ್ಧಾರ ಬದಲಿಸುವಂತೆ ಮಾಡಿತು ಎಂದು ಕುಮಾರಸ್ವಾಮಿ ಹೇಳಿಕೊಂಡ್ರು. ಎರಡು ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ನಿಜಕ್ಕೂ ಒಂದು ಸವಾಲು. ಎರಡು ಬಾರಿ ತಾವು ಈ ಸವಾಲು ಎದುರಿಸಿ ಯಶಸ್ವಿಯಾಗಿರುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

ಜಿಲ್ಲಾ ಉಸ್ತುವಾರಿ ಸಚಿವರು ಈಗ ಕೇವಲ ತಾಲೂಕು ಉಸ್ತುವಾರಿ ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿಯೇ ಪ್ರತಿ ದಿನ ನೂರಾರು ಜನ, ತಮ್ಮ ಭೇಟಿಗೆ ಬರುವಂತಾಗಿದೆ. ತಮಗೆ ತಂದೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ರಾಜಕೀಯ ಗುರು, ಮಾರ್ಗದರ್ಶಿ. ಆದರೆ, ಅದಕ್ಕಿಂತ ಹೆಚ್ಚಾಗಿ ಪ್ರತಿ ದಿನ ನೂರಾರು ಸಮಸ್ಯೆಗಳನ್ನು ಹೇಳಿಕೊಂಡು ಬರುವ ಸಾರ್ವಜನಿಕರೇ ತಮಗೆ ಆದರ್ಶ. ಎಂದು ಸಿಎಂ ಹೇಳಿದ್ರು.

ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬಾರದು, ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಆದ್ಯತೆ ಬೇಡ ಎಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದವರು ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ರು. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮಗಳನ್ನು ಪ್ರಾರಂಭಿಸಲಾಗುತ್ತದೆ. ಯಾವ ಮಾಧ್ಯಮ ಬೇಕು ಎಂಬುದನ್ನು ಪೋಷಕರೇ ನಿರ್ಧರಿಸುತ್ತಾರೆ ಎಂದು ಸಿಎಂ ಹೇಳಿದ್ರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ನಷ್ಟದಲ್ಲಿವೆ.

ಪ್ರತಿ ತಿಂಗಳಿಗೆ 15 ಕೋಟಿ ರೂ. ನಷ್ಟವಾಗುತ್ತಿದೆ. ಹಾಗಾಗಿ ದರ ಏರಿಕೆಗೆ ಒತ್ತಡವಿದೆ. ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ದರ ಏರಿಕೆ ಸಾಧ್ಯವಿಲ್ಲ ಎಂದ್ರು. ಇನ್ನು ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಕಳೆದ 10 ವರ್ಷಗಳಲ್ಲಿ 400 ಕೋಟಿ ರೂ. ಖರ್ಚು ಮಾಡಿದ್ರು, ಸಂಸ್ಥೆಯ ಪರಿಸ್ಥಿತಿ ಸುಧಾರಿಸಿಲ್ಲ. ಹಾಗಾಗಿ ಮೈ ಶುಗರ್ ಪುನರುಜ್ಜೀವನ ಪ್ರಯತ್ನ ನಿಲ್ಲಿಸಿ, ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಸಿಎಂ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಐವತ್ತಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ರು.

LEAVE A REPLY

Please enter your comment!
Please enter your name here