Home Cinema ರಾಜಕೀಯ ಪ್ರಚಾರಕ್ಕೆ ಹೋದ ಕನ್ನಡದ ಸ್ಟಾರ್ ನಟರ ಕಾಲೆಳೆದ ಕರಿಚಿರತೆ ದುನಿಯಾ ವಿಜಯ್..ಯಾರಿಗೆ ಟಾಂಗ್ ಕೊಟ್ಟಿದ್ದು..?

ರಾಜಕೀಯ ಪ್ರಚಾರಕ್ಕೆ ಹೋದ ಕನ್ನಡದ ಸ್ಟಾರ್ ನಟರ ಕಾಲೆಳೆದ ಕರಿಚಿರತೆ ದುನಿಯಾ ವಿಜಯ್..ಯಾರಿಗೆ ಟಾಂಗ್ ಕೊಟ್ಟಿದ್ದು..?

2554
0
SHARE

ಬೆಂಗಳೂರಿನಲ್ಲಿ ಇಂದು ಮತದಾನ ಮಾಡಿದ ಕರಿಚಿರತೆ ದುನಿಯಾ ವಿಜಯ್, ಪತ್ರಕರ್ತರ ಜೊತೆ ತಮ್ಮ ಮತದಾನದ ಅನುಭವವನ್ನು ಹಂಚಿಕೊಳ್ಳುವ ಸಮಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದ ಕನ್ನಡ ಸ್ಟಾರ್ ನಟರ ಕಾಲೆಳೆದಿದ್ದಾರೆ…

ಇತ್ತೀಚೆಗಷ್ಟೇ ಸ್ಟಾರ್ ನಟರಾದ ದರ್ಶನ್, ಯಶ್ ಮತ್ತು ಕಿಚ್ಚ ಸುದೀಪ್ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು…

ಸ್ಟಾರ್ ಪ್ರಚಾರಕರಾಗಿ ಅನೇಕ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ಕನ್ನಡದ ಅನೇಕ ನಟ ಮತ್ತು ನಟಿಯರ ವಿರುದ್ಧ ವ್ಯಂಗ್ಯವಾಗಿ ಮಾತನಾಡುವುದರ ಮೂಲಕ ದುನಿಯಾ ವಿಜಿ ಕಾಲ್ ಎಳೆದಿದ್ದಾರೆ.

ಹೌದು, ಇಂದು.. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಹಾಕಲು ಬಂದಿದ್ದ ದುನಿಯಾ ವಿಜಯ್, ಪ್ರಚಾರದ ಹಿಂದಿನ ಗುಟ್ಟನ್ನ ಬಿಟ್ಟು ಕೊಟ್ಟರು. ಸ್ಟಾರ್‌ಗಳು ಪ್ರಾಮಾಣಿಕವಾಗಿ ಯಾರು ಪ್ರಚಾರ ಮಾಡಿಲ್ಲ ಅನ್ನುವ ವಿವಾದಾತ್ಮಕ ಹೇಳಿಕೆಯನ್ನ ಕೊಟ್ಟಿದ್ದಾರೆ.

ಅಷ್ಟೇ ಅಲ್ಲ.. ನಾನು ಯಾರ ಪರವಾಗಿಯೂ ಪ್ರಚಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮಾಡೋದು ಇಲ್ಲ ಅಂದಿರುವ ಕರಿಚಿರತೆ, ನಾನು.. ಪ್ರಾಮಾಣಿಕವಾಗಿ ಇದ್ದೀನಿ ಅಂತಾನೂ ಇದೇ ವೇಳೆ ಹೇಳಿದ್ದಾರೆ…

LEAVE A REPLY

Please enter your comment!
Please enter your name here