Home Cinema ರಾಜನಾಗಿ ಬಾಳಿದರು, ರಾಜನಾಗಿಯೇ ಹೋದರು! ಬಾಳ ಸಂಗಾತಿ ನೆನೆದು ಗದ್ಗದಿತರಾದ ಸುಮಲತಾ..!

ರಾಜನಾಗಿ ಬಾಳಿದರು, ರಾಜನಾಗಿಯೇ ಹೋದರು! ಬಾಳ ಸಂಗಾತಿ ನೆನೆದು ಗದ್ಗದಿತರಾದ ಸುಮಲತಾ..!

397
0
SHARE

ಬೆಂಗಳೂರಿನಲ್ಲಿ ರೆಬಲ್‍ಸ್ಟಾರ್ ಅಂಬರೀಷ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಂಬರೀಶ್ ಪತ್ನಿ ಸುಮಲತಾ ಪತಿಯನ್ನು ನೆನೆದು ಗದ್ಗತಿರಾದರು.. ಪತಿಯೊಡನೆ ಬಾಳಿ ಬದುಕಿದ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣೀರಾದ್ರು.. ಕಾರ್ಯಕ್ರಮದಲ್ಲಿ ಸುಮಲತಾ ಭಾವುಕರಾಗಿ ಮಾತನಾಡಿದ್ರು.. ಒತ್ತರಿಸಿಕೊಂಡು ಬರುತ್ತಿದ್ದ ದುಃಖವನ್ನು ಯಾವುದೋ ಶಕ್ತಿ ತಡೆದಂತಿತ್ತು. ಅವರ ಪ್ರತಿ ಮಾತಲ್ಲೂ ಅಂಬಿ ಇದ್ದರು.

ಜತೆಗಿದ್ದ ಹಮ್ಮೀರನ ಕಳೆದುಕೊಂಡ ನೋವು ತೀವ್ರವಾಗಿ ಕಾಡುತ್ತಿರುವುದು ಅವರ ಮಾತು-ಮುಖದಲ್ಲಿ ಕಾಣುತ್ತಿತ್ತು..ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಗೆ ಪುಷ್ಮ ನಮನ ಕಾರ್ಯಕ್ರಮದಲ್ಲಿ ಪತ್ನಿ ಸುಮಲತಾ ಭಾವನಾತ್ಮಕವಾಗಿ ಮಾತನಾಡಿದರು.
ನನಗೆ ಅವರು ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಇವತ್ತು ಅವರು ಎಲ್ಲಿಯೇ ಇದ್ದರೂ ನಗು ನಗುತ್ತಾ ಆಶೀರ್ವಾದ ಮಾಡುತ್ತಿರುತ್ತಾರೆ.

ಹೀಗೆ ಹೇಳುತ್ತ ಒಂದು ಕ್ಷಣಕ್ಕೆ ಎಲ್ಲರನ್ನು ಮೌನವಾಗುವಂತೆ ಮಾಡಿದರು ನಟಿ ಸುಮಲತಾ.ಅಂಬರೀಶ್ ಅವರ ಬಗ್ಗೆ ಹೇಳಲು ಏನು ಅಂತ ಪದಗಳನ್ನು ಹುಡುಕಲಿ. ಅವರು ಒಬ್ಬ ಒಳ್ಳೆಯ ಮಗ, ಸಹೋದರ, ಗಂಡ, ತಂದೆ, ಸ್ನೇಹಿತ, ನಟ, ರಾಜಕೀಯ ನಾಯಕ, ಸಮಾಜ ಸೇವಕ ಹೀಗೆ ಅವರಿಗೆ ಎಷ್ಟೊಂದು ವೈವಿದ್ಯತೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ಒಬ್ಬ ಮನುಷ್ಯನಾಗಿದ್ದರು ಎಂದು ಸುಮಲತಾ ಗದ್ಗದಿತರಾದ್ರು…

27 ವರ್ಷಗಳಲ್ಲಿ ನಾನೇನು ಅವರನ್ನು ನೋಡಿದ್ದೀನಿ ಅಷ್ಟನ್ನು ಮಾತ್ರ ನನಗೆ ಹೇಳೋಕೆ ಸಾಧ್ಯ. ನನಗಿಂತ ಅವರ ಜತೆ ಹೆಚ್ಚು ಒಡನಾಟ ಇರುವವರು ಹೆಚ್ಚು ಮಂದಿ ಇದ್ದೀರಾ. ಭಗವದ್ಗೀತೆಯಲ್ಲಿ ಬರೆದಿರುವಂತೆ ಅಂಬಿ ಸಾರ್ಥಕತೆಯ ಬದುಕು ಬಾಳಿದ್ದಾರೆ ಎಂದು ಸುಮಲತಾ ಭಾವುಕರಾದ್ರು
ಅಂಬರೀಷ್ ಒಬ್ಬ ರಾಜನಾಗಿ ಬಾಳಿದರು. ರಾಜನಾಗಿಯೇ ಹೋದರು. ಅವರ ಇಂತಹ ಪ್ರಯಾಣದಲ್ಲಿ ಬೆಂಬಲ ನೀಡಿದವರಿಗೆ ನನ್ನ ಧನ್ಯವಾದಗಳು.

ಅವರ ಅಂತಿಮ ಪ್ರಯಾಣವನ್ನು ಕೂಡ ಅರಸನಾಗಿಯೇ ಕಳುಹಿಸಿಕೊಟ್ಟಿದ್ದೀರ. ಅದಕ್ಕೆ ಕುಮಾರಣ್ಣನಿಗೆ ಕೈ ಮುಗಿದು ನಮಸ್ಕಾರ ಹೇಳುತ್ತಾನೆ ಎಂದು ಸುಮಲತಾ ಕೃತಜ್ಞತೆ ಅರ್ಪಿಸಿದ್ರು.
ಇನ್ನೂ ಮಂಡ್ಯಗೆ ಅಂಬರೀಷರನ್ನು ಕರೆದುಕೊಂಡು ಹೋಗಿ, ಅಲ್ಲಿನ ಜನರು ಅಂತಿಮ ದರ್ಶನ ಮಾಡುವಂತೆ ಮಾಡಿದಕ್ಕೆ ಸುಮಲತಾ ಕೃತಜ್ಞತೆ ಸಲ್ಲಿಸಿದ್ರು. ಮಂಡ್ಯದ ಜನ ಇದನ್ನು ಮರೆಯುವುದಿಲ್ಲ. ಪೊಲೀಸ್ ಇಲಾಖೆಗೆ, ಚಿತ್ರರಂಗದ ಕುಟುಂಬದವರಿಗೆ, ಮಾಧ್ಯಮದವರಿಗೆ ಸುಮಲತಾ ಧನ್ಯವಾದ ಅರ್ಪಿಸಿದ್ರು…

LEAVE A REPLY

Please enter your comment!
Please enter your name here